ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಕಮಾಲ್- 1 ಕಲ್ಲು 2 ಹಕ್ಕಿ ಹೊಡೆದ HITMAN!

ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಕಮಾಲ್- 1 ಕಲ್ಲು 2 ಹಕ್ಕಿ ಹೊಡೆದ HITMAN!

ರೈಟ್​​ ಟೈಮ್​​ನಲ್ಲೇ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್​​ ಮಾಡಿದ್ದಾರೆ. ಈಗ ವರ್ಲ್ಡ್​​ಕಪ್​ ಸೆಲೆಕ್ಷನ್ ವಿಚಾರದಲ್ಲಿ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ. ಈ ವರ್ಷ ನಡೆಯೋ ಟಿ20 ವರ್ಲ್ಡ್​​ಕಪ್​ಗೂ ರೋಹಿತ್​ ಶರ್ಮಾರೆ ಟೀಂ ಇಂಡಿಯಾದ ಕ್ಯಾಪ್ಟನ್ ಆಗೋದು ಆಲ್​ಮೋಸ್ಟ್ ಕನ್ಫರ್ಮ್. ಯಾಕಂದ್ರೆ ಅಫ್ಘಾನಿಸ್ತಾನ ವಿರುದ್ಧದ ಫೈನಲ್ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ಕೇವಲ ಬ್ಯಾಟ್​​ನಿಂದ ತಮ್ಮ ತಾಕತ್ತು ತೋರಿಸಿರೋದಷ್ಟೇ ಅಲ್ಲ, ಕ್ಯಾಪ್ಟನ್ಸಿಯಲ್ಲೂ ಕಮಾಲ್ ಮಾಡಿದ್ರು.

ಇದನ್ನೂ ಓದಿ: ಎರಡು ಸೂಪರ್ ಓವರ್ ನೋಡಿದ ಅಭಿಮಾನಿಗಳಿಗೆ ಸಂಭ್ರಮ – ಹೊಸ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ

ಫಸ್ಟ್ ನಾಲ್ಕು ವಿಕೆಟ್​​ಗಳು.. ಇನ್ನೂ ಪವರ್​ಪ್ಲೇ ಕೂಡ ಮುಗಿದಿರಲಿಲ್ಲ..ಅಷ್ಟರಲ್ಲೇ 4 ವಿಕೆಟ್ ಢಮಾರ್. ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಮ್ ದುಬೆ, ಸಂಜು ಸ್ಯಾಮ್ಸನ್ ಹಾಗೆ ಬಂದು ಹೀಗೆ ಹೋದ್ರು. ಇತ್ತ ನಾನ್​ಸ್ಟ್ರೈಕ್​​ನಲ್ಲಿ ರೋಹಿತ್​​ ಶರ್ಮಾ ನೋಡಿಯೇ ಬಾಕಿ. ಬಟ್ ರೋಹಿತ್ ಶರ್ಮಾ ನಿಂತು ಆಡುವ ಬಗ್ಗೆ ಆರಂಭದಲ್ಲೇ ಹಿಂಟ್ ಕೊಟ್ಟಿದ್ರು. ಅವ್ರದ್ದು ಕೂಡ ಕ್ಯಾಚ್ ಡ್ರಾಪ್ ಆಗಿತ್ತು ಅನ್ನೋದು ಬೇರೆ ಪ್ರಶ್ನೆ. ಆದ್ರೆ ರೋಹಿತ್​ ಶರ್ಮಾ ಯಾವಾಗಿನಂತೆ ಆರಂಭದಲ್ಲೇ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡೋಕೆ ಹೋಗಿರಲಿಲ್ಲ.

ಈ ಪಿಚ್​​ನಲ್ಲಿ ಏನೋ ಫಿಶ್ಶೀ ಇದೆ ಅನ್ನೋ ಹಿಂಟ್ ರೋಹಿತ್​​ಗೆ ಮೊದಲೇ ಸಿಕ್ಕಿದಂತೆ ಇತ್ತು. ಹೀಗಾಗಿ ತುಂಬಾ ಸ್ಲೋ ಆಗಿಯೇ ಸ್ಟಾರ್ಟ್ ಮಾಡಿದ್ರು. ಯಾವಾಗಲೂ ಅಷ್ಟೇ ರೋಹಿತ್ ಒಂದ್ಸಾರಿ ಸೆಟ್ ಆದ್ರು ಅಂದ್ರೆ. ಆರಂಭದಲ್ಲೇ ಒಂದಷ್ಟು ಬಾಲ್​ಗಳನ್ನ ಫೇಸ್​ ಮಾಡಿದ್ರು ಅಂದ್ರೆ, ಅಮೇಲೆ ಅನ್​​ಸ್ಟಾಪೆಬಲ್. ಬಿಗ್​ ಇನ್ನಿಂಗ್ಸ್ ಬಂತು ಅಂತಾನೆ ಅರ್ಥ. ಟಿ-20ಯಲ್ಲಾದ್ರೆ ಸೆಂಚೂರಿ..ವಂಡೇನಲ್ಲಾದ್ರೆ ಡಬಲ್ ಸೆಂಚೂರಿ.. ಅಫ್ಘಾನಿಸ್ತಾನ ವಿರುದ್ಧ ನಾಲ್ಕು ವಿಕೆಟ್ ಕಳೆದುಕೊಂಡು ಆ ಪ್ರೆಷರ್​​ನಲ್ಲೇ ರೋಹಿತ್​ ಈ ರೀತಿಯ ಇನ್ನಿಂಗ್ಸ್ ಆಡಿರೋದು ನಿಜಕ್ಕೂ ವನ್ ಆಫ್ ದಿ ಗ್ರೇಟೆಸ್ಟ್ ಇನ್ನಿಂಗ್ಸ್. ವರ್ಲ್ಡ್​​ಕಪ್​​ನಲ್ಲಿ ಗ್ಲೇನ್ ಮ್ಯಾಕ್ಸ್​​ವೆಲ್ ಇದೇ ಅಫ್ಘಾನಿಸ್ತಾನದ ವಿರುದ್ಧ ಆಡಿದ್ರಲ್ಲ. ಆಲ್​ಮೋಸ್ಟ್​ ಹಾಗೆಯೇ ಇತ್ತು ಸ್ವಿಚ್ಯುವೇಶನ್. ಬಟ್ ಇದು ಟಿ-20 ಮ್ಯಾಚ್​ ಬೇರೆ. ಹೆಚ್ಚು ಬಾಲ್ ವೇಸ್ಟ್ ಮಾಡೋ ಹಾಗೂ ಇರಲಿಲ್ಲ. ಆ್ಯಕ್ಚುವಲಿ ಪವರ್​​ ಪ್ಲೇ ವೇಳೆ ಟೀಂ ಇಂಡಿಯಾದ ರನ್​ ರೇಟ್​ 4 ಅಷ್ಟೇ ಇತ್ತು. ಹೀಗಾಗಿ ರಿಂಕು ಸಿಂಗ್ ಅಖಾಡಕ್ಕಿಳಿಯುತ್ತಲೇ ಇತ್ತ ರೋಹಿತ್​ ಶರ್ಮಾ ಗೇರ್ ಚೇಂ​ಜ್ ಮಾಡಿ ಚಚ್ಚೋಕೆ ಶುರು ಮಾಡಿದ್ರು. 41 ಬಾಲ್​ಗಳಲ್ಲಿ ಹಾಫ್​​ ಸೆಂಚೂರಿ ಬಾರಿಸಿದ್ದ ರೋಹಿತ್, ಕೇವಲ 22 ಬಾಲ್​ಗಳಲ್ಲಿ ಇನ್ನೊಂದು ಪಿಫ್ಟಿ ಹೊಡೆದ್ರು. 64 ಬಾಲ್​ಗಳಲ್ಲೇ ಸೆಂಚೂರಿ . 69 ಬಾಲ್​ಗಳಲ್ಲಿ 121 ರನ್. 11 ಬೌಂಡರಿ, 8 ಸಿಕ್ಸರ್. ಅದ್ರಲ್ಲೂ ಒಂದು ಸಿಕ್ಸ್ ಅಂತೂ ಚಿನ್ನಸ್ವಾಮಿ ಸ್ಟೇಡಿಯಂನ ರೂಫ್ ಟಾಫ್​ ಹೋಗಿ ಬಡಿದಿತ್ತು. 175.36 ರೋಹಿತ್​ ಶರ್ಮಾ ಸ್ಟ್ರೈಕ್​ ರೇಟ್.. ಆ್ಯಕ್ಚುವಲಿ ಈ ಮ್ಯಾಚ್​ನಲ್ಲಿ ರೋಹಿತ್​ ಮಾಡಿರೋದು 121 ರನ್ ಅಲ್ಲ. ಯಾಕಂದ್ರೆ ಎರಡೂ ಬಾರಿ ಸೂಪರ್​ ಓವರ್​ಗಳಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ್ರು. ಹೀಗಾಗಿ ಈ ಮ್ಯಾಚ್​​ನಲ್ಲಿ ರೋಹಿತ್​ ಶರ್ಮಾರ ಟೋಟಲ್ ಸ್ಕೋರ್ 149. ಕಮ್​ಆನ್ ಹಿಟ್​ಮ್ಯಾನ್..

ಇನ್ನು ಈ ಸೆಂಚೂರಿ ಜೊತೆಗೆ ರೋಹಿತ್​ ಶರ್ಮಾ ಕೆಲ ರೆಕಾರ್ಡ್​​ಗಳನ್ನ ಕೂಡ ಮಾಡಿದ್ದಾರೆ. ಜಾಗತಿಕವಾಗಿ ಟಿ-20 ಕ್ರಿಕೆಟ್​​ನಲ್ಲಿ ಹೈಯೆಸ್ಟ್ ಸೆಂಚೂರಿ ಹೊಡೆದಿರೋ ಬ್ಯಾಟ್ಸ್​​ಮನ್ ರೋಹಿತ್​ ಶರ್ಮಾ.. ಇದು ರೋಹಿತ್​​ ಪಾಲಿಗೆ 5ನೇ ಟಿ20 ಸೆಂಚೂರಿ. ಸೂರ್ಯಕುಮಾರ್ ಯಾದವ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್​ ಇಬ್ಬರೂ ತಲಾ 4 ಶತಕಗಳನ್ನ ಹೊಡೆದಿದ್ದಾರೆ. ಹಾಗೆಯೇ ಕ್ಯಾಪ್ಟನ್​ ಆಗಿ ಹೈಯೆಸ್ಟ್ ಸಿಕ್ಸರ್ ಹೊಡೆದಿರೋದು ಕೂಡ ರೋಹಿತ್ ಶರ್ಮಾರೇ. ಇಂಗ್ಲೆಂಡ್​​ನ ಕ್ಯಾಪ್ಟನ್​ ಆಗಿದ್ದ ಇಯಾನ್ ಮಾರ್ಗನ್ ಟಿ20ಯಲ್ಲಿ 86 ಸಿಕ್ಸರ್​ಗಳನ್ನ ಹೊಡೆದಿದ್ರು. ಅದ್ರೀಗ ನಮ್ಮ ಕ್ಯಾಪ್ಟನ್​ 87 ಸಿಕ್ಸರ್​ ಹೊಡಿಯೋ ಮೂಲಕ ಮಾರ್ಗನ್​ರನ್ನ ಬೀಟ್ ಮಾಡಿದ್ದಾರೆ. ಇದು ತಂಡದ ಕ್ಯಾಪ್ಟನ್ ಆಗಿ ಹೈಯೆಸ್ಟ್ ಸಿಕ್ಸರ್​​ ಹೊಡೆದಿರೋ ರೆಕಾರ್ಡ್. ಇದಿಷ್ಟೇ ಅಲ್ಲ, ಟೀಂ ಇಂಡಿಯಾ ಕ್ಯಾಪ್ಟನ್​​ ಆಗಿ ಟಿ-20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಮಾಡಿದ ಆಟಗಾರ ಅನ್ನೋ ಹೆಗ್ಗಳಿಕೆಯೂ ರೋಹಿತ್ ಶರ್ಮಾರದ್ದೇ. ಕ್ಯಾಪ್ಟನ್ ಆದ ಬಳಿಕ ರೋಹಿತ್ ಟಿ20ಯಲ್ಲಿ 1647 ರನ್​ ಗಳಿಸಿದ್ದಾರೆ. ಈ ಮೂಲಕ ಕ್ಯಾಪ್ಟನ್ ಆಗಿ 1570 ರನ್ ಮಾಡಿದ್ದ​​ ವಿರಾಟ್ ಕೊಹ್ಲಿಯ ದಾಖಲೆಯನ್ನ ಹಿಟ್​ಮ್ಯಾನ್ ಬೀಟ್ ಮಾಡಿದ್ದಾರೆ. ಇಲ್ಲಿ ರೋಹಿತ್​ ಶರ್ಮಾರದ್ದು ಇನ್ನೊಂದು ಸ್ಪೆಷಾಲಿಟಿ ಕೂಡ ಇದೆ. ದೊಡ್ಡ ಮೊತ್ತದ ಸ್ಕೋರ್ ಮಾಡಿದಾಗಲೆಲ್ಲಾ ರೋಹಿತ್ ನಾಟ್​​ಔಟ್ ಆಗಿಯೇ ಇರ್ತಾರೆ. ಓಪನಿಂಗ್ ಬಂದು ಕೊನೆಯ ಬಾಲ್​ವರೆಗೂ ಆಡ್ತಾರೆ. ಈ ಹಿಂದೆ ವಂಡೇನಲ್ಲಿ ಡಬ್ಬಲ್ ಹಂಡ್ರೆಡ್ ಹೊಡೆದಾಗಲೂ ರೋಹಿತ್ ನಾಟ್​ಔಟ್ ಆಗಿದ್ರು. ಈಗ ಆಫ್ಘನ್​ ವಿರುದ್ಧವೂ 121 ನಾಟ್​ಔಟ್. ಹೀಗಾಗಿಯೇ ರೋಹಿತ್​​ ಶರ್ಮಾ ಸಮ್​ಥಿಂಗ್ ಸ್ಪೆಷಲ್ ಅಂತಾ ಅನ್ನಿಸಿಕೊಡಿರೋದು.

ಇವಿಷ್ಟು ರೋಹಿತ್​ ಶರ್ಮಾರ ಬ್ಯಾಟಿಂಗ್ ಕಥೆಯಾಯ್ತು. ಬಟ್ ರೋಹಿತ್​ ಶರ್ಮಾರ ಕ್ಯಾಪ್ಟನ್ಸಿ ಕೂಡ ಈ ಮ್ಯಾಚ್​ನ ಇನ್ನೊಂದು ಹೈಲೈಟ್. ಯಾಕಂದ್ರೆ 3ನೇ ಮ್ಯಾಚ್​ನಲ್ಲಿ ನಮ್ಮಲ್ಲಿ ಫುಲ್ ಫ್ಲೆಡ್ಜ್ ಬೌಲಿಂಗ್ ಒಯುನಿಟ್ ಅಂತೂ ಇರಲಿಲ್ಲ. ಎಲ್ಲರೂ ಇನ್​​ಎಕ್ಸ್​​​​ಪೀರಿಯನ್ಸ್ಡ್ ಬೌಲರ್ಸ್​ಗಳೇ ಇದ್ದಿದ್ದು. ಅವರ ಮೂಲಕವೇ ಆಫ್ಘನ್ ಬ್ಯಾಟ್ಸ್​ಮನ್​​ಗಳನ್ನ ಕಟ್ಟಿಹಾಕೋಕೆ ರೋಹಿತ್​ ಶರ್ಮಾ ಎಕ್ಸ್​​ಟ್ರಾ ಎಫರ್ಟ್ ಹಾಕಬೇಕಾಯ್ತು. ಬಟ್ ಸೂಪರ್​ ವೇಳೆ ರೋಹಿತ್ ತೆಗೆದುಕೊಂಡ ಒಂದು ಡಿಸೀಶನ್ ಇದ್ಯಲ್ಲಾ ಸ್ಪಾಟ್​​ಆನ್. ಸೆಕೆಂಡ್ ಸೂಪರ್​​ ಓವರ್​ನಲ್ಲಿ ಟೀಂ ಇಂಡಿಯಾ ಕೇವಲ 12 ರನ್​​ಗಳ ಟಾರ್ಗೆಟ್ ನೀಡುತ್ತೆ. ನಿಮಗೆ ಗೊತ್ತಿರೋ ಹಾಗೆ ಟಿ20ಯಲ್ಲಿ ಅದೇನು ಟಫ್ ಟಾರ್ಗೆಟ್ ಅಂತೂ ಅಲ್ವೇ ಅಲ್ಲ. ಅದು ಕೂಡ ಅಫ್ಘಾನಿಸ್ತಾನ ಬ್ಯಾಟ್ಸ್​ಮನ್​ಗಳು ಆಡಿದ್ದನ್ನ ನೋಡಿದ್ರೆ ಈಸಿಯಾಗಿ ಚೇಸ್ ಮಾಡಬಹುದು ಅಂತಾ ಅನ್ಸಿತ್ತು. ಬಟ್ ರೋಹಿತ್​ ಶರ್ಮಾ ಮಾತ್ರ ಚೆನ್ನಾಗಿಯೇ ಪ್ಲ್ಯಾನ್ ಮಾಡಿದ್ರು. ಆವೆಶ್ ಖಾನ್ ಮತ್ತು ರವಿ ಬಿಷ್ಣೋಯಿ ಇವರಿಬ್ಬರಿಗೂ ಬೌಲಿಂಗ್​​ಗೆ ರೆಡಿಯಾಗಿರುವಂತೆ ರೋಹಿತ್ ಸೂಚಿಸಿದ್ರು. ಆವೇಶ್ ಮೀಡಿಯಮ್ ಪೇಸ್ ಬೌಲರ್​.. ಬಿಷ್ಣೋಯಿ ಸ್ಪಿನ್ನರ್. ಬಟ್ ಇನ್​ ದಿ ಎಂಡ್ ರೋಹಿತ್ ಸ್ಪಿನ್ನರ್ ಬಿಷ್ಣೋಯಿ ಕೈಗೆ ಬಾಲ್ ನೀಡ್ತಾರೆ. ಆ್ಯಕ್ಚುವಲಿ ರವಿ ಬಿಷ್ಣೋಯಿಗೆ ಸೂಪರ್ ಓವರ್​ನಲ್ಲಿ ಬೌಲಿಂಗ್ ಮಾಡಿ ಎಕ್ಸ್​ಪೀರಿಯನ್ಸ್ ಇದೆ. ಈ ಹಿಂದೆಯೂ ಎರಡು ಬಾರಿ ಸೂಪರ್​ ಓವರ್​ನಲ್ಲಿ ಅವರು ಬೌಲ್ ಮಾಡಿದ್ರು. ಇದೊಂದು ಪಾಯಿಂಟ್.. ಹಾಗೆಯೇ ಸೂಪರ್​ ಓವರ್ ವೇಳೆ ಸ್ಪಿನ್ನರ್ಸ್ಗಳಿಗೆ ಬೌಂಡರಿ, ಸಿಕ್ಸರ್ ಹೊಡಿಯೋದು ಅಂದ್ರೆ ಅಷ್ಟು ಈಸಿ ಇರೋದಿಲ್ಲ. ಸ್ಪಿನ್​​ ಬೌಲಿಂಗ್​ಗೆ ವಿಕೆಟ್ ಬೀಳೋ ಚಾನ್ಸ್​ ಹೆಚ್ಚಿರುತ್ತೆ. ಆಫ್ಘನ್ ವಿರುದ್ಧದ ಸೂಪರ್​ ಓವರ್​ನಲ್ಲೂ ಆಗಿರೋದು ಇದೇ. ಅದ್ರಲ್ಲೂ​ ಬಿಷ್ಣೋಯಿ ಅಂತೂ ಫುಲ್​ ಲೆಂತ್ ಬಾಲ್​ಗಳನ್ನ ಹಾಕಿದ್ರು. ವಿಕೆಟ್​ ಟು ವಿಕೆಟ್ ಬೌಲ್ ಮಾಡಿದ್ರು. ಬ್ಯಾಟ್ಸ್​​ಮನ್​​ ಬ್ಯಾಕ್​​​ಫುಟ್​​ನಿಂದಲೇ ಆಡುವಂತೆ ಬಾಲ್ ಎಸೆದಿದ್ರು. ಸ್ಪಿನ್​​ ಬೌಲಿಂಗ್​​ಗೆ ಬ್ಯಾಕ್​​ಫುಟ್​​ನಲ್ಲಿ ಆಡಿ ಸಿಕ್ಸ್ ಹೊಡಿಯೋದು ತುಂಬಾನೆ ಟಫ್. ಹೀಗಾಗಿ ಅಫ್ಘಾನಿಸ್ತಾನದ ಇಬ್ಬರು ಬ್ಯಾಟ್ಸ್​ಮನ್​​ಗಳು ಕ್ಯಾಚ್​​ ಕೊಟ್ಟು ಔಟಾದ್ರು. ಅಂತೂ ರೋಹಿತ್​ ಶರ್ಮಾ ತಗೊಂಡ ಡಿಸೀಶನ್ ಸ್ಪಾಟ್ ಆನ್​ ಆಗಿತ್ತು. ರಾಹುಲ್ ದ್ರಾವಿಡ್ ಅಂತೂ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಇರೋ ಗಟ್ಸ್​ ಏನು​ ಅನ್ನೋದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

 

 

Sulekha