ಟೆಸ್ಲಾ ಮಾಡೆಲ್ Y ಕಾರು ಖರೀದಿಸಿದ ರೋಹಿತ್ ಶರ್ಮಾ- Hitman ಕಾರಿನ ನಂಬರ್ ಪ್ಲೇಟ್‌ನಲ್ಲಿದೆ ಫ್ಯಾಮಿಲಿ ಲವ್..!

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಅವರ ಕಾರ್ ಕಲೆಕ್ಷನ್‌ಗೆ ಮತ್ತೊಂದು ಐಷಾರಾಮಿ ವಾಹನ ಸೇರಿದೆ. ರೋಹಿತ್ ಶರ್ಮಾ ಟೆಸ್ಲಾ ಕಾರು ಖರೀದಿಸಿದ್ದಾರೆ. ಹಿಟ್‌ಮ್ಯಾನ್ ಟೆಸ್ಲಾ ಕಾರು ಖರೀದಿಸಿದ್ದು ವಿಶೇಷವಾದರೆ ಅದರ ನಂಬರ್ ಪ್ಲೇಟ್ ಕೂಡಾ ಸ್ಪೆಷಲ್ ಆಗಿದೆ.
ಇದನ್ನೂ ಓದಿ:ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯ – ಕನ್ನಡಿಗ ಕೆ.ಎಲ್ ರಾಹುಲ್ OUT
ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮಾ ಟೆಸ್ಲಾ ಮಾಡೆಲ್ Y ಕಾರು ಖರೀದಿ ಮಾಡಿದ್ದಾರೆ ಈ ಕಾರಿನ ನಂಬರ್ ಪ್ಲೇಟ್ ಕೂಡಾ ವಿಶೇಷವಾಗಿದೆ. ‘MH01FB3015’ ನಂಬರ್ ಪ್ಲೇಟ್ ಅಭಿಮಾನಿಗಳನ್ನು ಸೆಳೆದಿದೆ. ಈ ನಂಬರ್ ತುಂಬಾ ವಿಶೇಷವಾಗಿದ್ದು, ರೋಹಿತ್ ಕುಟುಂಬದೊಂದಿಗೆ ಸಂಬಂಧ ಹೊಂದಿದೆ. ರೋಹಿತ್ ಶರ್ಮಾ ತಮ್ಮ ಮಕ್ಕಳ ಹುಟ್ಟಿದ ದಿನಾಂಕಗಳನ್ನು ಸೇರಿಸಿ ಈ ನಂಬರ್ ಪ್ಲೇಟ್ ಪಡೆದಿದ್ದಾರೆ. ಮಗಳು ಸಮೈರಾ (30-12-2018) ಮತ್ತು ಮಗ ಅಹಾನ್ (15-11-2024) ಹುಟ್ಟಿದ ದಿನಾಂಕಗಳಿಂದ 30 ಮತ್ತು 15 ಸಂಖ್ಯೆಗಳನ್ನು ಸೇರಿಸಿ ‘3015’ ಎಂದು ಆಯ್ಕೆ ಮಾಡಿದ್ದಾರೆ. ಇದು ರೋಹಿತ್‌ಗೆ ಕೇವಲ ಒಂದು ಸಂಖ್ಯೆಯಲ್ಲ, ಬದಲಿಗೆ ಕುಟುಂಬದ ಮೇಲಿನ ಪ್ರೀತಿಯ ಸಂಕೇತವಾಗಿದೆ. ಇದೇ ನಂಬರ್ ಅವರ ಲಂಬೋರ್ಗಿನಿ ಉರುಸ್ SE ಕಾರಿನಲ್ಲೂ ಇದೆ.
ರೋಹಿತ್ ಶರ್ಮಾಗೆ ಐಷಾರಾಮಿ ವಾಹನಗಳೆಂದರೆ ತುಂಬಾ ಇಷ್ಟ. ಅವರ ಗ್ಯಾರೇಜ್‌ನಲ್ಲಿ ಈಗಾಗಲೇ BMW M5 (F1 ಆವೃತ್ತಿ), ಮರ್ಸಿಡಿಸ್-ಬೆಂಝ್ GLS 400d, ಟೊಯೊಟಾ ಫಾರ್ಚುನರ್, ಮತ್ತು ಲಂಬೋರ್ಗಿನಿ ಉರುಸ್ SE ನಂತಹ ಹೈ-ಎಂಡ್ ವಾಹನಗಳಿವೆ. ಈಗ ಅವರ ಕಲೆಕ್ಷನ್ ಗೆ ಟೆಸ್ಲಾ ಮಾಡೆಲ್ Y ಕೂಡ ಸೇರಿದೆ. ಮುಂಬೈನಲ್ಲಿ ರೋಹಿತ್ ಅವರ ಹೊಸ ಟೆಸ್ಲಾ ಕಾರು ಕಾಣಿಸಿಕೊಂಡ ತಕ್ಷಣ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ರೋಹಿತ್ ಶರ್ಮಾ ಅವರ ಟೆಸ್ಲಾ ಮಾಡೆಲ್ Y ಕಾರಿನ ವಿಶೇಷತೆಗಳೇನು ಎಂದು ವಿವರಿಸುವುದಾದರೆ, ಟೆಸ್ಲಾ ಮಾಡೆಲ್ Y ಒಂದು ಪ್ರೀಮಿಯಂ ಎಲೆಕ್ಟ್ರಿಕ್ SUV. ಈ ವಾಹನವು ಅದ್ಭುತ ಫೀಚರ್‌ಗಳನ್ನು ಹೊಂದಿದೆ. ಇದರ ಪ್ರಮುಖ ಫೀಚರ್‌ಗಳು.. ವಿನ್ಯಾಸ: ಸ್ಲೀಕ್ LED ಹೆಡ್‌ಲ್ಯಾಂಪ್ಸ್, ಫಾಸ್ಟ್‌ಬ್ಯಾಕ್ ಸ್ಟೈಲ್, ಗ್ಲಾಸ್ ರೂಫ್ ಇಂಟೀರಿಯರ್: 15.4-ಇಂಚಿನ ಟಚ್‌ಸ್ಕ್ರೀನ್, 8-ಇಂಚಿನ ರಿಯರ್ ಡಿಸ್ಪ್ಲೇ, ಹೀಟೆಡ್ ಸೀಟ್ಸ್, ಪನೋರಮಿಕ್ ರೂಫ್ ಬ್ಯಾಟರಿ: 60 kWh ಬ್ಯಾಟರಿಯೊಂದಿಗೆ 500 ಕಿ.ಮೀ ರೇಂಜ್, ಲಾಂಗ್ ರೇಂಜ್ ಆವೃತ್ತಿಯಲ್ಲಿ 75 kWh ಬ್ಯಾಟರಿಯೊಂದಿಗೆ 622 ಕಿ.ಮೀ ರೇಂಜ್ ಕಾರ್ಯಕ್ಷಮತೆ: ಮುಂಭಾಗದಲ್ಲಿ 295 bhp ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಸುರಕ್ಷತಾ ವೈಶಿಷ್ಟ್ಯಗಳು: ಮಲ್ಟಿಪಲ್ ಏರ್‌ಬ್ಯಾಗ್‌ಗಳು, ABS, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಸಿಸ್ಟಮ್ ಹೊಂದಿದೆ. ಈ ಕಾರಿನ ಬೆಲೆ ಸ್ಟ್ಯಾಂಡರ್ಡ್ ಮಾಡೆಲ್ ₹59.89 ಲಕ್ಷ, ಲಾಂಗ್ ರೇಂಜ್ ಆವೃತ್ತಿ ₹67.89 ಲಕ್ಷ (ಎಕ್ಸ್-ಶೋರೂಂ) ಬೆಲೆ ಇದೆ. ಇನ್ನು ಈ ಕಾರು ಪರಿಸರ ಸ್ನೇಹಿ ತಂತ್ರಜ್ಞಾನದ ಕಾರು ಆಗಿರುವುದರಿಂದ ಅಭಿಮಾನಿಗಳು ರೋಹಿತ್ ಅವರನ್ನು ಆನ್-ಫೀಲ್ಡ್ ಮತ್ತು ಆಫ್-ಫೀಲ್ಡ್ ಎರಡರಲ್ಲೂ ಸ್ಪೂರ್ತಿದಾಯಕ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನೋಡಿರಿ

