73 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿದ ರೋಹಿತ್ ಶರ್ಮಾ – ಡೆಬ್ಯೂ ಪ್ಲೇಯರ್ ಸರ್ಫರಾಜ್ ಖಾನ್ ಅರ್ಧಶತಕ

73 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿದ ರೋಹಿತ್ ಶರ್ಮಾ – ಡೆಬ್ಯೂ ಪ್ಲೇಯರ್ ಸರ್ಫರಾಜ್ ಖಾನ್ ಅರ್ಧಶತಕ

ಇಂಡಿಯಾ VS ಇಂಗ್ಲೆಂಡ್​..3ನೇ ಟೆಸ್ಟ್.. ಡೇ-1. ಫಸ್ಟ್ ಬ್ಯಾಟಿಂಗ್​ಗೆ ಇಳಿದಿರೋ ಭಾರತ ಮೊದಲ ದಿನದಾಟದಲ್ಲಿ ಇಂಪ್ರೆಸಿವ್ ಪರ್ಫಾಮೆನ್ಸ್ ನೀಡಿದೆ. ಅದ್ರಲ್ಲೂ ಮೂವರು ಬ್ಯಾಟ್ಸ್​​ಮನ್​ಗಳ ಆಟವಂತೂ ಫಸ್ಟ್​ ಡೇ ಮೇನ್ ಹೈಲೈಟ್. ಕ್ಯಾಪ್ಟನ್ ರೋಹಿತ್​ ಶರ್ಮಾ ಅಂತೂ ಕೆಲ ದಾಖಲೆಗಳನ್ನೇ ಬರೆದಿದ್ದಾರೆ. ಟಿ20 ವರ್ಲ್ಡ್​​ಕಪ್​​ಗೂ ಕ್ಯಾಪ್ಟನ್ ಆಗಿ ಘೋಷಣೆಯಾದ ಬೆನ್ನಲ್ಲೇ ರೋಹಿತ್​ ಬ್ಯಾಟ್​ನಿಂದ ಬಿಗ್ ಸ್ಕೋರ್ ಬಂದಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪಾದಾರ್ಪಣೆ ಕನಸು ನನಸು- ಖುಷಿಯಲ್ಲಿ ಕಣ್ಣೀರಿಟ್ಟ ಸರ್ಫರಾಜ್ ಖಾನ್ ಕುಟುಂಬ

ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್​ ಶರ್ಮಾ ಇಬ್ಬರೂ ಓಪನಿಂಗ್ ಬ್ಯಾಟ್ಸ್​​ಮನ್​ಗಳಾಗಿ ಕ್ರೀಸ್​ಗಿಳಿದ್ರು. ಯಶಸ್ವಿ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಂತಿಲ್ಲ. ಕೇವಲ 10 ರನ್​ಗೆ ಔಟಾಗ್ತಾರೆ. ಮಾರ್ಕ್​ವುಡ್ ಬೌಲಿಂಗ್​​ನಲ್ಲಿ ಸ್ವಲ್ಪ ಬೌನ್ಸ್ ಆಗಿ ಬಂದ ಔಟ್ ಸೈಡ್ ದಿ ಆಫ್​​ ಸ್ಟಂಪ್​​ ಬಾಲ್​ಗೆ ಮಿಡ್ ಆಫ್​ನತ್ತ ಹೊಡಿಯೋಕೆ ಹೋಗಿ ಕ್ಯಾಚ್ ಕೊಟ್ಟು ಔಟಾಗ್ತಾರೆ. ಮೂರನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದಿದ್ದು ಶುಬ್ಮನ್ ಗಿಲ್. ಸೆಕೆಂಡ್ ಟೆಸ್ಟ್​ನ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಗಿಲ್ ಸೆಂಚೂರಿ ಹೊಡೆದಿದ್ರು. ಅಂದು ಟೀಮ್​ಗೆ ನೆರವಾಗಿದ್ದೇ ಶುಬ್ಮನ್ ಗಿಲ್. ಸುಮಾರು 12 ಇನ್ನಿಂಗ್ಸ್​ಗಳ ಬಳಿಕ ಶುಬ್ಮನ್ ಗಿಲ್ ಸೆಂಚೂರಿ ಹೊಡೆದಿದ್ರು. ಆ ಸೆಂಚೂರಿಯ ಕಾರಣಕ್ಕಾಗಿಯೇ ಮೂರನೇ ಟೆಸ್ಟ್​​ಗೆ ಶುಬ್ಮನ್ ಗಿಲ್​ ಟೀಮ್​​ಗೆ ಸೆಲೆಕ್ಟ್ ಆಗಿದ್ರು. ಇಲ್ಲಾಂದ್ರೆ ಗ್ಯಾರಂಟಿ ಈ ಸೀರಿಸ್​​ನ ಉಳಿದ ಮ್ಯಾಚ್​​ಗಳಲ್ಲಿ ಶುಬ್ಮನ್ ಗಿಲ್​ಗೆ ಚಾನ್ಸೇ ಸಿಗುತ್ತಿರಲಿಲ್ಲ. ಹೀಗಾಗಿ ಮೂರನೇ ಮ್ಯಾಚ್​​ನಲ್ಲೂ ಗಿಲ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ 9 ಬಾಲ್​ಗಳಲ್ಲಿ ಒಂದೇ ಒಂದು ರನ್​ ಮಾಡದೆ ಮತ್ತದೇ ಮಾರ್ಕ್​​ವುಡ್ ಎಸೆದ ಔಟ್ ಸೈಡ್​ ದಿ ಆಫ್ ಸ್ಟಂಪ್​​ ಬಾಲ್​ನ್ನ ಕೆಣಕೋಕಿ ಹೋಗಿ ಕ್ಯಾಚ್​​ ಕೊಟ್ಟು ಪೆವಿಲಿಯನ್​​ಗೆ ತೆರಳಿದ್ರು. ಇದ್ರ ಬೆನ್ನ ರಜತ್ ಪಾಟೀದಾರ್ ಐದು ರನ್​ಗೆ ಔಟಾದ್ರು. ಅಲ್ಲಿಗೆ ಆರಂಭದಲ್ಲೇ ಟೀಂ ಇಂಡಿಯಾದ ಮೂರು ವಿಕೆಟ್​ಗಳು ಕೊಲ್ಯಾಪ್ಸ್​ ಆಗಿದ್ವು. ಆ್ಯಕ್ಚುವಲಿ ರಾಜ್​ಕೋಟ್​​ನದ್ದು ಪ್ಯೂರ್ ಬ್ಯಾಟಿಂಗ್ ಪಿಚ್. ಫಸ್ಟ್ ಮಾಡಿದಾಗ ಇಲ್ಲಿ 600+ ಸ್ಕೋರ್​ ಆಗಿದ್ದೂ ಇದೆ. ಆದ್ರೆ ನಮ್ಮವರು ಸ್ಟಾರ್ಟಿಂಗ್​ನಲ್ಲೇ ಮೂರು ವಿಕೆಟ್​ ಕಳೆದುಕೊಂಡಿರೋದು ನಿಜಕ್ಕೂ ಶಾಕಿಂಗ್.

ಈ ಮ್ಯಾಚ್​​ನಲ್ಲಿ ಭಾರತಕ್ಕೆ ನೆರವಾಗಿದ್ದು ಕ್ಯಾಪ್ಟನ್ ಶರ್ಮಾ. ಕ್ಲಾಸ್ ಇನ್ನಿಂಗ್ಸ್. ರೋಹಿತ್ ತುಂಬಾ ಪೇಶೆನ್ಸ್​ನಿಂದ, ಕೇರ್​​ಫುಲ್ ಆಗಿ ಆಡ್ತಾ ಹೋಗ್ತಾರೆ. 196 ಬಾಲ್​​ಗಳಲ್ಲಿ 131 ರನ್ ಹೊಡೆದ್ರು. 14 ಬೌಂಡರಿ..ಮೂರು ಸಿಕ್ಸರ್. ಟೀಮ್​​ನಲ್ಲಿ ರೋಹಿತ್​ರಂಥಾ ಎಕ್ಸ್​ಪೀರಿಯನ್ಸ್ ಪ್ಲೇಯರ್ಸ್​ಗಳು ಯಾಕೆ ಬೇಕು ಅಂದ್ರೆ ಆನ್ಸರ್​​ ಇಲ್ಲೇ ಇದೆ ನೋಡಿ. ಮೂರು ವಿಕೆಟ್​ಗಳನ್ನ ಕಳೆದುಕೊಂಡು ಅಂಥಾ ಪ್ರೆಷರ್​​ನಲ್ಲಿ ಇನ್ನಿಂಗ್ಸ್ ಕಟ್ಟೋಕೆ ಎಲ್ಲರಿಂದಲೂ ಆಗೋದಿಲ್ಲ. ಎಕ್ಸ್​ಪೀರಿಯನ್ಸ್ ಇದ್ದಾಗಷ್ಟೇ ಈ ರೀತಿಯ ಸ್ವಿಚ್ಯುವೇಶನ್​ನನ್ನ ಯಾವ ರೀತಿ ಫೇಸ್ ಮಾಡಬೇಕು ಅನ್ನೋದು ಗೊತ್ತಾಗೋದು. ಅದ್ರಲ್ಲೂ ರೋಹಿತ್ ಶರ್ಮಾ ಟೆಸ್ಟ್​ನಲ್ಲಿ ಇಂಥಾ ಇನ್ನಿಂಗ್ಸ್ ಆಡದೆ ತುಂಬಾ ಟೈಮ್​ ಆಗಿತ್ತು. ಈಗ ರೈಟ್ ಟೈಮ್​​ನಲ್ಲೇ ರೋಹಿತ್​ ಬ್ಯಾಟ್​​ನಿಂದ ಸೆಂಚೂರಿ ಬಂದಿದೆ.

ಇನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಸುಮಾರು 73 ವರ್ಷಗಳ ರೆಕಾರ್ಡ್​​ನ್ನ ಬ್ರೇಕ್ ಮಾಡಿದ್ದಾರೆ. ಅತ್ಯಂತ ಹಿರಿಯ ವಯಸ್ಸಿನಲ್ಲಿ ಸೆಂಚೂರಿ ಹೊಡೆದ ಕ್ಯಾಪ್ಟನ್ ಅನ್ನೋ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾಗೆ ಈಗ 36 ವರ್ಷ ವಯಸ್ಸು. 73 ವರ್ಷಗಳ ಹಿಂದೆ ಅಂದ್ರೆ 1951ರಲ್ಲಿ ವಿಜಯ್ ಹಜಾರೆ ತಮ್ಮ 36ನೇ ವರ್ಷದಲ್ಲಿ ಕ್ಯಾಪ್ಟನ್ ಆಗಿ ಇಂಗ್ಲೆಂಡ್ ವಿರುದ್ಧವೇ ಸೆಂಚೂರಿ ಒಡೆದಿದ್ರು. ಆದ್ರೆ ರೋಹಿತ್ ಟೆಸ್ಟ್​ ಕ್ರಿಕೆಟ್​ನ 11ನೇ ಸೆಂಚೂರಿ ಹೊಡಿಯೋ ಮೂಲಕ 36ನೇ ವಯಸ್ಸಲ್ಲಿ ಹೊಸ ರೆಕಾರ್ಡ್ ಮಾಡಿದ್ದಾರೆ. ಹಾಗೆಯೇ ವಂಡೇ ಮತ್ತು ಟೆಸ್ಟ್ ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ರೋಹಿತ್ ಒಟ್ಟು 47 ಶತಕಗಳನ್ನ ಹೊಡೆದಿದ್ದಾರೆ. ಈ ಮೂಲಕ ಇಂಗ್ಲೆಂಡ್​ನ ಜೋ ರೂಟ್ ರೆಕಾರ್ಡ್​ನ್ನ ಕೂಡ ರೋಹಿತ್ ಕ್ರಾಸ್ ಮಾಡಿದ್ದಾರೆ. ಜೋ ರೂಟ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 46 ಸೆಂಚೂರಿ ಹೊಡೆದಿದ್ದಾರೆ. ಸದ್ಯ ರೋಹಿತ್ ಮತ್ತು ಸೌತ್​ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿಡಿ ವಿಲಿಯರ್ಸ್ ಇಬ್ಬರೂ 47 ಸೆಂಚೂರಿ ಹೊಡೆದು ಒಂದೇ ಲೆವೆಲ್​​ನಲ್ಲಿದ್ದಾರೆ. ಅಫ್​ಕೋಸ್​ ರೋಹಿತ್ ಎಬಿಡಿ ರೆಕಾರ್ಡ್​​ನ್ನ ಕೂಡ ಬ್ರೇಕ್​ ಮಾಡೋದ್ರಲ್ಲಿ ಡೌಟೇ ಇಲ್ಲ.

ಹಾಗೆಯೇ ಇಂಗ್ಲೆಂಡ್​ ವಿರುದ್ಧ ರೋಹಿತ್​ ಶರ್ಮಾ ಓವರ್​ ಆಲ್ ಆಗಿ 1000 ರನ್​​ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಮಹೇಂದ್ರ ಸಿಂಗ್ ಧೋನಿಯ ಸಿಕ್ಸರ್​ ರೆಕಾರ್ಡ್​​ನ್ನ ಕೂಡ ರೋಹಿತ್​ ಶರ್ಮಾ ಮುರಿದಿದ್ದಾರೆ. ಎಂಎಸ್​ಡಿ ಟೆಸ್ಟ್​ನಲ್ಲಿ ಒಟ್ಟು 78 ಸಿಕ್ಸರ್ ಹೊಡೆದಿದ್ರು. ಆದ್ರೆ ರೋಹಿತ್ ಶರ್ಮಾ 79 ಸಿಕ್ಸರ್​ ಹೊಡೆದಿದ್ದಾರೆ. ಆದ್ರೆ ಸದ್ಯ ನಂಬರ್​-1 ಪೊಸೀಶನ್​ನಲ್ಲಿರೋದು ವಿರೇಂದ್ರ ಸೆಹ್ವಾಗ್. ಒಟ್ಟು 91 ಸಿಕ್ಸರ್​​ ಹೊಡೆದಿದ್ರು. ಅದನ್ನ ಕೂಡ ರೋಹಿತ್​ ಬ್ರೇಕ್​ ಮಾಡೋದ್ರಲ್ಲಿ ಡೌಟೇ ಇಲ್ಲ. ಇನ್ನು ಟೀಮ್​ ಇಂಡಿಯಾ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 211 ಸಿಕ್ಸರ್​ ಹೊಡೆದಿದ್ರು. ಧೋನಿ ಕೂಡ ಇಷ್ಟೇ ಹೊಡೆದಿರೋದು. ಬಟ್ ಇಂಗ್ಲೆಂಡ್​ನ ಇಯಾನ್ ಮಾರ್ಗನ್ ಒಟ್ಟು 233 ಸಿಕ್ಸರ್ ಹೊಡೆದಿದ್ದಾರೆ. ರೋಹಿತ್​​ ಶರ್ಮಾಗೆ ಈ ರೆಕಾರ್ಡ್​​ನ್ನ ಕೂಡ ಬ್ರೇಕ್ ಮಾಡೋ ಅಪಾರ್ಚ್ಯುನಿಟಿ ಇದೆ. ಇಷ್ಟೇ ಅಲ್ಲ, ಇಂಟರ್​​ನ್ಯಾಷನಲ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿರೋ ಭಾರತದ ಆಟಗಾರರ ಲಿಸ್ಟ್​ನಲ್ಲಿ ಈಗ ರೋಹಿತ್ 4ನೇ ಪೊಸೀಶನ್​ನಲ್ಲಿದ್ದಾರೆ. ಗಂಗೂಲಿಯ 18,575 ರನ್​ಗಳ ರೆಕಾರ್ಡ್​​ನ್ನ ಕ್ರಾಸ್ ಮಾಡಿದ್ದಾರೆ. ಬಟ್ ವಿರಾಟ್ ಕೊಹ್ಲಿ-26,733, ಸಚಿನ್ ತೆಂಡೂಲ್ಕರ್-24,208, ರಾಹುಲ್ ದ್ರಾವಿಡ್ ಕೂಡ 24,208 ರನ್ ಹೊಡೆದಿದ್ದಾರೆ. ಈ ಮೂವರ ಟೋಟಲ್​ ಸ್ಕೋರ್​ನ್ನ ಕ್ರಾಸ್​ ಮಾಡೋದು ರೋಹಿತ್ ಶರ್ಮಾಗೆ ಸಾಧ್ಯವಿಲ್ಲ ಅನ್ಸುತ್ತೆ.

ಮೂರನೇ ಟೆಸ್ಟ್​ನಲ್ಲಿ ರೋಹಿತ್ ಶರ್ಮಾಗೆ ಸಾಥ್ ಕೊಟ್ಟ ಮತ್ತೊಬ್ಬ ಬ್ಯಾಟ್ಸ್​ಮನ್ ಅಂದ್ರೆ ರವೀಂದ್ರ ಜಡೇಜ. ರೋಹಿತ್ ಮತ್ತು ಜಡ್ಡು ಮಧ್ಯೆ 201 ರನ್​ಗಳ ಪಾರ್ಟ್ನರ್​​ಶಿಪ್ ಬಂದಿತ್ತು. ಕ್ಯಾಪ್ಟನ್ ಔಟಾದ್ಮೇಲೆ ಡೆಬ್ಯೂ ಪ್ಲೇಯರ್ ಸರ್ಫರಾಜ್ ಖಾನ್ ನಿಂತು ಆಡೋಕೆ ಶುರು ಮಾಡಿದ್ರು. ಜಡೇಜ ಜೊತೆಗೆ ತುಂಬಾ ಚೆನ್ನಾಗಿ ಪಾಟ್ನರ್​​​ಶಿಪ್ ಬಿಲ್ಡ್ ಮಾಡಿದ್ರು. ಕೇವಲ 66 ಬಾಲ್​ಗಳಲ್ಲೇ 9 ಬೌಂಡರಿ ಒಂದು ಸಿಕ್ಸರ್ ಹೊಡೆದು 62 ರನ್​ ಗಳಿಸಿದ್ರು. ಎಲ್ಲೋ ಒಂದು ಕಡೆ ಡೆಬ್ಯೂ ಮ್ಯಾಚ್​​ನಲ್ಲಿ ಸರ್ಫರಾಜ್ ಸೆಂಚೂರಿ ಹೊಡೀತಾರಾ ಎಂಬಂತಿತ್ತು ಅವರ ಆಟ ನೋಡೋವಾಗ. ಬಟ್ ಅನ್​ಫಾರ್ಚ್ಯುನೇಟ್ಲಿ ರನ್​​ಔಟ್ ಆದ್ರು. ಇಲ್ಲಿ ಮಿಸ್ಟೇಕ್ ಆಗಿರೋದು ರವೀಂದ್ರ ಜಡೇಜಾರಿಂದ. ಜಡ್ಡು 99 ರನ್​ ಮಾಡಿದ್ರು. ಸಿಂಗಲ್​​ ತೆಗಿಯೋಕೆ ಅಂತಾ ಕಾಲ್ ಕೊಟ್ಟು ಮತ್ತೆ ಬ್ಯಾಕ್ ಹೋಗ್ತಾರೆ. ಈ ವೇಳೆಗೆ ಸರ್ಫರಾಜ್ ಕ್ರೀಸ್ ಬಿಟ್ಟಾಗಿತ್ತು. ಡೈರೆಕ್ಟ್ ಥ್ರೋ ರನ್​​ಔಟ್. ಸರ್ಫರಾಜ್ ರನ್​ಔಟ್ ಆಗುತ್ತಲೇ ಪೆವಿಲಿಯನ್​ನಲ್ಲಿದ್ದ ಕ್ಯಾಪ್ಟನ್ ರೋಹಿತ್​ ಶರ್ಮಾ ಫುಲ್ ರೊಚ್ಚಿಗೆದ್ದಿದ್ರು. ಹ್ಯಾಟ್ ಬಿಸಾಕಿ ತಮ್ಮ ಅಸಮಾಧಾನವನ್ನ ಎಕ್ಸ್​ಪ್ರೆಸ್ ಮಾಡಿದ್ರು. ಅತ್ತ ಸರ್ಫರಾಜ್ ಕೂಡ ಪೆವಿಲಿಯನ್​ನಲ್ಲಿ ಅಪ್ಸೆಟ್ ಆಗಿ ಕುಳಿತಿದ್ರು. ಆ್ಯಕ್ಚುವಲಿ ಸರ್ಫರಾಜ್ ಸೆಂಚೂರಿ ಹೊಡೀಬೇಕು ಅನ್ನೋ ಭಾವನೆ ರೋಹಿತ್​ ಶರ್ಮಾಗೂ ತುಂಬಾನೆ ಇದ್ದಿರಬಹುದು. ಯಾಕಂದ್ರೆ ಸರ್ಫರಾಜ್​​ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ್ದಾರೆ ಅಂದ್ರೆ ಅದಕ್ಕೆ ಮತ್ತೊಬ್ಬ ಮೇನ್ ರೀಸನ್ ​ರೋಹಿತ್ ಶರ್ಮಾ. ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ನಲ್ಲಿ ಸರ್ಫರಾಜ್​​ರನ್ನ ಅಖಾಡಕ್ಕಿಳಿಸಲೇಬೇಕು ಅಂತಾ ರೋಹಿತ್ ಹಠಕ್ಕೆ ಬಿದ್ದಿದ್ರು. ಅದೇ ರೀತಿ ಸರ್ಫರಾಜ್ ಕೂಡ ಕ್ಯಾಪ್ಟನ್ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನ ಉಳಿಸಿಕೊಂಡಿದ್ದಾರೆ. ಡೆಬ್ಯೂ ಮ್ಯಾಚ್​ನಲ್ಲಿ ಚೆನ್ನಾಗಿಯೇ ಆಡಿದ್ರು. ಅದು ಕೂಡ ತಮ್ಮ ತಂದೆ-ತಾಯಿ ಮುಂದೆಯೇ ಸರ್ಫರಾಜ್ ಭಾರತದ ಪರ ಫಸ್ಟ್ ಮ್ಯಾಚ್​ ಆಡಿದ್ದಾರೆ. ಅನಿಲ್ ಕುಂಬ್ಳೆ ಟೀಂ ಇಂಡಿಯಾ ಹ್ಯಾಟ್ ನೀಡಿದಾಗ ಎಲ್ಲರೂ ಎಮೋಷನ್ ಆಗಿದ್ರು.

 

Sulekha