ಹಾರ್ದಿಕ್ ಪಾಂಡ್ಯ ರಿಜೆಕ್ಟ್ ಮಾಡಿದ್ದು ಕೊಹ್ಲಿ? – ವಿರಾಟ್ ಕೊಹ್ಲಿಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ? – ಇದಪ್ಪಾ ಸ್ನೇಹ ಅಂದ್ರೆ..!

ಹಾರ್ದಿಕ್ ಪಾಂಡ್ಯ ರಿಜೆಕ್ಟ್ ಮಾಡಿದ್ದು ಕೊಹ್ಲಿ? – ವಿರಾಟ್ ಕೊಹ್ಲಿಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ? – ಇದಪ್ಪಾ ಸ್ನೇಹ ಅಂದ್ರೆ..!

ಸೌತ್​​ ಆಫ್ರಿಕಾದಲ್ಲಿ ಟೆಸ್ಟ್ ಸೀರಿಸ್​ ಮುಗಿದ ಮೇಲೆ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೋಚ್ ದ್ರಾವಿಡ್ ಜೊತೆಗೆ ಬಿಸಿಸಿಐ ಸೆಲೆಕ್ಷನ್ ಕಮಿಟಿ ಚರ್ಚೆ ನಡೆಸಿತ್ತು. ಇದೇ ವೇಳೆ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸೀರಿಸ್​ಗೆ ಟೀಮ್​​ನ್ನ ಸೆಲೆಕ್ಟ್ ಮಾಡಲಾಗಿತ್ತು. ಇದೇ ವೇಳೆ ರೋಹಿತ್ ಮತ್ತು ವಿರಾಟ್ ಇಬ್ಬರೂ ಟಿ-20 ವರ್ಲ್ಡ್​​ಕಪ್​ ಆಡೋಕೆ ಬಯಸಿರೋದಾಗಿರೋದಾಗಿಯೂ ಬಿಸಿಸಿಐಗೆ ಸ್ಪಷ್ಟನೆ ಕೊಟ್ಟಿದ್ರು. ಆದ್ರೆ ಈ ವೇಳೆ ಒಂದು ಇಂಟ್ರೆಸ್ಟಿಂಗ್ ಡೆವಲಪ್​ಮೆಂಟ್​ ನಡೆದಿದೆ. ಬಿಸಿಸಿಐ ಜೊತೆಗಿನ ಮೀಟಿಂಗ್ ವೇಳೆ ಕ್ಯಾಪ್ಟನ್ಸಿ ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾರ ಬೆನ್ನಿಗೆ ನಿಂತ್ರೆ, ಟಿ20 ವರ್ಲ್ಡ್​​ಕಪ್​ಗೆ ಸಂಬಂಧಿಸಿ ಕೊಹ್ಲಿ ಬೆನ್ನಿಗೆ ರೋಹಿತ್ ಶರ್ಮಾ ನಿಂತಿದ್ದಾರೆ. ಅಷ್ಟಕ್ಕೂ ಸೆಲಕ್ಷನ್ ಕಮಿಟಿ ಜೊತೆಗಿನ ಮೀಟಿಂಗ್ ವೇಳೆ ಏನಾಯ್ತು? ರೋಹಿತ್ ಬಗ್ಗೆ ಕೊಹ್ಲಿ ಹೇಳಿದ್ದೇನು? ಕೊಹ್ಲಿ ಬಗ್ಗೆ ರೋಹಿತ್ ಏನಂದ್ರು ಎಂಬ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಅಪ್ಘಾನಿಸ್ತಾನ ವಿರುದ್ಧದ ಟಿ20 ಸೀರಿಸ್‌ಗೆ ಟೀಮ್ ಆಯ್ಕೆ – ಇವರಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರು ಯಾರಿದ್ದಾರೆ?

ಈಗಾಗ್ಲೇ ಐಸಿಸಿ ವರ್ಲ್ಡ್​​ಕಪ್ ಶೆಡ್ಯೂಲ್ ಫಿಕ್ಸ್ ಆಗಿದೆ. ಹೀಗಾಗಿ ವರ್ಲ್ಡ್​ಕಪ್​ಗೆ ಟೀಂ ಇಂಡಿಯಾ ಸ್ಕ್ವಾಡ್​​ನ್ನ ಸೆಲೆಕ್ಟ್ ಮಾಡೋಕೆ ಈಗಿನಿಂದಲೇ ತಯಾರಿ ನಡೀತಾ ಇದೆ. ಬಿಸಿಸಿಐ ಸೆಲೆಕ್ಷನ್ ಕಮಿಟಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪೈಕಿ ವಿಶ್ವಕಪ್​ಗೆ ಯಾರನ್ನ ಸೆಲೆಕ್ಟ್ ಮಾಡೋದು ಅನ್ನೋ ಬಗ್ಗೆ ಯೋಚನೆಯಲ್ಲಿತ್ತು. ಇಬ್ಬರಲ್ಲಿ ಯಾರಾದ್ರೂ ಒಬ್ಬರನ್ನ ಸೆಲೆಕ್ಟ್ ಮಾಡೋಣ ಅನ್ನೋದಾಗಿ. ಅದ್ರಲ್ಲೂ ವಿರಾಟ್​ ಕೊಹ್ಲಿ ಸ್ಲೋ ಆಗಿ ರನ್ ಮಾಡ್ತಾರೆ ಅನ್ನೋ ಕಾರಣಕ್ಕೆ ವರ್ಲ್ಡ್​​ಕಪ್​​ನಿಂದ ಹೊರಗಿಡೋ ಬಗ್ಗೆಯೇ ಸೆಲೆಕ್ಷನ್ ಕಮಿಟಿ ಮಂದಿ ಯೋಚನೆ ಮಾಡ್ತಾ ಇದ್ರಂತೆ. ಕೊಹ್ಲಿ ಬದಲು ಯಶಸ್ವಿ ಜೈಸ್ವಾಲ್ ಅಥವಾ ಇಶಾನ್​ ಕಿಶನ್​​ರನ್ನ ಪಿಕ್ ಮಾಡೋಣ ಅನ್ನೋ ಬಗ್ಗೆ ಪ್ಲ್ಯಾನ್ ಆಗ್ತಿತ್ತು. ಟೋಟಲಿ ವರ್ಲ್ಡ್​​ಕಪ್​ ಟೀಂನಿಂದ ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡೋ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸ್ತಿತ್ತು. ಆದ್ರೆ ಕಿಂಗ್​ ಕೊಹ್ಲಿಯ ರೆಸ್ಕ್ಯೂಗೆ ಬಂದಿರೋದು ಕ್ಯಾಪ್ಟನ್ ರೋಹಿತ್ ಶರ್ಮಾ. ಮೀಟಿಂಗ್ ವೇಳೆ ಟಿ20 ವರ್ಲ್ಡ್​​ಕಪ್​​ ವಿರಾಟ್​ ಕೊಹ್ಲಿಯನ್ನ ಸೆಲೆಕ್ಟ್ ಮಾಡಲೇಬೇಕು ಅಂತಾ ರೋಹಿತ್ ಶರ್ಮಾ ಪಟ್ಟು ಹಿಡಿದಿದ್ದಾರಂತೆ. ಯಾವುದೇ ಕಾರಣಕ್ಕೂ ಟಿ20 ಟೀಮ್​​ನಿಂದ ಕೊಹ್ಲಿಯನ್ನ ಕೈಬಿಡಬಾರದು. ವಿರಾಟ್ ಕೊಹ್ಲಿ ವರ್ಲ್ಡ್​​ಕಪ್​​ ಟೀಂಮ್​ನಲ್ಲಿ ಬೇಕೇಬೇಕು ಅನ್ನೋದಾಗಿ ರೋಹಿತ್ ಶರ್ಮಾ ಬಿಸಿಸಿಐ ಜೊತೆಗಿನ ಮೀಟಿಂಗ್​ ವೇಳೆ ಸ್ಪಷ್ಟವಾಗಿ ಹೇಳಿದ್ದಾರೆ. ರೋಹಿತ್ ಶರ್ಮಾ ಈ ಒತ್ತಾಯದಿಂದಾಗಿಯೇ ಈಗ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​​ನಲ್ಲೂ ಕೊಹ್ಲಿಯನ್ನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಟೋಟಲಿ, ವಿರಾಟ್ ಕೊಹ್ಲಿಯ ಟಿ20 ಕೆರಿಯರ್​ನ್ನ ರೋಹಿತ್​ ಶರ್ಮಾ ಸೇವ್ ಮಾಡಿದ್ದಾರೆ ಅಂತಾನೆ ಹೇಳಬಹುದು.

ಆದ್ರೆ, ಈಗಲೂ ಕೂಡ ಕೊಹ್ಲಿ ವಿಚಾರದಲ್ಲಿ ಬಿಸಿಸಿಐ ಸೆಲೆಕ್ಷನ್ ಕಮಿಟಿಗೆ ಸ್ಯಾಟಿಸ್​​ಫ್ಯಾಕ್ಷನ್ ಇಲ್ಲ ಅನ್ನೋ ಮಾಹಿತಿ ಕೂಡ ಇದೆ. ಯಾಕಂದ್ರೆ 2023ರ ಐಪಿಎಲ್​ ಟೂರ್ನಿ ವೇಳೆ ಮಿಡ್ಲ್​​ ಓವರ್ಸ್​​ನಲ್ಲಿ 124 ಸ್ಪಿನ್​ ಬಾಲ್​ಗಳನ್ನ ಎದುರಿಸಿದ್ರು. ಆದ್ರೆ ಕೇವಲ 110 ಸ್ಟ್ರೈಕ್​​ ರೇಟ್​​ನಲ್ಲಿ ರನ್ ಮಾಡಿದ್ರು. 124 ಬಾಲ್​ಗಳಲ್ಲಿ 32 ಬೌಂಡರಿ ಅಷ್ಟೇ ಹೊಡೆದಿದ್ರು. ಹಾಗೆಯೇ 2022ರ ಐಪಿಎಲ್​​ ನಲ್ಲಿ ಪ್ರತಿ 8 ಸ್ಪಿನ್​ ಬಾಲ್​ಗಳ ಪೈಕಿ ಒಂದು ಬಾಲ್ ​ನ್ನ ಮಾತ್ರ ಅಟ್ಯಾಕಿಂಗ್ ಆಗಿ ಆಡಿದ್ದಾರೆ. 105 ಸ್ಟ್ರೈಕ್​ ರೇಟ್​​ ನ್ನಷ್ಟೇ ಹೊಂದಿದ್ರು. ಟಿ-20ಯಲ್ಲಿ ಕೊಹ್ಲಿ ಮಿಡ್ಲ್​ ಓವರ್​​​ಗಳಲ್ಲಿ ಸ್ಪಿನ್ನರ್ಸ್​​ಗಳ ಎದುರಿಸಬೇಕಾಗುತ್ತೆ. ಆದ್ರೆ, ಸ್ಪಿನ್​ ಬೌಲಿಂಗ್​​ಗೆ ಅವರ ಸ್ಟ್ರೈಕ್​​ರೇಟ್ ಚೆನ್ನಾಗಿಲ್ಲ ಅನ್ನೋದು ಬಿಸಿಸಿಐನ ವಾದ. ​​ಆದ್ರೆ ರೋಹಿತ್ ಶರ್ಮಾ ಮಾತ್ರ ಯಾವುದೇ ಕಾರಣಕ್ಕೂ ವಿರಾಟ್ ​ಕೊಹ್ಲಿಯನ್ನ ಬಿಟ್ಟು ಕೊಡೋಕೆ ರೆಡಿ ಇಲ್ಲ.

ಇದು ಒಂದು ವಿಚಾರ ಆಯ್ತು.. ಬಿಸಿಸಿಐ ಜೊತೆಗಿನ ಮೀಟಿಂಗ್ ವೇಳೆ ಇನ್ನೊಂದು ಇಂಟ್ರೆಸ್ಟಿಂಗ್ ಡೆವಲಪ್​ಮೆಂಟ್ ಕೂಡ ಆಗಿದೆ. ವಿರಾಟ್ ಕೊಹ್ಲಿ ಜೊತೆಗೆ ಸಲೆಕ್ಷನ್ ಕಮಿಟಿ ಸಪರೇಟ್ ಮೀಟಿಂಗ್ ಕೂಡ ಮಾಡಿತ್ತು. ಆದ್ರೆ ರೋಹಿತ್ ಶರ್ಮಾ ಅಲ್ಲಿ ಇರಲಿಲ್ಲ. ಈ ವೇಳೆ ಟಿ-20 ವರ್ಲ್ಡ್​​ಕಪ್​ಗೆ ಹಾರ್ದಿಕ್​ ಪಾಂಡ್ಯಾರನ್ನ ಕ್ಯಾಪ್ಟನ್ ಮಾಡೋ ಬಗ್ಗೆ ಬಿಸಿಸಿಐ ವಿರಾಟ್ ಕೊಹ್ಲಿಯ ಒಪೀನಿಯನ್ ಕೇಳಿದ್ಯಂತೆ. ಆದ್ರೆ ಕೊಹ್ಲಿ ಮಾತ್ರ ಪಾಂಡ್ಯಾ ಕ್ಯಾಪ್ಟನ್ಸಿಯನ್ನ ರಿಜೆಕ್ಟ್ ಮಾಡಿದ್ದು, ರೋಹಿತ್​​ ಶರ್ಮಾರೇ ವರ್ಲ್ಡ್​​ಕಪ್​ನಲ್ಲಿ ಕ್ಯಾಪ್ಟನ್ ಆಗಿ ಮುಂದುವರಿಯಲಿ ಅಂತಾ ಹೇಳಿದ್ದಾರಂತೆ. ಈ ಮೂಲಕ ವಿರಾಟ್ ಕೊಹ್ಲಿ ಕೂಡ ಕ್ಯಾಪ್ಟನ್ ರೋಹಿತ್ ಶರ್ಮಾರ ಬೆನ್ನಿಗೆ ನಿಂತಿದ್ದಾರೆ.

ಇನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸೀರಿಸ್​ಗೆ ಸೆಲೆಕ್ಟ್ ಮಾಡೋಕೂ ಮೇನ್ ರೀಸನ್​ ಆಗಿರೋದು ವರ್ಲ್ಡ್​ಕಪ್​. ವಿಶ್ವಕಪ್​​ನಂಥಾ ಹೈಪ್ರೆಷರ್​ ಟೂರ್ನಿಯಲ್ಲಿ ಕೇವಲ ಯಂಗ್​ಸ್ಟರ್ಸ್​​ಗಳನ್ನೇ ಕಟ್ಟಿಕೊಂಡು ಆಡೋಕೆ ಆಗೋದಿಲ್ಲ. ಎಕ್ಸ್​​ಪೀರಿಯನ್ಸ್ ಕೂಡ ಮ್ಯಾಟರ್​ ಆಗುತ್ತೆ. ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿಯಂಥಾ ಸೀನಿಯರ್​ ಪ್ಲೇಯರ್ಸ್​ಗಳು ಅನಿವಾರ್ಯ. ಇದೇ ಕಾರಣಕ್ಕೆ ಇಬ್ಬರನ್ನೂ ಆಫ್ಘನ್​ ಸೀರಿಸ್​ಗೆ ಪಿಕ್ ಮಾಡಲಾಗಿದೆ ಅಂತಾ ಸೆಲೆಕ್ಷನ್​ ಕಮಿಟಿಯ ಮಾಜಿ ಸದಸ್ಯ ಸಬಾ ಕರೀಮ್ ಹೇಳಿದ್ದಾರೆ. ಇದ್ರ ಜೊತೆಗೆ ಅವರು ಇನ್ನೊಂದು ಮೇನ್ ಪಾಯಿಂಟ್​​ನ್ನ ಕೂಡ ಮೆನ್ಷನ್ ಮಾಡಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್​ ಆಗಿ ಹಾರ್ದಿಕ್ ಪಾಂಡ್ಯಾ ಇನ್ನೂ ಕೂಡ ಕಂಪ್ಲೀಟ್ ಸೆಟ್ ಆಗಿಲ್ಲ. ಪಾಂಡ್ಯಾ ಕ್ಯಾಪ್ಟನ್ಸಿಯಲ್ಲಿ ಹೆಚ್ಚಿನ ಟೂರ್ನಮೆಂಟ್​​ಗಳನ್ನ ಭಾರತ ಆಡಿಲ್ಲ. ಜೊತೆಗೆ ಇಂಜ್ಯೂರಿ ಸಮಸ್ಯೆ ಬೇರೆ. ಪಾಂಡ್ಯಾ ಫಿಟ್ನೆಸ್ ಬಗ್ಗೆಯೂ ಇನ್ನೂ ಗ್ಯಾರಂಟಿ ಇಲ್ಲ. ಹೀಗಿರೋವಾಗ ಹಾರ್ದಿಕ್ ಪಾಂಡ್ಯಾರನ್ನ ವರ್ಲ್ಡ್​​ಕಪ್​ಗೆ ಕ್ಯಾಪ್ಟನ್​​ ಮಾಡೋದು ​ತುಂಬಾ ರಿಸ್ಕೀ ಡಿಸೀಶನ್. ಇದೇ ಕಾರಣಕ್ಕೆ ಬಿಸಿಸಿಐ ರೋಹಿತ್​ ಶರ್ಮಾರನ್ನೇ ವರ್ಲ್ಡ್​​ಕಪ್​​​ನಲ್ಲೂ ಕ್ಯಾಪ್ಟನ್ ಆಗಿ ಮುಂದುವರಿಸೋ ಪ್ಲ್ಯಾನ್​ನಲ್ಲಿದೆ.

ಇಲ್ಲಿ ಇನ್ನೊಂದು ವಿಚಾರವನ್ನ ಕೂಡ ಗಮನಿಸಲೇಬೇಕು. ಕಳೆದ ಒಂದೂವರೆ ವರ್ಷಗಳಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಯಾವುದೇ ಟಿ-20 ಮ್ಯಾಚ್​ಗಳನ್ನ ಆಡಿಲ್ಲ. ಇವರಿಬ್ಬರ ಆಬ್ಸೆನ್ಸ್​ನಲ್ಲಿ ಭಾರತೀಯ ತಂಡ ಒಟ್ಟು 25 ಟಿ20 ಮ್ಯಾಚ್​​ಗಳನ್ನ ಆಡಿದೆ. ಈ ಪೈಕಿ 16 ಮ್ಯಾಚ್​​ಗಳನ್ನ ಟೀಂ ಇಂಡಿಯಾ ಗೆದ್ದಿದೆ. 7 ಮ್ಯಾಚ್​ಗಳಲ್ಲಿ ಸೋತಿದೆ. 64 ಪರ್ಸೆಂಟ್​​ ಟೀಂ ಇಂಡಿಯಾದ ವಿನ್ನಿಂಗ್ ಪರ್ಸೆಂಟೇಜ್.

ಎನಿವೇ..ಈಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಿ-20 ಸ್ಕ್ವಾಡ್​ಗೆ ಕಮ್​ಬ್ಯಾಕ್ ಮಾಡಿದ್ದಾರೆ. ಆದ್ರೆ ಅಫ್ಘಾನಿಸ್ತಾನ ಮತ್ತು ಐಪಿಎಲ್​​ನಲ್ಲಿ ಪರ್ಫಾಮ್ ಮಾಡಲೇಬೇಕಾದ ಒತ್ತಡದಲ್ಲಿದ್ದಾರೆ. ವಿರಾಟ್​ ಕೊಹ್ಲಿಯಂತೂ ಟಿ20ಯಲ್ಲಿ ತಮ್ಮ ರನ್​​ರೇಟ್ ಹೆಚ್ಚಿಸುವತ್ತ ಫೋಕಸ್ ಮಾಡಲೇಬೇಕಿದೆ. ಸ್ಪಿನ್ನರ್ಸ್​ಗಳಿಗೆ, ಮಿಡ್ಲ್ ಓವರ್​ಗಳಲ್ಲಿ ಅಗ್ರೆಸ್ಸಿವ್ ಆಗಿ ಆಡಿಲ್ಲ ಅಂದ್ರೆ ವರ್ಲ್ಡ್​​ಕಪ್ ಟೀಮ್​ ಸೆಲೆಕ್ಷನ್ ವೇಳೆ ಕೊಹ್ಲಿಗೆ ಪ್ರಾಬ್ಲಂ ಆಗಬಹುದು. ಸದ್ಯ ಇಬ್ಬರೂ ಸೀನಿಯರ್​ ಕ್ರಿಕೆಟರ್ಸ್​ಗೆ ಸೇಮ್ ಅಮೌಂಟ್ ಆಫ್ ಪ್ರೆಷರ್ ಇದೆ. ಬಟ್ ಇಂಥಾ ಸ್ವಿಚ್ಯುವೇಶನ್ ಏನು ಅವರಿಗೆ ಹೊಸತಲ್ಲ. ಸೋ ರೋಹಿತ್ ಮತ್ತು ಕೊಹ್ಲಿ ಬ್ಯಾಟ್​​ನಿಂದ ಟಿ20ಯಲ್ಲೂ ರನ್​​ ಬರಬಹುದು ಅನ್ನೋ ನಿರೀಕ್ಷೆ ಇದೆ.

Sulekha