ಟಿ20ಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ರೋಹಿತ್-ರಿಂಕು ಜೋಡಿ – ಟೀಂ ಇಂಡಿಯಾಗೆ ಸಿಕ್ಕಿರೋ ಗಿಫ್ಟ್ ರಿಂಕು ಸಿಂಗ್

ಒಂದು ವೇಳೆ ರಿಂಕು ನಿಂತು ಆಡದೇ ಇರ್ತಿದ್ರೆ ರೋಹಿತ್ ಶರ್ಮಾಗೆ ಸೆಂಚೂರಿ ಬಾರಿಸೋಕೆ ಸಾಧ್ಯವಾಗ್ತಾ ಇರಲಿಲ್ವೋ ಏನೊ. ರೋಹಿತ್ ಶತಕ ಸಿಡಿಸಿ ಮಿಂಚಿದರೆ, ರಿಂಕು ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ಈ ಇಬ್ಬರೂ ಆಟಗಾರರು ತಮ್ಮ ಹೆಸರಿನಲ್ಲಿ ವಿಶ್ವದಾಖಲೆ ಕೂಡ ನಿರ್ಮಿಸಿದರು. ನಿಜಕ್ಕೂ ರಿಂಕು ಸಿಂಗ್ ಟೀಂ ಇಂಡಿಯಾಗೆ ಸಿಕ್ಕಿರೋ ಗಿಫ್ಟ್ ಆಂತಾನೆ ಹೇಳಬಹುದು.
ಪ್ರತಿ ಮ್ಯಾಚ್ನಲ್ಲೂ ರಿಂಕು ಸಿಂಗ್ ಪರ್ಫಾಮ್ ಮಾಡ್ತಾ ಇದ್ದಾರೆ. ರಿಂಕು ಸಿಂಗ್ ಆಡಿರೋ ಕಳೆದ 11 ಟಿ20 ಮ್ಯಾಚ್ಗಳಲ್ಲಿ 356 ರನ್ ಹೊಡೆದಿದ್ದಾರೆ. 176 ಸ್ಟ್ರೈಕ್ ರೇಟ್ನಲ್ಲಿ. ಅದು ಕೂಡ ಪ್ರತಿ ಬಾರಿಯೂ ರಿಂಕು ಸಿಂಗ್ ಬ್ಯಾಟಿಂಗ್ ಮಾಡೋದು ಕ್ರೂಶಿಯಲ್ ಟೈಮ್ನಲ್ಲೇ..ತಂಡದ ಮೇಲೆ ಪ್ರೆಷರ್ ಇರುವಾಗಲೇ.. ಇದುವರೆಗೆ ಹೆಚ್ಚಾಗಿ ಸ್ಲಾಗ್ ಓವರ್ಗಳಲ್ಲೇ ರಿಂಕುಗೆ ಬ್ಯಾಟಿಂಗ್ಗೆ ಅವಕಾಶ ಸಿಗ್ತಾ ಇತ್ತು. ಸ್ಲಾಗ್ ಓವರ್ಗಳಲ್ಲಿ ಬ್ಯಾಟಿಂಗ್ ಮಾಡೋದು ಈಸಿ ಇರಲ್ಲ. ಹೆಚ್ಚು ಪ್ರೆಷರ್ ಇರೋದೆ ಅವಾಗ. ಅದ್ರಲ್ಲೂ ರಿಂಕು ಸಿಂಗ್ ಒಬ್ಬ ಫಿನಿಷರ್ ಆಗಿರೋದ್ರಿಂದ ಪ್ರೆಷರ್ನ್ನ ಕೂಡ ತುಂಬಾ ಈಸಿಯಾಗಿ ಹ್ಯಾಂಡಲ್ ಮಾಡ್ತಾರೆ. ಆಫ್ಘನ್ ಮ್ಯಾಚ್ನಲ್ಲೇ ನೋಡಿ, ಮೇಲಿಂದ ಮೇಲೆ 4 ವಿಕೆಟ್ಗಳೊಉ ಬಿದ್ದಾಗಲೇ ರಿಂಕು ಕ್ರೀಸ್ಗೆ ಎಂಟ್ರಿಯಾದ್ರು. ಅದ್ರೆ ಎಲ್ಲೂ ಅವರ ಆಟದಲ್ಲಿ ಟೆನ್ಷನ್ ಕಾಣಿಸಿರಲಿಲ್ಲ. ಬಿಂದಾಸ್ ಆಗಿ ತಮ್ಮ ಎಂದಿನ ಸ್ಟ್ರೈಲ್ನಲ್ಲೇ ಬ್ಯಾಟ್ ಬೀಸಿದ್ರು. ರಿಂಕು ಸಿಂಗ್ ಆಡೋದನ್ನ ನೋಡಿಯೇ ರೋಹಿತ್ ಶರ್ಮಾ ಅಗ್ರೆಸ್ಸಿವ್ ಆಗಿ ರನ್ ಮಾಡೋಕೆ ಮುಂದಾದ್ರು. ರಿಂಕು ಮತ್ತು ರೋಹಿತ್ 5ನೇ ವಿಕೆಟ್ಗೆ 190 ರನ್ಗಳ ಪಾಟ್ನರ್ಶಿಪ್. ಲಾಸ್ಟ್ ಓವರ್ನಲ್ಲಂತೂ ರಿಂಕು ಮತ್ತು ರೋಹಿತ್ ಇಬ್ಬರೂ ಸೇರಿ 36 ರನ್ ಚಚ್ಚಿದ್ರು. ರಿಂಕು ಸಿಂಗ್ 69 ರನ್ ಹೊಡೆದ್ರು..ಅದ್ರಲ್ಲಿ 6 ಸಿಕ್ಸರ್ಗಳೇ ಬಂದಿದ್ವು. ನೋಡೋಕೆ ಕುಳ್ಳಗಿದ್ರೂ ರಿಂಕು ತುಂಬಾ ಈಸಿಯಾಗಿ ಸಿಕ್ಸರ್ ಹೊಡೀತಾರೆ. ಟೀಂ ಇಂಡಿಯಾದಲ್ಲಿ ಸದ್ಯ ರೋಹಿತ್ ಶರ್ಮಾ ಬಳಿಕ ಹೀಗೆ ಎಫರ್ಟ್ಲೆಸ್ ಸಿಕ್ಸ್ ಹೊಡಿಯೋ ಬ್ಯಾಟ್ಸ್ಮನ್ ಅಂದ್ರೆ ರಿಂಕು ಸಿಂಗ್ ಅಂತಾನೆ ಹೇಳಬಹುದು. ಮ್ಯಾಚ್ ಮುಗಿದ ಮೇಲೆ ರಿಂಕು ಬಗ್ಗೆ ರೋಹಿತ್ ಕೂಡ ಮಾತನಾಡಿದ್ದು, ನಮ್ಮ ಟೀಮ್ಗೆ ರಿಂಕು ಸಿಂಗ್ರಮಥಾ ಒಬ್ಬ ಪ್ಲೇಯರ್ ಬೇಕಾಗಿತ್ತು ಎಂದಿದ್ದಾರೆ. ಒಂದಂತೂ ಗ್ಯಾರಂಟಿ, ಟಿ20 ವರ್ಲ್ಡ್ಕಪ್ ಸ್ಕ್ವಾಡ್ಗೆ ರಿಂಕು ಸಿಂಗ್ ಸೆಲೆಕ್ಟ್ ಆಗೋದಂತೂ 200 ಪರ್ಸೆಂಟ್ ಗ್ಯಾರಂಟಿ.