RO-KO ಆಡಿದ್ರಷ್ಟೇ ಸೇಫ್ – ವಯಸ್ಸಿನ ನೆಪ.. ಗಂಭೀರ್ ಜತೆ ಬಿರುಕು
ಬ್ಯಾಟ್ ನಿಂದಲೇ ಉತ್ತರಿಸಿದ್ರಾ ದಿಗ್ಗಜರು?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಯಲ್ಲಿ ಎಲ್ಲರ ಕಣ್ಣೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಇದೆ. ಲೆಜೆಂಡರಿ ಪ್ಲೇಯರ್ಸ್, ಏಕದಿನ ಸರಣಿಯಲ್ಲಿ ಮಾತ್ರ ಆಡ್ತಿದ್ದಾರೆ, ಅದ್ಭುತ ಫಾರ್ಮ್ನಲ್ಲಿ ಇದ್ದಾರೆ ಅನ್ನೋದು ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ರೆ ತಂಡದಲ್ಲಿ ಕಂಟಿನ್ಯೂ ಮಾಡೋಕೆ ಅವ್ರ ಪರ್ಫಾಮೆನ್ಸ್ ಹೇಗಿದೆ ಅನ್ನೋದನ್ನ ಮ್ಯಾನೇಜ್ಮೆಂಟ್ ಗಮನಿಸ್ತಾ ಇದೆ. ಸೋ ಎಲ್ಲರೂ ಕೂಡ ಇವ್ರಿಬ್ಬರನ್ನೇ ಫೋಕಸ್ ಮಾಡ್ತಿದ್ದಾರೆ. ಬಟ್ ಒಂದು ವಿಷ್ಯ ಅಂದ್ರೆ ತಂಡದಲ್ಲಿ ಯಾರೇ ಆಡ್ಲಿ ಬಿಡ್ಲಿ ಅದು ಮ್ಯಾಟ್ರ್ ಆಗಲ್ಲ. ಆದ್ರೆ ರೋಕೋ ಆಡ್ಲೇಬೇಕಾಗಿದೆ.
ಇದನ್ನೂ ಓದಿ : ಜೈಲಿನಲ್ಲಿರುವ ದಾಸನಿಗೆ ಶಾಕ್ ಕೊಟ್ಟ ಕೋರ್ಟ್! – ದರ್ಶನ್ ಮನೆಯಲ್ಲಿ ಸಿಕ್ಕಿದ್ದ 83 ಲಕ್ಷ ಆದಾಯ ತೆರಿಗೆ ಇಲಾಖೆಗೆ!
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಜೋಡೆತ್ತು. ದಶಕದಿಂದಲೂ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಾ ಬಂದವರು. ಆಲ್ರೆಡಿ ಟೆಸ್ಟ್ ಮತ್ತು ಟಿ-20ಯಿಂದ ಹಿಂದೆ ಸರಿದಿರೋ ಇಬ್ಬರೂ ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. ಅದೂ ಕೂಡ 2027ರ ವಿಶ್ವಕಪ್ ಗೆಲ್ಬೇಕು ಅನ್ನೋ ಮಹದಾಸೆಯಿಂದ. ಪ್ರಸ್ತುತ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡ್ತಿರೋ ಇಬ್ಬರು ಲೆಜೆಂಡರಿ ಸ್ಟಾರ್ಸ್ ತಮ್ಮ ಕೆಪಾಸಿಟಿ ಏನೂ ಅನ್ನೋದನ್ನ ತೋರಿಸಿದ್ದಾರೆ. ಹಾಗೇ ಮುಂದಿನ ಪಂದ್ಯಗಳಲ್ಲೂ ಮಾಡ್ಬೇಕಾಗಿದೆ. ಯಾಕಂದ್ರೆ ರೋಹಿತ್ ಮತ್ತು ಕೊಹ್ಲಿ ಮುಂದಿನ ಜರ್ನಿ ಅಷ್ಟು ಈಸಿ ಇಲ್ಲ.
ರೋಹಿತ್ ಮತ್ತು ಕೊಹ್ಲಿ ಆಟದ ಮೇಲೇ ಬಿಸಿಸಿಐ ಕಣ್ಣು!
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಏಕದಿನ ತಂಡದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳಿವೆ. ಯಾಕಂದ್ರೆ ಹಿಂದಿನ ಪರಿಸ್ಥಿತಿಗಳಿಗೂ ಈಗಿರುವಂತ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಸಾಕಷ್ಟು ಬದಲಾವಣೆಗಳೂ ಆಗಿವೆ.
ರೋ-ಕೊ ಆಡಿದ್ರಷ್ಟೇ ಸೇಫ್!
ವಯಸ್ಸಿನ ನೆಪ ಹೇಳಿ ನಿವೃತ್ತಿ ಕೇಳುವವರಿಗೆ ಉತ್ತರ
2027ರ ಏಕದಿನ ವಿಶ್ವಕಪ್ ವರೆಗೂ ಕಂಟಿನ್ಯೂ ಆಗ್ಬೇಕು
ಗಂಭೀರ್ ಜೊತೆಗಿನ ಮುನಿಸಿಗೆ ಆಟದಲ್ಲೇ ತಿರುಗೇಟು
ತಂಡದಲ್ಲಿ ಬೇರೆಲ್ಲಾ ಆಟಗಾರರಿಗಿಂತ ಜಾಸ್ತಿ ಪ್ರೆಶರ್
ಭಾರತ ಸೋತ್ರೆ ರೋಹಿತ್ & ಕೊಹ್ಲಿಗೆ ಹಿನ್ನಡೆ
ಹೀಗೆ ರೋಕೋ ಆಟವೊಂದೇ ಚಾಲೆಂಜ್ ಆಗಿಲ್ಲ. ಮುಂದಿನ ಪಂದ್ಯಗಳಲ್ಲಿ ಆಡ್ಬೇಕು. ಬಿಸಿಸಿಐ ಮುಂದೆ ಪ್ರೂವ್ ಮಾಡ್ಬೇಕು. ಟೀಕಿಸೋರ ಬಾಯಿ ಮುಚ್ಚಿಸಬೇಕು. ಗೌತಮ್ ಗಂಭೀರ್ ಜೊತೆಗಿನ ಮುನಿಸನ್ನೂ ಗೆದ್ದು ಮುಂದೆ ಸಾಗ್ಬೇಕು ಅಂದ್ರೆ ಆಡೋದೊಂದೇ ದಾರಿ.

ನೋಡಿರಿ

