KO ಸಿಕ್ಸ್ ಪ್ಯಾಕ್ Vs RO 1 ಪ್ಯಾಕ್ – ಫಿಟ್ನೆಸ್ ​ನಲ್ಲಿ ಕೊಹ್ಲಿಗಿಂತ ರೋಹಿತ್ ಬೆಸ್ಟ್
ಸಿಕ್ಸರ್ ಕಿಂಗ್ HITಮ್ಯಾನ್ ಸೀಕ್ರೆಟ್

KO ಸಿಕ್ಸ್ ಪ್ಯಾಕ್ Vs RO 1 ಪ್ಯಾಕ್ – ಫಿಟ್ನೆಸ್ ​ನಲ್ಲಿ ಕೊಹ್ಲಿಗಿಂತ ರೋಹಿತ್ ಬೆಸ್ಟ್ಸಿಕ್ಸರ್ ಕಿಂಗ್ HITಮ್ಯಾನ್ ಸೀಕ್ರೆಟ್

ಟೀಂ ಇಂಡಿಯಾದಲ್ಲಿ ಮೋಸ್ಟ್ ಫಿಟ್ಟೆಸ್ಟ್ ಕ್ರಿಕೆಟರ್ ಯಾರು ಅನ್ನೋ ಪ್ರಶ್ನೆ ಬಂದಾಗ ವಿರಾಟ್ ಕೊಹ್ಲಿ ಹೆಸ್ರೇ ಫಸ್ಟ್ ಬರೋದು.. ಅಫ್​ಕೋರ್ಸ್​ ವಿರಾಟ್ ಕೊಹ್ಲಿ ಅತ್ಯಂತ ಫಿಟ್ ಆಟಗಾರ ಅನ್ನೋದ್ರಲ್ಲಿ ಡೌಟೇ ಇಲ್ಲ. ಟೀಂ ಇಂಡಿಯಾದ ಮೋಸ್ಟ್ ಅನ್​ಫಿಟ್ ಪ್ಲೇಯರ್ ಅಂದ್ರೆ ಆಲ್​ಮೋಸ್ಟ್ ಎಲ್ಲರೂ ರೋಹಿತ್​ ಶರ್ಮಾ ಅಂತಾನೆ ಅಂದುಕೊಳ್ತಾರೆ. ರೋಹಿತ್​ ದಪ್ಪಗಿದ್ದಾರೆ. ಹೊಟ್ಟೆ ಬಿಟ್ಕೊಂಡಿದ್ದಾರೆ ಅಂತಾ. ಇತ್ತೀಚೆಗೆ ಪಾಕ್ ಕ್ರಿಕೆಟರ್ಸ್ ಕೂಡ ರೋಹಿತ್ ಶರ್ಮಾರನ್ನ ಟ್ರೋಲ್ ಮಾಡಿದ್ರು. ಆದ್ರೆ ನೀವೇನಾದ್ರೂ ರೋಹಿತ್​ ಶರ್ಮಾ ಅನ್ ಫಿಟ್ ಕ್ರಿಕೆಟರ್ ಅಂತಾ ಅಂದುಕೊಂಡಿದ್ರೆ ದಟ್ ಈಸ್ ಕಂಪ್ಲೀಟ್ಲಿ ರಾಂಗ್. ಯಾಕಂದ್ರೆ ವಿರಾಟ್ ಕೊಹ್ಲಿ ಎಷ್ಟು ಫಿಟ್ ಆಗಿದ್ದಾರೋ, ರೋಹಿತ್ ಶರ್ಮಾ ಕೂಡ ಅಷ್ಟೇ ಫಿಟ್ ಆಗಿದ್ದಾರೆ. ಈ ಮಾತನ್ನ ನಾನು ಹೇಳ್ತಿಲ್ಲ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ದಿಗ್ಗಜ ಆಟಗಾರ ಕಪಿಲ್ ದೇವ್ ಹೇಳಿರೋದು. ವಿರಾಟ್​ ಕೊಹ್ಲಿಯಷ್ಟೇ ಫಿಟ್ನೆಸ್​​ನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಮೇಂಟೇನ್ ಮಾಡಿದ್ದಾರಂತೆ. ಕೊಹ್ಲಿಗೆ ಸಿಕ್ಸ್‌ಪ್ಯಾಕ್ ಇದ್ರೆ, ರೋಹಿತ್ ಶರ್ಮಾಗೆ ಇರೋ ಒಂದೇ ಪ್ಯಾಕ್ ಸಾಕಂತೆ. ಇದೇ ಅವ್ರ ಗೆಲುವಿನ ಸೀಕ್ರೆಟ್ ಅಂತಾ ಹೇಳಿದ್ದಾರೆ ಕಪಿಲ್ ದೇವ್. ಹಾಗಿದ್ರೆ ರೋಹಿತ್ ಪರಾಕ್ರಮದ ಹಿಂದಿರೋ ಸೀಕ್ರೆಟ್ ಏನು?, ಕೊಹ್ಲಿ ಎಷ್ಟೇ ವರ್ಕೌಟ್ ಮಾಡಿದ್ರೂ ರೋಹಿತ್ ಶರ್ಮಾಗೆ ಸರಿಸಾಟಿ ಅಲ್ವಾ? ಈ ಇಬ್ಬರು ಕ್ರಿಕೆಟ್ ಲೆಜೆಂಡ್​ಗಳ ಬಗೆಗಿನ ಫಿಟ್​ನೆಸ್ ಸೀಕ್ರೆಟ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶಫಾಲಿ ವರ್ಮಾ ವಿಶ್ವದಾಖಲೆ ದ್ವಿಶತಕ – 20ನೇ ವಯಸ್ಸಲ್ಲಿ ಸಿಕ್ಸರ್ ಕ್ವೀನ್ ಸಿಡಿಲಬ್ಬರ

ಫಿಟ್ನೆಸ್ ವಿಚಾರ ಬಂದ್ರೆ ಸಾಕು ರೋಹಿತ್ ಶರ್ಮಾರನ್ನ ಅಂಡರ್​​ಎಸ್ಟಿಮೇಟ್ ಮಾಡ್ತಾರೆ. ರೋಹಿತ್​ ಬ್ಯಾಟ್​ನಿಂದ ಏನಾದ್ರೂ ರನ್ ಬಂದಿಲ್ಲ ಅಂದ್ರೆ ಮುಗೀತು ಬಿಡಿ. ರೋಹಿತ್​ರದ್ದು ಓವರ್​​ವೇಯ್ಟ್..​​ ಫಿಟ್ನೆಸ್ಸೇ ಮೇಂಟೇನ್ ಮಾಡಲ್ಲ, ವಿರಾಟ್ ಕೊಹ್ಲಿಯನ್ನ ನೋಡಿ ಕಲಿಯಲಿ ಅಂತೆಲ್ಲಾ ಕ್ರಿಟಿಸೈಸ್ ಮಾಡಲಾಗುತ್ತೆ. ಟ್ರೋಲರ್ಸ್​ಗಳಿಗಂತೂ ರೋಹಿತ್ ಆಹಾರವಾಗ್ತಾ ಇದ್ರು. ಇಂಡಿಯನ್ ಕ್ರಿಕೆಟರ್ಸ್​ಗಳ ವಿಚಾರಕ್ಕೆ ಬರೋದಾದ್ರೆ ರೋಹಿತ್​ ಶರ್ಮಾಗೆ ಆದಷ್ಟು ಬಾಡಿ ಶೇಮ್ ಇನ್ಯಾರಿಗೂ ಆಗಿಲ್ಲ. ಆದ್ರೆ, ರಿಯಾಲಿಟಿ ಬೇರೆಯೇ ಇದೆ. ರೋಹಿತ್​ ಶರ್ಮಾ ನೋಡೋಕೆ ಮಾತ್ರ ಸ್ವಲ್ಪ ದಪ್ಪಗಿದ್ದಾರೆ ಅನ್ನೋದನ್ನ ಬಿಟ್ರೆ, ಫಿಟ್ನೆಸ್​ವೈಸ್ ವಿರಾಟ್ ಕೊಹ್ಲಿಗೆ ಸರಿಸಮಾನರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಈಗಿನ ಕ್ಯಾಪ್ಟನ್ ಬಗ್ಗೆ ಕೊಟ್ಟಿರೋ ಬೋಲ್ಡ್ ಹೇಳಿಕೆ ಕೊಹ್ಲಿ ಫ್ಯಾನ್ಸ್ ಕಣ್ಣು ಕೆಂಪಾಗಿಸುವಂತೆ ಮಾಡಿದ್ದಂತೂ ಸುಳ್ಳಲ್ಲ. ಲೆಜೆಂಡರಿ ಕ್ರಿಕೆಟರ್ ಕಪಿಲ್ ದೇವ್ ಪ್ರಕಾರ ರೋಹಿತ್​ ಶರ್ಮಾ ನೋಡೋಕೆ ಮಾತ್ರ ಬಲ್ಕಿಯಾಗಿದ್ದಾರೆ. ರೋಹಿತ್ ವನ್​ ಆಫ್ ದಿ ಫಿಟ್ಟೆಸ್ಟ್ ಕ್ರಿಕೆಟರ್ ಅಂತಾ ಕಪಿಲ್ ದೇವ್ ಹೇಳಿದ್ದಾರೆ.

ಫಿಟ್ನೆಸ್ ವಿಚಾರಕ್ಕೆ ಬಂದ್ರೆ ಕೊಹ್ಲಿ ಬಗ್ಗೆ ಮಾತಾಡುವಂಗಿಲ್ಲ. ಆತ ಫಿಟ್ನೆಸ್ ಫ್ರೀಕ್ ಅನ್ನೋದು ಎಲ್ಲರಿಗೂ ಗೊತ್ತಿದೆ. ವಿರಾಟ್ ವರ್ಕೌಟ್ ಮಾಡುವ ರೀತಿಯಿಂದ ಡ್ರೆಸ್ಸಿಂಗ್ ರೂಮ್‌ನಲ್ಲೂ ಹಲವು ಬದಲಾವಣೆಗಳಾಗಿವೆ. ನಾನು ನೋಡಿದಂತೆ ರೋಹಿತ್ ಶರ್ಮಾ ವಿರಾಟ್ ರೀತಿ ದೊಡ್ಡ ಜಿಮ್ ಫ್ರೀಕ್ ಅಲ್ಲದಿದ್ದರೂ ಕ್ರಿಕೆಟ್ ಅಂತಾ ಬಂದಾಗ ರೋಹಿತ್ ಶರ್ಮಾಗೆ ಸರಿಸಾಟಿಯಾರಿಲ್ಲ ಎಂದಿದ್ದಾರೆ. ಕೊಹ್ಲಿಯಂತೆ ರೋಹಿತ್‌ಗೆ ಸಿಕ್ಸ್‌ಪ್ಯಾಕ್ ಇಲ್ಲದಿದ್ದರೂ ಆತ ಮೈದಾನದ ಸುತ್ತ ಚೆಂಡನ್ನು ಹೊಡೆಯುವಂತಹ ಶಕ್ತಿವಂತ. ವಿರಾಟ್ ಜಿಮ್‌ನಲ್ಲಿ ಹೆವಿ ವರ್ಕೌಟ್ ಮಾಡ್ತಾರೆ ಅಂದರೆ ಅದನ್ನ ರೋಹಿತ್ ಮಾಡಬೇಕಿಲ್ಲ. ರೋಹಿತ್ ಗೆ ಕ್ರಿಕೆಟ್ ನ ಇತಿಮಿತಿ ಗೊತ್ತಿದೆ. ಈ ವಿಚಾರದಲ್ಲಿ ವಿರಾಟ್‌ಗೂ ರೋಹಿತ್ ನ ಮೀರಿಸೋಕೆ ಆಗಲ್ಲ ಅಂದಿದ್ದಾರೆ ಕಪಿಲ್ ದೇವ್. ರೋಹಿತ್‌ಗೆ ಒಂದು ಪ್ಯಾಕ್ ಇದ್ದು, ಸಿಕ್ಸ್‌ಗಳನ್ನು ಹೊಡೆಯಲು ಅಷ್ಟು ಸಾಕು. ನಾನು ನೋಡಿದಂತೆ ಅನೇಕರು ತಮಗಾಗಿ ಆಡುತ್ತಾರೆ. ಆದ್ರೆ, ರೋಹಿತ್ ತಂಡಕ್ಕಾಗಿ ಆಡುತ್ತಾರೆ ಎಂದಿದ್ದಾರೆ.

ಲೆಜೆಂಡರಿ ಕ್ರಿಕೆಟರ್ ಕಪಿಲ್ ದೇವ್ ಹೇಳಿದು ಕರೆಕ್ಟಾಗಿಯೇ ಇದೆ. ರೋಹಿತ್ ಶರ್ಮಾ ಯಾವತ್ತೂ ಸೆಂಚೂರಿ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಅವ್ರ ಗುರಿಯೇನಿದ್ರೂ ತಂಡದ ಪರ ಇನ್ನಿಂಗ್ಸ್ ಕಟ್ಟೋದು ಮಾತ್ರ. ಅಷ್ಟೇ ಅಲ್ಲ, ಇಂಜ್ಯೂರಿ ವಿಚಾರಕ್ಕೆ ಬರೋದಾದ್ರೆ, ವಿರಾಟ್ ಕೊಹ್ಲಿ ತಮ್ಮ ಕೆರಿಯರ್​ನಲ್ಲಿ ಇದುವರೆಗೂ ಒಂದೇ ಒಂದು ಬಾರಿ ಇಂಜ್ಯೂರಿಯಿಂದಾಗಿ ಮ್ಯಾಚ್​ ಮಿಸ್ ಮಾಡಿಕೊಂಡಿಲ್ಲ. ಅತ್ತ ರೋಹಿತ್ ಶರ್ಮಾ ಕೂಡ ಅಷ್ಟೇ, ಆನ್​​ಗ್ರೌಂಡ್ ಇಂಜ್ಯೂರಿಯಿಂದಾಗಿ ಮ್ಯಾಚ್​ನಿಂದ ಔಟಾಗಿಲ್ಲ. ರೋಹಿತ್​​ಗೆ ಪ್ರಾಬ್ಲಂ ಆಗಿರೋದು ಅವರ ಶೋಲ್ಡರ್. ರೋಹಿತ್ ಶೋಲ್ಡರ್​ ಡಿಸ್​​ಲೊಕೇಟ್ ಆಗಿತ್ತು. ಆ ಪ್ರಾಬ್ಲಂ ರೋಹಿತ್​ಗೆ ಈಗಲೂ ಇದೆ. ಆದ್ರೆ ರೋಹಿತ್ ಶರ್ಮಾ ಪರ್ಫಾಮೆನ್ಸ್​ ಮೇಲೆ ಯಾವುದೇ ನೆಗೆಟಿವ್ ಎಫೆಕ್ಟ್ ಆಗಿಲ್ಲ. ರೋಹಿತ್ ನೋಡೋಕೆ ಬಲ್ಕಿ ಆಗಿದ್ರು ಕೂಡ ಸ್ಲಿಪ್, ಕವರ್​​ನಲ್ಲಿ ಯಾವ ರೀತಿ ಫೀಲ್ಡಿಂಗ್ ಮಾಡ್ತಾರೆ ಅನ್ನೋದನ್ನ ನೀವು ನೋಡಿದ್ದೀರಾ. ರೋಹಿತ್ ಶರ್ಮಾ ಟೀಂ ಇಂಡಿಯಾದ ಒನ್​ ಆಫ್ ದಿ ಬೆಸ್ಟ್ ಫೀಲ್ಡರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಇಲ್ಲಿ ಇನ್ನೊಂದು ವಿಚಾರವನ್ನ ಕೂಡ ಹೇಳಲೇಬೇಕು. ದಪ್ಪಗಿದ್ದ ಮಾತ್ರಕ್ಕೆ ಆಟಗಾರರನ್ನ ಫಿಟ್ ಆಗಿ ಅಂತಾ ಹೇಳೋಕೆ ಆಗೋದಿಲ್ಲ. ಹೀಗಾಗಿ ಓವರ್​ಆಲ್ ಆಗಿ ಫಿಟ್ನೆಸ್ ವಿಚಾರಕ್ಕೆ ಬಂದಾಗ ರೋಹಿತ್ ಶರ್ಮಾಗಿಂತಲೂ ವಿರಾಟ್ ಕೊಹ್ಲಿ ಒಂದು ಸ್ಟೆಪ್ ಮುಂದೆ ಇದ್ದಾರೆ ಅನ್ನೋದು ಕೂಡ ಸತ್ಯ. ಹಾಗಂತಾ ಕ್ರಿಕೆಟ್​​ನಲ್ಲಿ ಕೇವಲ ಫಿಟ್ನೆಸ್ ಒಂದೇ ಇಂಪಾರ್ಟೆಂಟ್ ಆಗೋದಿಲ್ಲ. ಸಿಕ್ಸ್​ ಪ್ಯಾಕ್​ ಮಾಡ್ಕೊಂಡ್ರೆ ಅದು ಯೂಸ್ ಆಗಲ್ಲ. ಸ್ಕಿಲ್​ ಆಲ್ಸೋ ಮೋರ್ ಇಂಪಾರ್ಟೆಂಟ್. ಎಷ್ಟೇ ಫಿಟ್ ಆಗಿದ್ರೂ, ಸ್ಕಿಲ್ ಇಲ್ಲ ಅಂದ್ರೆ ನೋ ಯೂಸ್. ರೋಹಿತ್ ಶರ್ಮಾ ಕೂಡಾ ಇದೇ ರೀತಿ. ಇನ್ನೊಂದು ರೀತಿಯಲ್ಲಿ ನೋಡೋದಾದ್ರೆ, ರೋಹಿತ್ ಶರ್ಮಾ ಫಿಟ್ನೆಸ್ ಯಾರಿಗೂ ಗೊತ್ತಾಗಲ್ಲ. ವಿರಾಟ್ ಕೊಹ್ಲಿಯ ಫಿಟ್ನೆಸ್ ಕಾಣ್ಸುತ್ತೆ. ವಿರಾಟ್ ಕೊಹ್ಲಿಯನ್ನ ನೋಡಿದ ಕೂಡಲೇ ತುಂಬಾ ಫಿಟ್ ಆಗಿದ್ದಾರೆ ಅಂತಾ ಅನ್ಸುತ್ತೆ. ಆದ್ರೆ ರೋಹಿತ್ ಬಲ್ಕಿಯಾಗಿರೋದ್ರಿಂದ ಅವರ ಫಿಟ್ನೆಸ್ ಬಗ್ಗೆ ಡೌಟ್ ಬರುತ್ತೆ.. ಆಗಿರೋದಿಷ್ಟೇ..  ರೋಹಿತ್ ಯಾವಾಗಲೂ ಸ್ವಲ್ಪ ಲೇಸಿ ಪರ್ಸನ್. ಅಂದ್ರೆ ಗ್ರೌಂಡ್​​ನಲ್ಲಿ ಅಲ್ಲ. ಈಗ ಪೆವಿಯನ್​ನಲ್ಲಿದ್ದಾಗ ಅಥವಾ ಔಟ್​ಸೈಡ್ ನೀವು ಗಮನಿಸಿರಬಹುದು. ರೋಹಿತ್ ಕುಳಿತುಕೊಳ್ಳೋ ಶೈಲಿ, ಬಾಡಿಲಾಂಗ್ವೇಜ್ ಇವೆಲ್ಲಾ ಸ್ವಲ್ಪ ಲೇಸಿಯಾಗಿ ಕಾಣ್ಸುತ್ತೆ. ಈ ಕಾರಣಕ್ಕಾಗಿಯೂ ರೋಹಿತ್ ಫಿಟ್ ಆಗಿಲ್ಲ ಅಂತಾ ಅನ್ನಿಸಬಹುದು. ಹೀಗಾಗಿಯೇ ಕಪಿಲ್ ದೇವ್ ಹೇಳಿರೋದು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಫಿಟ್ನೆಸ್ ವಿಚಾರವಾಗಿ ಕಂಪೇರಿಸನ್ ಮಾಡೋದ್ರಲ್ಲಿ ಯಾವುದೇ ಅರ್ಥ ಇಲ್ಲ. ಎಲ್ಲರ ಬಾಡಿ ನೇಚರ್​ ಒಂದೇ ರೀತಿ ಇರೋದಿಲ್ಲ. ಜೀನ್​ನಿಂದಾಗಿಯೇ ಕೆಲವರು ದೇಹ ದಪ್ಪಗಿರುತ್ತೆ. ಇನ್ನೂ ಕೆಲವರು ಸ್ಲಿಮ್ ಆಗಿರ್ತಾರೆ. ಹೀಗಾಗಿ ಸ್ಲಿಮ್ ಆಗಿದ್ದ ಮಾತ್ರಕ್ಕೆ ಆತ ಫಿಟ್ ಅಂತಾನೂ ಹೇಳೋಕಾಗಲ್ಲ.. ದಪ್ಪಗಿದ್ದ ಮಾತ್ರಕ್ಕೆ ಆತ ಅನ್​ಫಿಟ್ ಅಂತಾನೂ ಹೇಳೋಕಾಗಲ್ಲ.. ಇನ್ನು ಕೇವಲ ಫಿಸಿಕಲಿ ಫಿಟ್ ಆಗಿದ್ರಷ್ಟೇ ಸಾಕಾಗೋದಿಲ್ಲ. ಮೆಂಟಲಿ ಕೂಡ ಸ್ಟ್ರಾಂಗ್ ಆಗಿರಬೇಕಾಗುತ್ತೆ. ರೋಹಿತ್​ ಶರ್ಮಾ ಮೆಂಟಲಿ ತುಂಬಾನೆ ಸ್ಟ್ರಾಂಗ್ ಪರ್ಸನ್. ಸೋ ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರೋ ವಿಚಾರ ಇಷ್ಟೇ. ರೋಹಿತ್​ ಶರ್ಮಾ ಫಿಟ್ನೆಸ್ ಮೇಂಟೇನ್ ಮಾಡಿಲ್ಲ.. ಫ್ಯಾಟ್ ಬಾಯ್.. ಅನ್​ಫಿಟ್ ಕ್ರಿಕೆಟರ್ ಅಂತಾ ಯಾರಾದ್ರೂ ಅಂದುಕೊಂಡಿದ್ರೆ, ಜೊತೆಗೆ ಟ್ರೋಲ್ ಮಾಡೋರು ರೋಹಿತ್​​ ಫಿಟ್ನೆಸ್ ಸೀಕ್ರೆಟ್ ಏನು ಅನ್ನೋದನ್ನ ಇನ್ನಾದ್ರೂ ಅರ್ಥಮಾಡಿಕೊಳ್ಳಬೇಕು.

Shwetha M

Leave a Reply

Your email address will not be published. Required fields are marked *