ಕ್ಯಾಪ್ಟನ್ಸಿ ಡೀಲ್ ಒಪ್ಪಿಕೊಂಡೇ ಮುಂಬೈಗೆ ಮರಳಿದ್ರಾ ಹಾರ್ದಿಕ್ ಪಾಂಡ್ಯಾ – ಐಪಿಎಲ್ ಗೂ ಮುನ್ನವೇ ಡಲ್ ಆಗುತ್ತಾ ಮುಂಬೈ ಟೀಂ?
2024ರ ಐಪಿಎಲ್ ಟೂರ್ನಿಗೂ ಮುನ್ನವೇ ಒಂದು ದೊಡ್ಡ ಬಾಂಬ್ ಬಿದ್ದಿದೆ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮಾರನ್ನ ಕೆಳಗೆ ಇಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿದೆ. ಕೇವಲ ಐಪಿಎಲ್ ಮಾತ್ರವಲ್ಲ ಇಂಡಿಯನ್ ಕ್ರಿಕೆಟ್ ವಿಚಾರದಲ್ಲೂ ಇದು ಅತ್ಯಂತ ಮೇಜರ್ ಡೆವಲಪ್ಮೆಂಟ್.
2013 ರಿಂದ 2023ರ ಅಂತ್ಯದವರೆಗೆ ಅಂದ್ರೆ ಭರ್ತಿ 10 ವರ್ಷಗಳ ಕಾಲ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ರು. ಯಂಗ್ ರೋಹಿತ್ರನ್ನ ಕ್ಯಾಪ್ಟನ್ ಮಾಡಬೇಕು ಅಂತಾ ಅಂದು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ಗೆ ಸಲಹೆ ನೀಡಿದ್ದೇ ರಿಕ್ಕಿ ಪಾಂಟಿಂಗ್. ತಮ್ಮ ಕೈಯಲ್ಲಿದ್ದ ಕ್ಯಾಪ್ಟನ್ಸಿ ಕೀಯನ್ನ ರಿಕ್ಕಿ ರೋಹಿತ್ ಶರ್ಮಾಗೆ ಹ್ಯಾಂಡ್ ಓವರ್ ಮಾಡಿದ್ರು. ಬಳಿಕ ನಡೆದಿದ್ದೆಲ್ಲಾ ಇತಿಹಾಸ. 2013ರಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಫಸ್ಟ್ ಟೂರ್ನಿಯನ್ನೇ ಮುಂಬೈ ಇಂಡಿಯನ್ಸ್ ಗೆದ್ದಿತ್ತು. ನಂತರ 2015, 2017, 2019 ಮತ್ತು 2020ರಲ್ಲೂ ಬ್ಯಾಕ್ ಟು ಬ್ಯಾಕ್ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ರೋಹಿತ್ ಕ್ಯಾಪ್ಟನ್ ಆದ ಬಳಿಕ ಮುಂಬೈ ಇಂಡಿಯನ್ಸ್ ಒಟ್ಟು 5 ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತ್ತು. ಈ ಬಾರಿ ಕೂಡ ರೋಹಿತ್ ಶರ್ಮಾರೆ ಮುಂಬೈ ಇಂಡಿಯನ್ಸ್ ಲೀಡ್ ಮಾಡಬಹುದು. ಕ್ಯಾಪ್ಟನ್ ಆಗಿ ರೋಹಿತ್ಗೆ ಇದು ಕೊನೆಯ ಐಪಿಎಲ್ ಟೂರ್ನಿಯಾಗಬಹುದು. ಈವನ್ ಹಾರ್ದಿಕ್ ಪಾಂಡ್ಯಾ ಕೂಡ ರೋಹಿತ್ಗೆ ಲೀಡ್ ಮಾಡೋಕೆ ಅವಕಾಶ ನೀಡಬಹುದು ಅಂತಾನೆ ಅಂದುಕೊಳ್ಳಲಾಗಿತ್ತು. ಆದ್ರೆ ರೋಹಿತ್ ಕ್ಯಾಪ್ಟನ್ಸಿ ಲೀಗಸಿಗೆ ಮುಂಬೈ ಇಂಡಿಯನ್ಸ್ ಗುಡ್ಬೈ ಹೇಳಿದೆ. ಹಾರ್ದಿಕ್ ಪಾಂಡ್ಯಾ ಮತ್ತೆ ಮುಂಬೈಗೆ ಕಮ್ಬ್ಯಾಕ್ ಮಾಡಿದಾಗಲೇ ಎಲ್ಲರಿಗೂ ಹಿಂಟ್ ಸಿಕ್ಕಿತ್ತು. ಈ ಬಾರಿ ಮುಂಬೈ ಇಂಡಿಯನ್ಸ್ನಲ್ಲಿ ಬಾಂಬ್ ಸಿಡಿಯೋದು ಗ್ಯಾರಂಟಿ ಅನ್ನೋದು ಫಿಕ್ಸ್ ಆಗಿತ್ತು. ಈಗ ಅದೇ ಆಗಿದೆ. ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಕ್ಕಿಳಿಸಿ, ಹಾರ್ದಿಕ್ ಪಾಂಡ್ಯಾಗೆ ಪಟ್ಟ ಕಟ್ಟಿದ್ದಾರೆ.
ಇದನ್ನೂ ಓದಿ : ಸೂರ್ಯಕುಮಾರ್ ಯಾದವ್ ಮತ್ತು ಅರ್ಶ್ ದೀಪ್ ಸಿಂಗ್ ನಡುವೆ ಗಲಾಟೆ – ಬಸ್ ನಲ್ಲೇ ಜಗಳ ಮಾಡಿಕೊಂಡ ಆಟಗಾರರು
2020ರಲ್ಲಿ ಕೊನೆಯ ಬಾರಿ ಮುಂಬೈ ಇಂಡಿಯನ್ಸ್ ಐಪಿಎಲ್ ಗೆದ್ದಿತ್ತು. ಬಳಿಕ ನಡೆದ ಮೂರೂ ಸೀಸನ್ಗಳಲ್ಲೂ ಮುಂಬೈ ಇಂಡಿಯನ್ಸ್ ಪರ್ಫಾಮೆನ್ಸ್ ಆ ಫ್ರಾಂಚೈಸಿಯ ಸ್ಟ್ಯಾಂಡರ್ಡ್ಗೆ ತಕ್ಕಂತೆ ಇರಲಿಲ್ಲ. ಅದ್ರಲ್ಲೂ ಕಳೆದ ಮೂರು ಐಪಿಎಲ್ ಸೀಸನ್ಗಳಲ್ಲೂ ರೋಹಿತ್ ಶರ್ಮಾರ ಪರ್ಫಾಮೆನ್ಸ್ ಕಂಪ್ಲೀಟ್ ಡಲ್ ಆಗಿದೆ. ನಿರೀಕ್ಷೆಗೆ ತಕ್ಕಂತೆ ರೋಹಿತ್ ಬ್ಯಾಟಿಂಗ್ ಮಾಡಿಲ್ಲ. ಇಲ್ಲಿ ಪ್ರಾಬ್ಲಂ ಆಗಿರೋದು ಇದೇ. ಮೂರು ಸೀಸನ್ನಗಳಲ್ಲಿ ರೋಹಿತ್ ಮತ್ತು ಟೀಂ ಪರ್ಫಾಮೆನ್ಸ್ ಅಪ್ ಟು ದ ಮಾರ್ಕ್ ಇಲ್ಲದೇ ಇದ್ದ ಕಾರಣವೇ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಈಗ ಖಡಕ್ ನಿರ್ಧಾರ ಕೈಗೊಂಡಿದೆ. ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದೆ. ಈಗ ಐಪಿಎಲ್ನಲ್ಲಿರುವ ಫ್ರಾಂಚೈಸಿಗಳು ಕೂಡ ಒಂಥರಾ ಫುಟ್ಬಾಲ್ ಫ್ರಾಂಚೈಸಿಗಳ ರೀತಿಯೇ ಬದಲಾಗಿವೆ. ಫುಟ್ಬಾಲ್ ಫ್ರಾಂಚೈಸಿಗಳಲ್ಲೆಲ್ಲಾ ಆಗೋದು ಇದೇ. ಎಷ್ಟೇ ದೊಡ್ಡ ಪ್ಲೇಯರ್ ಆಗಿರಲಿ, ಪರ್ಫಾಮೆನ್ಸ್ ನೀಡಿಲ್ಲ ಅಂದ್ರೆ, ರಿಸಲ್ಟ್ ಸಿಕ್ಕಿಲ್ಲ ಅಂದ್ರೆ ಗೇಟ್ ಪಾಸ್ ಕೊಡ್ತಾರೆ.
ಪಾಂಡ್ಯ ಐಪಿಎಲ್ ಕೆರಿಯರ್ ಆರಂಭಿಸಿದ್ದೇ ಮುಂಬೈ ಇಂಡಿಯನ್ಸ್ನಿಂದ. ಐದು ಬಾರಿ ಮುಂಬೈ ಇಂಡಿಯನ್ಸ್ ಟೂರ್ನಿ ಗೆದ್ದಾಗ 4 ಬಾರಿ ಪಾಂಡ್ಯ ಕೂಡ ಟೀಂನಲ್ಲಿದ್ರು. ಇಂಥಾ ಟ್ಯಾಲೆಂಟ್ನ್ನ ಬಿಟ್ಟು ಕೊಟ್ವಲ್ಲಾ ಅನ್ನೋ ಫೀಲಿಂಗ್ ಅಂಬಾನಿಗಳಿಗೆ ಕೂಡ ಬಂದಿರುತ್ತೆ. ಹಾಗೆಯೇ ರೋಹಿತ್ ಬಳಿಕ ಮುಂದೆ ಯಾರು ಅನ್ನೋ ಪ್ರಶ್ನೆ ಬಂದಾಗ ಅಂಬಾನಿಗಳಿಗೆ ಬೆಸ್ಟ್ ಆಪ್ಷನ್ ಆಗಿ ಕಂಡಿದ್ದು ಹಾರ್ದಿಕ್ ಪಾಂಡ್ಯ. ಐದಾರು ಸೀಸನ್ ಮುಂಬೈನಲ್ಲಿ ಆಡಿದ್ದ ಪಾಂಡ್ಯಾಗೆ ಫ್ರಾಂಚೈಸಿ ಬಗ್ಗೆ, ಪ್ಲೇಯರ್ಸ್ ಬಗ್ಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಮ್ಯಾನೇಜ್ಮೆಂಟ್ ಮತ್ತೆ ಪಾಂಡ್ಯಾರನ್ನ ಕಾಂಟ್ಯಾಕ್ಟ್ ಮಾಡಿದೆ. ಗುಜರಾತ್ ಟೈಟಾನ್ಸ್ನಲ್ಲಿ ಕ್ಯಾಪ್ಟನ್ ಆಗಿದ್ದ ಪಾಂಡ್ಯಾ ಮತ್ತೆ ಮುಂಬೈಗೆ ಕಮ್ಬ್ಯಾಕ್ ಮಾಡೋಕೆ ಹಾಗೆ ಸುಮ್ನೆ ಅಂತೂ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಗುಜರಾತ್ ಕ್ಯಾಪ್ಟನ್ ಆಗಿದ್ದ ವ್ಯಕ್ತಿ ಮುಂಬೈಗೆ ಜಸ್ಟ್ ಪ್ಲೇಯರ್ ಆಗಿ ಬರಬಹುದಾ? ಹೀಗಾಗೇ ನಿಮ್ಮನ್ನ ಕ್ಯಾಪ್ಟನ್ ಮಾಡ್ತೀವಿ ಅಂತಾ ಪ್ರಾಮಿಸ್ ಮಾಡಿಯೇ ಮುಂಬೈ ಇಂಡಿಯನ್ಸ್ ಪಾಂಡ್ಯಾರನ್ನ ಕರೆಸಿಕೊಂಡಿದೆ. ಈ ಡೀಲ್ ಮೊದಲೇ ಆಗಿತ್ತು. ಕ್ಯಾಪ್ಟನ್ಸಿ ಬದಲಾವಣೆಯ ಅನೌನ್ಸ್ಮೆಂಟ್ ಮಾತ್ರ ಆಗಿರೋದು ಈಗ ಅಷ್ಟೇ.