ಪ್ರಾಕ್ಟಿಸ್‌ ವೇಳೆ ರೋಹಿತ್ ಗೆ ಮುಜುಗರ.. ಫ್ಯಾನ್ಸ್ ಶಾಪ ಹಾಕಿದ್ದೇಕೆ?
ಹಿಟ್ ಮ್ಯಾನ್ ಗೆ ಇದೆಲ್ಲಾ ಬೇಕಿತ್ತಾ?

ಪ್ರಾಕ್ಟಿಸ್‌ ವೇಳೆ ರೋಹಿತ್ ಗೆ ಮುಜುಗರ.. ಫ್ಯಾನ್ಸ್ ಶಾಪ ಹಾಕಿದ್ದೇಕೆ?ಹಿಟ್ ಮ್ಯಾನ್ ಗೆ ಇದೆಲ್ಲಾ ಬೇಕಿತ್ತಾ?

ರೋಹಿತ್ ಶರ್ಮಾ.. ಎದುರಾಳಿ ವಿರುದ್ಧ  ಸೂಪರ್ ಡೂಪರ್ ಆಟ ಆಡೋ ಆಟಗಾರ. ಬಾಲ್‌ಗಳನ್ನ ಇಟ್ಟಾಡಿಸಿಕೊಂಡು ಹೊಡೆದು ರನ್ ಮಳೆಯನ್ನ ಸುರಿಸುತ್ತಿದ್ದ ಹಿಟ್‌ಮ್ಯಾನ್‌ ರೋಹಿತ್‌ ಈಗ ಫಾರ್ಮ್‌ ಕಳೆದುಕೊಂಡಿದ್ದಾರೆ. ರೋಹಿತ್ ಮೊದಲಿನಂತೆ ಬ್ಯಾಟಿಂಗ್ ಮಾಡುತ್ತಿಲ್ಲ ಮತ್ತು ನಾಯಕತ್ವದಲ್ಲಿಯೂ ಅನೇಕ ತಪ್ಪುಗಳನ್ನು ಮಾಡುತ್ತಿದ್ದಾರೆ. ಬಹುಶಃ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತರೆ ಅಥವಾ ಭಾರತವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ರ ಫೈನಲ್‌ಗೆ ಅರ್ಹತೆ ಪಡೆಯೋಕೆ ಆಗಿಲ್ಲ ಅಂದ್ರೆ ರೋಹಿತ್ ನಾಯಕತ್ವಕ್ಕೆ ಧಕ್ಕೆ ಬಂದೇ ಬರಬಹುದು ಎನ್ನಲಾಗುತ್ತಿದೆ. ಈ ನಡುವೆ ರೋಹಿತ್ ಶರ್ಮಾ ಮೇಲೆ  ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ.

ಇದನ್ನೂ ಓದಿ : BBK ಯಿಂದ ತ್ರಿವಿಕ್ರಮ್‌ ಔಟ್‌? – ದುರಂಹಕಾರಕ್ಕೆ Eliminate ಶಿಕ್ಷೆ

ರೋಹಿತ್ ಶರ್ಮಾ ಕ್ರಿಕೆಟ್ ಲೋಕದ ದಿಗ್ಗಜ..ಬಾಲ್‌ನ್ನ ಮೈದಾನ ಮೂಲೆ ಮೂಲೆಗಳಿಗೆ ಅಟ್ಟಾಡಿಸಿ ಹೊಡೆಯುತ್ತಿದ್ದ ರೋಹಿತ್‌ ಈಗ ಆಟವನ್ನ ಮರೆತಂತೆ ಕಾಣುತ್ತಿದೆ. ಕ್ರಿಕೆಟ್ ನೋಡಿದವರು ಇದು ರೋಹಿತ್ ಶರ್ಮಾನ ಆಟಾನಾ ಅನ್ನೋ ಹಾಗೇ ಮಾತನಾಡಿಕೊಳ್ಳುವಂತೆ ಆಗಿದೆ.. ಯಾಕಂದ್ರೆ  ಟೆಸ್ಟ್‌ನಲ್ಲಿ ರೋಹಿತ್ ಕಳಪೆ ಪ್ರದರ್ಶನ ತೋರಿಸಿದ್ದಾರೆ. ಈ ನಡುವೆ ಮೆಲ್ಬೋರ್ನ್‌ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಾಕ್ಟಿಸ್ ಮಾಡುತ್ತಿದೆ. ಆದ್ರೆ ಪ್ರಾಕ್ಟಿಸ್ ವೇಳೆ ಕೂಡ ರೋಹಿತ್ ಫಾರ್ಮ್‌ನಲ್ಲಿ ಇಲ್ಲ ಅನ್ನೋದು ಎದ್ದು ಕಾಣುತ್ತಿದೆ. ಭಾರತಕ್ಕೆ ಬೆನ್ನುಲುಬಾಗಿದ್ದ ನಾಯಕ ರೋಹಿತ್ ಶರ್ಮಾ ಕ್ರಿಕೆಟ್ ಆಟವನ್ನೇ ಮರೆತಂತೆ ಮೈದಾನದಲ್ಲಿ ವರ್ತಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ 4 ನೇ ಟೆಸ್ಟ್‌ಗೆ ನಡೆಯುತ್ತಿರುವ ಪ್ರಾಕ್ಟಿಸ್ ಪಂದ್ಯ.. ಪ್ರಾಕ್ಟಿಸ್ ವೇಳೆ ದೇವದತ್ ಪಡಿಕಲ್ ಆಫ್ ಸ್ಪಿನ್‌ಗೆ ರೋಹಿತ್ ಶರ್ಮಾ ಶಾಕ್ ಆಗಿದ್ದಾರೆ. ಪಡಿಕಲ್ ಎಸೆತವನ್ನ ಎದುರಿಸಲಾಗದೇ ರೋಹಿತ್ ಪ್ರಾಕ್ಟಿಸ್ ವೇಳೆ ಒದ್ದಾಡಿರೋ ವಿಡಿಯೋ ಸೋಷಿಯ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಆಸೀಸ್‌ ಕಳೆದ 3 ಟೆಸ್ಟ್ ಪಂದ್ಯದಲ್ಲಿ ರೋಹಿತ್ ಕಲೆ ಹಾಕಿದ್ದು ಕೇವಲ 19 ರನ್ ಮಾತ್ರ. ಕಳೆದ ಯಾವುದೇ ಟೆಸ್ಟ್‌ನಲ್ಲಿ ರೋಹಿತ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದು ಫ್ಯಾನ್ಸ್‌ ಜೊತೆ ಬಿಸಿಸಿಐಗೆ ಹೊಸ ತೆಲೆ ನೋವು ತಂದಿದೆ.

 ಮೊಣಕಾಲಿಗೆ ಗಾಯ, ಒಳ್ಳೆಯದೇ ಆಯ್ತು ಎಂದ ಫ್ಯಾನ್ಸ್

ಪಡಿಕಲ್ ಎಸತೆವನ್ನ ಎದುರಿಸಲು ಒದ್ದಾಡಿದ ರೋಹಿತ್ ಶರ್ಮಾ ಭಾನುವಾರ ಅಭ್ಯಾಸದ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ನಾಲ್ಕನೇ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳುತ್ತಾರೋ ಇಲ್ಲವೋ ಅನ್ನೋದು ಪಕ್ಕಾ ಆಗಿಲ್ಲ.  ನಾಯಕ ರೋಹಿತ್ ಗಾಯಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಒಂದು ಗುಂಪು ಒಳ್ಳೆಯದೇ ಆಯ್ತು ಎಂದು ಕಾಮೆಂಟ್ ಮಾಡುತ್ತಿದೆ. ಇದಕ್ಕೆ ಕಾರಣ ಮೊದಲೇ ಹೇಳಿದಂತೆ ರೋಹಿತ್  ಫಾರ್ಮ್ ನಲ್ಲಿಲ್ಲ. ಮೊದಲ ಪಂದ್ಯದಲ್ಲಿ ಅವರು ಇಲ್ಲದೇ ತಂಡ ಟೆಸ್ಟ್ ಪಂದ್ಯವಾಡಿ ಅದ್ಭುತ ಪ್ರದರ್ಶನ ನೀಡಿತ್ತು. ಬುಮ್ರಾ ನಾಯಕತ್ವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೀಗಾಗಿ ರೋಹಿತ್‌ ತಂಡದಿಂದ ಹೊರಗೆ ಇದ್ರೆ ಒಳ್ಳೆಯದ್ದು ಅನ್ನೋದು ಕೆಲವರ ಅಭಿಪ್ರಾಯ.

Kishor KV