BAZBALLಗೆ ರೋಹಿತ್ ಕೌಂಟರ್! – ಸೋತರೂ ಮೀಸೆ ಮಣ್ಣಾಗಿಲ್ಲ ಅಂತಿದ್ದಾರೆ ಆಂಗ್ಲರು

BAZBALLಗೆ ರೋಹಿತ್ ಕೌಂಟರ್! – ಸೋತರೂ ಮೀಸೆ ಮಣ್ಣಾಗಿಲ್ಲ ಅಂತಿದ್ದಾರೆ ಆಂಗ್ಲರು

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಬರೋಬ್ಬರಿ 434 ರನ್​ಗಳಿಂದ ಗೆದ್ದು ರೋಹಿತ್​ ಶರ್ಮಾ ಪಡೆ ಸೀರಿಸ್​ನಲ್ಲಿ 2-1 ಲೀಡ್ ಸಾಧಿಸಿದೆ. ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜ ಈ ಮ್ಯಾಚ್ನ ಹೀರೋಗಳಾದ್ರೆ, ಸರ್ಫರಾಜ್​ ಖಾನ್ ಡೆಬ್ಯೂ ಮ್ಯಾಚ್​​ನಲ್ಲೇ ಪ್ರಾಮಿಸಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಹೀನಾಯವಾಗಿ ಸೋತ್ರೂ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​ ಸ್ಟೋಕ್ಸ್ ಮೀಸೆ ಮಣ್ಣಾಗಿಲ್ಲ ಎಂಬಂತೆ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಈ ಎಲ್ಲದರ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಡಬಲ್ ಸೆಂಚುರಿ ಹೊಡೆದರು ಸಿಗಲಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ – ಅಭಿಮಾನಿಗಳ ಹೃದಯ ಗೆದ್ದ ಯಶಸ್ವಿ ಜೈಸ್ವಾಲ್

ಇಂಗ್ಲೆಂಡ್​​ನ ಬೇಸ್​​ಬಾಲ್​​ ತಂತ್ರಕ್ಕೆ ರೋಹಿತ್ ಶರ್ಮಾ ಸರಿಯಾಗಿಯೇ ಕೌಂಟರ್​​ ಕೊಡ್ತಿದ್ದಾರೆ. ಇಂಗ್ಲೆಂಡ್​​ನ್ನ ಯಾವ ರೀತಿ ಕಟ್ಟಿ ಹಾಕಬೇಕೊ ಅದಕ್ಕೆ ಸರಿಯಾಗಿಯೇ ಪ್ಲ್ಯಾನ್ ಮಾಡಿದ್ದಾರೆ. ಇಂಗ್ಲೆಂಡ್​​ ಬ್ಯಾಸ್​​ಬಾಲ್​ ಅಸ್ತ್ರ ಪ್ರಯೋಗಿಸಿದ್ರೆ ನಾವು ಕೂಡ ನಮ್ಮದೇ ಸ್ಟೈಲ್​​ನಲ್ಲಿ ಕೌಂಟರ್​​ ಅಟ್ಯಾಕ್ ಮಾಡ್ತೀವಿ. ಬ್ಯಾಸ್​​ಬಾಲ್ ರೀತಿ ಆಡೋಕೆ ನಮಗೂ ಗೊತ್ತು ಅನ್ನೋದನ್ನ ರೋಹಿತ್ ಹುಡುಗ್ರು ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ಬ್ಯಾಸ್​​ಬಾಲ್​ ಸ್ಟೈಲ್​​ನಲ್ಲಿ ಆಡೋಕೆ ಶುರು ಮಾಡಿದಾಗಿನಿಂದ ಇದೇ ಮೊದಲ ಬಾರಿಗೆ ಒಪೊಸಿಟ್ ಟೀಮ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಮೂರನೇ ಟೆಸ್ಟ್​ನ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 430 ರನ್​​ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇಂಗ್ಲೆಂಡ್​​ನ ಬ್ಯಾಸ್​​ಬಾಲ್ ಎರಾದಲ್ಲಿ, ಬ್ಯಾಸ್​​ಬಾಲ್​​ ಸ್ಟ್ರ್ಯಾಟಜಿಯಲ್ಲಿ ಆಡೋಕೆ ಶುರುಮಾಡಿದಾಗಿನಿಂದ ಇನ್ನಿಂಗ್ಸ್ ಡಿಕ್ಲೇರ್​ ಮಾಡಿದ ಏಕೈಕ ಕ್ಯಾಪ್ಟನ್ ಅಂದ್ರೆ ಅದು ರೋಹಿತ್ ಶರ್ಮಾ ಮಾತ್ರ. ಇನ್ಯಾವ ಟೀಮ್ ಕೂಡ 2022ರ ಬಳಿಕ ಇಂಗ್ಲೆಂಡ್ ವಿರುದ್ಧ ಡಿಕ್ಲೇರ್ ಮಾಡಿಕೊಂಡಿರಲಿಲ್ಲ. ಇದುವರೆಗೂ ಇಂಗ್ಲೆಂಡ್ ತನ್ನ ಬ್ಯಾಸ್​ಬಾಲ್ ಸ್ಟ್ರ್ಯಾಟಜಿಯಲ್ಲಿ ಅಷ್ಟರ ಮಟ್ಟಿಗೆ ಸಕ್ಸಸ್ ಕಂಡಿತ್ತು. ಆದ್ರೆ, ರೋಹಿತ್ ಶರ್ಮಾ ಮಾತ್ರ ಇದಕ್ಕೆ ಚಾನ್ಸೇ ಕೊಡ್ತಿಲ್ಲ. ಮೂರನೇ ಮ್ಯಾಚ್​ ಗೆದ್ದ ಬಳಿಕ ಇಂಗ್ಲೆಂಡ್​​ನ ಬ್ಯಾಸ್​ಬಾಲ್​​ ಅಪ್ರೋಚ್​ಗೆ ಟಾಂಗ್​​ ಕೊಟ್ಟು ರೋಹಿತ್ ಒಂದು ಸ್ಟೇಟ್​ಮೆಂಟ್ ಕೊಟ್ಟಿದ್ರು. ಟೆಸ್ಟ್ ಮ್ಯಾಚ್​​ ಆಡೋವಾಗ ಎರಡು-ಮೂರು ದಿನಗಳಲ್ಲೇ ರಿಸಲ್ಟ್ ಬರಬೇಕು ಅಂತಾ ಆಡೋದು ಸರಿಯಲ್ಲ. ಎರಡು-ಮೂರು ದಿನಗಳ ಟಾರ್ಗೆಟ್ ಇಟ್ಕೊಂಡೇ ಆಡೋಕೆ ಆಗೋದಿಲ್ಲ. ಐದು ದಿನಗಳ ಕಾಲವೂ ಆಡೋ ಗುರಿ ಇಟ್ಟುಕೊಳ್ಳಬೇಕು. ಅದ್ರಲ್ಲೂ ಎರಡು ದಿನಗಳ ಆಟದ ಬಳಿಕ ಪೇಷೆನ್ಸ್​​ನಿಂದ ಕಾಮ್ ಆಗಿ ಆಡೋದು ಇಂಪಾರ್ಟೆಂಟ್ ಆಗುತ್ತೆ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ನಾವಂತೂ ಡೇ-3, ಡೇ-4ಗಾಗಿಯೇ ಏನು ಪ್ಲ್ಯಾನ್​ ಮಾಡಿದ್ದೆವೋ ಅದ್ರಂತೆಯೇ ಆಡಿದ್ದೆವು ಅಂತಾ ರೋಹಿತ್​​ ಹೇಳಿದ್ರು. ಟೋಟಲಿ ಟೀಂ ಇಂಡಿಯಾ ಟೆಸ್ಟ್​ ಕ್ರಿಕೆಟ್​ನ್ನ ಹೇಗೆ ಆಡಬೇಕೊ ಹಾಗೆ ಆಡಿದೆ.

ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನೋ ಹಾಗೆ ಇಂಗ್ಲೆಂಡ್​​ನ ಬ್ಯಾಸ್​​ಬಾಲ್​​ಗೆ ಬ್ಯಾಸ್​​ಬಾಲ್ ಸ್ಟೈಲ್​​ನಲ್ಲೇ ಆನ್ಸರ್​ ಮಾಡೋಕೆ ಟೀಂ ಇಂಡಿಯಾ ಪ್ಲ್ಯಾನ್ ಮಾಡಿದೆ. ಬ್ಯಾಸ್​​ಬಾಲ್​ಗೆ ಕೌಂಟರ್​​ ಕೊಡೋಕೆ ಅಂತಾನೆ ಕೆಲ ಆಟಗಾರರಿಗೆ ಜವಾಬ್ದಾರಿ ನೀಡಲಾಗಿದೆ. ಅದ್ಯಾರು ಅನ್ನೋದು ಈಗಾಗ್ಲೇ ನಿಮಗೂ ಅಂದಾಜಾಗಿರುತ್ತೆ. ಮೂರನೇ ಟೆಸ್ಟ್​ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಆಡಿರೋದು ನಥಿಂಗ್ ಬಟ್ ಬ್ಯಾಸ್​ಬಾಲ್. ಇಬ್ಬರೂ ಫುಲ್ ಅಗ್ರೆಸ್ಸಿವ್ ಆಗಿಯೇ ಆಡಿದ್ರು. ಹೀಗಾಗಿಯೇ 500+ ಟಾರ್ಗೆಟ್ ನೀಡೋಕೆ ಸಾಧ್ಯವಾಯ್ತು. ಅದ್ರಲ್ಲೂ ಜೈಸ್ವಾಲ್ ಅಂತೂ ಜೇಮ್ಸ್​ ಆ್ಯಂಡರ್ಸ್​ನ್​ಗೆ ಮೂರು ಬಾಲ್​ಗಳಲ್ಲಿ ಮೂರು ಸಿಕ್ಸರ್ ಹೊಡೆದಿದ್ದಂತೂ ಗ್ರೇಟ್. ಆ್ಯಂಡರ್ಸನ್​​​ರಂಥಾ ಬೌಲರ್​ಗೇ ಆ ರೇಂಜಿಗೆ ಚಚ್ಚಿದ್ದಾರೆ ಅಂದ್ರೆ ಜೈಸ್ವಾಲ್​ ತುಂಬಾನೆ ಸ್ಪೆಷಲ್ ಪ್ಲೇಯರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಜೈಸ್ವಾಲ್ ಕೇವಲ 236 ಬಾಲ್​​ಗಳಲ್ಲಿ 214 ರನ್ ಹೊಡೆದ್ರು. ಇತ್ತ ಸರ್ಫರಾಜ್ ಖಾನ್ ಕೇವಲ 72 ಬಾಲ್​​ಗಳಲ್ಲಿ 68 ರನ್ ಹೊಡೆದ್ರು.

ಇಲ್ಲಿ ಮಜಾ ಆಗಿರೋದೇನಂದ್ರೆ ರೋಹಿತ್ ಶರ್ಮಾ ಡಿಕ್ಲೆರೇಷನ್. ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಕ್ರೀಸ್​​ನಲ್ಲಿದ್ರು. 97ನೇ ಓವರ್​​ ವೇಳೆ ಡ್ರಿಂಕ್ಸ್ ಬ್ರೇಕ್​ ನೀಡಲಾಗುತ್ತೆ. ಆದ್ರೆ ಡ್ರಿಂಕ್ಸ್​ ಬ್ರೇಕ್​​ ಆಗ್ತಿದ್ದಂತೆ ಜೈಸ್ವಾಲ್ ಮತ್ತು ಸರ್ಫರಾಜ್ ಇಬ್ಬರೂ ಇದ್ದಕ್ಕಿದ್ದಂತೆ ಪೆವಿಲಿಯನ್​​ನತ್ತ ಹೊರಡ್ತಾರೆ. ಈ ವೇಳೆ ರೋಹಿತ್​ ಶರ್ಮಾ ಬಾಲ್ಕನಿಗೆ ಬಂದು ಯಾಕೆ ಈ ಕಡೆ ಬರ್ತಿದ್ದೀರಾ ಅನ್ನೋ ರೀತಿಯಲ್ಲಿ ಸಿಗ್ನಲ್ ಮಾಡ್ತಾರೆ. ಹಾಗೆಯೇ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್​ಗೆ ವಾಪಸ್​ ಕ್ರೀಸ್​ಗೆ ತೆರಳುವಂತೆ ಸೂಚಿಸ್ತಾರೆ. ಅತ್ತ ಬೆನ್​​ಸ್ಟೋಕ್ಸ್​ ಸೇರಿದಂತೆ ಇಂಗ್ಲೆಂಡ್ ಪ್ಲೇಯರ್ಸ್​ಗಳು ಕೂಡ ಫುಲ್ ಕನ್​ಫ್ಯೂಸ್ ಆಗ್ತಾರೆ. ಡಿಕ್ಲೇರ್ ಮಾಡಿದ್ರು ಅಂದ್ಕೊಂಡು ಅವರು ಕೂಡ ಇನ್ನೇನು ಹೊರಟೇ ಬಿಟ್ಟಿದ್ರು. ಆದ್ರೆ ಜೈಸ್ವಾಲ್ ಮತ್ತು ಸರ್ಫರಾಜ್ ಮತ್ತೆ ಕ್ರೀಸ್​​ನತ್ತ ಬರ್ತಿದ್ರು. ಎಲ್ಲರಿಗೂ ಫುಲ್ ಕನ್​ಫ್ಯೂಷನ್.. ಕಾಮೆಂಟ್ರೇಟರ್ಸ್​ ಅಂತೂ ಬಿದ್ದು ಬಿದ್ದು ನಗೋಕೆ ಶುರು ಮಾಡ್ತಾರೆ. ಡಿಕ್ಲೆರೇಷನ್​​ ವಿಚಾರವಾಗಿ ಇಷ್ಟೆಲ್ಲಾ ಕನ್​ಫ್ಯೂಷನ್ ಆಗೋಕೆ ಕಾರಣ ಏನು ಅನ್ನೋದು ಇನ್ನೂ ಇಂಟ್ರೆಸ್ಟಿಂಗ್​​ ಆಗಿದೆ. ಡ್ರಿಂಕ್ಸ್​ ಬ್ರೇಕ್ ವೇಳೆ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಇಬ್ಬರೂ ಪೆವಿಲಿಯನ್​​ನತ್ತ ನೋಡ್ತಾ ಇರ್ತಾರೆ. ಡ್ರಿಂಕ್ಸ್ ತಗೊಳ್ತಾ ಪೆವಿಲಿಯನ್ ಕಡೆಗೆ ನೋಡ್ತಿರ್ತಾರೆ. ಇತ್ತ ಪೆವಿಲಿಯನ್​ನಲ್ಲಿ ಇಂಡಿಯನ್​ ಪ್ಲೇಯರ್ಸ್​ಗಳೆಲ್ಲಾ ಎದ್ದು ನಿಂತು ಸೆಕೆಂಡ್​​ ಇನ್ನಿಂಗ್ಸ್​​ನಲ್ಲಿ ಬೌಲಿಂಗ್​​ಗಾಗಿ ರೆಡಿಯಾಗ್ತಾ ಇರ್ತಾರೆ. ಇದನ್ನ ನೋಡಿ ಕ್ಯಾಪ್ಟನ್ ರೋಹಿತ್ ಡಿಕ್ಲೇರ್ ಮಾಡಿರಬೇಕು ಅಂತಾ ಅಂದುಕೊಂಡು ಸೀದಾ ಪೆವಿಲಿಯನ್​ನತ್ತ ತೆರಳೋಕೆ ಶುರು ಮಾಡ್ತಾರೆ. ಇವರಿಬ್ಬರೂ ಪೆವಿಲಿಯನ್​ ಕಡೆಗೆ ಹೋಗ್ತಾ ಇರೋದನ್ನ ನೋಡಿ. ಇಂಗ್ಲೆಂಡ್​ ಓಪನರ್ಸ್​ಗಳಾದ ಜ್ಯಾಕ್ ಕ್ರೌವ್ಲಿ ಮತ್ತು ಬೆನ್ ಡಕೆಟ್ ಇಬ್ಬರೂ ಪ್ಯಾಡ್ ಎಲ್ಲಾ ಕಟ್ಕೊಂಡು ಬ್ಯಾಟಿಂಗ್​ಗೆ ರೆಡಿಯಾಗೋಕೆ ಪೆವಿಲಿಯನ್​ನತ್ತ ಓಡ್ತಾರೆ. ಇದನ್ನ ನೋಡಿ ರೊಚ್ಚಿಗೆದ್ದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್​ಗೆ ಎಲ್ಲಿಗೆ ಬರ್ತಿದ್ದೀರಾ, ಹೋಗಿ ಬ್ಯಾಟಿಂಗ್ ಕಂಟಿನ್ಯೂ ಮಾಡಿ ಅಂತಾ ಸಿಟ್ಟಲ್ಲೇ ಸಿಗ್ನಲ್ ಮಾಡ್ತಾರೆ. ಇದಾಗಿ ಒಂದೇ ಓವರ್​ನಲ್ಲಿ ಅಂದ್ರೆ 98ನೇ ಓವರ್​ ಬಳಿಕ ರೋಹಿತ್ ಶರ್ಮಾ ಅಫೀಶಿಯಲಿ ಡಿಕ್ಲೇರ್ ಮಾಡ್ತಾರೆ. ಈ ಡಿಕ್ಲೇರೇಷನ್ ಇನ್ಸಿಡೆಂಟ್ ಫುಲ್ ಟ್ರೋಲ್ ಆಗಿದೆ. ಸಂಜೆ 5 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೊರಟಾಗ ಆಫೀಸ್ ಬಾಸ್​ಗಳು ಹಿಂಗೇ ಮಾಡೋದು ಅಂತೆಲ್ಲಾ ಸಾಕಷ್ಟು –ಮಂದಿ ರೋಹಿತ್​ ವಿಡಿಯೋಗೆ ಕಾಮೆಂಟ್ಸ್​ ಮಾಡಿದ್ದಾರೆ.

ಇವೆಲ್ಲದರ ಮಧ್ಯೆ, ಭಾರತದ ಪಿಚ್​ಗಳಲ್ಲಿ ಇಂಗ್ಲೆಂಡ್​ನ ಬ್ಯಾಸ್​ಬಾಲ್​ ಅಪ್ರೋಚ್​ನ್ನ ಈಗ ಇಂಗ್ಲೆಂಡ್​ನ ಮಾಜಿ ಕ್ರಿಕೆಟರ್ಸ್​ಗಳೇ ಕ್ರಿಟಿಸೈಸ್ ಮಾಡ್ತಿದ್ದಾರೆ. ಇಂಡಿಯನ್​ ಕಂಡೀಷನ್​ನಲ್ಲಿ ಬ್ಯಾಸ್​​ಬಾಲ್ ಫುಲ್ ಎಕ್ಸ್​ಪೋಸ್ ಆಗಿದೆ ಅಂತಾ ಯಾವಾಗಲೂ ಭಾರತೀಯ ಆಟಗಾರರನ್ನ ಕೆಣಕೋ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಹೈದರಾಬಾದ್​ನಲ್ಲಿ ನಡೆದ ಫಸ್ಟ್​ ಪಿಚ್​​ನಲ್ಲಿ ಬ್ಯಾಸ್​ಬಾಲ್ ಸ್ಟೈಲ್​​ನಲ್ಲಿ ಆಡಿದ್ದು ಓಕೆ. ಬಟ್ ಎರಡು ಮತ್ತು ಮೂರನೇ ಟೆಸ್ಟ್​ಗೆ ಇದ್ದ ಪಿಚ್​ಗಳು ಬ್ಯಾಸ್​​ಬಾಲ್​ಗೆ ಸಹಕಾರಿಯಾಗಿರಲಿಲ್ಲ. ಅಂಥಾ ಪಿಚ್​​ನಲ್ಲೂ ಬ್ಯಾಸ್​ಬಾಲ್​​ ಮೋಡ್​ನಲ್ಲಿ ಆಡೋಕೆ ಹೋಗಿ ಇಂಗ್ಲೆಂಡ್ ಟೀಂ ಎಕ್ಸ್​​ಪೋಸ್ ಆಗಿದೆ ಅಂತಾ ಮೈಕಲ್ ವಾನ್ ಹೇಳಿದ್ದಾರೆ. ಆದ್ರೆ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​​ ಸ್ಟೋಕ್ಸ್​ ಮಾತ್ರ ಬ್ಯಾಸ್​​ಬಾಲ್​​​ ವಿರುದ್ಧ ವ್ಯಕ್ತವಾಗ್ತಾ ಇರೋ ಕ್ರಿಟಿಸಿಸಮ್​​ಗೆ ಕ್ಯಾರೇ ಅಂತಿಲ್ಲ. ನಮಗೆ ಡ್ರೆಸ್ಸಿಂಗ್​ ರೂಮ್​​ನಲ್ಲಿರೋ ವ್ಯಕ್ತಿಗಳು ಮತ್ತು ಅವರ ಒಪೀನಿಯನ್ ಅಷ್ಟೇ ಮ್ಯಾಟರ್ ಆಗುತ್ತೆ. ಹೊರಗಿನವರು ಏನು ಹೇಳ್ತಾರೆ ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ಹಾಗೆಯೇ ಮುಂದಿನ ಎರಡೂ ಟೆಸ್ಟ್​ ಮ್ಯಾಚ್​ಗಳನ್ನ ನಾವು ಗೆಲ್ತೇವೆ. 3-2 ಲೀಡ್​​ನಿಂದ ಸೀರಿಸ್​ ಗೆಲ್ತೇವೆ ಅಂತಾ ಬೆನ್​ಸ್ಟೋಕ್ಸ್ ಹೇಳಿದ್ದಾರೆ.

 

Sulekha