BAZBALLಗೆ ರೋಹಿತ್ ಕೌಂಟರ್! – ಸೋತರೂ ಮೀಸೆ ಮಣ್ಣಾಗಿಲ್ಲ ಅಂತಿದ್ದಾರೆ ಆಂಗ್ಲರು
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಬರೋಬ್ಬರಿ 434 ರನ್ಗಳಿಂದ ಗೆದ್ದು ರೋಹಿತ್ ಶರ್ಮಾ ಪಡೆ ಸೀರಿಸ್ನಲ್ಲಿ 2-1 ಲೀಡ್ ಸಾಧಿಸಿದೆ. ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜ ಈ ಮ್ಯಾಚ್ನ ಹೀರೋಗಳಾದ್ರೆ, ಸರ್ಫರಾಜ್ ಖಾನ್ ಡೆಬ್ಯೂ ಮ್ಯಾಚ್ನಲ್ಲೇ ಪ್ರಾಮಿಸಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಹೀನಾಯವಾಗಿ ಸೋತ್ರೂ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಮೀಸೆ ಮಣ್ಣಾಗಿಲ್ಲ ಎಂಬಂತೆ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಈ ಎಲ್ಲದರ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಡಬಲ್ ಸೆಂಚುರಿ ಹೊಡೆದರು ಸಿಗಲಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ – ಅಭಿಮಾನಿಗಳ ಹೃದಯ ಗೆದ್ದ ಯಶಸ್ವಿ ಜೈಸ್ವಾಲ್
ಇಂಗ್ಲೆಂಡ್ನ ಬೇಸ್ಬಾಲ್ ತಂತ್ರಕ್ಕೆ ರೋಹಿತ್ ಶರ್ಮಾ ಸರಿಯಾಗಿಯೇ ಕೌಂಟರ್ ಕೊಡ್ತಿದ್ದಾರೆ. ಇಂಗ್ಲೆಂಡ್ನ್ನ ಯಾವ ರೀತಿ ಕಟ್ಟಿ ಹಾಕಬೇಕೊ ಅದಕ್ಕೆ ಸರಿಯಾಗಿಯೇ ಪ್ಲ್ಯಾನ್ ಮಾಡಿದ್ದಾರೆ. ಇಂಗ್ಲೆಂಡ್ ಬ್ಯಾಸ್ಬಾಲ್ ಅಸ್ತ್ರ ಪ್ರಯೋಗಿಸಿದ್ರೆ ನಾವು ಕೂಡ ನಮ್ಮದೇ ಸ್ಟೈಲ್ನಲ್ಲಿ ಕೌಂಟರ್ ಅಟ್ಯಾಕ್ ಮಾಡ್ತೀವಿ. ಬ್ಯಾಸ್ಬಾಲ್ ರೀತಿ ಆಡೋಕೆ ನಮಗೂ ಗೊತ್ತು ಅನ್ನೋದನ್ನ ರೋಹಿತ್ ಹುಡುಗ್ರು ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ಬ್ಯಾಸ್ಬಾಲ್ ಸ್ಟೈಲ್ನಲ್ಲಿ ಆಡೋಕೆ ಶುರು ಮಾಡಿದಾಗಿನಿಂದ ಇದೇ ಮೊದಲ ಬಾರಿಗೆ ಒಪೊಸಿಟ್ ಟೀಮ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಮೂರನೇ ಟೆಸ್ಟ್ನ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 430 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇಂಗ್ಲೆಂಡ್ನ ಬ್ಯಾಸ್ಬಾಲ್ ಎರಾದಲ್ಲಿ, ಬ್ಯಾಸ್ಬಾಲ್ ಸ್ಟ್ರ್ಯಾಟಜಿಯಲ್ಲಿ ಆಡೋಕೆ ಶುರುಮಾಡಿದಾಗಿನಿಂದ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಏಕೈಕ ಕ್ಯಾಪ್ಟನ್ ಅಂದ್ರೆ ಅದು ರೋಹಿತ್ ಶರ್ಮಾ ಮಾತ್ರ. ಇನ್ಯಾವ ಟೀಮ್ ಕೂಡ 2022ರ ಬಳಿಕ ಇಂಗ್ಲೆಂಡ್ ವಿರುದ್ಧ ಡಿಕ್ಲೇರ್ ಮಾಡಿಕೊಂಡಿರಲಿಲ್ಲ. ಇದುವರೆಗೂ ಇಂಗ್ಲೆಂಡ್ ತನ್ನ ಬ್ಯಾಸ್ಬಾಲ್ ಸ್ಟ್ರ್ಯಾಟಜಿಯಲ್ಲಿ ಅಷ್ಟರ ಮಟ್ಟಿಗೆ ಸಕ್ಸಸ್ ಕಂಡಿತ್ತು. ಆದ್ರೆ, ರೋಹಿತ್ ಶರ್ಮಾ ಮಾತ್ರ ಇದಕ್ಕೆ ಚಾನ್ಸೇ ಕೊಡ್ತಿಲ್ಲ. ಮೂರನೇ ಮ್ಯಾಚ್ ಗೆದ್ದ ಬಳಿಕ ಇಂಗ್ಲೆಂಡ್ನ ಬ್ಯಾಸ್ಬಾಲ್ ಅಪ್ರೋಚ್ಗೆ ಟಾಂಗ್ ಕೊಟ್ಟು ರೋಹಿತ್ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ರು. ಟೆಸ್ಟ್ ಮ್ಯಾಚ್ ಆಡೋವಾಗ ಎರಡು-ಮೂರು ದಿನಗಳಲ್ಲೇ ರಿಸಲ್ಟ್ ಬರಬೇಕು ಅಂತಾ ಆಡೋದು ಸರಿಯಲ್ಲ. ಎರಡು-ಮೂರು ದಿನಗಳ ಟಾರ್ಗೆಟ್ ಇಟ್ಕೊಂಡೇ ಆಡೋಕೆ ಆಗೋದಿಲ್ಲ. ಐದು ದಿನಗಳ ಕಾಲವೂ ಆಡೋ ಗುರಿ ಇಟ್ಟುಕೊಳ್ಳಬೇಕು. ಅದ್ರಲ್ಲೂ ಎರಡು ದಿನಗಳ ಆಟದ ಬಳಿಕ ಪೇಷೆನ್ಸ್ನಿಂದ ಕಾಮ್ ಆಗಿ ಆಡೋದು ಇಂಪಾರ್ಟೆಂಟ್ ಆಗುತ್ತೆ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ನಾವಂತೂ ಡೇ-3, ಡೇ-4ಗಾಗಿಯೇ ಏನು ಪ್ಲ್ಯಾನ್ ಮಾಡಿದ್ದೆವೋ ಅದ್ರಂತೆಯೇ ಆಡಿದ್ದೆವು ಅಂತಾ ರೋಹಿತ್ ಹೇಳಿದ್ರು. ಟೋಟಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ನ್ನ ಹೇಗೆ ಆಡಬೇಕೊ ಹಾಗೆ ಆಡಿದೆ.
ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನೋ ಹಾಗೆ ಇಂಗ್ಲೆಂಡ್ನ ಬ್ಯಾಸ್ಬಾಲ್ಗೆ ಬ್ಯಾಸ್ಬಾಲ್ ಸ್ಟೈಲ್ನಲ್ಲೇ ಆನ್ಸರ್ ಮಾಡೋಕೆ ಟೀಂ ಇಂಡಿಯಾ ಪ್ಲ್ಯಾನ್ ಮಾಡಿದೆ. ಬ್ಯಾಸ್ಬಾಲ್ಗೆ ಕೌಂಟರ್ ಕೊಡೋಕೆ ಅಂತಾನೆ ಕೆಲ ಆಟಗಾರರಿಗೆ ಜವಾಬ್ದಾರಿ ನೀಡಲಾಗಿದೆ. ಅದ್ಯಾರು ಅನ್ನೋದು ಈಗಾಗ್ಲೇ ನಿಮಗೂ ಅಂದಾಜಾಗಿರುತ್ತೆ. ಮೂರನೇ ಟೆಸ್ಟ್ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಆಡಿರೋದು ನಥಿಂಗ್ ಬಟ್ ಬ್ಯಾಸ್ಬಾಲ್. ಇಬ್ಬರೂ ಫುಲ್ ಅಗ್ರೆಸ್ಸಿವ್ ಆಗಿಯೇ ಆಡಿದ್ರು. ಹೀಗಾಗಿಯೇ 500+ ಟಾರ್ಗೆಟ್ ನೀಡೋಕೆ ಸಾಧ್ಯವಾಯ್ತು. ಅದ್ರಲ್ಲೂ ಜೈಸ್ವಾಲ್ ಅಂತೂ ಜೇಮ್ಸ್ ಆ್ಯಂಡರ್ಸ್ನ್ಗೆ ಮೂರು ಬಾಲ್ಗಳಲ್ಲಿ ಮೂರು ಸಿಕ್ಸರ್ ಹೊಡೆದಿದ್ದಂತೂ ಗ್ರೇಟ್. ಆ್ಯಂಡರ್ಸನ್ರಂಥಾ ಬೌಲರ್ಗೇ ಆ ರೇಂಜಿಗೆ ಚಚ್ಚಿದ್ದಾರೆ ಅಂದ್ರೆ ಜೈಸ್ವಾಲ್ ತುಂಬಾನೆ ಸ್ಪೆಷಲ್ ಪ್ಲೇಯರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಜೈಸ್ವಾಲ್ ಕೇವಲ 236 ಬಾಲ್ಗಳಲ್ಲಿ 214 ರನ್ ಹೊಡೆದ್ರು. ಇತ್ತ ಸರ್ಫರಾಜ್ ಖಾನ್ ಕೇವಲ 72 ಬಾಲ್ಗಳಲ್ಲಿ 68 ರನ್ ಹೊಡೆದ್ರು.
ಇಲ್ಲಿ ಮಜಾ ಆಗಿರೋದೇನಂದ್ರೆ ರೋಹಿತ್ ಶರ್ಮಾ ಡಿಕ್ಲೆರೇಷನ್. ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಕ್ರೀಸ್ನಲ್ಲಿದ್ರು. 97ನೇ ಓವರ್ ವೇಳೆ ಡ್ರಿಂಕ್ಸ್ ಬ್ರೇಕ್ ನೀಡಲಾಗುತ್ತೆ. ಆದ್ರೆ ಡ್ರಿಂಕ್ಸ್ ಬ್ರೇಕ್ ಆಗ್ತಿದ್ದಂತೆ ಜೈಸ್ವಾಲ್ ಮತ್ತು ಸರ್ಫರಾಜ್ ಇಬ್ಬರೂ ಇದ್ದಕ್ಕಿದ್ದಂತೆ ಪೆವಿಲಿಯನ್ನತ್ತ ಹೊರಡ್ತಾರೆ. ಈ ವೇಳೆ ರೋಹಿತ್ ಶರ್ಮಾ ಬಾಲ್ಕನಿಗೆ ಬಂದು ಯಾಕೆ ಈ ಕಡೆ ಬರ್ತಿದ್ದೀರಾ ಅನ್ನೋ ರೀತಿಯಲ್ಲಿ ಸಿಗ್ನಲ್ ಮಾಡ್ತಾರೆ. ಹಾಗೆಯೇ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ಗೆ ವಾಪಸ್ ಕ್ರೀಸ್ಗೆ ತೆರಳುವಂತೆ ಸೂಚಿಸ್ತಾರೆ. ಅತ್ತ ಬೆನ್ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ಪ್ಲೇಯರ್ಸ್ಗಳು ಕೂಡ ಫುಲ್ ಕನ್ಫ್ಯೂಸ್ ಆಗ್ತಾರೆ. ಡಿಕ್ಲೇರ್ ಮಾಡಿದ್ರು ಅಂದ್ಕೊಂಡು ಅವರು ಕೂಡ ಇನ್ನೇನು ಹೊರಟೇ ಬಿಟ್ಟಿದ್ರು. ಆದ್ರೆ ಜೈಸ್ವಾಲ್ ಮತ್ತು ಸರ್ಫರಾಜ್ ಮತ್ತೆ ಕ್ರೀಸ್ನತ್ತ ಬರ್ತಿದ್ರು. ಎಲ್ಲರಿಗೂ ಫುಲ್ ಕನ್ಫ್ಯೂಷನ್.. ಕಾಮೆಂಟ್ರೇಟರ್ಸ್ ಅಂತೂ ಬಿದ್ದು ಬಿದ್ದು ನಗೋಕೆ ಶುರು ಮಾಡ್ತಾರೆ. ಡಿಕ್ಲೆರೇಷನ್ ವಿಚಾರವಾಗಿ ಇಷ್ಟೆಲ್ಲಾ ಕನ್ಫ್ಯೂಷನ್ ಆಗೋಕೆ ಕಾರಣ ಏನು ಅನ್ನೋದು ಇನ್ನೂ ಇಂಟ್ರೆಸ್ಟಿಂಗ್ ಆಗಿದೆ. ಡ್ರಿಂಕ್ಸ್ ಬ್ರೇಕ್ ವೇಳೆ ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ ಖಾನ್ ಇಬ್ಬರೂ ಪೆವಿಲಿಯನ್ನತ್ತ ನೋಡ್ತಾ ಇರ್ತಾರೆ. ಡ್ರಿಂಕ್ಸ್ ತಗೊಳ್ತಾ ಪೆವಿಲಿಯನ್ ಕಡೆಗೆ ನೋಡ್ತಿರ್ತಾರೆ. ಇತ್ತ ಪೆವಿಲಿಯನ್ನಲ್ಲಿ ಇಂಡಿಯನ್ ಪ್ಲೇಯರ್ಸ್ಗಳೆಲ್ಲಾ ಎದ್ದು ನಿಂತು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬೌಲಿಂಗ್ಗಾಗಿ ರೆಡಿಯಾಗ್ತಾ ಇರ್ತಾರೆ. ಇದನ್ನ ನೋಡಿ ಕ್ಯಾಪ್ಟನ್ ರೋಹಿತ್ ಡಿಕ್ಲೇರ್ ಮಾಡಿರಬೇಕು ಅಂತಾ ಅಂದುಕೊಂಡು ಸೀದಾ ಪೆವಿಲಿಯನ್ನತ್ತ ತೆರಳೋಕೆ ಶುರು ಮಾಡ್ತಾರೆ. ಇವರಿಬ್ಬರೂ ಪೆವಿಲಿಯನ್ ಕಡೆಗೆ ಹೋಗ್ತಾ ಇರೋದನ್ನ ನೋಡಿ. ಇಂಗ್ಲೆಂಡ್ ಓಪನರ್ಸ್ಗಳಾದ ಜ್ಯಾಕ್ ಕ್ರೌವ್ಲಿ ಮತ್ತು ಬೆನ್ ಡಕೆಟ್ ಇಬ್ಬರೂ ಪ್ಯಾಡ್ ಎಲ್ಲಾ ಕಟ್ಕೊಂಡು ಬ್ಯಾಟಿಂಗ್ಗೆ ರೆಡಿಯಾಗೋಕೆ ಪೆವಿಲಿಯನ್ನತ್ತ ಓಡ್ತಾರೆ. ಇದನ್ನ ನೋಡಿ ರೊಚ್ಚಿಗೆದ್ದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಜ್ಗೆ ಎಲ್ಲಿಗೆ ಬರ್ತಿದ್ದೀರಾ, ಹೋಗಿ ಬ್ಯಾಟಿಂಗ್ ಕಂಟಿನ್ಯೂ ಮಾಡಿ ಅಂತಾ ಸಿಟ್ಟಲ್ಲೇ ಸಿಗ್ನಲ್ ಮಾಡ್ತಾರೆ. ಇದಾಗಿ ಒಂದೇ ಓವರ್ನಲ್ಲಿ ಅಂದ್ರೆ 98ನೇ ಓವರ್ ಬಳಿಕ ರೋಹಿತ್ ಶರ್ಮಾ ಅಫೀಶಿಯಲಿ ಡಿಕ್ಲೇರ್ ಮಾಡ್ತಾರೆ. ಈ ಡಿಕ್ಲೇರೇಷನ್ ಇನ್ಸಿಡೆಂಟ್ ಫುಲ್ ಟ್ರೋಲ್ ಆಗಿದೆ. ಸಂಜೆ 5 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೊರಟಾಗ ಆಫೀಸ್ ಬಾಸ್ಗಳು ಹಿಂಗೇ ಮಾಡೋದು ಅಂತೆಲ್ಲಾ ಸಾಕಷ್ಟು –ಮಂದಿ ರೋಹಿತ್ ವಿಡಿಯೋಗೆ ಕಾಮೆಂಟ್ಸ್ ಮಾಡಿದ್ದಾರೆ.
ಇವೆಲ್ಲದರ ಮಧ್ಯೆ, ಭಾರತದ ಪಿಚ್ಗಳಲ್ಲಿ ಇಂಗ್ಲೆಂಡ್ನ ಬ್ಯಾಸ್ಬಾಲ್ ಅಪ್ರೋಚ್ನ್ನ ಈಗ ಇಂಗ್ಲೆಂಡ್ನ ಮಾಜಿ ಕ್ರಿಕೆಟರ್ಸ್ಗಳೇ ಕ್ರಿಟಿಸೈಸ್ ಮಾಡ್ತಿದ್ದಾರೆ. ಇಂಡಿಯನ್ ಕಂಡೀಷನ್ನಲ್ಲಿ ಬ್ಯಾಸ್ಬಾಲ್ ಫುಲ್ ಎಕ್ಸ್ಪೋಸ್ ಆಗಿದೆ ಅಂತಾ ಯಾವಾಗಲೂ ಭಾರತೀಯ ಆಟಗಾರರನ್ನ ಕೆಣಕೋ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಫಸ್ಟ್ ಪಿಚ್ನಲ್ಲಿ ಬ್ಯಾಸ್ಬಾಲ್ ಸ್ಟೈಲ್ನಲ್ಲಿ ಆಡಿದ್ದು ಓಕೆ. ಬಟ್ ಎರಡು ಮತ್ತು ಮೂರನೇ ಟೆಸ್ಟ್ಗೆ ಇದ್ದ ಪಿಚ್ಗಳು ಬ್ಯಾಸ್ಬಾಲ್ಗೆ ಸಹಕಾರಿಯಾಗಿರಲಿಲ್ಲ. ಅಂಥಾ ಪಿಚ್ನಲ್ಲೂ ಬ್ಯಾಸ್ಬಾಲ್ ಮೋಡ್ನಲ್ಲಿ ಆಡೋಕೆ ಹೋಗಿ ಇಂಗ್ಲೆಂಡ್ ಟೀಂ ಎಕ್ಸ್ಪೋಸ್ ಆಗಿದೆ ಅಂತಾ ಮೈಕಲ್ ವಾನ್ ಹೇಳಿದ್ದಾರೆ. ಆದ್ರೆ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಮಾತ್ರ ಬ್ಯಾಸ್ಬಾಲ್ ವಿರುದ್ಧ ವ್ಯಕ್ತವಾಗ್ತಾ ಇರೋ ಕ್ರಿಟಿಸಿಸಮ್ಗೆ ಕ್ಯಾರೇ ಅಂತಿಲ್ಲ. ನಮಗೆ ಡ್ರೆಸ್ಸಿಂಗ್ ರೂಮ್ನಲ್ಲಿರೋ ವ್ಯಕ್ತಿಗಳು ಮತ್ತು ಅವರ ಒಪೀನಿಯನ್ ಅಷ್ಟೇ ಮ್ಯಾಟರ್ ಆಗುತ್ತೆ. ಹೊರಗಿನವರು ಏನು ಹೇಳ್ತಾರೆ ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ಹಾಗೆಯೇ ಮುಂದಿನ ಎರಡೂ ಟೆಸ್ಟ್ ಮ್ಯಾಚ್ಗಳನ್ನ ನಾವು ಗೆಲ್ತೇವೆ. 3-2 ಲೀಡ್ನಿಂದ ಸೀರಿಸ್ ಗೆಲ್ತೇವೆ ಅಂತಾ ಬೆನ್ಸ್ಟೋಕ್ಸ್ ಹೇಳಿದ್ದಾರೆ.