18 ಪಂದ್ಯ.. RO-KO ಭವಿಷ್ಯ – ಫಾರ್ಮ್ & ಫಿಟ್ ನೆಸ್ ದೇ ಸವಾಲ್
2026 ಗೆದ್ರೆ 2027ರ ವಿಶ್ವಕಪ್ ಫಿಕ್ಸ್!

18 ಪಂದ್ಯ.. RO-KO ಭವಿಷ್ಯ – ಫಾರ್ಮ್ & ಫಿಟ್ ನೆಸ್ ದೇ ಸವಾಲ್2026 ಗೆದ್ರೆ 2027ರ ವಿಶ್ವಕಪ್ ಫಿಕ್ಸ್!

ಭಾರತ ಮತ್ತು ನ್ಯೂಜಿಲೆಂಡ್ ಸರಣಿಗೆ ಇನ್ನೊಂದೇ ವಾರ ಬಾಕಿ. ಜನವರಿ 11 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗುತ್ತೆ. ಈ ಸರಣಿ ಮೂಲಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೆ ಮೈದಾನಕ್ಕಿಳಿತಾರೆ ಅನ್ನೋದೇ ಏನೋ ಒಂಥರಾ ಖುಷಿ. ಆದ್ರೆ 2026ರಲ್ಲಿ ರೋಕೊ ಜೋಡಿಗೆ ದೊಡ್ಡ ಸವಾಲೇ ಇದೆ. 2027ರ ವಿಶ್ವಕಪ್ ಗೆಲ್ಬೇಕು ಅಂದ್ರೆ ಈ ವರ್ಷದ ಟಾಸ್ಕ್ ಫೇಸ್ ಮಾಡ್ಲೇಬೇಕು.

ಇದನ್ನೂ ಓದಿ : BCCI ತಲೆಬಿಸಿಗೆ ಶಮಿ ಮದ್ದು – NZ ಸರಣಿಗೆ ಸೆಲೆಕ್ಟ್ ಮಾಡಿದ್ರಷ್ಟೇ ಸೇಫ್

2025ರಲ್ಲಿ ರೋಹಿತ್ ಹಾಗೇ ಕೊಹ್ಲಿ ಟೀಂ ಇಂಡಿಯಾ ಪರ ಆಡುವುದು ಅಷ್ಟು ಸುಲಭ ಇರ್ಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಕಳಪೆ ಫಾರ್ಮ್​ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರು. ಒಂದೂವರೆ ದಶಕದಿಂದ್ಲೂ ಭಾರತದ ಪರ ಆಡ್ತಿದ್ರೂ ಕಳೆದ ವರ್ಷ ಹೆಜ್ಜೆ ಹೆಜ್ಜೆಗೂ ಟೀಕೆಗಳನ್ನ ಎದುರಿಸಿದ್ರು. ಎಲ್ಲಾ ಮಾದರಿಯಿಂದಲೂ ನಿವೃತ್ತಿ  ಪಡೆಯುವಂತೆ ಒತ್ತಡ ಹೆಚ್ಚಾಗ್ತಿತ್ತು. ಬಿಸಿಸಿಐ ಬಾಸ್​ಗಳಿಂದಲೂ ಪರೋಕ್ಷವಾಗಿ ಪ್ರೆಶರ್ ಇತ್ತು. ಬಟ್ ಎಲ್ಲವನ್ನೂ ಕೂಲ್ ಆಗೇ ಹ್ಯಾಂಡಲ್ ಮಾಡಿದ ಈ ದಿಗ್ಗಜರು ಏಕದಿನದಲ್ಲಿ ಆಡಲೇಬೇಕು ಅಂತಾ ಪಣ ತೊಟ್ರು. ಇಯರ್ ಎಂಡ್​ ವೇಳೆಗೆ ಏಕದಿನದಲ್ಲಿ ಹೈಯೆಸ್ಟ್ ರನ್ ಸ್ಕೋರರ್ಸ್ ಆಗಿದ್ರು. 2027ರ ವಿಶ್ವಕಪ್​ನಲ್ಲಿ ಆಡ್ಲೇಬೇಕು, ಟ್ರೋಫಿ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿರೋ ಈ ದಿಗ್ಗಜರಿಗೆ 2026ರ ಪ್ರದರ್ಶನವೇ ಭವಿಷ್ಯದ ದಿಕ್ಸೂಚಿಯಾಗಲಿದೆ. ಈ ವರ್ಷದ ಪರೀಕ್ಷೆಯಲ್ಲಿ ಪಾಸಾದ್ರೆ 2027 ವಿಶ್ವಕಪ್ ಕನಸೂ ನನಸಾಗುತ್ತೆ.

ಫಾರ್ಮ್ & ಫಿಟ್ ನೆಸ್ ಕಾಯ್ದುಕೊಳ್ಳೋದೇ ಸವಾಲ್!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇರೋ ಏಕೈಕ ಗುರಿ ಅಂದ್ರೆ 2027 ರ ಏಕದಿನ ವಿಶ್ವಕಪ್. ಆ ಕನಸನ್ನು ಜೀವಂತವಾಗಿಡಲೆಂದೇ ಬಿಸಿಸಿಐ ಆದೇಶದಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಕಣಕ್ಕಿಳಿದು ಪಂದ್ಯಗಳನ್ನಾಡಿದ್ದಾರೆ. ದೇಶೀಯ ಅಂಗಳಕ್ಕೆ ಇಳಿಯೋ ಮೂಲಕ ರಿದಮ್ ಮತ್ತು ಇಂಟೆನ್ಸಿಟಿಯನ್ನ ಕಾಪಾಡಿಕೊಳ್ಳೋ ಸಂದೇಶ ಸಾರಿದ್ರು. ಹಾಗೇ ಇದೇ ಫಾರ್ಮ್ ಕಂಟಿನ್ಯೂ ಮಾಡೋದು ಅಗ್ನಿಪರೀಕ್ಷೆಯಾಗಲಿದೆ.  ಕಡಿಮೆ ಅಂತರರಾಷ್ಟ್ರೀಯ ಪಂದ್ಯಗಳೊಂದಿಗೆ ಫಿಟ್​ನೆಸ್ ಉಳಿಸಿಕೊಳ್ಬೇಕಾಗುತ್ತೆ. 2026ರಲ್ಲಿ ಟೀಮ್ ಇಂಡಿಯಾ ಒಟ್ಟು 18 ಏಕದಿನ ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ತವರು ಸರಣಿಗಳು ಇದೇ ಫಾರ್ಮ್ ಉಳಿಸಿಕೊಳ್ಳೋಕೆ ಸಹಾಯ ಮಾಡುತ್ತೆ. ಆದರೆ ನಿಜವಾದ ಪರೀಕ್ಷೆ ವಿದೇಶಗಳಲ್ಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪ್ರವಾಸಗಳು, ತಲಾ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ನಿರ್ಣಾಯಕವಾಗಿರುತ್ತವೆ. ಸೋ ಇಲ್ಲೂ ಕೂಡ ಬಿಗ್ ಇನ್ನಿಂಗ್ಸ್ ಬಂದ್ರಷ್ಟೇ ಕಂಟಿನ್ಯೂ ಆಗೋಕೆ ಸಾಧ್ಯ. ಸೋ ಈ ವರ್ಷ ರೋಕೊ ಜೋಡಿಗೆ ಇರೋ ಮೇನ್ ಟಾಸ್ಕ್ ಏನೆಲ್ಲಾ ಅನ್ನೋದನ್ನ ನೋಡೋದಾದ್ರೆ.. ನಂಬರ್ 1..

ರೋ-ಕೊ ಮುಂದಿರುವ ಸವಾಲುಗಳು!

ರೋಹಿತ್ ಗೆ 38 ವರ್ಷ, ಕೊಹ್ಲಿಗೆ 37 ವರ್ಷ.. ವಯಸ್ಸಿನ ಟೀಕೆ

2027ರ ಏಕದಿನ ವಿಶ್ವಕಪ್ ವರೆಗೂ ಫಾರ್ಮ್ & ಫಿಟ್ ನೆಸ್

ಏಕದಿನ ಮಾದರಿಯಲ್ಲಿ ಮಾತ್ರ ಆಡೋದ್ರಿಂದ ಸೀಮಿತ ಚಾನ್ಸ್

ಐಪಿಎಲ್ ಬಿಟ್ರೆ ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಕಾಯಬೇಕು

ಫಾರ್ಮ್ ಕಳ್ಕೊಂಡ್ರೆ ಹೆಚ್ಚಿನ ಟೀಕೆ, ಬಿಸಿಸಿಐಗೂ ಅದೇ ಬೇಕು

2026 ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಸೋಲು ಗೆಲುವಿನ ಅದೃಷ್ಟ ಪರೀಕ್ಷೆಯಾಗಲಿದೆ.  ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ಒತ್ತಡ ಎಲ್ಲವನ್ನೂ ನಿಭಾಯಿಸಿಕೊಂಡು ಬ್ಯಾಟ್​ನಲ್ಲೇ ಉತ್ತರಿಸುತ್ತಾ 2027ರ ವಿಶ್ವಕಪ್​ಗೆ ಕಾಲಿಡಬೇಕಾಗುತ್ತೆ. ಸದ್ಯಕ್ಕೆ ಈ ಜೋಡಿ ಫಾರ್ಮ್ ನೋಡ್ತಿದ್ರೆ ಯಂಗ್​ಸ್ಟರ್ಸ್ ಕೂಡ ಡಲ್ ಆಗ್ತಿದ್ದಾರೆ. ಸೋ ಮೈದಾನದಲ್ಲಿ ರನ್​ಗಳ ಮೂಲಕವೇ ಬಿಸಿಸಿಐಗೆ ಉತ್ತರ ಕೊಟ್ಟು 2027ರ ವಿಶ್ವಕಪ್ ಎತ್ತಿ ಹಿಡಿಯಲಿ ಅನ್ನೋದೇ ಅಭಿಮಾನಿಗಳ ಆಶಯ.

Shantha Kumari