HITಮ್ಯಾನ್ ಸಖತ್ ಫಿಟ್ – 30 ದಿನದಲ್ಲಿ 20 KG ಡೌನ್
ರೋಹಿತ್ ತಿನ್ನೋ ಫುಡ್ ಹೇಗಿರುತ್ತೆ?

ನಮ್ ಹಿಟ್ ಮ್ಯಾನ್ ರೋಹಿತ್ ಶರ್ಮಾ 20 ಕೆಜಿ ಕಮ್ಮಿಯಾಗಿದ್ದಾರೆ. ಅದ್ದಕ್ಕೆ ಸಾಕ್ಷಿಯೇ ಈ ಫೋಟೋಗಳು.. Vis flow.. ಫಿಟ್‌ನೆಸ್ ಸಾಬೀತುಪಡಿಸಲು ಯೋ ಯೋ ಟೆಸ್ಟ್ ಕಡ್ಡಾಯವಾಗಿದ್ದರಿಂದ ರೋಹಿತ್ ಶರ್ಮಾ ಕಳೆದ ಒಂದು ತಿಂಗಳಿನಿಂದ ಫುಲ್ ವರ್ಕೌಟ್ ಮಾಡಿದ್ದಾರೆ. ಮಾಜಿ ಕೋಚ್ ಅಭಿಷೇಕ್ ನಾಯರ್ ಜೊತೆಯಲ್ಲೇ ವರ್ಕೌಟ್ ಮಾಡಿರೋ ರೋಹಿತ್ ಶರ್ಮಾ 30 ದಿವಸಗಳಲ್ಲಿ 20ಕ್ಕೂ ಹೆಚ್ಚು ಕೆಜಿ ತೂಕವನ್ನ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.. ಅದ್ರಲ್ಲೂ ಅವರ ಫೋಟೋಗಳು ವೈರಲ್ ಆದ್ರೂ ಮೇಲೆ ಜನ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.. ಹೀಗೂ ಉಂಟಾ ಅಂತಿದ್ದಾರೆ.. ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ಆಗಮಿಸುವಾಗ ರೋಹಿತ್ ಶರ್ಮಾರ ವಿಡಿಯೋ ವೈರಲ್ ಆಗುತ್ತಿದ್ದು, ಸಖತ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. ತಿಂಗಳ ಹಿಂದಿನ ಫೋಟೋ ಹಾಗೂ ಹೀಗಿನ ಫೋಟೋಗಳನ್ನ ಕೊಲೇಜ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಎಲ್ಲರೂ ರೋಹಿತ್ ಹಲವು ಯುವ ಆಟಗಾರರಿಗೆ ಸ್ಪೂರ್ತಿ ಎಂದು ಹೇಳುತ್ತಿದ್ದು, ನಿಜಕ್ಕೂ ಹಿಟ್‌ಮ್ಯಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಶಾಸಕಿ ಡಾ ಶರ್ಮಾ ಮೊಹಮ್ಮದ್ ರೋಹಿತ್ ಡುಮ್ಮ ಅಂತ ಕರೆದಿದ್ರು. ಆದ್ರೂ ಅವರ ತಮ್ಮ ಆಟದ ಮೂಲಕ ತಾನು ಎಷ್ಟು ಫಿಟ್ ಇದ್ದೇನೆ ಅನ್ನೋದ್ದನ್ನ ಆಟದ ಮೂಲಕ ತೋರಿಸಿದ್ರು.. ಈಗ ತನ್ನ ಬಾಡಿಯಲ್ಲೇ ಫಿಟ್ ಮಾಡಿಕೊಂಡು 20 ವರ್ಷದ ಹುಡುಗನಂತೆ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಒಂದು ತಿಂಗಳಲ್ಲಿ 95 ಕೆಜಿ ಯಿಂದ 75 ಕೆಜಿಗೆ ತಮ್ಮ ಬಾಡಿಯನ್ನ ಇಳಿಸಿದ್ದಾರೆ. ಅಂದ್ರೆ 20 ಕೆಜಿ ಡೌನ್ ಆಗಿದ್ದಾರೆ.
ಈಗಾಗಲೇ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ನಡೆದ ಫಿಟ್‌ನೆಸ್ ಪರೀಕ್ಷೆಗಳಾದ ಯೋ-ಯೋ ಟೆಸ್ಟ್ ಮತ್ತು ಬ್ರಾಂಕೋ ಟೆಸ್ಟ್‌ನಲ್ಲಿ ರೋಹಿತ್ ಪಾಸ್ ಆಗಿದ್ದಾರೆ. ಈಗ ಫುಲ್ ಫಿಟ್ ಆಗಿರೋ ಹಿಟ್ ಮ್ಯಾನ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 19ರಿಂದ ಆರಂಭವಾಗುವ ಮೂರು ಏಕದಿನ ಪಂದ್ಯಗಳ ಸರಣಿಯನ್ನ ಕೈ ವಶ ಮಾಡಿಕೊಳ್ಳುವುದ್ದಕ್ಕೆ ಫಿಟ್ ಅಂಡ್ ಫೈನ್ ಆಗಿದ್ದಾರೆ. ರೋಹಿತ್ ಇಷ್ಟು ಫಿಟ್ ಆಗೋದ್ರ ಹಿಂದೆ ತುಂಬಾ ಪರಿಶ್ರಮ ಇದೆ.. ರೋಹಿತ್ ಯಾವಗ ಏನೆಲ್ಲಾ ಸೇವನೆ ಮಾಡ್ತಾರೆ ಅನ್ನೋದ್ದನ್ನ ನೋಡೋದಾದ್ರೆ.. vis Flow..
ರೋಹಿತ್ ಶರ್ಮಾ ಫುಡ್ ಸ್ಟೈಲ್
– ಬೆಳಗ್ಗೆ 7:00 6 ನೆನೆಸಿದ ಬಾದಾಮಿ, ಮೊಳಕೆ ಸಲಾಡ್, ಫ್ರೆಶ್ ಜ್ಯೂಸ್
– ಬೆಳಗ್ಗೆ 9:30 ಹಣ್ಣು, ಓಟ್ ಮೀಲ್, ಒಂದು ಲೋಟ ಹಾಲು
– ಬೆಳಗ್ಗೆ 11:30 ಮೊಸರು, ಎಳ ನೀರು
– ಮಧ್ಯಾಹ್ನ 1:30 ತರಕಾರಿ ಕರಿ, ದಾಲ್, ಅನ್ನ, ಸಲಾಡ್
– ಸಂಜೆ 4:30 – ಹಣ್ಣಿನ ಜ್ಯೂಸ್, ಡ್ರೈ ಫ್ರೂಟ್ಸ್
– ಸಂಜೆ 7:30 ತರಕಾರಿಗಳೊಂದಿಗೆ ಪನ್ನೀರ್, ಪಲಾವ್ , ತರಕಾರಿ ಸೂಪ್
– ರಾತ್ರಿ 9:30 ಹಾಲು, ಮಿಕ್ಸಡ್ ನಟ್ಸ್
ನೋಡಿದ್ರಿ ಅಲ್ವಾ ನಮ್ ಹಿಟ್ ಮ್ಯಾನ್ ರೋಹಿತ್ ಟೈಮ್ ಟೂ ಟೈಮ್ ಹೇಗೆ ಫುಡ್ ತಗೊಳ್ತಾರೆ ಅನ್ನೋದ್ದನ್ನ.. ಹೀಗೆ ತಮ್ಮ ಫಿಟ್‌ನೆಸ್ ಮೆಂಟೆನ್ ಮಾಡ್ತಿರೋ ನಮ್ಮ ರೋಹಿತ್ 38ನೇ ವಯಸ್ಸಿನಲ್ಲಿ 20 ಕೆಜಿ ಇಳಿಸಿಕೊಂಡಿದ್ದಾರೆ.

ನೋಡಿರಿ

