ಬೀದಿ ಜಗಳದ ಬೆನ್ನಲ್ಲೇ ರೋಹಿಣಿ, ರೂಪಾ ಎತ್ತಂಗಡಿ – ಮುನೀಶ್ ಮೌದ್ಗಿಲ್ ರನ್ನೂ ವರ್ಗಾವಣೆ ಮಾಡಿದ್ದೇಕೆ..?
ಉನ್ನತ ಹುದ್ದೆಯ ಜವಾಬ್ದಾರಿ ಮರೆತು ಹಾದಿಬೀದಿಯಲ್ಲಿ ಜಗಳ ಮಾಡಿಕೊಳ್ತಿದ್ದ ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಕೊನೆಗೂ ಶಾಕ್ ಕೊಟ್ಟಿದೆ. ಎರಡು ದಿನಗಳ ಹೈಡ್ರಾಮಾಗಳ ಬಳಿಕ ಎತ್ತಂಗಡಿ ಮಾಡುವ ಮೂಲಕ ಜಡೆಜಗಳಕ್ಕೆ ಬ್ರೇಕ್ ಹಾಕಿದೆ. ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ಜೊತೆಗೆ ಮತ್ತೊಬ್ಬರನ್ನೂ ಟ್ರಾನ್ಸ್ಫರ್ ಮಾಡಿದೆ.
ಇದನ್ನೂ ಓದಿ : ರೋಹಿಣಿ-ರೂಪ ಜಗಳ.. ವಿಧಾನಸಭೆಯಲ್ಲೂ ಕೋಲಾಹಲ – ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿಗರು!
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಜಗಳದಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಸ್ಥಳ ನಿಯೋಜನೆ ಮಾಡದೆ ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿಯನ್ನ ಸರ್ಕಾರ ವರ್ಗಾವಣೆ ಮಾಡಿದೆ. ಹಾಗೇ ರೂಪಾ ಅವರ ಪತಿ ಮುನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಇವರನ್ನು ಡಿಪಿಆರ್ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಐಪಿಎಸ್ ಡಿ.ರೂಪಾ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಉನ್ನತ ಹುದ್ದೆಯ ಅಧಿಕಾರಿಗಳು ಹೀಗೆ ಕಿತ್ತಾಡುವುದು ಸರಿಯಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮಕೈಗೊಂಡಿದೆ. ಪ್ರಕರಣದ ಬಗ್ಗೆ ಸರ್ಕಾರ ತನಿಖೆ ನಡೆಸಲಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ನಡುವಣ ಸಂಘರ್ಷಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಯಾವ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ತಿಳಿಸಿಲ್ಲ.