ಕೋರ್ಟ್‌ಗೆ ಕಾಲಿಡಲಿರುವ ರೋಬೋಟ್ ವಕೀಲ
ಜಗತ್ತಿನಲ್ಲೇ ಪ್ರಥಮ ಬಾರಿಗೆ ರೋಬೋಟ್ ಲಾಯರ್ ಪ್ರಯೋಗ..!

ಕೋರ್ಟ್‌ಗೆ ಕಾಲಿಡಲಿರುವ ರೋಬೋಟ್ ವಕೀಲಜಗತ್ತಿನಲ್ಲೇ ಪ್ರಥಮ ಬಾರಿಗೆ ರೋಬೋಟ್ ಲಾಯರ್ ಪ್ರಯೋಗ..!

ಸಾಮಾನ್ಯವಾಗಿ ವಕೀಲರನ್ನ ನೇಮಿಸಿ ನ್ಯಾಯಾಲಯದಲ್ಲಿ ವಾದ ಮಾಡುವುದು ದುಬಾರಿಯೇ.  ಒಂದು ವೇಳೆ ವಕೀಲರ ಬದಲಿಗೆ ಕೃತಕ ಬುದ್ಧಿಮತ್ತೆ (Artificial Intelligence)ಆಧಾರಿತ ರೋಬೋಟ್ ವಾದಿಸಿದರೆ ಹೇಗಿರುತ್ತೆ?. ಇಂಥಾದ್ದೊಂದು ಯೋಚನೆ ಅದೆಷ್ಟು ಜನರಿಗೆ ಬಂದಿದ್ಯೋ ಇಲ್ವೋ.. ಆದರೆ ಅಂಥಾದ್ದೊಂದು ಕಾಲ ಮಾತ್ರ ಬಂದೇ ಬಿಟ್ಟಿದೆ. ಸದ್ಯದಲ್ಲೇ ಅಮೇರಿಕಾದಲ್ಲಿ ರೋಬೊಟ್ ಕೂಡಾ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದೆ.  ಜಗತ್ತಿನಲ್ಲಿ ಮೊದಲ ಬಾರಿಗೆ ರೋಬೋಟ್ ಲಾಯರ್ ಆಗ್ತಾ ಇದೆ. ಮುಂದಿನ ತಿಂಗಳು ಅಮೇರಿಕಾದ ನ್ಯಾಯಾಲಯವೊಂದು ಇಂಥಾ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಅಮೇರಿಕಾದ ನ್ಯಾಯಾಲಯೊಂದರಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ರೋಬೋಟ್ ಸಹಾಯದ ಮೂಲಕ ಆರೋಪಿಯು ವಾದಿಸಲಿದ್ದಾರೆ. ಟ್ರಾಫಿಕ್ ರೂಲ್ ಮುರಿದ ವ್ಯಕ್ತಿಯ ಪರವಾಗಿ AI ರೋಬೋಟ್ ವಾದಿಸಲಿದೆ ಎಂದೂ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ನ್ಯೂ ಸೈಂಟಿಸ್ಟ್ ಅನ್ನುವ ಸೈನ್ಸ್ ಅಂಡ್ ಟೆಕ್ನಾಲಜಿ ವೆಬ್ಸೈಟ್ ವರದಿಯ ಪ್ರಕಾರ ಆರೋಪಿಯು DoNotPay ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಇದು ನ್ಯಾಯಾಲಯದಲ್ಲಿ ನಡೆಯುವ ಎಲ್ಲಾ ವಾದಗಳನ್ನ ಆಲಿಸುತ್ತದೆ ಮತ್ತೂ ಆರೋಪಿಗೆ ವಿಚಾರಣೆ ಪ್ರಕ್ರಿಯೆಯಲ್ಲಿ ಏನು ಮತ್ತು ಯಾವಾಗ ಹೇಳಬೇಕು ಎಂದು ಹೇಳುವ ಮೂಲಕ ಸಹಾಯ ಮಾಡುತ್ತದೆ. ಆದರೆ ಈ ವಿಚಾರಣೆಯು ಎಲ್ಲಿ ನಡೆಯುತ್ತದೆ ಮತ್ತು ಆರೋಪಿಯ ಹೆಸರನ್ನ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:  ಅತಿಯಾದರೆ ‘ಔಷಧ’ವೂ ಅಪಾಯ..! – ಕೆಮ್ಮಿನ ಸಿರಪ್ ಸೇವಿಸುವ ಮುನ್ನ ಈ ವಿಚಾರ ಗೊತ್ತಿರಲಿ..!

DoNotPay ಅಪ್ಲಿಕೇಶನ್ ಎಂದರೇನು?

ಸ್ಟಾಂಡ್ ಫೋರ್ಡ್ ಯೂನಿವರ್ಸಿಟಿ (Standford University ) ಯಲ್ಲಿ ಕಂಪ್ಯೂಟರ್ ವಿಜ್ಞಾನಿ ಯಾಗಿರುವ ಜೋಶುವ ಬ್ರೌಡರ್ (Joshua Browder ) 2015 ರಲ್ಲಿ DoNotPay ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. DoNotPay ಇದು ಜನರಿಗೆ ಕಾನೂನು ಸಲಹೆಗಳನ್ನ ನೀಡುವ ಚಾಟ್ ಬಾಟ್ ಆಗಿದೆ . ಮತ್ತು ಯಾವುದೇ ಕಾನೂನು ಪತ್ರಗಳನ್ನ ಬರೆಯಲು ಸಹಾಯ ಮಾಡುತ್ತದೆ. DoNotPay ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಬಹುದಾದ ಅಪ್ಲಿಕೇಶನ್ ಆಗಿದ್ದು ಇದು ಕಾನೂನು ಸೇವೆಗಳನ್ನ ಒದಗಿಸಲು ಕೃತಕ  ಬುದ್ಧಿಮತ್ತೆ ಯನ್ನ ಬಳಸಿಕೊಳ್ಳುತ್ತದೆ. ಇದೂ ಪ್ರಸ್ತುತ ಯುನೈಟೆಡ್ ಕಿಂಗ್ ಡಮ್ ಮತ್ತೂ ಯುನೈಟೆಡ್ ಸ್ಟೇಟ್ಸ್ ನಲ್ಲಿ ಲಭ್ಯವಿದೆ. ಅಂದಹಾಗೇ ಇದನ್ನ ಜಗತ್ತಿನಲ್ಲಿ ಕಾನೂನು ಮಾರ್ಗದರ್ಶನವನ್ನ ನೀಡುವ ಮೊದಲ ಕೃತಕ ಬುದ್ಧಿ ಆಧಾರಿತ ರೋಬೋಟ್ ವಕೀಲ ಎಂದೂ ಕರೆಯಲಾಗುತ್ತಿದೆ.

suddiyaana