ಟರ್ಕಿಯಲ್ಲಿ ಮುಂದುವರಿದ ರಕ್ಷಣಾಕಾರ್ಯ- ಬದುಕುಳಿದವರ ಶೋಧಕ್ಕಾಗಿ ರೋಬೋಟ್‌ಗಳ ಸಹಾಯ

ಟರ್ಕಿಯಲ್ಲಿ ಮುಂದುವರಿದ ರಕ್ಷಣಾಕಾರ್ಯ- ಬದುಕುಳಿದವರ ಶೋಧಕ್ಕಾಗಿ ರೋಬೋಟ್‌ಗಳ ಸಹಾಯ

ಭೂಕಂಪದಿಂದ ತತ್ತರಿಸಿದ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡಲಾಗುತ್ತಿದೆ. ಭಾರತ ಸೇರಿದಂತೆ ಅಮೆರಿಕ, ರಷ್ಯಾ , ಚೀನಾ ದೇಶದ ರಕ್ಷಣಾ ತಂಡಗಳಿಂದ ಸತತ ಕಾರ್ಯಾಚರಣೆಯೂ ನಡೆಯುತ್ತಿದೆ. ಬದುಕುಳಿದರ ಶೋಧಕ್ಕಾಗಿ ಹೊಸ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಥರ್ಮಲ್ ಕ್ಯಾಮೆರಾಗಳನ್ನ ಹೊಂದಿರುವ ಚಿಕ್ಕ ವಾಹನಗಳಿಂದ ಮೈಕ್ರೋಫೋನ್ ಕಳುಹಿಸಿ ಬದುಕಿರುವ ಜನರನ್ನು ಹುಡುಕಲಾಗುತ್ತಿದೆ. ಡ್ರೋನ್ ಕ್ಯಾಮರಾಗಳು ಮತ್ತು ರೊಬೋಟ್ ಗಳನ್ನು ಬಳಸಲಾಗುತ್ತಿದೆ. ಸಣ್ಣ, ಅತಿಸಣ್ಣ ಪ್ರದೇಶಗಳಲ್ಲಿ ಆಕ್ಸಿಜನ್ ಪೈಪ್‌ಗಳನ್ನ  ಕಳುಹಿಸಿ ಉಸಿರಾಟದ ಮೂಲಕ ಜನರ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:  ಟರ್ಕಿ ಭೂಕಂಪದಿಂದಾಗಿ ಭಾರತೀಯ ಕುಟುಂಬಗಳಿಗೆ ಆತಂಕ – ಬೆಂಗಳೂರಿನಿಂದ ತೆರಳಿದ್ದ ವ್ಯಕ್ತಿ ನಾಪತ್ತೆ

ಈ ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದರ ಸಂಖ್ಯೆ 16,000ಕ್ಕೆ ಏರಿದೆ. ಟರ್ಕಿಯಲ್ಲಿ ಕನಿಷ್ಠ 12,873 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 3,142 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 60 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿ ಸರ್ಕಾರ ಹೇಳಿದೆ. ಟರ್ಕಿಯ ದಕ್ಷಿಣ ನಗರವಾದ ಅಂಟಾಕ್ಯಾದಲ್ಲಿನ ಆಸ್ಪತ್ರೆಯ ಬಳಿ ಇರಿಸಲಾಗಿದ್ದ, ಮೃತದೇಹಗಳನ್ನು ಸಂಬಂಧಿಕರು ಹುಡುಕಾಡುತ್ತಿರುವ ದೃಶ್ಯ ಕರುಣಾಜನಕವಾಗಿತ್ತು. ಭೂಕಂಪ ಸಂಭವಿಸಿ 72 ಗಂಟೆಯಾಗಿದ್ದರಿಂದ ಅವಶೇಷಗಳಡಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೂ ಬದುಕುಳಿದಿರಬಹುದು ಅನ್ನೋ ನಿರೀಕ್ಷೆಯಲ್ಲೇ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

suddiyaana