ರೋಬೋಟ್ ದಾಳಿಗೆ ವ್ಯಕ್ತಿ ಬಲಿ ! – ಮಾರಣಾಂತಿಕವಾಯ್ತಾ ಸೆನ್ಸಾರ್ ಸಮಸ್ಯೆ?
ವಿಶ್ವದಾದ್ಯಂತ ಟೆಕ್ನಾಲಜಿ ಈಗಾಗಲೇ ಬೆಳೆದು ನಿಂತಿದೆ. ಎಲ್ಲವೂ ಯಾಂತ್ರೀಕರಣಗೊಳ್ಳುತ್ತಿದೆ. ಮಾನವನು ಅವುಗಳ ಮೇಲೆಯೇ ಅವಲಂಬಿತನಾಗುತ್ತಿದ್ದಾರೆ. 10 ಜನರು ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡುತ್ತೆ ಅಂತಾ ಅದಕ್ಕೆ ಅವಲಂಬಿತರಾಗುತ್ತಿದ್ದಾರೆ. ಇದೀಗ ಪ್ರತಿಯೊಂದು ಕ್ಷೇತ್ರಕ್ಕೂ ರೋಬೋಟ್‌ಗಳು ಕಾಲಿಟ್ಟಿವೆ. ಮನುಷ್ಯನಂತೆಯೇ ರೋಬೋಟ್‌ಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ವಿಚಾರದಲ್ಲೂ ಪಾಸಿಟಿವ್-ನೆಗೆಟಿವ್ ಎರಡೂ ಇರುತ್ತದೆ. ಅದರಂತೆಯೇ ವಿಜ್ಞಾನದಲ್ಲಿ ನೆರಳು ಬೆಳಕಿನ ಆಟ ಎಂಬ ಮಾತಿನಂತೆ, ಈಗ ತಂತ್ರಜ್ಞಾನದಲ್ಲಿ ನಕಲಿ-ಅಸಲಿ ಆಟ ಶುರುವಾದಂತೆ ಕಾಣುತ್ತಿದೆ. ಇಲ್ಲೊಂದು ರೋಬೋಟ್ ಮನುಷ್ಯನನ್ನೇ ಕೊಂದು ಹಾಕಿದೆ.
ರೋಬೋಟ್‌ಗಳಿಗೆ ಮನುಷ್ಯನ ಮೇಲೆ ಪ್ರೀತಿ ಹುಟ್ಟುವುದು, ದ್ವೇಷ ಹುಟ್ಟುವುದು, ಏಕಾಏಕಿ ದಾಳಿ ಮಾಡುವುದನ್ನ ನಾವು ಸಿನಿಮಾಗಳಲ್ಲಿ ನೋಡಿದ್ದೆವು. ಆದ್ರೆ ಇಲ್ಲೊಂದು ಕಡೆ ಮನುಷ್ಯನನ್ನೇ ರೋಬೋಟ್ ಕೊಂದು ಹಾಕಿದೆ. ಈ ಘಟನೆ ನಡೆದಿರೋದು ದಕ್ಷಿಣ ಕೊರಿಯಾ ದೇಶದಲ್ಲಿ. ತರಕಾರಿಯ ಪೆಟ್ಟಿಗೆ ಹಾಗೂ ಮನುಷ್ಯನ ನಡುವಣ ವ್ಯತ್ಯಾಸ ಗುರುತಿಸುವಲ್ಲಿ ವಿಫಲವಾದ ರೋಬೋಟ್ ನೌಕರನನ್ನೇ ಕೊಂದು ಹಾಕಿದೆ.
ಇದನ್ನೂ ಓದಿ: 2.5 ಮಿಲಿಯನ್ ಡಾಲರ್ ಪತ್ತೆ ಕೇಸ್ಗೆ ಟ್ವಿಸ್ಟ್! – ಚಿಂದಿ ಆಯುವವನ ಮೇಲೆ ಹಲ್ಲೆ ಮಾಡಿ ಅಪಹರಣ!
ಮೃತ ವ್ಯಕ್ತಿಯನ್ನು ರೋಬೋಟಿಕ್ ಕಂಪನಿಯ ಉದ್ಯೋಗಿ ಎಂದು ಗುರುತಿಸಲಾಗಿದೆ. ಈತ 40 ವರ್ಷ ವಯಸ್ಸಿನವನಾಗಿದ್ದು, ಕೃಷಿ ಉತ್ಪನ್ನಗಳ ವಿತರಣಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಕೈಗಾರಿಕಾ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೋಬೋಟ್ ದೊಡ್ಡ ದೊಡ್ಡ ಪೆಟ್ಟಿಗೆಗಳಿಗೆ ಕೃಷಿ ಉತ್ಪನ್ನಗಳನ್ನು ತುಂಬಿ ಅದನ್ನು ಸಾಲಾಗಿ ಜೋಡಿಸುವ ಕೆಲಸ ಮಾಡುತ್ತಿತ್ತು. ತನ್ನ ಕಾರ್ಯ ನಿರ್ವಹಣೆ ವೇಳೆ ರೊಬೋಟ್ ಬಳಿಗೆ ಹೋಗಿದ್ದ ವ್ಯಕ್ತಿಯನ್ನು ರೋಬೋಟ್ ಕೃಷಿ ಉತ್ಪನ್ನದ ಪೆಟ್ಟಿಗೆ ಎಂದು ಭಾವಿಸಿತ್ತು. ಹೀಗಾಗಿ ರೋಬೋಟ್ ಸನಿಹಕ್ಕೆ ಬಂದ ವ್ಯಕ್ತಿಯನ್ನು ರೋಬೋಟ್‌ನ ಕೈ ತಳ್ಳಿತು. ಈ ವೇಳೆ ಯಂತ್ರದ ಬೆಲ್ಟ್ ಬಳಿ ಆತ ಸಿಲುಕಿಕೊಂಡಿದ್ದಾನೆ. ಈ ವೇಳೆ ಆತನ ದೇಹದ ಮೇಲ್ಭಾಗವು ಬೆಲ್ಟ್‌ಗೆ ಸಿಲುಕಿದೆ. ಆತನ ಮುಖ ಹಾಗೂ ಎದೆ ಭಾಗ ರೋಬೋಟ್‌ನ ಕೈಗೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಿತ್ತಾದರೂ ಆತ ಬದುಕುಳಿದಿಲ್ಲ ಅಂತಾ ವರದಿಯಾಗಿದೆ.
ವ್ಯಕ್ತಿಯೊಬ್ಬನನ್ನು ಕೃಷಿ ಉತ್ಪನ್ನಗಳ ಪೆಟ್ಟಿಗೆ ಎಂದು ರೋಬೋಟ್ ಭಾವಿಸೋಕೆ ಹೇಗೆ ಸಾಧ್ಯ ಎಂದು ತನಿಖಾಧಿಕಾರಿಗಳು ಇದೀಗ ರೊಬೋಟಿಕ್ ಸಂಸ್ಥೆಗೆ ಸವಾಲೆಸೆದಿದೆ. ರೋಬೋಟ್‌ನಲ್ಲಿ ತಾಂತ್ರಿಕ ದೋಷ ಏನಾದ್ರೂ ಆಗಿತ್ತಾ ಎಂಬ ಪತ್ತೆ ಕಾರ್ಯ ಕೂಡಾ ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ರೋಬೋಟ್‌ನ ಒಂದು ಕೈ, ಮಾನವನನ್ನು ತರಕಾರಿ ಪೆಟ್ಟಿಗೆಯನ್ನು ಎಂದು ಭಾವಿಸಿತ್ತು ಎಂದು ತಿಳಿದು ಬಂದಿದೆ. ಈ ರೋಬೋಟ್ ಅನ್ನು ಪೆಟ್ಟಿಗೆಯನ್ನು ಎತ್ತಿ ಅದರಲ್ಲಿ ಕೃಷಿ ಉತ್ಪನ್ನ ತುಂಬಿಸಿ ಪಕ್ಕಕ್ಕಿಡುವ ರೀತಿ ಪ್ರೋಗ್ರಾಮಿಂಗ್ ಮಾಡಲಾಗಿತ್ತು ಎಂದು ರೋಬೋಟಿಕ್ ಸಂಸ್ಥೆ ತಿಳಿಸಿದೆ. ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.