ಮಲಿಂಗಾ ಔಟ್.. ಉತ್ತಪ್ಪ ಕೋಚ್ – KKRಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್?
RCBಯನ್ನೇ ಹಿಂದಿಕ್ಕಿದ ಶ್ರೀಮಂತ MI

ಮಲಿಂಗಾ ಔಟ್.. ಉತ್ತಪ್ಪ ಕೋಚ್ – KKRಗೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್?RCBಯನ್ನೇ ಹಿಂದಿಕ್ಕಿದ ಶ್ರೀಮಂತ MI

ಐಪಿಎಲ್​ನಲ್ಲಿ ಐದು ಸಲ ಟ್ರೋಫಿ ಗೆದ್ದಿರೋ ಮುಂಬೈ ಇಂಡಿಯನ್ಸ್ ಲಾಸ್ಟ್ 3 ಸೀಸನ್​ಗಳಲ್ಲಿ ಸಾಕಷ್ಟು ಸ್ಟ್ರಗಲ್ ಕಂಡಿದೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆದ್ಮೇಲೆ ತಂಡದ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ. ಆನ್​ಫೀಲ್ಡ್ ಹಾಗೇ ಆಫ್ ದಿ ಫೀಲ್ಡ್​ನಲ್ಲೂ ಯಾವುದೂ ಸರಿ ಇಲ್ಲ. 2026ರ ಆವೃತ್ತಿಯಲ್ಲಿ 9ನೇ ಸ್ಥಾನದಲ್ಲಿ ಲೀಗ್ ಮುಗಿಸಿದ್ರು. ಬಟ್ 2027ಕ್ಕೆ ಗ್ರೇಟ್ ಕಂ ಬ್ಯಾಕ್ ಮಾಡ್ಬೇಕು ಅಂತಾ ಮೇಜರ್ ಸರ್ಜರಿಗಳನ್ನೇ ಮಾಡಿದೆ. ಕೋಚಿಂಗ್ ಸ್ಟಾಫ್ಸ್​​ನಲ್ಲಿ ಅಚ್ಚರಿಯ ಬದಲಾವಣೆಗಳನ್ನ ಮಾಡಿದ್ದಾರೆ. ಌಂಡ್ ಹಾರ್ದಿಕ್ ಪಾಂಡ್ಯ ಕೆಕೆಆರ್ ಕ್ಯಾಪ್ಟನ್ ಆಗೋ ಚಾನ್ಸಸ್ ಇದೆ. ಇದೆಲ್ಲದ್ರ ನಡುವೆ ಮುಂಬೈಗೆ ಗುಡ್ ನ್ಯೂಸ್ ಕೂಡ ಸಿಕ್ಕಿದೆ.

ಇದನ್ನೂ ಓದಿ : NZಗೆ ನರಕ ತೋರಿಸಿದ ಭಾರತ – ಶಪಥ ಮಾಡಿದ್ದವರ SHAPE OUT

ಮುಂಬೈ ಇಂಡಿಯನ್ಸ್ ಅಂದ್ರೇನೆ ಐಪಿಎಲ್​ನಲ್ಲಿ ಲೆಜೆಂಡರಿಗಳ ಟೀಂ. ಪ್ಲೇಯರ್​ಗಳಿಂದ ಹಿಡ್ದು ಕೋಚಿಂಗ್ ಸ್ಟಾಫ್ಸ್​ವರೆಗೂ ದಿ ಬೆಸ್ಟ್ ಅನ್ನೋವ್ರನ್ನೇ ಪಿಕ್ ಮಾಡೋದು. ಈಗ ನೆಕ್ಸ್​ಟ್ ಸೀಸನ್​ಗೆ ಕೋಚಿಂಗ್ ವಿಭಾಗದಲ್ಲಿ ಅಚ್ಚರಿಯ ನಿರ್ಧಾರಗಳನ್ನ ಕೈಗೊಂಡಿದ್ದಾರೆ. ಇತ್ತೀಚೆಗೆ ಮುಖ್ಯ ಕೋಚ್ ಆಗಿ ಕೀರನ್ ಪೊಲಾರ್ಡ್ ರನ್ನ ಅಪಾಯಿಂಟ್ ಮಾಡಲಾಗಿತ್ತು. ಈಗ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳಿಗೂ ಗೇಟ್ ಪಾಸ್ ಕೊಟ್ಟು ಹೊಸಬರನ್ನ ನೇಮಕ ಮಾಡಿದ್ದಾರೆ. ವರ್ಷಗಟ್ಟಲೆ ಠಿಕಾಣಿ ಹೂಡಿದ್ದವ್ರನ್ನ ಕೊನೆಗೂ ರಿಲೀಸ್ ಮಾಡಿದ್ದಾರೆ.

ಲಸಿತ್ ಮಲಿಂಗಾಗೆ ಗೇಟ್ ಪಾಸ್.. ರಾಬಿನ್ ಉತ್ತಪ್ಪ ಬ್ಯಾಟಿಂಗ್ ಕೋಚ್!

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಂದ್ರೇನೇ ಹಾಗೇ. ಅಲ್ಲೇನಿದ್ರೂ ಫೀಲ್ಡ್​ನಲ್ಲಿ ಆಡೋರು ಡಗೌಟ್​ನಲ್ಲೇ ಕೂರೋರು ಕೂಡ ದಿಗ್ಗಜರೇ ಇರ್ತಾರೆ. ಭಾರತೀಯ ತಂಡದಲ್ಲಿ ಆಡುವವರ ದಂಡೇ ಕಾಣುತ್ತೆ. ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳೋ ಸಚಿನ್ ತೆಂಡೂಲ್ಕರ್ ತಂಡದ ಮೆಂಟರ್ ಆಗಿದ್ದಾರೆ. ಇನ್ನು ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್ ಹೀಗೆ ಸಾಕಷ್ಟು ಪ್ಲೇಯರ್ಸ್ ಕಾಣ್ತಾರೆ. ಕೋಚಿಂಗ್ ಸ್ಟಾಫ್ಸ್​ನಲ್ಲೂ ಕೂಡ ಘಟಾನುಘಟಿಗಳೇ. ಯಾಕಂದ್ರೆ ಮುಂಬೈ ಫ್ರಾಂಚೈಸಿ ಯಾವತ್ತೂ ಕೂಡ ಬೆಸ್ಟ್​ನಲ್ಲೇ ಬೆಸ್ಟ್​ ಅನ್ನೋರನ್ನೇ ಪಿಕ್ ಮಾಡೋದು. ಆದ್ರೆ ಕಳೆದ ಮೂರು ಆವೃತ್ತಿಗಳಿಂದ ತಂಡದ ಪರ್ಫಾಮೆನ್ಸ್ ಪಾತಾಳಕ್ಕೆ ಇಳಿದಿದೆ. ಹೀಗಾಗಿ ಮೊದ್ಲಿಗೆ ತಂಡದಲ್ಲಿ ಕೋಚಿಂಗ್ ಸ್ಟಾಫ್ಸ್ ವಿಭಾಗದಲ್ಲಿ ಸರ್ಜರಿಯನ್ನೇ ಮಾಡಿದ್ದಾರೆ.

ಹಳಬರು ಔಟ್.. ಹೊಸಬರು ಇನ್!

ಮೇಹಲ ಜಯವರ್ಧನೆ ಜಾಗಕ್ಕೆ ಕೀರನ್ ಪೊಲಾರ್ಡ್ ಕೋಚ್ ಆಗಿ ನೇಮಕ

ಒಟ್ಟು 9 ಸೀಸನ್‌ಗಳು.. ಎರಡು ಅವಧಿಗಳಲ್ಲಿ: 2017-2022 ಮತ್ತು 2024-2026

ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಜಾಗಕ್ಕೆ ಮಿಚೆಲ್ ಮೆಕ್ಲೆನಗನ್ ಸೆಲೆಕ್ಟ್

3 ಸೀಸನ್‌ ಗಳು.. 2023ರಲ್ಲಿ ನೇಮಕ.. 2024 ರಿಂದ 2026 ರವರೆಗೆ ಸೇವೆ

ಕೀರನ್ ಪೊಲಾರ್ಡ್ ಹೆಡ್ ಕೋಚ್ ಆಗಿದ್ದಕ್ಕೆ ರಾಬಿನ್ ಉತ್ತಪ್ಪ ಬ್ಯಾಟಿಂಗ್ ಕೋಚ್

ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಕಾರ್ಲ್ ಹಾಪ್ಕಿನ್ಸನ್ ಔಟ್.. ಟಿ.ದಿಲೀಪ್ ನೇಮಕ

2 ಸೀಸನ್‌ ಗಳು.. 2025ರ ಸೀಸನ್‌ ಗಿಂತ ಮುನ್ನ ಸೇರ್ಪಡೆಯಾಗಿದ್ದ ಹಾಪ್ಕಿನ್ಸನ್

ಹೆಚ್ಚುವರಿ ಬೌಲಿಂಗ್ ಕೋಚ್ ಆಗಿದ್ದ ಪಾರಸ್ ಮಾಂಬ್ರೆಯನ್ನೂ ಕೈಬಿಟ್ಟ ಫ್ರಾಂಚೈಸಿ

ಡೆವಲಪ್‌ ಮೆಂಟ್ ಬೌಲಿಂಗ್ ಕೋಚ್ ಆಗಿ ಧವಳ್ ಕುಲಕರ್ಣಿಗೆ ಹೊಸ ಹುದ್ದೆ

ಹೀಗೆ ವರ್ಷಗಟ್ಟಲೆ ಮುಂಬೈ ಕ್ಯಾಂಪ್​ನಲ್ಲಿದ್ದ ಕೋಚಿಂಗ್ ಸಿಬ್ಬಂದಿಯನ್ನ ಕೈಬಿಟ್ಟು ಬೇರೆಯವ್ರನ್ನ ಅಪಾಯಿಂಟ್ ಮಾಡಿದ್ದಾರೆ. ಹೊಸದಾಗಿ ಬಂದಿರುವ ಉತ್ತಪ್ಪ, ಮೆಕ್ಲೆನಗನ್ ಮತ್ತು ಕುಲಕರ್ಣಿ ಅವರು ಈ ಹಿಂದೆ ಆಟಗಾರರಾಗಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದವರು. ಸೋ ಅಲ್ಲಿಗೆ ಒನ್ಸ್ ಅಗೇಗ್ ತಂಡದ ಜೊತೆಗೆ ನಂಟು ಇರುವವರನ್ನೇ ಪಿಕ್ ಮಾಡಿದ್ದಾರೆ. ಹಾಗೇ ಆಟಗಾರರ ವಿಚಾರದಲ್ಲೂ ಬದಲಾವಣೆಯ ಗಾಳಿ ಬೀಸಿದಂತಿದೆ.

ಹಾರ್ದಿಕ್ ಪಾಂಡ್ಯ ಔಟ್.. ರೋಹಿತ್ ಗೆ ಮತ್ತೆ ಕ್ಯಾಪ್ಟನ್ಸಿ?

ಮುಂಬೈ ಇಂಡಿಯನ್ಸ್‌ನಲ್ಲಿ ಸದ್ಯ ಮತ್ತೊಂದು ದೊಡ್ಡ ಬದಲಾವಣೆಯ ಗಾಳಿ ಬೀಸ್ತಿದೆ. ಕಳೆದ ಮೂರು ಸೀಸನ್‌ಗಳಿಂದ ತಂಡವನ್ನು ಲಿಡ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಮುಂದಿನ ಆವೃತ್ತಿಗೆ ತಂಡದಿಂದ ಹೊರಬೀಳೋ ಸಾಧ್ಯತೆಗಳು ಜಾಸ್ತಿ ಇದೆ. ಈಗಾಗ್ಲೇ ಅವ್ರ ಟ್ರೇಡಿಂಗ್ ವಿಚಾರದಲ್ಲೂ ಸಾಕಷ್ಟು ಫ್ರಾಂಚೈಸಿಗಳು ಇಂಟ್ರೆಸ್ಟ್ ತೋರಿಸಿದ್ದು ಫೈನಲ್ ಆಗಿಲ್ಲ. ಸೋ ಡೈರೆಸ್ಟ್ ಟ್ರೇಡ್ ಡೀಲ್ ಅಥವಾ ಸ್ವ್ಕ್ಯಾಪ್ ಡೀಲ್ ಆಗದೇ ಇದ್ರೆ ಬಹುಶಃ ಮಿನಿ ಆಕ್ಷನ್​ಗೆ ರಿಲೀಸ್ ಮಾಡಿದ್ರೂ ಮಾಡ್ಬೋದು. ಇನ್ನು ಪಾಂಡ್ಯ ವಿಚಾರದಲ್ಲಿ ಮಾಜಿ ಆಟಗಾರ ಆರ್.ಅಶ್ವಿನ್ ಅಚ್ಚರಿಯ ಪ್ರೆಡಿಕ್ಷನ್ ಮಾಡಿದ್ದಾರೆ. ಐದು ಬಾರಿ ಮುಂಬೈಗೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್ ಶರ್ಮಾ ಮತ್ತೆ ನಾಯಕನಾಗುವ ಸಾಧ್ಯತೆ ಜಾಸ್ತಿ ಇದೆ ಎಂದಿದ್ದಾರೆ. ರೋಹಿತ್ ಶರ್ಮಾ ಮತ್ತು ತಿಲಕ್ ವರ್ಮಾ 2027ರ ನಾಯಕತ್ವದ ರೇಸ್​ನಲ್ಲಿದ್ದಾರೆ. ಒಂದು ವೇಳೆ ಹಾರ್ದಿಕ್ ತಂಡದಲ್ಲೇ ಉಳಿದ್ರೂ ನಾಯಕತ್ವ ಮುಂದುವರಿಸುವುದು ಅನುಮಾನ ಎನ್ನಲಾಗಿದೆ. ಹಾಗೇ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರ ಬಂದ್ರೆ ಕೆಕೆಆರ್​ಗೆ ಕ್ಯಾಪ್ಟನ್ ಆಗ್ಬೋದು ಎನ್ನುವ ಪ್ರೆಡಿಕ್ಷನ್ ಕೂಡ ಮಾಡಿದ್ದಾರೆ. ಅಜಿಂಕ್ಯ ರಹಾನೆ ಕೆಕೆಆರ್ ಕ್ಯಾಪ್ಟನ್ ಆಗಿದ್ದು ಮುಂದಿನ ಆವೃತ್ತಿಗೆ ಬದಲಾವಣೆ ಮಾಡ್ಬೋದು. ಸೋ ಹಾರ್ದಿಕ್ ಬೆಸ್ಟ್ ಚಾಯ್ಸ್ ಅನ್ನೋದು ಅಶ್ವಿನ್ ಮಾತು. ಒಟ್ನಲ್ಲಿ ಮುಂಬೈ ಇಂಡಿಯನ್ಸ್ ತನ್ನ ಗತವೈಭವಕ್ಕಾಗಿ ಈಗಾಗ್ಲೇ ಸಾಕಷ್ಟು ದೃಢ ನಿರ್ಧಾರಗಳನ್ನ ಕೈಗೊಂಡಿದೆ. ತಂಡದ ಕೋಚಿಂಗ್ ಸಿಬ್ಬಂದಿ ಸಂಪೂರ್ಣ ಬದಲಾದ ಬೆನ್ನಲ್ಲೇ ನಾಯಕತ್ವದ ಬದಲಾವಣೆಯೂ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದ್ರೆ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಆಫರ್ ಮತ್ತೆ ಒಪ್ಪಿಕೊಳ್ತಾರಾ ಅನ್ನೋದೇ ಇಲ್ಲಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *