ರೋಹಿತ್ ಮತ್ತು ಸೂರ್ಯವಂಶಿ ವಿಶ್ವಕಪ್ ಓಪನರ್ಸ್ – ಟೀಂ ಇಂಡಿಯಾಗೆ ಭುವನೇಶ್ವರ್ ಕಂ ಬ್ಯಾಕ್?

ರೋಹಿತ್ ಮತ್ತು ಸೂರ್ಯವಂಶಿ ವಿಶ್ವಕಪ್ ಓಪನರ್ಸ್ – ಟೀಂ ಇಂಡಿಯಾಗೆ ಭುವನೇಶ್ವರ್ ಕಂ ಬ್ಯಾಕ್?

2027ರ ಏಕದಿನ ವಿಶ್ವಕಪ್ ನಲ್ಲಿ ಭಾರತದ ಪರ ತಂಡದಲ್ಲಿ ಯಾವೆಲ್ಲಾ ಆಟಗಾರರು ಇರ್ಬೇಕು ಯಾರಿಗೆ ಚಾನ್ಸ್ ಕೊಡ್ಬೇಕು ಅನ್ನೋ ಬಗ್ಗೆ ಪದೇಪದೆ ಚರ್ಚೆಯಾಗ್ತಾನೇ ಇರುತ್ತೆ. ಹಾಗೇ ಮಾಜಿ ಕ್ರಿಕೆಟರ್​ಗಳು ತಮ್ಮದೇ ಌಂಗಲ್​ನಲ್ಲಿ 15 ಜನರ ಸ್ಕ್ವಾಡ್​ನಲ್ಲಿ ಯಾರನ್ನೆಲ್ಲಾ ಸೆಲೆಕ್ಟ್ ಮಾಡ್ಬೋದು ಅನ್ನೋದನ್ನ ಪ್ರೆಡಿಕ್ಟ್ ಮಾಡ್ತಿರ್ತಾರೆ. ಈಗ ರಾಬಿನ್ ಉತ್ತಪ್ಪ ಸೆಲೆಕ್ಟ್ ಮಾಡಿರೋ ತಂಡ ಅಚ್ಚರಿ ಮೂಡಿಸುವಂತಿದೆ. ಌಂಡ್ ಇದನ್ನ ಅವ್ರ ವರ್ಲ್ಡ್ ಕಪ್ ಗನ್ ಎಂದಿದ್ದಾರೆ. ಸೆನ್ಸೇಷನಲ್ ಬ್ಯಾಟರ್​ ಸೂರ್ಯವಂಶಿ ಌಂಡ್ ಸ್ವಿಂಗ್ ಕಿಂಗ್ ಭುವಿಗೂ ಚಾನ್ಸ್ ಕೊಟ್ಟಿದ್ದಾರೆ.

ಇದನ್ನೂ ಓದಿ : ನಾಚಿಕೆ ಬಿಟ್ಟ KL ರಾಹುಲ್ – ಕಿರಿಯರಿಂದ ಕಲಿಯುತ್ತೇನೆ ಎಂದಿದ್ದೇಕೆ?

2027ರ ವಿಶ್ವಕಪ್​ಗೆ ಇನ್ನೂ ಒಂದು ವರ್ಷಕ್ಕಿಂತ ಜಾಸ್ತಿ ಟೈಂ ಇದೆ. ಮುಂದಿನ ವರ್ಷ ಅಕ್ಟೋಬರ್​ನಲ್ಲಿ ಟೂರ್ನಿ ಸ್ಟಾರ್ಟ್ ಆಗಲಿದೆ. ಈ ಟೂರ್ನಿಗೆ ಭಾರತ ಕೂಡ ಈಗಿನಿಂದಲೇ ಟೀಂ ಫೈನಲ್ ಮಾಡೋಕೆ ನಾನಾ ಲೆಕ್ಕಾಚಾರಗಳನ್ನ ಹಾಕ್ತಿದೆ. 2011ರಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ 2023ರಲ್ಲಿ ಫೈನಲ್​ನಲ್ಲಿ ಜಸ್ಟ್ ಮಿಸ್ ಆಗಿತ್ತು. ಆಸ್ಟ್ರೇಲಿಯಾ ಮ್ಯಾಚ್ ಗೆದ್ದು ದಾಖಲೆಯ ಆರನೇ ಪ್ರಶಸ್ತಿಗೆ ಮುತ್ತಿಟ್ಟಿದ್ರು. ಬಟ್ 2027ಕ್ಕೆ ಟ್ರೋಫಿ ಮಿಸ್ ಆಗ್ಲೇಬಾರದು ಅನ್ನೋ ಹಠಕ್ಕೆ ಬಿದ್ದಿರೋ ಭಾರತ ಅದಕ್ಕಾಗಿ ಈಗಾಗ್ಲೇ ಸಿದ್ಧತೆಯನ್ನೂ ಶುರು ಮಾಡಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಈ ಶೋಪೀಸ್ ಈವೆಂಟ್‌ಗೆ ರಾಬಿನ್ ಉತ್ತಪ್ಪ ಅಚ್ಚರಿಯ ರೀತಿಯಲ್ಲಿ ಟೀಂ ಸೆಲೆಕ್ಟ್ ಮಾಡಿದ್ದಾರೆ.

2027ರ ವಿಶ್ವಕಪ್ ಗನ್ ಟೀಂ!

ಆರಂಭಿಕ ಬ್ಯಾಟರ್ಸ್ : ರೋಹಿತ್ ಶರ್ಮಾ, ಶುಭ್ ಮನ್ ಗಿಲ್, ವೈಭವ್ ಸೂರ್ಯವಂಶಿ

ಮಧ್ಯಮ ಕ್ರಮಾಂಕ : ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಸಂಜು ಸ್ಯಾಮ್ಸನ್

ಆಲ್ ರೌಂಡರ್ಸ್ & ಸ್ಪಿನ್ : ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್

ವೇಗದ ಬೌಲರ್ಸ್ : ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್

ಹೀಗೆ ನಾಲ್ಕು ಕೋಟಾಗಳಲ್ಲಿ ಒಟ್ಟಾರೆ 15 ಆಟಗಾರರನ್ನ ರಾಬಿನ್ ಉತ್ತಪ್ಪ ಸೆಲೆಕ್ಟ್ ಮಾಡಿದ್ದಾರೆ. ಹಾಗೇ ಈ ತಂಡಕ್ಕೆ ಅವ್ರು ಬಾಂಬ್ ಸ್ಕ್ವಾಡ್ ಅಂತಾ ಹೆಸರನ್ನೂ ಇಟ್ಟಿದ್ದಾರೆ. ಇದೇ ಆಟಗಾರರನ್ನ ಏಕದಿನ ವಿಶ್ವಕಪ್ ತಂಡದಲ್ಲಿ ಫೈನಲ್ ಮಾಡಿ ಮುಂದಿನ 1 ವರ್ಷ ಟೀಂ ಚೇಂಜ್ ಮಾಡದೆ ಆಡಿಸಿದ್ರೆ 2027ರ ಏಕದಿನ ವಿಶ್ವಕಪ್ ಆಡಲು ಪರ್ಫೆಕ್ಟ್ ಟೀಂ ಆಗುತ್ತೆ ಅನ್ನೋ ಸಜೇಷನ್ ನೀಡಿದ್ದಾರೆ. 2027ರ ಏಕದಿನ ವಿಶ್ವಕಪ್ ವೇಳೆಗೆ ಟೀಂ ಇಂಡಿಯಾ ಒಟ್ಟು 14 ಅಧಿಕೃತ ಏಕದಿನ ಪಂದ್ಯಗಳನ್ನು ಆಡಬೇಕಿದೆ. ಬಿಸಿಸಿಐ ರಿಲೀಸ್ ಮಾಡಿರೋ 2026-27ರ ಅಧಿಕೃತ ವೇಳಾಪಟ್ಟಿ ಹಾಗೂ ಐಸಿಸಿಯ ಎಫ್​ಟಿಪಿ ಅಂದ್ರೆ ಫ್ಯೂಚರ್ ಟೂರ್ಸ್ ಪ್ರೋಗ್ರಾಂ ಪ್ರಕಾರವೇ ಈ ಪಂದ್ಯಗಳು ನಡೆಯಲಿವೆ. ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯ, ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ, ಹಾಗೇ ಶ್ರೀಲಂಕಾ ವಿರುದ್ಧ 3 ಪಂದ್ಯ, ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಸರಣಿ. ಸೋ ಟೋಟಲ್ಲಾಗಿ ನಾಲ್ಕು ಸರಣಿಗಳಿಂದ ಒಟ್ಟು 14 ಪಂದ್ಯಗಳನ್ನ ಭಾರತ ಆಡ್ಬೇಕಿದೆ. ಇಷ್ಟೇ ಅಲ್ಲದೆ ವಿಶ್ವಕಪ್ ದೃಷ್ಟಿಯಿಂದ ವಾರ್ಮ್ ಅಪ್ ಪಂದ್ಯಗಳಾಗಿ ಹೆಚ್ಚುವರಿ ತ್ರಿಕೋನ ಏಕದಿನ ಸರಣಿಗಳನ್ನ ಆಡೋ ಚಾನ್ಸಸ್ ಕೂಡ ಇರುತ್ತೆ. ಒಟ್ನಲ್ಲಿ ಟೀಂ ಇಂಡಿಯಾಗೆ ಸದ್ಯ ಇರೋ ಮೇನ್ ಟಾಸ್ಕ್ ಅಂದ್ರೆ ಅದು 2027ರ ಏಕದಿನ ವಿಶ್ವಕಪ್. ಅದಕ್ಕಾಗಿ ಒಂದು ಸರ್ವಸಮರ್ಥ ಹಾಗೇ ಬಲಿಷ್ಠ ತಂಡವನ್ನೇ ಫೈನಲ್ ಮಾಡ್ಬೇಕಿದೆ. ಇದಕ್ಕೆ ರಾಬಿನ್ ಉತ್ತಪ್ಪ ಕೂಡ ತಮ್ಮದೇ ಸ್ಟೈಲಲ್ಲಿ ಟೀಂ ಸೆಲೆಕ್ಟ್ ಮಾಡಿದ್ದಾರೆ.

Shantha Kumari

Leave a Reply

Your email address will not be published. Required fields are marked *