ಶಿವರಾತ್ರಿ ಜಾಗರಣೆ ಮಾಡಿದವರಿಗೆ ಬಿಗ್ ಶಾಕ್! – ಮನೆಯಲ್ಲಿದ್ದ 154 ಗ್ರಾಂ ಚಿನ್ನ, 270 ಗ್ರಾಂ ಬೆಳ್ಳಿ ಕಳ್ಳತನ

ದೇಶದಾದ್ಯಂತ ಶಿವರಾತ್ರಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗಿದೆ. ಅನೇಕ ಕಡೆಗಳಲ್ಲಿ ರಾತ್ರಿಯಿಡಿ ಜಾಗರಣೆ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಯಲ್ಲಿರುವ ಚಿನ್ನ, ಬೆಳ್ಳಿ ದರೋಡೆ ಮಾಡಿದ್ದಾರೆ.
ಇದನ್ನೂ ಓದಿ: ಡಿಬಾಸ್ 49ನೇ ಹುಟ್ಟುಹಬ್ಬ – ದರ್ಶನ್ ಬರ್ತ್ ಡೇಗೆ ವಿಜಯಲಕ್ಷ್ಮೀ, ವಿನೀಶ್ ಸ್ವೆಷಲ್ ವಿಶ್!
ಈ ಘಟನೆ ವಿಜಯಪುರ ನಗರದ ಶಾರದಾ ನಗರದಲ್ಲಿ ನಡೆದಿದೆ. ಸೋಮಶೇಖರ ಗಣಿ ಎಂಬವರ ಮನೆ ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ.
ಸೋಮಶೇಖರ ಗಣಿ ಅವರ ಮನೆಯವರು ಶಿವರಾತ್ರಿ ಜಾಗರಣೆಗೆಂದು ಮನೆಗೆ ಬೀಗ ಹಾಕಿ ಶಿವಗಿರಿಗೆ ತೆರಳಿದ್ದರು. ಇಂಡಿಯಾ – ಪಾಕ್ ಟಿ20 ಕ್ರಿಕೆಟ್ ಮ್ಯಾಚ್ ಇದ್ದ ಕಾರಣ ಬೀದಿಯಲ್ಲೂ ಜನರಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಸದ್ಯ ಸ್ಥಳಕ್ಕೆ ಗೋಲಗುಂಬಜ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು, ಶ್ವಾನದಳ ತಂಡಗಳಿಂದಲೂ ಪರೀಕ್ಷೆ ನಡೆದಿದೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೋಡಿರಿ

