RO-KO ಕೆಣಕಿ ಕೆಟ್ಟ ಗಂಭೀರ್ – ಕೋಚ್ ಸ್ಥಾನದಿಂದ OUT?
ದಿಢೀರ್ ಸಭೆ ಕರೆದ BCCI

RO-KO ಕೆಣಕಿ ಕೆಟ್ಟ ಗಂಭೀರ್ – ಕೋಚ್ ಸ್ಥಾನದಿಂದ OUT?ದಿಢೀರ್ ಸಭೆ ಕರೆದ BCCI

ಸೌತ್ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರೋ ಭಾರತ ಎರಡನೇ ಪಂದ್ಯಕ್ಕೆ ಸಜ್ಜಾಗ್ತಿದೆ. ಆದ್ರೆ ಬಿಸಿಸಿಐನಲ್ಲಿ ಮಾತ್ರ ಮೇಜರ್ ಡವಲಪ್​ಮೆಂಟ್​ಗಳೇ ಆಗ್ತಿವೆ. ಎರಡನೇ ಪಂದ್ಯಕ್ಕೂ ಮುನ್ನ ದಿಢೀರ್ ಸಭೆ ಕರೆಯಲಾಗಿದೆ. ಒಂದ್ಕಡೆ ರೋಹಿತ್, ಕೊಹ್ಲಿ ಆರ್ಭಟ, ಮತ್ತೊಂದ್ಕಡೆ ಗೌತಮ್ ಗಂಭೀರ್ ಆಟ ಎಲ್ಲರ ತಲೆಕೆಡಿಸಿದೆ. ಗೌತಮ್ ಗಂಭೀರ್ ಭಾರತ ತಂಡಕ್ಕೆ ಹೆಡ್ ಕೋಚ್ ಆದ್ಮೇಲೆ ಎಲ್ಲವೂ ಸರಿ ಇಲ್ಲ ಅನ್ನೋದು ಅವಗವಾಗ ಸದ್ದು ಮಾಡ್ತಾನೇ ಇರುತ್ತೆ. ಹಾಗೇ ಗೌತಮ್ ಗಂಭೀರ್ ಅವ್ರ ಸರ್ವಾಧಿಕಾರ ಸೀನಿಯರ್ಸ್​ಗೆ ಇಷ್ಟ ಆಗ್ತಿಲ್ಲ. ಅದ್ರಲ್ಲೂ ರೋಹಿತ್ ಮತ್ತು ಕೊಹ್ಲಿ ಹಾಗೇ ಗಂಭೀರ್ ನಡುವೆ ಮುನಿಸು ಇರೋದಂತೂ ಸತ್ಯ. ಈಗ ಅದೇ ವಿಚಾರವಾಗಿ ದೊಡ್ಡ ಬೆಳವಣಿಗೆಗಳೇ ಆಗ್ತಿವೆ. ಎರಡನೇ ಪಂದ್ಯಕ್ಕೂ ಮುನ್ನ ಬಿಸಿಸಿಐ ದಿಢೀರ್ ಸಭೆ ಕರೆದಿದ್ದು ತಲೆದಂಡದ ಚರ್ಚೆ ಶುರುವಾಗಿದೆ.

ಇದನ್ನೂ ಓದಿ : ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದವರಿಗೆ 6 ಕೋಟಿ – ಸರ್ಕಾರಿ ಕೆಲಸ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ

ರೋಕೊ ಮತ್ತು ಗಂಭೀರ್ ನಡುವೆ ಕಮ್ಯುನಿಕೇಷನ್ ಪ್ರಾಬ್ಲಂ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ತಂಡದಲ್ಲಿ ಮಾತ್ರ ಕಂಟಿನ್ಯೂ ಆಗ್ತಿದ್ದಾರೆ. ಇಬ್ಬರು ಲೆಜೆಂಡರಿ ಪ್ಲೇಯರ್ಸ್ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸೋಕೆ ಗಂಭೀರ್ ಕಾರಣ ಅನ್ನೋ ಆರೋಪವಿದೆ. ಹಾಗೇ ಕೋಚ್ ಗಂಭೀರ್ ಮತ್ತು ರೋಹಿತ್, ಕೊಹ್ಲಿ ನಡುವೆ ಶೀತಲ ಸಮರ ನಡೀತಾನೇ ಇದೆ. ಅಂದ್ರೆ ಮೂವರ ನಡುವೆ ಭಿನ್ನಾಭಿಪ್ರಾಯಗಳಿವೆ. ಜೊತೆಗೆ ಕಮ್ಯುನಿಕೇಷನ್ ಗ್ಯಾಪ್ ಜಾಸ್ತಿ ಆಗ್ತಿದೆ. ಇದನ್ನ ಸೀರಿಯಸ್ ಆಗಿ ತಗೊಂಡಿರೋ ಬಿಸಿಸಿಐ ರಾಯ್​ಪುರದಲ್ಲಿ ದಿಢೀರ್ ಸಭೆ ಕರೆದಿದೆ. ಸಭೆಯಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಭಾಗವಹಿಸಲಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಸಹ ಈ ಸಭೆಗೆ ಕರೆಯೋ ಸಾಧ್ಯತೆ ಇದೆ. ಈ ಸಭೆಗೆ ಕಾರಣ ಗೌತಮ್ ಗಂಭೀರ್ ಅವ್ರು ಏಕದಿನ ತಂಡದಿಂದಲೂ ರೋಹಿತ್ ಮತ್ತು ಕೊಹ್ಲಿಯನ್ನ ಹೊರಗಿಡೋ ಚಿಂತನೆಯಲ್ಲಿದ್ದಾರೆ. ಆದ್ರೆ ಇಬ್ಬರು ಲೆಜೆಂಡರಿ ಪ್ಲೇಯರ್ಸ್ ತಮ್ಮ ಆಟದ ಮೂಲಕ ಎಲ್ಲರ ಬಾಯಿ ಮುಚ್ಚಿಸ್ತಿದ್ದಾರೆ. ಇದೇ ಈಗ ಗಂಭೀರ್​ಗೆ ಮುಖಭಂಗ ಉಂಟು ಮಾಡಿದೆ. ಗಂಭೀರ್ ಪ್ಲ್ಯಾನ್ ಫ್ಲಾಪ್ ಆಗ್ತಿದ್ದಂತೆ  ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಬಿರುಕು ಜಾಸ್ತಿಯಾಗ್ತಿದೆ. ಈ ಮೂವರ ನಡುವಿನ ವೈಮನಸ್ಸು ತಂಡದ ಮೇಲೆ ಎಫೆಕ್ಟ್ ಆಗೋ ಸಾಧ್ಯತೆ ಇರೋದ್ರಿಂದ ಮಾತುಕತೆ ಮೂಲಕ ಬಗೆ ಹರಿಸೋಕೆ ಬಿಸಿಸಿಐ ದಿಢೀರ್ ಸಭೆ ಕರೆದಿದೆ. ರಾಂಚಿಯಲ್ಲಿ ಮೊದಲನೇ ಏಕದಿನ ಪಂದ್ಯದ ವೇಳೆ ನಡೆದ ಘಟನೆಗಳೂ ಈ ಸಭೆಗೆ ಕಾರಣ ಆಗಿವೆ.

ಮೊದಲ ಪಂದ್ಯದ ವೇಳೆ ರೋಹಿತ್-ಗಂಭೀರ್ ವಾಗ್ವಾದ!

ಮೊನ್ನೆ ಭಾನುವಾರ ಸೌತ್ ಆಫ್ರಿಕಾ ವಿರುದ್ಧ ಫಸ್ಟ್ ಮ್ಯಾಚ್ ವೇಳೆ ನಡೆದ ರೋಹಿತ್ ಮತ್ತು ಗಂಭೀರ್ ನಡುವಿನ ಮಾತುಕತೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಹಾಗೇ ಇಬ್ಬರ ನಡುವೆ ವಾಗ್ವಾದ ನಡೆದಂತೆ ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇಬ್ಬರ ಹಾವಭಾವ, ಮುಖದ ಮೇಲಿನ ಸಿಟ್ಟು ಗಮನಿಸಿದಾಗ ಭಾರತ ತಂಡದ ಡ್ರೆಸ್ಸಿಂಗ್ ರೂಮ್​ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸ್ಪಷ್ಟವಾಗ್ತಿದೆ.

ಗಂಭೀರ್ ಕಡೆ ತಿರುಗಿಯೂ ನೋಡದ ಕೊಹ್ಲಿ!

ಇನ್ನು ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವೆಯೂ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ವಿರಾಟ್ ಶತಕ ಬಾರಿಸಿದ್ರು. 135 ರನ್ ಗಳಿಸಿದ್ದ ಕೊಹ್ಲಿಯನ್ನ  ಮಾರ್ಕೊ ಜಾನ್ಸೆನ್ ಔಟ್ ಮಾಡಿದರು. ನಂತರ, ಗ್ರೌಂಡ್ ಕ್ಯಾಮೆರಾ ಸೆರೆಹಿಡಿದ ವೀಡಿಯೊ ಕ್ಲಿಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಗಂಭೀರ್ ಡ್ರೆಸ್ಸಿಂಗ್ ಕೋಣೆಯಲ್ಲಿ ಪರಸ್ಪರ ಅಪ್ಪಿಕೊಳ್ಳುವುದನ್ನು ತೋರಿಸಲಾಗಿತ್ತು. ಆದ್ರೆ ಪಂದ್ಯ ಮುಗಿದ ನಂತರದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.  ಯಾಕಂದ್ರೆ ಈ ವಿಡಿಯೋದಲ್ಲಿ ಡ್ರೆಸ್ಸಿಂಗ್ ರೂಂ ಬಾಗಿಲಿನ ಬಳಿ ನಿಂತಿದ್ದ ಗಂಭೀರ್ ಅವರೊಂದಿಗೆ ಕೊಹ್ಲಿ ಮಾತನಾಡಿಲ್ಲ. ಗಂಭೀರ್ ಬಾಗಿಲ ಬಳಿ ನಿಂತಿರೋದು ಕಾಣ್ತಿದ್ದಂತೆ ಮೊಬೈಲ್ ನೋಡುತ್ತಾ ಕೊಹ್ಲಿ ನೇರವಾಗಿ ಡ್ರೆಸ್ಸಿಂಗ್ ರೂಮ್ ಒಳಗೆ ಹೋಗಿದ್ದಾರೆ. ಈ ವೇಳೆ ಗಂಭೀರ್ ಅವರು ಕೊಹ್ಲಿಯನ್ನು ನೋಡುತ್ತಿದ್ದರು. ಇದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೇಕ್ ಸೆಲೆಬ್ರೇಷನ್ ನಲ್ಲೂ ಭಾಗಿಯಾಗದ ಕೊಹ್ಲಿ!

ಇನ್ನು ಮೊದಲ ಪಂದ್ಯವನ್ನ ಗೆದ್ದ ಭಾರತ ತಂಡ ತಂಗಿದ್ದ ಹೋಟೆಲ್ ನಲ್ಲಿ ಹೋಟೆಲ್ ಸಿಬ್ಬಂದಿ ಕೇಕ್ ಕತ್ತರಿಸೋ ಮೂಲಕ ಗೆಲುವನ್ನ ಸೆಲೆಬ್ರೇಟ್ ಮಾಡ್ತಿದ್ರು. ಈ ವೇಳೆ ಕ್ಯಾಪ್ಟನ್ ಕೆಎಲ್ ರಾಹುಲ್ ಕೇಕ್ ಕತ್ತರಿಸಿದ್ದಾರೆ. ಮತ್ತೊಂದ್ಕಡೆ ಗಂಭೀರ್ ಮತ್ತು ರೋಹಿತ್ ಮಾತುಕತೆ ನಡೆಸ್ತಿದ್ರು. ಈ ವೇಳೆ ವಿರಾಟ್ ಕೊಹ್ಲಿ ಅಲ್ಲೇ ಇದ್ರು. ಈ ವೇಳೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹೊಟೆಲ್ ಸಿಬ್ಬಂದಿ ಕರೆದಿದ್ದಾರೆ. ಆದ್ರೆ ಕೊಹ್ಲಿ ಇಲ್ಲ ಎನ್ನುವಂತೆ ಮೊಬೈಲ್ ನೋಡುತ್ತಾ ಸಂಭ್ರಮಾಚರಣೆ ನಿರ್ಲಕ್ಷಿಸಿ ಅಲ್ಲಿಂದ ಹೊರಟಿದ್ದಾರೆ.

ಯಾಕೆ ಈ ಮುನಿಸು?

  1. ಕೋಚ್ ಆಗುವಾಗ್ಲೇ ಸ್ಟಾರ್ ಡಂ ಇಲ್ಲ ಎಂದಿದ್ದ ಗಂಭೀರ್
  2. ಸೀನಿಯರ್ಸ್ ಬೇಡ ಯಂಗ್ ಸ್ಟರ್ಸ್ ಗೆ ಚಾನ್ಸ್ ರೂಲ್ಸ್
  3. ರೋಹಿತ್ & ಕೊಹ್ಲಿಯನ್ನ ಸರಿಯಾಗಿ ನಡೆಸಿಕೊಂಡಿಲ್ಲ
  4. ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳುವಂತೆ ಮಾಡಿದ ಸಿಟ್ಟು
  5. ರವಿಶಾಸ್ತ್ರಿ, ದ್ರಾವಿಡ್ ಜೊತೆಗಿದ್ದ ಹೊಂದಾಣಿಕೆ ಗಂಭೀರ್ ಗಿಲ್ಲ

ಹೀಗೆ ಗಂಭೀರ್ ಹೆಸ್ರಿಗೆ ತಕ್ಕಂತೆ ಯಾವಾಗ್ಲೂ ಗಂಭೀರವಾಗೇ ಇರ್ತಾರೆ. ಗೆದ್ದಾಗ ಫ್ರೆಂಡ್ಲಿಯಾಗಿ ಮಿಂಗಲ್ ಆಗಲ್ಲ. ಆಟಗಾರರ ಜೊತೆ ಬೆರೆಯಲ್ಲ. ಕ್ರೂಶಿಯಲ್ ಟೈಮ್​ಗಳಲ್ಲೂ ಟಿಪ್ಸ್ ಕೊಡಲ್ಲ. ಒಂಥರಾ ಸರ್ವಾಧಿಕಾರಿ ಥರ ಬಿಹೇವ್ ಮಾಡ್ತಾರೆ. ಸೋ ಇದೇ ಈಗ ರೋಹಿತ್-ಕೊಹ್ಲಿಗೂ ಅಡ್ಜಸ್ಟ್ ಆಗೋಕೆ ಆಗ್ತಿಲ್ಲ. ಈ ಎಲ್ಲಾ ಗೊಂದಲ, ಗದ್ಧಲಗಳಿಗೆ ಬ್ರೇಕ್ ಹಾಕೋಕಂತ್ಲೇ ಬಿಸಿಸಿಐ ದಿಢೀರ್ ಸಭೆ ಕರೆದಿದೆ.

Shantha Kumari