ಕ್ರಿಕೆಟ್ ಆಡ್ತಿದ್ದಾರೆ RO-KO – ಜೋಡೆತ್ತು ಏಟಿಗೆ ಗಂಭೀರ್ ಗಿರಗಿರ
KL ರಾಹುಲ್ 12th Man!!!

ಕ್ರಿಕೆಟ್ ಆಡ್ತಿದ್ದಾರೆ RO-KO – ಜೋಡೆತ್ತು ಏಟಿಗೆ ಗಂಭೀರ್ ಗಿರಗಿರKL ರಾಹುಲ್ 12th Man!!!

ವಯಸ್ಸಿನ ನೆಪ ಹೇಳಿದವ್ರೆಷ್ಟೋ.. ಫಿಟ್​ನೆಸ್ ಬಗ್ಗೆ ಪ್ರಶ್ನೆ ಮಾಡಿದವರೆಷ್ಟೋ.. ಯಂಗ್​ಸ್ಟರ್ಸ್ ಆಡ್ಲಿ ಅಂತಾ ಬ್ಯಾಟ್ ಬೀಸಿದವ್ರೆಷ್ಟೋ.. ಆದ್ರೆ ಅದೆಲ್ಲವನ್ನೂ ಮೌನವಾಗೇ ಸಹಿಸಿಕೊಂಡಿದ್ದ ಭಾರತದ ಲೆಜೆಂಡರಿ ಪ್ಲೇಯರ್ಸ್ ಕೊನೆಗೆ ತಮ್ಮ ಕೆಲಸವೇ ಮಾತಾಡುವಂತೆ ಮಾಡಿದ್ದಾರೆ. ಪರ್ಫಾಮೆನ್ಸ್ ಬಗ್ಗೆ ಯಾರೂ ಕೂಡ ಸೊಲ್ಲೆತ್ತದಂತೆ ಉತ್ತರ ಕೊಟ್ಟಿದ್ದಾರೆ. ಏಕದಿನ ಫಾರ್ಮೆಟ್​ನಲ್ಲಿ ಈಗ ರೋಕೋದ್ದೇ ರಾಜ್ಯಭಾರ.

ಇದನ್ನೂ ಓದಿ : ರಿಯಲ್ ALL ROUNDER ಹಾರ್ದಿಕ್ – ಡೇವಿಡ್ ಮಿಲ್ಲರ್ ಗೆ ಪಾಂಡ್ಯನೇ ಕಿಲ್ಲರ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳೆದ ಒಂದೂವರೆ ದಶಕದಿಂದ ಭಾರತದ ಬೆನ್ನೆಲುಬಾಗಿ ನಿಂತಿದ್ದಾರೆ. ಬ್ಯಾಟಿಂಗ್​ನಲ್ಲಿ ಅಷ್ಟೇ ಅಲ್ಲದೆ ಕ್ಯಾಪ್ಟನ್ ಆಗಿ ಇಡೀ ತಂಡವನ್ನ ವರ್ಲ್ಡ್ ಬೆಸ್ಟ್ ಟೀಂ ಮಾಡಿದ್ದಾರೆ. ಆಲ್ರೆಡಿ ಟಿ-20ಐ ಹಾಗೇ ಟೆಸ್ಟ್ ಫಾರ್ಮೆಟ್​ಗೆ ಗುಡ್ ಬೈ ಹೇಳಿದ್ದು ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. 2027ರ ಏಕದಿನ ವಿಶ್ವಕಪ್ ಎತ್ತಿ ಹಿಡಿಯೋದೇ ಈ ದಿಗ್ಗಜದ ಮಹತ್ವದ ಗುರಿಯಾಗಿದೆ. ಹೀಗಿದ್ರೂ ಕೂಡ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಇಬ್ಬರ ನಿವೃತ್ತಿಗೆ ಪರೋಕ್ಷವಾಗೇ ಪ್ರೆಶರ್ ಹಾಕ್ತಿದೆ. ಗೌತಮ್ ಗಂಭೀರ್ ಅಂತೂ ಮುಂಚೂಣಿಯಲ್ಲಿದ್ದಾರೆ. ಆದ್ರೆ ಈಗ ರೋಹಿತ್ ಕೊಹ್ಲಿಯವ್ರ ಅಸಲಿ ಕ್ರಿಕೆಟ್ ಆಟ ಎಲ್ಲರ ಬಾಯಿಗೆ ಬೀಗ ಹಾಕಿಸಿದೆ.

ಏಕದಿನ ಶ್ರೇಯಾಂಕದಲ್ಲಿ ರೋ-ಕೊ ಫಸ್ಟ್ & ಸೆಕೆಂಡ್!

ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲೂ ಧೂಳೆಬ್ಬಿಸಿದ್ದಾರೆ. ನೂತನ ರ್ಯಾಂಕಿಂಗ್ ಲಿಸ್ಟ್​ನಲ್ಲಿ 38 ವರ್ಷದ ರೋಹಿತ್‌ ಶರ್ಮಾ 781 ರೇಟಿಂಗ್‌ ಅಂಕಗಳೊಂದಿಗೆ ಫಸ್ಟ್ ಪ್ಲೇಸ್​ನಲ್ಲಿ ಕಂಟಿನ್ಯೂ ಆಗಿದ್ದಾರೆ. ಌಂಡ್ ನೆಕ್ಸ್​ಟ್ 37 ವರ್ಷದ ಕೊಹ್ಲಿ 773 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಜಂಪ್ ಮಾಡಿದ್ದಾರೆ. ನಾಯಕ ಶುಭ್‌ಮನ್‌ ಗಿಲ್‌ 5ನೇ ಸ್ಥಾನದಲ್ಲಿದ್ರೆ ಶ್ರೇಯಸ್‌ ಅಯ್ಯರ್‌ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಌಂಡ್ ಕೆ.ಎಲ್‌.ರಾಹುಲ್‌ 12ನೇ ಸ್ಥಾನಕ್ಕೇರಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಯಾಪ್ಟನ್ ಆಗಿ ತಂಡವನ್ನ ಲೀಡ್ ಮಾಡಿದ್ದ ರಾಹುಲ್ ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ರು. ಹೀಗಾಗಿ ಐಸಿಸಿ ಬ್ಯಾಟರ್ ಗಳ ರ್ಯಾಂಕಿಂಗ್ ನಲ್ಲಿ ಟೆಲ್ತ್ ಮ್ಯಾನ್ ಆಗಿದ್ದಾರೆ. ಹಾಗೇ ಈ ವರ್ಷ ಭಾರತದ ಪರ ಹೈಯೆಸ್ಟ್ ರನ್ ಸ್ಕೋರರ್​​ಗಳ ಪಟ್ಟಿಯಲ್ಲಿ ಟಾಪ್ 2ನಲ್ಲಿದ್ದಾರೆ. ಕೆಎಲ್ ರಾಹುಲ್ ಈ ವರ್ಷ ಆಡಿದ 24 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 1180 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 3 ಶತಕ ಹಾಗೂ 5 ಅರ್ಧಶತಕಗಳು ಸಹ ಸಿಡಿಸಿದ್ದಾರೆ. ಇನ್ನು ಒಟ್ಟಾರೆ 33 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶುಭಮನ್‌ ಗಿಲ್ 42ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ್ದು, 5 ಶತಕ, 9 ಅರ್ಧಶತಕದ ಸಹಾಯದಿಂದ 1736 ರನ್‌ ಬಾರಿಸಿ ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ಜಗತ್ತಿನಲ್ಲೇ ನಂಬರ್ 2ನಲ್ಲಿದ್ದಾರೆ. ಬಟ್ ಏಕದಿನ ಮಾದರಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಪರ್ಫಾಮೆನ್ಸ್ ಏಕದಿನ ಮಾದರಿಯಲ್ಲಿ ದಿ ಬೆಸ್ಟ್ ಎನ್ನುವಂತಿದೆ. ಹಾಗೇ 2027ರ ವಿಶ್ವಕಪ್​ವರೆಗೂ ರೋಕೋ ತಂಡದಲ್ಲಿ ಇರಲೇಬೇಕು ಎನ್ನುವಂಥ ಸ್ಥಿತಿ ನಿರ್ಮಾಣವಾಗ್ತಿದೆ.

ಏಕದಿನಕ್ಕೆ ರೋ-ಕೊ ಬೇಕೇಬೇಕು!

ಲಾಂಗ್ ಗ್ಯಾಪ್ ಬಳಿಕ ತಂಡಕ್ಕೆ ಬಂದ್ರೂ ಅದ್ಭುತ ಫಾರ್ಮ್

ಆಸೀಸ್ ನಲ್ಲಿ ರೋಹಿತ್ 202 ರನ್.. ಮ್ಯಾನ್ ಆಫ್ ದಿ ಸಿರೀಸ್

ಸೌತ್ ಆಫ್ರಿಕಾ ಸರಣಿಯಲ್ಲಿ ಕೊಹ್ಲಿ 302 ರನ್.. ಸರಣಿ ಶ್ರೇಷ್ಠ

ಉತ್ತಮ ಜೊತೆಯಾಟದ ಮೂಲಕ ಭಾರತಕ್ಕೆ ಬ್ಯಾಟಿಂಗ್ ಶಕ್ತಿ

ಅನುಭವದ ಜೊತೆಗೆ ನಿರ್ಧಾರದ ವೇಳೆ ಕ್ಯಾಪ್ಟನ್ ಗಳಿಗೆ ಸಲಹೆ

ಹೀಗೆ ರೋಕೋ ತಂಡದಲ್ಲಿ ಇದ್ರೆ ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ಭಾರತಕ್ಕೆ ಅಡ್ವಾಂಟೇಜಸ್ ಜಾಸ್ತಿ ಇರುತ್ತೆ. ಈ ಇಬ್ಬರೂ ಭಾರತದ ಪರ 2027ರ ವಿಶ್ವಕಪ್ ಆಡೋದ್ರಿಂದ ಸಾಕಷ್ಟು ಲಾಭಗಳೂ ಇವೆ. ಹೀಗಾಗಿ ಬಿಸಿಸಿಐ ಮತ್ತು ಗೌತಮ್ ಗಂಭೀರ್ ಈ ಇಬ್ಬರ ನಿವೃತ್ತಿ ಬಗ್ಗೆ ಚಿಂತೆ ಮಾಡೋದನ್ನ ಬಿಟ್ಟು ಉಳಿದ ಸ್ಲಾಟ್​ಗಳನ್ನ ಸ್ಟ್ರಾಂಗ್ ಮಾಡಿದ್ರೆ ತವರಿನಲ್ಲೇ ಭಾರತ ವಿಶ್ವಕಪ್ ಎತ್ತಿ ಹಿಡಿಯೋದನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯನೇ ಇಲ್ಲ.

Shantha Kumari