ಗಂಭೀರ್ ಗೆ ಗೊತ್ತಾಯ್ತಾ RO-KO ಗತ್ತು – ಯಂಗ್ ಸ್ಟರ್ಸ್ FORMULA ಫ್ಲಾಪ್!
ಮೊಂಡಾಟ ಬಿಡ್ತಾರಾ ಗೌತಿ?

ಗಂಭೀರ್ ಗೆ ಗೊತ್ತಾಯ್ತಾ RO-KO ಗತ್ತು – ಯಂಗ್ ಸ್ಟರ್ಸ್ FORMULA ಫ್ಲಾಪ್!ಮೊಂಡಾಟ ಬಿಡ್ತಾರಾ ಗೌತಿ?

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಟೀಂ ಇಂಡಿಯಾದಲ್ಲಿ ಆಡೋದು ಎಷ್ಟು ಮುಖ್ಯನೋ ಗೊತ್ತಿಲ್ಲ. ಆದ್ರೆ ಅವ್ರಿಬ್ರೂ ಭಾರತದ ಪರ ಆಡೋದು ತಂಡಕ್ಕೆ ತುಂಬಾನೇ ಮುಖ್ಯ. ಅದು ಆನ್ ಫೀಲ್ಡ್ ಇರ್ಲಿ ಅಥವಾ ಆಫ್ ದಿ ಫೀಲ್ಡ್ ಇರ್ಲಿ. ಈ ಜೋಡೆತ್ತು ಇದ್ರೆ ಭಾರತವನ್ನ ಜಾರೋಕೆ ಬಿಡಲ್ಲ. ಬಿಟ್ರೂ ಮತ್ತೆ ಮೇಲೆತ್ತದೆ ಬಿಡೋ ಮಾತೇ ಉಲ್ಲ. ಕಳೆದ ಎರಡು ಏಕದಿನ ಸರಣಿಗಳಲ್ಲಿ ಇದು ಪ್ರೂವ್ ಕೂಡ ಆಗಿದೆ. ಇವ್ರಿಬ್ಬನ್ನ ಗೌತಮ್ ಗಂಭೀರ್ ಎಷ್ಟೇ ಸೈಡ್​ಲೈನ್ ಮಾಡೋಕೆ ಪ್ರಯತ್ನ ಪಟ್ರೂ ತಿರುಗುಬಾಣವಾಗ್ತಿದೆ. ದಿನದಿಂದ ದಿನಕ್ಕೆ ಅವ್ರು ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗ್ತಿದ್ದಾರೆ. ಕಳೆದ ಎರಡು ಸರಣಿಗಳ ಪ್ರದರ್ಶನವೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.

ಇದನ್ನೂ ಓದಿ : KSCA ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್‌  ಆಯ್ಕೆ – ಕೊಟ್ಟ ಮಾತಿನಂತೆ ಚಿನ್ನಸ್ವಾಮಿಯಲ್ಲಿ IPL ನಡೆಯುತ್ತಾ?

ಕ್ರಿಕೆಟ್​ ಆಡೋಕೆ ಜಸ್ಟ್ ಯಂಗ್​ಸ್ಟರ್ಸ್ ಅಷ್ಟೇ ಇದ್ರೆ ಸಾಕಾಗಲ್ಲ. ಎಕ್ಸ್​ಪೀರಿಯನ್ಸ್ ಹ್ಯಾಂಡ್ಸ್ & ಸೀನಿಯರ್ಸ್ ಕೂಡ ಇರ್ಬೇಕು ಅನ್ನೋದು ಇದಕ್ಕೇ ನೋಡಿ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನ ಏಜ್ ನೆಪ ಹೇಳ್ಕೊಂಡು ಕೆಲವ್ರು ನಿವೃತ್ತಿ ತಗೊಳ್ಳೋಕೆ ಪರೋಕ್ಷವಾಗಿ ಒತ್ತಡ ಹೇರ್ತಿದ್ರು. ಗೌತಮ್ ಗಂಭೀರ್ ಅಂತೂ ನೇರಾನೇರ ಆಪೋಸ್ ಮಾಡ್ತಿದ್ದಾರೆ. ಬಟ್ ಏಜ್ ಈಸ್ ಜಸ್ಟ್ ನಂಬರ್. ನಮ್ಮ ತೋಳುಗಳಲ್ಲಿ ಇನ್ನೂ ತಾಕತ್ತಿದೆ ಅನ್ನೋದನ್ನ ಈ ಜೋಡಿ ಮತ್ತೆ ಜಗತ್ತಿನ ಎದುರು ಸಾಬೀತು ಮಾಡಿದೆ. ಕಳೆದ ಎರಡು ಏಕದಿನ ಸರಣಿಗಳಲ್ಲಿ ಇವ್ರಿಬ್ರ ಮೇಲೆಯೇ ಇಡೀ ಟೀಂ ಡಿಪೆಂಡ್ ಆಗಿರೋದು ಎದ್ದು ಕಾಣ್ತಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಂತೂ ವಿರಾಟ್ ಕೊಹ್ಲಿ ಅಕ್ಷರಶಃ ವಿರಾಟ ರೂಪ ತಾಳಿದ್ರು.

ಬ್ಯಾಕ್ ಟು ಬ್ಯಾಕ್ ಶತಕ.. ಮೂರನೇ ಪಂದ್ಯದಲ್ಲಿ ಅಜೇಯ ಫಿಫ್ಟಿ!

ಕಳೆದ ಆಸ್ಟ್ರೇಲಿಯಾ ಸಿರೀಸ್​ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಡಕ್​ಔಟ್ ಆಗಿದ್ದ ವಿರಾಟ್ ಕೊಹ್ಲಿ ಮೂರನೇ ಪಂದ್ಯದಲ್ಲಿ ಅಜೇಯ ಫಿಫ್ಟಿ ರನ್ಸ್ ಬಾರಿಸಿದ್ರು. ಹೀಗಿದ್ರೂ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ರು. ಬಟ್ ಸೌತ್ ಆಫ್ರಿಕಾ ವಿರುದ್ಧ ವಿಂಟೇಜ್ ವಿರಾಟ್ ಆಟಕ್ಕೆ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿ ಗೇಮ್ ಡಿಸೈಡರ್ ಮ್ಯಾಚಲ್ಲಿ ಅಜೇಯ ಅರ್ಧಶತಕ ಬಾರಿಸಿದ್ರು. ಏಕದಿನ ಪಂದ್ಯಗಳಲ್ಲಿ ಅವರ ಸತತ ನಾಲ್ಕನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ. ಚೇಸ್ ಕಿಂಗ್ ಎಂದೇ ಫೇಮಸ್ ಆಗಿರೋ ಕೊಹ್ಲಿ, ಟಾರ್ಗೆಟ್ ಬೆನ್ನಟ್ಟುವಾಗ ದಾಖಲಿಸಿದ 71ನೇ ಐವತ್ತು ಪ್ಲಸ್ ಸ್ಕೋರ್ ಆಗಿದೆ. ಹೀಗೆ ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಕೊಹ್ಲಿಗೆ ಏಕದಿನ ವೃತ್ತಿಜೀವನದ 12ನೇ ಸರಣಿ ಶ್ರೇಷ್ಠ ಪ್ರಶಸ್ತಿಯೂ ಸಿಕ್ತು.

3 ಪಂದ್ಯಗಳಲ್ಲಿ 300+ ರನ್ಸ್ ಕಲೆ ಹಾಕಿದ ಕಿಂಗ್!

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೂರು ಪಂದ್ಯಗಳಿಂದ 302 ರನ್ ಗಳಿಸಿದ್ದಾರೆ. ಇದರಲ್ಲಿ 24 ಬೌಂಡರಿಗಳು ಮತ್ತು 12 ಸಿಕ್ಸರ್‌ಗಳು ಸೇರಿವೆ. ವಿರಾಟ್ ಕೊಹ್ಲಿ ದ್ವಿಪಕ್ಷೀಯ ಸರಣಿಯಲ್ಲಿ 12 ಸಿಕ್ಸರ್‌ಗಳನ್ನು ಬಾರಿಸಿದ್ದು ಇದೇ ಮೊದಲು. ಈ ಸರಣಿಯ 302 ರನ್‌ಗಳಲ್ಲಿ, ಎರಡು ಶತಕಗಳು ಮತ್ತು ಒಂದು ಅರ್ಧಶತಕವೂ ಸೇರಿದೆ. ಹಾಗೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ, ವಿರಾಟ್ ಕೊಹ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 53 ಶತಕಗಳು ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಶತಕ ಸೇರಿದಂತೆ ಒಟ್ಟಾರೆಯಾಗಿ 84 ಸೆಂಚುರಿ ಬಾರಿಸಿದ್ದಾರೆ.

ದಿಗ್ಗಜರ ಸಾಲಿಗೆ ಸೇರಿದ HITಮ್ಯಾನ್ ರೋಹಿತ್!

ಇನ್ನು ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೂಡ ಅದ್ಭುತ ಫಾರ್ಮ್​ನಲ್ಲಿದ್ದು ಕಳೆದ ಎರಡೂ ಸರಣಿಗಳಲ್ಲಿ ಶೈನ್ ಆಗಿದ್ದಾರೆ. ದಿಗ್ಗಜ ಬ್ಯಾಟರ್​ಗಳ ಪಟ್ಟಿ ಸೇರಿದ್ದಾರೆ. ವಿಶಾಖಪಟ್ಟಣದ ಪಂದ್ಯದಲ್ಲಿ ಫಿಫ್ಟಿ ಬಾರಿಸೋ ಮೂಲಕ

ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜ ಬ್ಯಾಟರ್​ಗಳ ಪಟ್ಟಿ ಸೇರಿದ್ದಾರೆ. 2007 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ರೋಹಿತ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್‌ಗಳನ್ನು ಕಂಪ್ಲೀಟ್ ಮಾಡಿದ್ರು. ಇನ್ನು ಏಕದಿನ ಮಾದರಿಯಲ್ಲೇ 11491ರನ್ಸ್ ಕಲೆ ಹಾಕಿದ್ದಾರೆ. ಈ ಮೂಲಕ ರೋಹಿತ್ & ಕೊಹ್ಲಿಯವ್ರ ಗ್ರಾಫ್ ಮೇಲೇರ್ತಾನೇ ಇದೆ.

2025ರಲ್ಲಿ ಭಾರತ ಪರ ಅತೀಹೆಚ್ಚು ಒಡಿಐ ರನ್ಸ್!

ಸದ್ಯ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಪರ ಏಕದಿನ ಕ್ರಿಕೆಟ್ ಮಾತ್ರ ಆಡ್ತಿದ್ದಾರೆ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಌಂಡ್ ಈ ಮಾದರಿಯಲ್ಲಿ 2025ರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರೂ ಕೂಡ ಇವ್ರಿಬ್ರೇ. ವಿರಾಟ್ ಕೊಹ್ಲಿ ಈ ವರ್ಷ 13 ಏಕದಿನ ಪಂದ್ಯಗಳನ್ನ ಆಡಿದ್ದು 651 ರನ್ ಗಳನ್ನ ಕಲೆ ಹಾಕಿದ್ದಾರೆ.  ರೋಹಿತ್ ಶರ್ಮಾ 14 ಪಂದ್ಯಗಳಲ್ಲಿ 650 ರನ್ ಸ್ಕೋರ್ ಮಾಡಿದ್ದಾರೆ. ಈ ಇಬ್ಬರ ನಡುವೆ ಒಂದು ರನ್ಸ್ ಅಷ್ಟೇ ಡಿಫ್ರೆನ್ಸ್ ಇದೆ. ಈ ಮೂಲಕ 2027ರ ಏಕದಿನ ವಿಶ್ವಕಪ್ ಆಡೋಕೆ ವಿ ಆರ್ ಫಿಟ್ ಌಂಡ್ ಫೈನ್ ಅನ್ನೋದನ್ನ ಈ ನಂಬರ್ಸ್ ಮೂಲಕವೇ ತೋರಿಸಿದ್ದಾರೆ. ಇದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಇವ್ರಿಬ್ರು ಭಾರತದ ಪರ ಆಡೋದು ಬಿಸಿಸಿಐಗೂ ಲಾಭವೇ ಇದೆ.

ರೋ-ಕೊ ಮಹತ್ವ!

ಕಳೆದ ಒಂದೂವರೆ ದಶಕದ ಅನುಭವ ತಂಡಕ್ಕೆ ಪ್ಲಸ್

ಕ್ಯಾಪ್ಟನ್ ಯಾರೇ ಆಗಿದ್ರೂ ಸರಿಯಾದ ಸಲಹೆ

ಲೆಜೆಂಡರಿ ಪ್ಲೇಯರ್ಸ್ ಯಂಗ್ ಸ್ಟರ್ಸ್ ಗೆ ಸ್ಪೂರ್ತಿ

ಏಕದಿನ ಮಾದರಿಯಲ್ಲಿ ಅದ್ಭುತ ಫಾರ್ಮ್ ನಲ್ಲಿದ್ದಾರೆ

2023ರ ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ

ರೋ-ಕೊ ತಂಡದಲ್ಲಿದ್ರೆ ಅಭಿಮಾನಿಗಳಿಂದಲೂ ಸಪೋರ್ಟ್

ಆದ್ರೆ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಇವ್ರಿಬ್ರನ್ನ ಯಾಕೋ ಪರ್ಸನಲ್ ಆಗಿ ತಗೊಳ್ತಿದ್ದಾರೆ. ಆದ್ರೆ ಅವ್ರ ಈಗೋ ಪಕ್ಕಕ್ಕಿಟ್ಟು ಟೀಂ ಇಂಡಿಯಾ ಅಂತಾ ನೋಡ್ದಾಗ ಗೆಲ್ಲೋದಷ್ಟೇ ಮುಖ್ಯ ಆಗಿರುತ್ತೆ. ಬಟ್ ಒಂದಂತೂ ಸತ್ಯ. ಏಕದಿನ ಮಾದರಿಯಲ್ಲಿ ಉಳಿದ ಎಲ್ಲಾ ಆಟಗಾರರಿಗಿಂತ ಇವ್ರಿಬ್ರು ಬೆಸ್ಟ್ ಅನ್ನೋ ಥರನೇ ಪರ್ಫಾಮ್ ಮಾಡ್ತಿದ್ದಾರೆ. ರೋಕೊ ಗತ್ತು ಇನ್ನಾದ್ರೂ ಗಂಭಿರ್​ಗೆ ಗೊತ್ತಾಗ್ಬೇಕಿದೆ. ಸೋ ಈ ಜೋಡೆತ್ತು ಇನ್ನೆರಡು ವರ್ಷ ತಂಡದಲ್ಲಿ ಕಂಟಿನ್ಯೂ ಆದ್ರೂ ಸಮಸ್ಯೆ ಏನಾಗಲ್ಲ.

Shantha Kumari