RO-KO ಫೈರ್ಗೆ ಗಂಭೀರ್ ಗಿರಗಿಟ್ಲೆ – ಫಾರ್ಮ್, ಫಿಟ್ ನೆಸ್, ಬ್ಯಾಟಿಂಗ್ ಪಾಸ್
2027ರ ವಿಶ್ವಕಪ್.. ಕೋಚ್ ಪ್ರಶ್ನೆಗಳೇನು?

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲೇ ಸೋತು ಸರಣಿ ಕಳ್ಕೊಂಡಿದ್ದ ಭಾರತಕ್ಕೆ ಮೂರನೇ ಪಂದ್ಯ ತುಂಬಾನೇ ಸ್ಪೆಷಲ್ ಆಗಿದೆ. ಹಾಗಂತ ಕೊನೇ ಪಂದ್ಯ ಗೆದ್ರು ಅಂತಲ್ಲ. ಈ ಪಂದ್ಯದಲ್ಲಿ ರೋಹಿತ್ & ಕೊಹ್ಲಿ ರಾರಾಜಿಸಿದ್ರು ಅಂತಾ. ಸರಣಿ ಸೋಲಿನ ಬೇಸರವನ್ನೇ ಮರೆಸುವಂತೆ ಪರ್ಫಾಮ್ ಮಾಡಿದ್ದು ಹಿಟ್ಮ್ಯಾನ್ ಌಂಡ್ ರನ್ ಮಷಿನ್. ಇವ್ರಿಬ್ಬರ ಇದೇ ಅಬ್ಬರ ಈಗ ಗಂಭೀರ್ ಮುಂದೆ ಕನ್ಫ್ಯೂಷನ್ಸ್ ಕ್ರಿಯೇಟ್ ಮಾಡಿದೆ. ವಾಟ್ ನೆಕ್ಸ್ಟ್ ಅನ್ನೋ ಪ್ರಶ್ನೆ ಮೂಡಿಸಿದೆ.
ಇದನ್ನೂ ಓದಿ : KKR ತಂಡಕ್ಕೆ ಕೆಎಲ್ ರಾಹುಲ್ ಎಂಟ್ರಿ? – ಮೂರು ಸಮಸ್ಯೆಗೆ ಒಂದೇ ಪರಿಹಾರ ಕಂಡು ಹಿಡಿದ್ರಾ ಶಾರುಖ್ ಖಾನ್?
ನಿವೃತ್ತಿ ಸೊಲ್ಲೆತ್ತಿದವರಿಗೆ ಸಿಡ್ನಿಯಲ್ಲಿ ವಾಂಚಿದ ರೋ-ಕೊ!
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಕಳೆದ 15 ವರ್ಷಗಳಿಂದ ಭಾರತದ ಬ್ಯಾಟಿಂಗ್ ಬೆನ್ನೆಲುಬು. ಆಟಗಾರರಗಾಗಿ, ನಾಯಕರಾಗಿ ಭಾರತವನ್ನ ಯಶಸ್ಸಿನ ಉತ್ತುಂಗಕ್ಕೇರಿಸಿದ್ದಾರೆ. ಇಬ್ಬರೂ ಕೂಡ ಈಗ ತಮ್ಮ ಅಂತಾರಾಷ್ಟ್ರೀಯ ಕೆರಿಯರ್ ಎಂಡಿಂಗ್ನಲ್ಲಿದ್ದಾರೆ. ಆಲ್ರೆಡಿ ಟಿ20ಐ ಮತ್ತು ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದಾರೆ. ಉಳಿದಿರೋದು ಏಕದಿನ ಮಾದರಿ ಮಾತ್ರ. 2027ರ ಏಕದಿನ ವಿಶ್ವಕಪ್ವರೆಗೂ ಆಡ್ಬೇಕು ಅನ್ನೋದು ಈ ಇಬ್ಬರು ಲೆಜೆಂಡರ್ಗಳ ಮಹದಾಸೆ. ಆದ್ರೆ ವಯಸ್ಸಿನ ಕಾರಣ ನೀಡಿ ಇಬ್ಬರನ್ನೂ ಕೂಡ ಇಗ್ನೋರ್ ಮಾಡಲಾಗ್ತಿದೆ. ಸಾಕಷ್ಟು ಜನ ನಿವೃತ್ತಿ ತಗೊಳ್ಳೀ ಅಂತಾ ಸಜೇಷನ್ಸ್ ಕೊಡ್ತಿದ್ದಾರೆ. ಅದ್ರಲ್ಲೂ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಡ್ರೆಸ್ಸಿಂಗ್ ರೂಮ್ನ ವಾತಾವರಣವೇ ಚೇಂಜ್ ಆಗಿದೆ ಅನ್ನೋ ಟಾಕ್ ಇದೆ. ಬಟ್ ಈಗ ವಿದಾಯದ ಸೊಲ್ಲೆತ್ತಿದವ್ರಿಗೆ ಈ ಇಬ್ಬರೂ ಆಟಗಾರರು ತಮ್ಮ ಬ್ಯಾಟಿಂಗ್ ಮೂಲಕವೇ ವಾಂಚಿದ್ದಾರೆ. ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 121 ರನ್ ಗಳಿಸಿ ಅಜೇಯರಾಗಿ ಉಳಿದ್ರೆ ವಿರಾಟ್ ಕೊಹ್ಲಿ 74 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಇಬ್ಬರ ಪಾರ್ಟ್ನರ್ಶಿಪ್ನಲ್ಲಿ 168 ರನ್ಸ್ ಕೂಡ ಬಂತು. ಇದೇ ಬ್ಯಾಟಿಂಗ್ ಖದರ್ ಹತ್ತಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಗಂಭೀರ್ ಮುಂದಿರೋ ಪ್ರಶ್ನೆಗಳು!
- ರೋಹಿತ್ ಮತ್ತು ಕೊಹ್ಲಿ ಭರ್ಜರಿ ಬ್ಯಾಟಿಂಗ್
- 2027ರ ವಿಶ್ವಕಪ್ ವರೆಗೂ ಕಂಟಿನ್ಯೂ ಮಾಡ್ಬೇಕಾ?
- ರೋಹಿತ್ ಗೆ 40 ವರ್ಷ ಮತ್ತು ಕೊಹ್ಲಿಗೆ 38 ವರ್ಷ
- ಹೊಸಬರಿಗೆ ಚಾನ್ಸ್ ಕೊಡಲೆಂದೇ ಗಿಲ್ ಗೆ ಪಟ್ಟ
- ಲೆಜೆಂಡರಿ ಪ್ಲೇಯರ್ಸ್ ಏಕಾಏಕಿ ಕೈಬಿಡೋಕೆ ಆಗಲ್ಲ
ಇಲ್ಲಿ ಟಿ-20ಐ ಹಾಗೇ ಟೆಸ್ಟ್ ಫಾರ್ಮೆಟ್ನಂತೆ ರೋಕೊ ಜೋಡಿ ತಾನೇ ನಿವೃತ್ತಿ ಅನೌನ್ಸ್ ಮಾಡಿದ್ರೆ ಗಂಭೀರ್ಗೆ ಕಷ್ಟ ಆಗ್ತಿರಲಿಲ್ಲ. ಬಟ್ ಅವ್ರಿಬ್ಬರು ಆಡಲೇಬೇಕು ಅನ್ನೋ ಇಂಟೆನ್ಷನ್ನಲ್ಲಿ ಇರೋದ್ರಿಂದ ಮುಂದಿನ ಏಕದಿನ ವಿಶ್ವಕಪ್ಗೆ ಹೇಗೆ ಕಂಟಿನ್ಯೂ ಮಾಡೋದು ಅನ್ನೋ ತಲೆಬಿಸಿ ಮಾಡ್ಕೊಂಡಿದ್ದಾರೆ. ಅದೂ ಅಲ್ದೇ ಈ ಪಂದ್ಯದ ಬಳಿಕ ಸಾಕಷ್ಟು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಕೂಡ 2027ರ ವಿಶ್ವಕಪ್ಗೆ ಈ ಜೋಡಿ ಆಡಲೇಬೇಕು ಅಂತಿದ್ದಾರೆ. ಇದೇ ಈಗ ಗಂಭೀರ್ ಪಾಲಿಗೆ ತಲೆಬಿಸಿಯಾಗಿದೆ.

ನೋಡಿರಿ

