RCB ಕಪ್ ಗೆದ್ರೆ ಪಟಾಕಿ ಹೊಡಿಬೇಡಿ – ಪಂತ್‌ ರಾಜೀನಾಮೆ.. NEXT ಪಾಂಡ್ಯ?
ವೈಭವ್‌ಗೆ ಟೀಂ INDದಲ್ಲಿ ಚಾನ್ಸ್

RCB ಕಪ್ ಗೆದ್ರೆ ಪಟಾಕಿ ಹೊಡಿಬೇಡಿ –  ಪಂತ್‌ ರಾಜೀನಾಮೆ.. NEXT ಪಾಂಡ್ಯ?ವೈಭವ್‌ಗೆ ಟೀಂ INDದಲ್ಲಿ ಚಾನ್ಸ್

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ –ಸಿಎಲ್‌ಪಿ ಸಭೆಯಲ್ಲಿ ಅಧಿಕೃತ ಘೋಷಣೆ

ಚಂಡೀಗಢದಲ್ಲಿ ನಡೆದ ಐಪಿಎಲ್ 2026 ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರಾಜಸ್ಥಾನ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ 2026 ರ IPL ಫೈನಲ್‌ಗೆ ಪ್ರವೇಶಿಸಿದೆ. ನಾಳೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಗುಜರಾತ್, ಹಾಲಿ ಚಾಂಪಿಯನ್ RCB ತಂಡವನ್ನು ಎದುರಿಸಲಿದೆ. RCB ಈ ಹಿಂದೆ ಗುಜರಾತ್ ವಿರುದ್ಧ ಕ್ವಾಲಿಫೈಯರ್ 1 ಗೆದ್ದು ಫೈನಲ್ ತಲುಪಿತ್ತು. ಈಗ ಈ ಎರಡು ತಂಡಗಳ ನಡುವೆ ಪ್ರಶಸ್ತಿ ಕದನ ನಡೆಯಲಿದೆ.

2026ರ ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಗುಜರಾತ್‌ಗೆ ಸಾಕಷ್ಟು ಅನುಕೂಲ ಆಗಲಿದೆ ಎನ್ನಲಾಗ್ತಿದೆ. ಆರ್​ಸಿಬಿ ತಂಡವು ಅಹಮದಾಬಾದ್​ನಲ್ಲಿ ಈವರೆಗೆ 7 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಅಂದರೆ 4 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಈ ಬಾರಿ ಕಣಕ್ಕಿಳಿದಾಗಲೂ ಗುಜರಾತ್ ಟೈಟಾನ್ಸ್ ವಿರುದ್ಧ 4 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಗುಜರಾತ್ ಟೈಟಾನ್ಸ್ ತಂಡವು ತವರು ಮೈದಾನದಲ್ಲಿ ಈವರೆಗೆ 28 ಪಂದ್ಯಗಳನ್ನಾಡಿದ್ದು, 17 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ನಾಳೆ RCB VS GT ವಿರುದ್ಧ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದ ನಂತರ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ  ಟಫ್ ರೂಲ್ಸ್ ಪ್ರಕಟಿಸಿದ್ದಾರೆ. ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ಸಂಭ್ರಮಾಚರಣೆ ಮಾಡುವುದು, ರಸ್ತೆ ತಡೆದು ಬೈಕ್ ರ‍್ಯಾಲಿ ಅಥವಾ ಸ್ಟಂಟ್‌ಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

TOSSಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯದ ಟಾಸ್ ವಿವಾದಕ್ಕೆ ಕಾರಣವಾಗಿದೆ. ಈ ಪಂದ್ಯದ ಟಾಸ್ ಅನ್ನು ಎರಡು ಬಾರಿ ನಡೆಸಲಾಗಿದೆ. ಮೊದಲ ಸಲ ಶುಭ್​ಮನ್ ಗಿಲ್ ನಾಣ್ಯ ಚಿಮ್ಮಿಸಿದರೆ, ರಿಯಾನ್ ಪರಾಗ್ ತಮ್ಮ ನಿರ್ಧಾರ ಹೇಳಿದರು. ಆದರೆ ಪರಾಗ್ ಯಾವ ನಿರ್ಧಾರ ಹೇಳಿದರು ಎಂಬುದು ಮ್ಯಾಚ್ ರೆಫರಿಗೆ ಸರಿಯಾಗಿ ಕೇಳಿಸಲಿಲ್ಲ. ಹೀಗಾಗಿ ರೆಫರಿ ಮೊದಲ ಟಾಸ್ ಅನ್ನು ರದ್ದುಗೊಳಿಸಿ ಎರಡನೇ ಸಲ ಮತ್ತೆ ಟಾಸ್ ಹಾರಿಸಿದ್ರು. ಮೊದಲ ಸಲ ಗಿಲ್ ಟಾಸ್ ಗೆದ್ರೆ, ಎರಡನೇ ಸಲ ಪರಾಗ್ ಟಾಸ್ ವಿನ್ ಆದ್ರು.

ಇಂಡಿಯನ್ ಪ್ರೀಮಿಯರ್ ಲೀಗ್​ನ ಕ್ವಾಲಿಫೈಯರ್-2 ನಲ್ಲಿ ನಡೆದ RR VS GT ಪಂದ್ಯ  ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಏಕಾಂಗಿಯಾಗಿ ಹೋರಾಟ ನಡೆಸಿದರೂ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಒಂದ್ಕಡೆ ಪ್ರಶಸ್ತಿ ಸಮಾರೋಪ ನಡೆಯುತ್ತಿದ್ದರೆ  ಮೊತ್ತೊಂದ್ಕಡೆ ವೈಭವ್ ಏಕಾಂಗಿಯಾಗಿ ಕೂತು ಅಳುತಿರೋ ದೃಶ್ಯ ಕರಳು ಹಿಂಡುವಂತಿತ್ತು.

ವೈಭವ್‌ಗೆ ನರ್ವಸ್ 90 ಭಯ ಕಾಡ್ತಿದ್ಯಾ ಅನ್ನೋ ಪ್ರಶ್ನೆ ಹುಟ್ಟಿದೆ.  ಈ ಸೀಸನ್‌ನಲ್ಲಿ ಸೂರ್ಯವಂಶಿ 3 ಸಲ ಶತಕದಿಂದ ವಂಚಿತರಾಗಿದ್ದಾರೆ.  ಲಕ್ನೋ ವಿರುದ್ಧ 93, ಹೈದರಾಬಾದ್ ವಿರುದ್ಧ 97 ರನ್ ಈಗ ಗುಜರಾತ್ ವಿರುದ್ಧ 96 ರನ್ ಗಳಿಸಿ ಔಟಾಗಿದ್ದಾರೆ.  ಇನ್ನೂ ಶತಕ ಬಾರಿಸು ಅವಕಾಶವಿದ್ದರೂ ಇದನ್ನೂ ತಪ್ಪಿಸಿಕೊಂಡ ವೈಭವ್‌ ಸೂರ್ಯವಂಶಿಗೆ ಡಗೌಟ್‌ನಲ್ಲಿ ನಾಯಕ ನಾಯಕ ರಿಯಾನ್ ಪರಾಗ್ ಯಾಕೆ ಶತಕ ಕಂಪ್ಲೀಟ್ ಮಾಡದೆ ಔಟ್ ಆದೆ ಅಂತ ಬುದ್ಧಿ ಕೇಳಿದ ವಿಡಿಯೋ ವೈರಲ್‌ ಆಗುತ್ತಿದೆ.

ವೈಭವ್ ಅವರ ಪ್ರದರ್ಶನವನ್ನು ನೋಡಿದ ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್, ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ವೈಭವ್ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ವೈಭವ್ ಭಾರತೀಯ ಕ್ರಿಕೆಟ್‌ಗೆ ದೇವರು ನೀಡಿದ ಅದ್ಭುತ ಉಡುಗೊರೆ ಎಂದು ಗವಾಸ್ಕರ್ ಹೇಳಿದ್ದಾರೆ. ನೀವು ಈಗ ಅವರಿಗೆ ಅವಕಾಶ ನೀಡದಿದ್ದರೆ, ಇನ್ನು ಯಾವಾಗ ನೀಡುತ್ತೀರಿ? ಎಂದು ಗವಾಸ್ಕರ್ ಆಯ್ಕೆ ಸಮಿತಿಯನ್ನ ಪ್ರಶ್ನಿಸಿದ್ದಾರೆ.ಅವರ ವಯಸ್ಸನ್ನು ನೋಡಬೇಡಿ, ಆದರೆ ಆತನ ನಿರ್ಭೀತಿ ಆಟವನ್ನ ನೋಡಿ ಎಂದು ಗವಾಸ್ಕರ್ ಹೇಳಿದ್ದಾರೆ.

ಐಪಿಎಲ್ 2026ರಲ್ಲಿ  ತಂಡವು ಕಳಪೆ ಪ್ರದರ್ಶನ ನೀಡಿದ ಬಳಿಕ ರಿಷಭ್ ಪಂತ್ ಲಖನೌ ಸೂಪರ್ ಜೈಂಟ್ಸ್‌ ತಂಡದ ನಾಯಕತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ಲಖನೌ ತಂಡವು ಇದನ್ನು ದೃಢಪಡಿಸಿದೆ, ರಿಷಭ್ ಪಂತ್ ಅವರು ತಂಡದ ನಾಯಕತ್ವದಿಂದ ವಿಮುಕ್ತಿ ನೀಡುವಂತೆ ಫ್ರಾಂಚೈಸಿ ಕೋರಿದ್ದಾರೆ.  ತಂಡವು ಅವರ ಕೋರಿಕೆಯನ್ನು ಒಪ್ಪಿಕೊಂಡಿದೆ ಎಂದು LSG ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

 

ಮಾನಸಿಕ ಒತ್ತಡ ಮತ್ತು ಸಂಪೂರ್ಣವಾಗಿ ದಣಿದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ MI ಫ್ರಾಂಚೈಸಿಯನ್ನು ತೊರೆಯಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಪಾಂಡ್ಯ ಈ ಸೀಸನ್ ಮಧ್ಯದಲ್ಲಿ ತಂಡದ ಮ್ಯಾನೇಜ್‌ಮೆಂಟ್ ಗೆ ಈ ವಿಷಯವನ್ನು ತಿಳಿಸಿದ್ದಾರೆ ಅನ್ನೋ ಬಗ್ಗೆ ವರದಿಯಾಗಿದೆ.  ಪ್ಲೇ-ಆಫ್ ಆಸೆ ಭಗ್ನಗೊಂಡ ನಂತರ, ಇನ್ನೂ ಕೆಲವು ಪಂದ್ಯಗಳು ಬಾಕಿ ಉಳಿದಿರುವಂತೆ ಪಾಂಡ್ಯ ಮತ್ತು ಮುಂಬೈ ಇಬ್ಬರೂ ಪರಸ್ಪರ ಬೇರ್ಪಡುವ ಬಗ್ಗೆ ಒಪ್ಪಂದಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈ ಇಂಡಿಯನ್ಸ್ ತಂಡದ  ಮುಂದಿನ ನಾಯಕ ಯಾರು ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. ವಿವಿಧ ಮೂಲಗಳ ಪ್ರಕಾರ, ನಾಯಕನಾಗಿ ಜಸ್ಪ್ರೀತ್ ಬುಮ್ರಾನನ್ನು ಮುಂಬೈ ಇಂಡಿಯನ್ಸ್ ಆಯ್ಕೆ ಮಾಡುವ ಸಾಧ್ಯತೆಯಿದೆ. ಬುಮ್ರಾ ಮತ್ತು ಸೂರ್ಯ ಕುಮಾರ್ ಯಾದವ್ ನಡುವೆ ಪೈಪೋಟಿ ಏರ್ಪಟ್ಟಿದೆ. ಕೆಲ ಸುದ್ದಿ ಪ್ರಕಾರ 39ವರ್ಷದ ರೋಹಿತ್ ಶರ್ಮಾರನ್ನು, ಮುಂದಿನ ಎರಡು ಐಪಿಎಲ್ ಸರಣಿಗೆ ಮುಂಬೈ ತಂಡವನ್ನು ಮುನ್ನಡೆಸುವಂತೆ ಕೇಳುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ.ಆದ್ರೆ ಇದ್ದಕ್ಕೆ ರೋಹಿತ್ ಒಪ್ಪುವು ಡೌಟ್ ಎನ್ನಲಾಗ್ತಿದೆ.

Kishor KV