ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ಕ್ಯಾಪ್ಟನ್ – ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಯಂಗ್ ಕ್ರಿಕೆಟರ್

ಐಪಿಎಲ್ ಸೀಸನ್-18ಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನವೇ ಬಿಗ್ ಶಾಕ್ ಎದುರಾಗಿದೆ. ತಂಡದ ನಾಯಕ ಸಂಜು ಸ್ಯಾಮ್ಸನ್, ಮೊದಲ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅನುಭವಿ ನಾಯಕನ ಹೊರಗಿಟ್ಟು ಇದೀಗ ರಿಯಾನ್ ಪರಾಗ್‌ಗೆ ಪಟ್ಟಕಟ್ಟಿದೆ ರಾಜಸ್ಥಾನ ರಾಯಲ್ಸ್.
ಇದನ್ನೂ ಓದಿ:ಸಂಜು ಮುಗಿಸಲು ಮಹಾ ಸಂಚು – ಕೆರಿಯರ್ ಕಾಪಾಡಿದ್ದೇ ರಾಹುಲ್ ದ್ರಾವಿಡ್
ರಾಜಸ್ಥಾನ ರಾಯಲ್ಸ್ ಎದುರು ಆಡಲಿರುವ ಮೊದಲ 3 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಕೇವಲ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ಸಾರಥಿಯಾಗಲಿದ್ದಾರೆ. ಸಂಜು ಸ್ಯಾಮ್ಸನ್ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ವಿಕೆಟ್ ಕೀಪಿಂಗ್‌ಗೆ ಅನುಮತಿ ನೀಡಿಲ್ಲ. ಅಲ್ಲದೆ ಸ್ಯಾಮ್ಸನ್ ಬ್ಯಾಟ್ಸ್‌ಮನ್/ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡಲು ಲಭ್ಯವಿರುತ್ತಾರೆ. ಹೀಗಾಗಿ ಮೊದಲ ಮೂರು ಪಂಧ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯುವ ಆಟಗಾರ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ. ಇತ್ತ ಸಂಜು ಸ್ಯಾಮ್ಸನ್ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಸನ್ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಆರ್ಆರ್ ತಂಡ ರಿಯಾನ್ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ.
ಮಾ.22ರಿಂದ ಟೂರ್ನಿ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಕಣಕ್ಕಿಳಿಯಲಿವೆ. ಇನ್ನು ಮಾರ್ಚ್ 23 ರಂದು ಜರುಗಲಿರುವ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ.