ಬೇಡಿಕೊಂಡಿದ್ದೆಲ್ಲಾ ನೆರವೇರಬೇಕಾ? – ಮಂಗಳವಾರ ಹನುಮನ ಈ ರೀತಿ ಪೂಜಿಸಿ..!

ಬೇಡಿಕೊಂಡಿದ್ದೆಲ್ಲಾ ನೆರವೇರಬೇಕಾ? – ಮಂಗಳವಾರ ಹನುಮನ ಈ ರೀತಿ ಪೂಜಿಸಿ..!

ಮಂಗಳವಾರ ಭಗವಾನ್ ಹನುಮಂತನಿಗೆ ಮೀಡಲಿಟ್ಟಿರುವ ದಿನ ಎಂದು ಶಾಸ್ತ್ರ ಹೇಳುತ್ತದೆ. ಮಂಗಳವಾರ ಹನುಮಂತನ ಪೂಜೆಯಿಂದ ಒಳಿತಾಗಲಿದೆ ಎಂದು ನಂಬಲಾಗಿದೆ. ಶ್ರೀ ರಾಮನ ಪರಮಭಕ್ತನಾದ ಹನುಮ೦ತನು ಶಕ್ತಿ, ವಿವೇಕ, ಹಾಗೂ ಜ್ಞಾನಗಳ ಅಧಿದೇವತೆಯೆ೦ದೇ ಪರಿಗಣಿಸಲ್ಪಟ್ಟಿದ್ದಾನೆ. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ರಕ್ಕಸರನ್ನೆಲ್ಲಾ ಸ೦ಹರಿಸಿ ಜಗತ್ತಿನಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನಿವಾರಸಲು ಭಗವಾನ್ ಶಿವನು ಹನುಮ೦ತನ ಅವತಾರವನ್ನು ಧರಿಸಿದನೆ೦ದು ಹೇಳಲಾಗುತ್ತಿದೆ.

ರಾಮ ಭಕ್ತ ಹನುಮಂತನನ್ನು ಬಜರಂಗಿ ಆಂಜನೇಯ ಮುಂತಾದ ಹೆಸರುಗಳಿಂದ ಪ್ರಪಂಚದಾದ್ಯಂತ ಭಕ್ತರು ಪೂಜಿಸುತ್ತಾರೆ. ಧೈರ್ಯ, ಸ್ಥೈರ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಜನೇಯ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದವರು. ರಾಮ ಸೀತೆಯರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುವಷ್ಟು ಕಟ್ಟಾ ಭಕ್ತರಾಗಿದ್ದಾರೆ. ಹನುಮಂತನಿಗೆ ತನ್ನ ಸಾಹಸಗಳಿಂದ ಹೋದಲ್ಲೆಲ್ಲಾ ಹಲವಾರು ಹೆಸರುಗಳಿವೆ. ಮಾರುತಿ, ಪವನ ಪುತ್ರ, ಆಂಜನೀಪುತ್ರ ಹೀಗೆ ಭಕ್ತರ ಭಕ್ತಿಗೆ ಅನುಗುಣವಾಗಿ ಕರೆಯಲ್ಪಟ್ಟ ಹೆಸರುಗಳಿಂದ ಹನುಮಾನ್ ಪ್ರಸಿದ್ಧರು.

ಮಂಗಳವಾರದಂದು ವಿಶೇಷವಾಗಿ ಹನಮಂತನ ಪೂಜೆಯನ್ನು ಮಾಡಲಾಗುತ್ತದೆ. ಪ್ರಾತಃ ಕಾಲದಲ್ಲಿಯೇ ಎದ್ದು ಹನುಮಾನ್ ಪೂಜೆಯನ್ನು ಮಾಡಿದರೆ ಭಕ್ತರು ಹನುಮಂತನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಆಚರಣೆಯಾಗಿದೆ. ಶಕ್ತಿ, ಬಲ ಮತ್ತು ಗೌರವವನ್ನು ಹೆಚ್ಚಿಸಿಕೊಳ್ಳಲು ಹನಮಂತನ ಪೂಜೆಯನ್ನು ಮಾಡಬೇಕು. ಹಾಗಾದರೆ ಮಂಗಳವಾರಂದು ಹನುಮನ ಪೂಜಾ ವಿಧಾನಗಳೇನು? ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎಂಬುದನ್ನು ತಿಳಿಯಿರಿ.

ಪೂಜಾ ವಿಧಾನಗಳೇನು?

ನೀವು ಪೂಜೆ ಮಾಡಬೇಕಾಗಿರುವ ಸ್ಥಳವನ್ನು ಶುದ್ಧ ಮಾಡಿ

ಹನುಮಂತನಿಗೆ ಪೂಜೆಯನ್ನು ಅರ್ಪಿಸಿ ಹನುಮಂತನ ವಿಗ್ರಹವನ್ನು ನೀರಿನಿಂದ ಶುದ್ಧೀಕರಿಸಿ

ನೀವು ಪೂಜೆ ಮಾಡಬೇಕಾಗಿರುವ ಸ್ಥಳಕ್ಕೆ ನೀರಿನ ಪ್ರೋಕ್ಷಣೆಯನ್ನು ಮಾಡಿ

ಕೆಂಪು ಬಟ್ಟೆಯ ಮೇಲೆ ಹನುಮಾನ್ ವಿಗ್ರಹವನ್ನು ಇರಿಸಿ ಹನುಮಂತನ ಮೂರ್ತಿಯ ಮೇಲೆ ಕುಂಕುಮದ ಪೇಸ್ಟ್ ಹಚ್ಚಿ

ಅಗರ್‌ಬತ್ತಿ ಮತ್ತು ದೀಪವನ್ನು ಹಚ್ಚಿ ದೇವರಿಗೆ ಹೂವು ಮತ್ತು ಹಣ್ಣು ಸಮರ್ಪಿಸಿ

108 ಅಕ್ಷತೆ, 108 ವೀಳ್ಯದೆಲೆ, 108 ಹಣ್ಣುಗಳನ್ನು ಇರಿಸಿ ಈ ದಿನ ಸಾತ್ವಿಕ ಆಹಾರವನ್ನು ಸೇವಿಸಿ.

ಮಾಂಸಾಹಾರ ಸೇವನೆ ಬೇಡ ಹನುಮಂತನಿಗೆ 5 ಬಾಳೆಹಣ್ಣು ಅರ್ಪಿಸಿ ಈಶಾನ್ಯ ದಿಕ್ಕಿನಲ್ಲಿ ಹನುಮಂತನ ಪ್ರಾರ್ಥನೆಯನ್ನು ಮಾಡಿ

Kishor KV