ಮಾಲ್ಡೀವ್ಸ್‌ನಲ್ಲಿ ಹೆಚ್ಚುತ್ತಿದೆ ಸಮುದ್ರಮಟ್ಟ! – ಕುಡಿಯುವ ನೀರಿಗೂ ಶುರುವಾಗಲಿದ್ಯಾ ಹಾಹಾಕಾರ?

ಮಾಲ್ಡೀವ್ಸ್‌ನಲ್ಲಿ ಹೆಚ್ಚುತ್ತಿದೆ ಸಮುದ್ರಮಟ್ಟ! – ಕುಡಿಯುವ ನೀರಿಗೂ ಶುರುವಾಗಲಿದ್ಯಾ ಹಾಹಾಕಾರ?

ಮಾಲ್ಡೀವ್ಸ್‌ ಪ್ರವಾಸಿ ತಾಣ ವಿಶ್ವದ ಜನರನ್ನು ಆಕರ್ಷಿಸಿದೆ. ಇಲ್ಲಿಗೆ ಹೋಗುವುದು ಬಹುತೇಕರ ಕನಸು ಕೂಡ ಆಗಿರುತ್ತದೆ. ಪ್ರಪಂಚದಲ್ಲಿರುವ ಜನರು ಹೆಚ್ಚಾಗಿ ಮಾಲ್ಡೀವ್ಸ್‌ನ ಪ್ರವಾಸಕ್ಕೆ ಮನಸೋತಿದ್ದಾರೆ. ಅಲ್ಲಿನ ಸ್ಪಟಿಕ ಸ್ಪಷ್ಟವಾದ ಕಡಲತೀರಗಳು, ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುವ ಮರದ ಹಟ್‌ಗಳು ಎಂತವರನ್ನು ಕೈಬೀಸಿ ಕರೆಯುತ್ತದೆ. ಹೀಗಾಗಿಯೇ ಸೆಲೆಬ್ರಿಟಿಗಳು ಕೂಡ ತನ್ನ ಬಿಡುವಿನ ಸಮಯದಲ್ಲಿ ಇಲ್ಲಿಗೆ ಬಂದು ಕಾಲಕಳೆಯುತ್ತಾರೆ. ಈ ದ್ವೀಪ ರಾಷ್ಟ್ರವು ಬಹುಪಾಲು ನೀರಿನಿಂದಲೇ ಕೂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದ್ರೆ ಇದೀಗ ಮಾಲ್ಡೀವ್ಸ್‌ ಕುರಿತು ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ.

ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿ ಶುಬ್ಮನ್ ಗಿಲ್ – ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ ಗಿಲ್

ಹೌದು, ಮಾಲ್ಡೀವ್ಸ್‌ ಪ್ರಸಿದ್ಧ ಕಡಲತೀರಗಳು ಮತ್ತು ಹವಳದ ಬಂಡೆಗಳಿಗೆ ಹೆಸರುವಾಸಿಯಾಗಿದೆ. ಪ್ರಸ್ತುತ ಈ ದ್ವೀಪ ರಾಷ್ಟ್ರವು ಹವಾಮಾನ ಬಿಕ್ಕಟ್ಟಿನ ಬೆದರಿಕೆಯನ್ನು ಎದುರಿಸುತ್ತಿದೆ. ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲಿ ಸಮುದ್ರಮಟ್ಟವು ಹೆಚ್ಚಾಗುತ್ತಿದೆ. ಹಾಗೆಯೇ ಕುಡಿಯುವ ನೀರಿನ ಕೊರತೆ ಎದುರಾಗುತ್ತಿದೆ ಎಂದು ವರದಿಯಾಗಿದೆ.

ಹೌದು, ಹೆಚ್ಚುತ್ತಿರುವ ಸಮುದ್ರ ಮಟ್ಟ ಹೆಚ್ಚಾಗುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಅಭಾವ ಕೂಡ ಉಂಟಾಗುತ್ತಿದೆ. ಜನರಿಂದಾಗಿ ಅಲ್ಲಿನ ಜನರಿಗೆ ಬದುಕಲು ಕಷ್ಟವಾಗುತ್ತಿದೆ. ಆದರೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ನಾಗರಿಕರ ಸ್ಥಳಾಂತರದ ಯೋಜನೆಗಳನ್ನು ತಿರಸ್ಕರಿಸಿದ್ದಾರೆ. ನಾಗರಿಕರನ್ನು ಸ್ಥಳಾಂತರಿಸುವ ಬದಲಿಗೆ, ಭೂ ಸುಧಾರಣೆ ಮತ್ತು ಎತ್ತರದ ದ್ವೀಪಗಳ ನಿರ್ಮಾಣದ ಮೂಲಕ ಅತಿಕ್ರಮಣ ಅಲೆಗಳನ್ನು ಎದುರಿಸುವ ಕುರಿತು ಅಲ್ಲಿನ ಸರ್ಕಾರ ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.

ಆದರೆ ಮಾಲ್ಡೀವ್ಸ್‌ ಸರ್ಕಾರದ ಅಭಿಪ್ರಾಯವನ್ನು ಅಲ್ಲಿನ ಪರಿಸರ ಮತ್ತು ಹಕ್ಕುಗಳ ಗುಂಪುಗಳು ತಳ್ಳಿ ಹಾಕಿದೆ. ಇಂತಹ ನಿರ್ಧಾರಗಳಿಂದ ಪ್ರವಾಹದ ಭೀತಿ ಹೆಚ್ಚಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ವಾಸ್ತವವಾಗಿ, ಮಾಲ್ಡೀವ್ಸ್‌ನ ಸರಿಸುಮಾರು 80 ಪ್ರತಿಶತವು ಸಮುದ್ರ ಮಟ್ಟದಿಂದ ಒಂದು ಮೀಟರ್‌ಗಿಂತ ಕಡಿಮೆ ಇದೆ ಎಂಬುದನ್ನು ಗಮನಿಸುವುದು ಮುಖ್ಯ. ಇದು ಈ ಕ್ರಮಗಳ ದೀರ್ಘಾವಧಿಯ ಕಾರ್ಯಸಾಧ್ಯತೆಯ ಬಗ್ಗೆ ಮತ್ತಷ್ಟು ಕಳವಳವನ್ನು ಉಂಟುಮಾಡುತ್ತದೆ.‌ ಮಾಲ್ಡೀವ್ಸ್‌ನ ಪ್ರವಾಸೋದ್ಯಮವು ಈ ದೇಶದ ಪ್ರಮುಖ ಆರ್ಥಿಕ ಕೊಡುಗೆಯಾಗಿದ್ದು, ಇದು ಮಾಲ್ಡೀವ್ಸ್‌ನ ಆರ್ಥಿಕತೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಬಹುಶಃ ಮಾಲ್ಡೀವ್ಸ್‌ ಪ್ರಸ್ತುತ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ವಿದೇಶಿಗರ ಆಗಮನದಲ್ಲಿ ಭಾರಿ ವ್ಯತ್ಯಾಸವಾಗಬಹುದು.

Shwetha M