ಬ್ರಿಟನ್ನಲ್ಲಿ ಸಿಗರೇಟ್ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ!
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಮುಂದಿನ ದಿನಗಳಲ್ಲಿ ಸಿಗರೇಟ್ ಬ್ಯಾನ್ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
2009ರ ಜನವರಿ 1 ಹಾಗೂ ಅದರ ನಂತರ ಜನಿಸಿದವರು ತಂಬಾಕು ಖರೀದಿ ಮಾಡಬಾರದು ಎಂದು ಕಳೆದ ವರ್ಷ ನ್ಯೂಜಿಲೆಂಡ್ ಘೋಷಿಸಿತ್ತು. ಇದೀಗ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ರಿಷಿ ಸುನಕ್ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
2030ರ ವೇಳೆಗೆ ಧೂಮಪಾನವನ್ನು ತ್ಯಜಿಸುವ ನಮ್ಮ ಗುರಿಯನ್ನು ಸಾಧಿಸಲು ನಾವು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತಿದ್ದೆವೆ. ಅದಕ್ಕಾಗಿ ನಾವು ಈಗಾಗಲೇ ಧೂಮಪಾನ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬ್ರಿಟಿಷ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಈ ಕ್ರಮಗಳಲ್ಲಿ ಉಚಿತ ವೇಪ್ ಕಿಟ್‌ಗಳು, ಗರ್ಭಿಣಿಯರು ಧೂಮಪಾನ ತೊರೆಯುವಂತೆ ಪ್ರೋತ್ಸಾಹಿಸಲು ವೋಚರ್ ಯೋಜನೆ ಹಾಗೂ ಸಿಗರೇಟ್ ಪ್ಯಾಕ್‌ಗಳಲ್ಲಿ ಕಡ್ಡಾಯವಾಗಿ ಎಚ್ಚರಿಕೆಯ ಸೂಚನೆಗಳನ್ನು ನೀಡುವುದನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಪರಿಗಣನೆಯಲ್ಲಿರುವ ಈ ನೀತಿಗಳು ಮುಂದಿನ ವರ್ಷದ ನಿರೀಕ್ಷಿತ ಚುನಾವಣೆಗೂ ಮುನ್ನ ಸುನಕ್ ತಂಡದ ಹೊಸ ಗ್ರಾಹಕ ಕೇಂದ್ರಿತ ಯೋಜನೆಯ ಭಾಗವಾಗಿರಲಿದೆ ಎಂದು ವರದಿಗಳು ಹೇಳಿವೆ.
ಚಿಲ್ಲರೆ ವ್ಯಾಪಾರಿಗಳು ಮಕ್ಕಳಿಗೆ ಉಚಿತ ವೇಪ್‌ಗಳ ಮಾದರಿಗಳನ್ನು ನೀಡುವುದನ್ನು ಅನುಮತಿಸುವ ಕೆಲ ಸಡಿಲಿಕೆಗಳನ್ನು ಮುಚ್ಚುವುದಾಗಿ ತಿಳಿಸಿವೆ. ಜುಲೈನಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್‌ನ ಕೌನ್ಸಿಲ್‌ಗಳು ಪರಿಸರ ಹಾಗೂ ಜನರ ಆರೋಗ್ಯದ ಆಧಾರದ ಮೇಲೆ 2024ರ ವೇಳೆಗೆ ಏಕಬಳಕೆಯ ವೇಪ್‌ಗಳ ಮಾರಾಟವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ನೀಡಿವೆ.