ಟೀಮ್ ಇಂಡಿಯಾದಿಂದ ಹೊರಬಿದ್ದ ರಿಷಭ್ ಭಾವುಕ ಸಂದೇಶ – ಜಗದೀಸನ್, ಈಶ್ವರ್ ಯಾರಿಗೆ ಸಿಗುತ್ತೆ ಚಾನ್ಸ್?

ಟೀಮ್ ಇಂಡಿಯಾದಿಂದ ಹೊರಬಿದ್ದ ರಿಷಭ್ ಭಾವುಕ ಸಂದೇಶ – ಜಗದೀಸನ್, ಈಶ್ವರ್ ಯಾರಿಗೆ ಸಿಗುತ್ತೆ ಚಾನ್ಸ್?

ಟೀಮ್  ಇಂಡಿಯಾಕ್ಕೆ ಉಳಿದಿರೋದು ಇನ್ನೊಂದೇ ಟೆಸ್ಟ್. ಅದು ಕೂಡಾ ಗೆಲ್ಲಲೇಬೇಕಾದ ಟೆಸ್ಟ್ ಪಂದ್ಯ. ಗೆದ್ದರೆ ಸರಣಿ ಸಮಬಲ.. ಆಂಗ್ಲರ ನೆಲದಲ್ಲಿ ಅವರನ್ನೇ ಸೋಲಿಸಲು ಗಿಲ್ ಪಡೆ ಹಠ ಕಟ್ಟಿದೆ. ಆದ್ರೆ, ಟೀಮ್ ಇಂಡಿಯಾಕ್ಕೆ ಇಂಜುರಿ ಟೆನ್ಷನ್ ಕಾಡ್ತಿದೆ. ಅದರಲ್ಲೂ ರಿಷಭ್ ಪಂತ್ ಇಂಜುರಿ ತಂಡಕ್ಕೆ ಸೆಟ್‌ಬ್ಯಾಕ್ ಅಂದ್ರೂ ತಪ್ಪಿಲ್ಲ. ಇದ್ರ ಜೊತೆ ಆಕಾಶ್ ದೀಪ್ ತಂಡ ಸೇರಿಕೊಳ್ತಾರಾ ಅನ್ನೋ ಕುತೂಹಲವೂ ಇದೆ. ಹಾಗಾದ್ರೆ, 5ನೇ ಮತ್ತು ಕೊನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಯಾರಿಗೆ ಗೇಟ್ ಪಾಸ್ ಸಿಗುತ್ತೆ. ರಿಷಭ್ ಪಂತ್ ಬದಲು ವಿಕೆಟ್ ಕೀಪಿಂಗ್ ಯಾರು ಮಾಡ್ತಾರೆ. ಶಾರ್ದೂಲ್ ಠಾಕೂರ್ ತಂಡಕ್ಕೆ ಬೇಕಾ, ಬೇಡ್ವಾ, ತಂಡದಿಂದ ಹೊರಬಿದ್ದ ರಿಷಭ್ ಪಂತ್ ಕೊಟ್ಟ ಸಂದೇಶವೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಕ್ರಿಕೆಟ್‌ ಮರ್ಯಾದೆ ಮರೆತರಾ ಸ್ಟೋಕ್ಸ್.. ಜಡೇಜಾ, ಸುಂದರ್ ಶತಕ ತಪ್ಪಿಸಲು ಸ್ಟೋಕ್ಸ್ ಕುತಂತ್ರ – ಇಂಗ್ಲೆಂಡ್ ಕ್ಯಾಪ್ಟನ್‌ಗೆ ಜಡ್ಡು ಸೆಡ್ಡು ಹೊಡೆದಿದ್ದು ಹೇಗೆ?

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಇಂಡಿಯಾ ಬಾಯ್ಸ್. ಇದೀಗ ಐದನೇ ಟೆಸ್ಟ್ ಪಂದ್ಯ ಡು ಆರ್ ಡೈ ಪರಿಸ್ಥಿತಿ. ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಭಾರತ. ಈ ಪಂದ್ಯ ಸೋತ್ರೆ ಸರಣಿ ಇಂಗ್ಲೆಂಡ್‌ ಪಾಲಾಗಲಿದೆ. ಗೆದ್ದರೆ ಸರಣಿ ಸಮಬಲದೊಂದಿಗೆ ಕೊನೆಗೊಳ್ಳಲಿದೆ. ಹೀಗಾಗಿ ಸರಣಿ ಸೋಲನ್ನು ತಪ್ಪಿಸುವ ಸಲುವಾಗಿ ಟೀಂ ಇಂಡಿಯಾ ಬಲಿಷ್ಠ ತಂಡ ಕಟ್ಟಲೇಬೇಕಿದೆ. ಆದರೆ, ಟೀಮ್‌ನಲ್ಲಿ ಈಗ ಗಾಯಾಳುಗಳ ಸಂಖ್ಯೆಯೇ ಹೆಚ್ಚಿದೆ. ಇದು ಹನ್ನೊಂದರ ಬಳಗವನ್ನು ಕಟ್ಟಲು ನಾಯಕ ಗಿಲ್ ಹಾಗೂ ಕೋಚ್ ಗಂಭೀರ್​ಗೆ ಬಿಗ್ ಟಾಸ್ಕ್ ಆಗಿದೆ. ಯಾಕೆಂದ್ರೆ, ನಾಲ್ಕನೇ ಟೆಸ್ಟ್‌ನಲ್ಲಿ ಗಾಯಾಳುಗಳ ಬದಲಿಯಾಗಿ ಬಂದ ಆಟಗಾರರ ಪ್ರದರ್ಶನ ತೀರ ಕಳಪೆಯಾಗಿತ್ತು. ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 152 ಓವರ್‌ಗಳನ್ನು ಬೌಲ್ ಮಾಡಿತ್ತು. ಆ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಕೇವಲ 11 ಓವರ್‌ಗಳನ್ನು ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 55 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇವರ ಜೊತೆಗೆ 24 ವರ್ಷದ ಅನ್ಶುಲ್ ಕಾಂಬೋಜ್ ಕೂಡ ಟೀಮ್ ಇಂಡಿಯಾಕ್ಕೆ ಭಾರವಾಗಿದ್ದು ಬಿಟ್ಟರೆ, ಯೂಸ್ ಅಂತೂ ಆಗಿಲ್ಲ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ, ಅವರ ಸರಾಸರಿ ವೇಗ ಕೇವಲ 129 ಕಿ.ಮೀ. ಆಗಿತ್ತು. ಇದು ಟೀಮ್  ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಮತ್ತೊಂದು ಕೆಟ್ಟ ಹೊಡೆತ ಕೊಟ್ಟಿತ್ತು. ಹೀಗಾಗಿ ಈ ಬಾರಿ ಟೀಮ್‌ನಿಂದ ಶಾರ್ದೂಲ್ ಮತ್ತು ಕಾಂಬೋಜ್‌ಗೆ ಗೇಟ್‌ಪಾಸ್ ಸಿಗೋದಂತೂ ಫಿಕ್ಸ್.

ಕಾಲು ಬೆರಳಿನ ಪ್ರಾಕ್ಚರ್‌ನಿಂದ ರಿಷಭ್ ಪಂತ್ ಕೂಡಾ ಮೇಜರ್ ಇಂಜುರಿಗೊಳಗಾಗಿದ್ದಾರೆ. ಹೀಗಾಗಿ ಪಂತ್ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ಸರಣಿಯಿಂದ ಹೊರಬಿದ್ದಿರೋ ಪಂತ್​ ಟೀಮ್ ಇಂಡಿಯಾಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ. ವೈಯಕ್ತಿಕ ಸಾಧನೆಗಿಂತ, ತಂಡದ ಹಿತ ಮುಖ್ಯ ಎಂದಿರುವ ಪಂತ್, ಸಹ ಆಟಗಾರರಿಗೆ ದೇಶಕ್ಕಾಗಿ ಗೆಲ್ಲುವಂತೆ ಮನವಿ ಮಾಡಿದ್ದಾರೆ. ವೈಯಕ್ತಿಕ ಗುರಿಗಳ ಬಗ್ಗೆ ಯೋಚಿಸದೆ, ತಂಡ ಗೆಲ್ಲಲು ನನ್ನಿಂದ ಸಹಾಯ ಮಾಡಲು ಬಯಸುತ್ತೇನೆ. ಇಂತಹ ಸಮಯದಲ್ಲಿ ನನ್ನ ಎಲ್ಲಾ ಸಹ ಆಟಗಾರರೂ ನನ್ನ ಬೆಂಬಲಕ್ಕೆ ನಿಂತಿರುವುದು ಒಳ್ಳೆಯದು. ದೇಶಕ್ಕಾಗಿ ಆಡುವಾಗ, ಒತ್ತಡದಲ್ಲಿದ್ದಾಗಲೂ ಎಲ್ಲರೂ ತಂಡವನ್ನ ಬೆಂಬಲಿಸುತ್ತಾರೆ. ಇಡೀ ದೇಶ ಬೆಂಬಲಕ್ಕೆ ನಿಲ್ಲುವ ಆ ಭಾವನೆ ವಿವರಿಸುವುದು ಕಷ್ಟ. ನನ್ನ ದೇಶಕ್ಕಾಗಿ ಆಡುವುದು ನನಗೆ ಯಾವಾಗಲೂ ಹೆಮ್ಮೆಯ ವಿಷಯ. ನನ್ನ ತಂಡಕ್ಕೆ ನನ್ನ ಬಳಿ ಒಂದೇ ಒಂದು ಸಂದೇಶವಿದೆ. ಮುಂದಿನ ಪಂದ್ಯವನ್ನ ಗೆಲ್ಲೋಣ. ನಾವು ದೇಶಕ್ಕಾಗಿ ಪಂದ್ಯವನ್ನ ಗೆಲ್ಲೋಣ ಎಂದು  ರಿಷಬ್ ಪಂತ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.

ರಿಷಭ್ ಪಂತ್ ನಾಲ್ಕನೇ ಟೆಸ್ಟ್‌ನಲ್ಲಿ ಇಂಜುರಿಯಲ್ಲೇ ರಣಬೇಟೆಗಾರನಂತೆ ಆಂಗ್ಲರನ್ನ ಕಾಡಿದ್ದು ಯಾರೂ ಮರೆಯಲ್ಲ. ಇಂಜುರಿ ನಡುವೆ ತೋರಿದ ಕೆಚ್ಚೆದೆಯ ಹೋರಾಟ ತೋರಿದ ರಿಷಭ್ ಪಂತ್ ಗೆ ಸ್ವತಃ ಕೋಚ್ ಗಂಭೀರ್ ಕೂಡಾ ಹ್ಯಾಟ್ಸಾಫ್ ಹೇಳಿದ್ದಾರೆ. ಇದೀಗ ಪಂತ್ ಬದಲಿಗೆ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡಬಹುದು. ಅಲ್ಲದೇ, ಪಂತ್ ಬದಲಿಗೆ ಹೊಸ ಆಟಗಾರನ ಹೆಸರು ಕೂಡಾ ಕೇಳಿಬರ್ತಿದೆ. ನಾರಾಯಣ್ ಜಗದೀಸನ್ ಅಲಿಯಾಸ್ ಎನ್​ ಜಗದೀಸನ್ ಈಗಾಗಲೇ ಇಂಗ್ಲೆಂಡ್ ಫ್ಲೈಟ್ ಹತ್ತಿದ್ದಾರೆ ಎಂಬ ಮಾಹಿತಿಯೂ ಕೇಳಿಬರ್ತಿದೆ. ಜಗದೀಸನ್, ತಮಿಳುನಾಡು ಮೂಲದ ವಿಕೆಟ್​ ಕೀಪರ್ ಕಮ್ ಬ್ಯಾಟರ್. ಈವರೆಗೆ ಒಟ್ಟು 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 10 ಶತಕ, 14 ಅರ್ಧಶತಕಗಳಲ್ಲದೇ ತ್ರಿಬಲ್ ಸೆಂಚುರಿ ಸಹ ಬಾರಿಸಿದ್ದಾರೆ. ದೇಶೀಯ ಅಂಗಳದಲ್ಲಿ ಅನುಭವಿ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿರುವ ಜಗದೀಸನ್ ಅವರಿಗೆ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿದೆ. ಹೀಗಾಗಿ ಐದನೇ ಟೆಸ್ಟ್ ಪಂದ್ಯಕ್ಕೆ ಜಗದೀಸನ್ ಡೆಬ್ಯೂ ಮಾಡಲಿದ್ದಾರಾ ಅನ್ನೋ ಕ್ಯೂರಿಯಾಸಿಟಿಯೂ ಇದೆ. ಇನ್ನು ಇದುವರೆಗೂ ಬೆಂಚ್ ಕಾಯ್ತಿದ್ದ ಅಭಿಮನ್ಯು ಈಶ್ವರನ್‌ಗೂ ಒಂದ್ ಚಾನ್ಸ್ ಸಿಗುತ್ತಾ ನೋಡ್ಬೇಕು.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಮಿಂಚಿದ್ದ ಬೌಲರ್ ಆಕಾಶ್ ದೀಪ್ ಫಿಟ್ ಆಗಿದ್ದು ತಂಡಕ್ಕೆ ಪ್ಲಸ್ ಆಗಿದೆ.  ಜೊತೆಗೆ ಅರ್ಶ್‌ದೀಪ್ ಸಿಂಗ್ ಕೂಡ ಕೈ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇದ್ರ ಜೊತೆ ಕನ್ನಡಿಗ ಕರುಣ್ ನಾಯರ್‌ಗೂ ಒಂದ್ ಚಾನ್ಸ್ ಸಿಗಬಹುದು ಅಂತಾನೂ ಹೇಳಲಾಗ್ತಿದೆ. ಅದೇನೇ ಇರಲಿ, ಇಂಜುರಿ ಟೆನ್ಷನ್‌ನಲ್ಲಿದ್ದ ತಂಡಕ್ಕೆ ನಾಲ್ಕನೇ ಟೆಸ್ಟ್‌ನಿಂದ ಹೊರಗುಳಿದವರು ಫಿಟ್ ಆಗಿರೋದು ಸ್ವಲ್ಪ ರಿಲೀಫ್ ಕೊಟ್ಟಿದೆ.

Sulekha