ಕೌನ್ ಬನೇಗಾ ಕರೋಡ್‌ಪತಿ ಸೀಟ್‌ನಲ್ಲಿ ರಿಷಬ್ ಶೆಟ್ಟಿ – ಬಿಗ್ ಬಿ ಜೊತೆ ಸ್ಕ್ರೀನ್ ಹಂಚಿಕೊಂಡ ಕಾಂತಾರಾ ಹೀರೋ..!

ಬಾಲಿವುಡ್ ಬಾದ್‌ಶಾ ಅಮಿತಾಬ್ ಬಚ್ಚನ್ ಜೊತೆ ಕಾಂತಾರಾ ಹೀರೋ ರಿಷಭ್ ಶೆಟ್ಟಿ ಪರದೆ ಹಂಚಿಕೊಂಡಿದ್ದಾರೆ. ಅದು ಕೂಡಾ ಬಿಗ್‌ಬಿ ಬರ್ತ್‌ಡೇ ದಿನವೇ ರಿಷಬ್ ಶೆಟ್ಟಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಜನಪ್ರಿಯ ಶೋನಲ್ಲಿ ರಿಷಬ್ ಶೆಟ್ಟಿ ಭಾಗವಿಹಿಸಿದ್ದಕ್ಕೆ ಕನ್ನಡಿಗರು ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಈ ವಾರ ಬಿಗ್‌ಬಾಸ್ ಎಲಿಮಿನೇಷನ್ ಯಾಕಿಲ್ಲಾ ಗೊತ್ತಾ? – ಮುಂದಿನ ವಾರವೇ ಮೊದಲ ಫಿನಾಲೆ
ಕೌನ್ ಬನೇಗಾ ಕರೋಡ್‌ಪತಿ ಸೀಟ್‌ನಲ್ಲಿ ರಿಷಬ್ ಶೆಟ್ಟಿ ಕೂತಿದ್ದಾರೆ. ಅದು ಕೂಡಾ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಕಾರ್ಯಕ್ರಮದಲ್ಲಿ ಕಾಂತಾರಾ ಹೀರೋ ಭಾಗವಹಿಸಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಅಕ್ಟೋಬರ್ 11 ರಂದು ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅದೇ ದಿನ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 25 ವರ್ಷಗಳಿಗೂ ಹೆಚ್ಚು ಕಾಲದಿಂದ ಮನೆಮನೆಗಳಲ್ಲಿ ಜನಪ್ರಿಯವಾಗಿರುವ ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ದೃಢಪಡಿಸಿದೆ.
ಕೆಬಿಸಿ ಸೆಟ್‌ನಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ರಿಷಬ್ ಶೆಟ್ಟಿ ಇರುವ ಫೋಟೊವನ್ನು ಹಂಚಿಕೊಂಡಿದೆ. ‘ಕೌನ್ ಬನೇಗಾ ಕರೋಡ್‌ಪತಿಯ ಮುಂಬರುವ ಸಂಚಿಕೆಯ ಬಗ್ಗೆ ನಾವು ರೋಮಾಂಚನಗೊಂಡಿದ್ದೇವೆ. ನಿಮ್ಮೊಂದಿಗೆ ಸೇರಲು ತುಂಬಾ ಸಂತೋಷವಾಯಿತು ಸರ್’ ಎಂದು ಹೊಂಬಾಳೆ ಫಿಲ್ಮ್ ತಿಳಿಸಿದೆ. ಕಾರ್ಯಕ್ರಮದ ಮುಂಬರುವ ಸಂಚಿಕೆಗಳಲ್ಲಿ ಒಂದರಲ್ಲಿ ಅಮಿತಾಬ್ ಬಚ್ಚನ್ ಎದುರು ರಿಷಬ್ ಶೆಟ್ಟಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಭಿಮಾನಿಗಳು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ‘ರಿಷಭ್ ಕೆಬಿಸಿಯಲ್ಲಿ ಎಷ್ಟು ಗೆಲ್ಲುತ್ತಾರೆ?’ ಎಂಬುದು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಪ್ರಶ್ನೆಯಾಗಿದೆ. ಈ ಸಂಚಿಕೆಯ ಪ್ರಸಾರ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

ನೋಡಿರಿ

