ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಭ್ ರಿಎಂಟ್ರಿ – ಲಕ್ನೋ ತಂಡಕ್ಕೆ ಕುಲ್ದೀಪ್ ಯಾದವ್ ಟ್ರೇಡ್

ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಭ್ ರಿಎಂಟ್ರಿ – ಲಕ್ನೋ ತಂಡಕ್ಕೆ ಕುಲ್ದೀಪ್ ಯಾದವ್ ಟ್ರೇಡ್

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ರೀ ಎಂಟ್ರಿ ಕೊಡಲಿದ್ದಾರೆ. ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕುಲ್ದೀಪ್ ಯಾದವ್ ಟ್ರೇಡಿಂಗ್ ಮೂಲಕ ಎಂಟ್ರಿ ಕೊಡಲಿದ್ದಾರೆ. ಈ ಬಗ್ಗೆ ಎರಡೂ ಪ್ರಾಂಚೈಸಿಗಳು ಅಧಿಕೃತ ಮಾಹಿತಿ ನೀಡಿವೆ.

ಇದನ್ನೂ ಓದಿ:2027ರ IPLಗೆ ಮೇಜರ್ ಸರ್ಜರಿ – 2 ವಾರ ಮೊದಲೇ ಟೂರ್ನಿ ಸ್ಟಾರ್ಟ್

ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕನಾಗಿ ಎರಡು ವರ್ಷಗಳಿಂದ ರಿಷಭ್ ಪಂತ್ ಯಾವುದೇ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಐಪಿಎಲ್ 2025 ರಲ್ಲಿ ಎಲ್​ಎಸ್​ಜಿ ತಂಡದ ನಾಯಕನಾಗಿ ಕಣಕ್ಕಿಳಿದ ಪಂತ್ 14 ಪಂದ್ಯಗಳಲ್ಲಿ 312 ರನ್​ ಮಾತ್ರ ಕಲೆಹಾಕಿದ್ದರು. ಇನ್ನು ಐಪಿಎಲ್ 2026 ರಲ್ಲಿ ಪಂತ್ ಕಲೆಹಾಕಿದ್ದು 269 ರನ್​ಗಳು ಮಾತ್ರ. ಹೀಗಾಗಿಯೇ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ಟ್ರೇಡ್ ಆಯ್ಕೆ ಮೂಲಕ ಮಾರಾಟ ಮಾಡಿದೆ. ಈ ಟ್ರೇಡಿಂಗ್ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕುಲ್ದೀಪ್ ಯಾದವ್ ಲಕ್ನೋ ತಂಡವನ್ನು ಸೇರಲಿದ್ದಾರೆ. ಇನ್ನು ಡಿಸಿ ಪರ ಕುಲ್ದೀಪ್ ಯಾದವ್ ಕೂಡಾ ಅದ್ಫುತ ಪ್ರದರ್ಶನ ತೋರಿಸಿಲ್ಲ. ಆಡಿದ 12 ಪಂದ್ಯಗಳಲ್ಲಿ 10 ವಿಕೆಟ್​ಗಳನಷ್ಟೇ ಪಡೆದಿದ್ದರು. ಅವರ ಎಕಾನಮಿ ಕೂಡ ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಹೀಗಾಗಿ ಮುಂದಿನ ಸೀಸನ್ ಆರಂಭಕ್ಕೂ ಮುನ್ನ ಕುಲ್ದೀಪ್​ರನ್ನು ತಂಡದಿಂದ ಕೈಬಿಡಲು ಡೆಲ್ಲಿ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಕುಲ್ದೀಪ್ ಯಾದವ್ ಡಿಸಿ ತೊರೆದು ಲಕ್ನೋ ತಂಡಕ್ಕೆ ಟ್ರೇಡಿಂಗ್ ಮೂಲಕ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಐಪಿಎಲ್ 2027 ರಲ್ಲಿ ರಿಷಭ್ ಡಿಸಿ ಪರ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ​​ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಟ್ರೇಡ್ ನಡೆದಿದ್ದು, ಈ ಟ್ರೇಡಿಂಗ್​ನಲ್ಲಿ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿಸಿದೆ. ಆದರೆ, ಇಲ್ಲಿ ರಿಷಭ್ ಪಂತ್ ವೇತನದಲ್ಲಿ ಭಾರೀ ಕಡಿತವಾಗಿದೆ. ರಿಷಭ್ ಪಂತ್  ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿತ್ತು. ದಾಖಲೆಯ ಮೊತ್ತಕ್ಕೆ ಎಲ್​ಎಸ್​ಜಿ ಪಾಲಾಗಿದ್ದ ಪಂತ್ ಇದೀಗ ತಮ್ಮ ಹಳೆಯ ತಂಡಕ್ಕೆ ಬರೋಬ್ಬರಿ 12 ಕೋಟಿ ರೂಪಾಯಿಗಳ ವೇತನ ಕಡಿತದೊಂದಿಗೆ ರಿಎಂಟ್ರಿ ಕೊಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಪಂತ್​ಗೆ 15 ಕೋಟಿ ರೂ. ನೀಡುವುದಾಗಿ ತಿಳಿಸಿದ್ದು, ಈ ಡೀಲ್​ಗೆ ಪಂತ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಡೆಲ್ಲಿ ಡೇರ್ ಡೆವಿಲ್ ಮರಳಿ ತಂಡಕ್ಕೆ ಸೇರಿಕೊಂಡಿದ್ದಾರೆ.

Sulekha

Leave a Reply

Your email address will not be published. Required fields are marked *