ಕ್ರಿಕೆಟ್​ಗಾಗಿ ಪ್ರಾಣ ಪಣಕ್ಕಿಟ್ಟ ಪಂತ್ – ಚಿಕನ್​ಗೆ ಬೈ.. 22 ಕೆಜಿ weight loss
ವಿಶ್ವಕಪ್ HERO ರೋಚಕ ಕಥೆ

ಕ್ರಿಕೆಟ್​ಗಾಗಿ ಪ್ರಾಣ ಪಣಕ್ಕಿಟ್ಟ ಪಂತ್ – ಚಿಕನ್​ಗೆ ಬೈ.. 22 ಕೆಜಿ weight lossವಿಶ್ವಕಪ್ HERO ರೋಚಕ ಕಥೆ

ಬದುಕೇ ಮುಗಿದು ಹೋಯ್ತು ಅಂತಾ ಕೂರುವ ಕೋಟಿ ಕೋಟಿ ಜನ್ರಿಗೆ ಟೀಂ ಇಂಡಿಯಾದ ಆಟಗಾರ ರಿಷಬ್ ಪಂತ್ ಸ್ಪೂರ್ತಿಯಾಗಿದ್ದಾರೆ. ಸಾವನ್ನೇ ಗೆದ್ದು ಬಂದು ಈಗ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಮನಸ್ಸೊಂದಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಅನ್ನೋದನ್ನ ಇಡೀ ಜಗತ್ತಿಗೇ ತೋರಿಸ್ತಿದ್ದಾರೆ. ವರ್ಷದ ಹಿಂದೆ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್​ ಪಂತ್​​ರ ಕ್ರಿಕೆಟ್​​ ಕರಿಯರ್​ ಮುಗಿದೆ ಹೋಯ್ತು ಅಂತಾ ಬಹುತೇಕರು ಫಿಕ್ಸ್​ ಆಗಿದ್ರು. ಆದ್ರೆ ಎಲ್ಲರ ಊಹೆಯನ್ನ ರಿಷಬ್​ ಪಂತ್​ ಸುಳ್ಳಾಗಿಸಿ ಮೈದಾನದಲ್ಲಿ ಅಬ್ಬರಿಸುತ್ತಿದ್ದಾರೆ. ಐಪಿಎಲ್​ನಲ್ಲೇ ತಾನೇನು ಅನ್ನೋದನ್ನ ಪ್ರೂವ್ ಮಾಡಿದ್ದ ಪಂತ್ ಇದೀಗ ವಿಶ್ವಕಪ್​ನಲ್ಲೂ ಟೀಂ ಇಂಡಿಯಾಗೆ ಆಸರೆಯಾಗ್ತಿದ್ದಾರೆ. ಆದ್ರೆ ಪಂತ್ ಕಮ್ ಬ್ಯಾಕ್ ನಾವು ನೀವೆಲ್ಲಾ ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ. ಹಗಲು ರಾತ್ರಿ ಅನ್ನದೆ ದೇಹ ದಂಡಿಸಿದ್ದಾರೆ. ನಡೆದಾಡಲೂ ಸಾಧ್ಯವಾಗದ ಕಾಲುಗಳನ್ನ ಕ್ರೀಸ್​ನಲ್ಲಿ ಚಿರತೆ ವೇಗದಲ್ಲಿ ಓಡುವಂತೆ ಮಾಡಿದ್ದಾರೆ. ಟೀಂ ಇಂಡಿಯಾ ಸೇರಲು ಪಂತ್ ಮಾಡಿದ ಸಾಹಸ ಎಂಥಾದ್ದು ಅನ್ನೋ ಮಾಹಿತಿ ಇಲ್ಲಿದೆ.

ಪಂತ್ ಕಟ್ಟುನಿಟ್ಟಿನ ಡಯಟ್!

2022ರ ಡಿಸೆಂಬರ್ 30 ರಂದು ಟೀಮ್​ ಇಂಡಿಯಾ ಡೈನಾಮಿಕ್​ ಬ್ಯಾಟ್ಸ್​​ಮನ್​ ರಿಷಬ್​ ಪಂತ್​ರ ಕಾರು ಧಗಧನೇ ಉರೀತಾ ಇತ್ತು. ಸದಾ ನಗುವೇ ತುಂಬಿರ್ತಾ ಇದ್ದ​​ ಪಂತ್​ ಮುಖ ಸಂಪೂರ್ಣ ರಕ್ತಸಿಕ್ತವಾಗಿತ್ತು.    ಭೀಕರ ಅಫಘಾತದಲ್ಲಿ ಅದೃಷ್ಟದ ರೀತಿಯಲ್ಲಿ ಬಚಾವ್​ ಆದ ಪಂತ್​ ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್​​ ಅಖಾಡಕ್ಕೆ ಮರಳಿದ್ರು. ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪ್ಟನ್ ಆಗಿ ಹಾಗೇ ವಿಕೆಟ್​ ಹಿಂದೆಯೂ ಕೂಡ ಮ್ಯಾಜಿಕ್​ ಮಾಡಿದ್ರು. ಆದ್ರೆ ಇಂಥಾ ಪ್ರದರ್ಶನದ ಹಿಂದೆ ಪಂತ್ ದೊಡ್ಡ ತ್ಯಾಗವನ್ನೇ ಮಾಡಿದ್ದರು. ಅಫಘಾತದಿಂದ ಚೇತರಿಸಿಕೊಳ್ತಾ ಇದ್ದ ವೇಳೆ ಪಂತ್​​ ದೇಹಕ್ಕೆ ದಿನವೊಂದಕ್ಕೆ ಕನಿಷ್ಟ 1400 ಕ್ಯಾಲೊರಿಯ ಫುಡ್​​ ಬೇಕಿತ್ತಂತೆ. ಕಾಲಿನ ಮೇಜರ್​ ಸರ್ಜರಿಗೆ ಒಳಗಾಗಿದ್ದರಿಂದ, ಮಸಲ್​​ ಬ್ಯುಲ್ಡ್​ ಮಾಡಬೇಕಾದ ಸವಾಲಿತ್ತು. ಆದ್ರೆ, ಆ ಸಮಯದಲ್ಲಿ ಕಠಿಣ ನಿರ್ಧಾರ ಕೈಗೊಂಡ ಪಂತ್​, ಕೇವಲ 1,000 ಕ್ಯಾಲೋರಿಯಷ್ಟು ಪ್ರಮಾಣದಲ್ಲಿ ಮಾತ್ರ ಫುಡ್​ ಸೇವಿಸ್ತಿದ್ರಂತೆ. ಇದ್ರ ಪರಿಣಾಮವೇ ಐಪಿಎಲ್​​ಗೂ ಮುನ್ನ 13 ಕೆಜಿ​, ಇದೀಗ ಐಪಿಎಲ್​ ನಡುವೆ 9 ಕೆಜಿ ಸೇರಿ ಒಟ್ಟಾರೆ 22 ಕೆಜಿ ತೂಕ ಇಳಿಸಿಕೊಂಡಿದ್ರು.  ಆಕ್ಸಿಡೆಂಟ್​​ಗೂ ಮುನ್ನ ಪಂತ್​​ ಫಿಟ್​​ನೆಸ್​​ ಕಡೆಗೆ ಹೆಚ್ಚು ಗಮನ ನೀಡ್ತಾ ಇರಲಿಲ್ಲ. ಆದ್ರೆ, ಚೇತರಿಕೆಯ ಹಂತದಲ್ಲಿ ಕಟ್ಟು ನಿಟ್ಟಿನ ಡಯಟ್​ ಪಾಲಿಸಿದ್ರು. ಅತಿ ಹೆಚ್ಚು ಇಷ್ಟ ಪಡ್ತಿದ್ದ ರಸಮಲೈ, ಬಿರಿಯಾನಿ, ಫ್ರೈಡ್​ ಚಿಕನ್​ ಅನ್ನ ಆ ಬಳಿಕ ತಿಂದೇ ಇಲ್ವಂತೆ. ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದ ವೇಳೆ ಬೆಂಗಳೂರಲ್ಲೇ ಬಾಡಿಗೆ ಮನೆ ಮಾಡಿದ್ದ ಪಂತ್​, ಮನೆಯೂಟವನ್ನೇ ಮಾಡ್ತಿದ್ರು. ತೂಕ ಇಳಿಸಿಕೊಳ್ಳೋ ಗುರಿ ಇಟ್ಟುಕೊಂಡಿದ್ದ ಪಂತ್​, ಪ್ರತಿ ಅಡಿಗೆಯಲ್ಲೂ 5ML ಹೆಚ್ಚೇ OLIVE OIL ಬಳಸ್ತಿದ್ರು. ಪ್ರೋಟಿನ್​ಗಾಗಿ ಚಿಲ್ಲಿ ಚಿಕನ್​ ತಿಂತಿದ್ದ ಪಂತ್​, ಅದಕ್ಕೂ ಹೆಚ್ಚಿನ OLIVE OIL ಬಳಸ್ತಿದ್ರಂತೆ. ನಿದ್ದೆಯ ವಿಚಾರದಲ್ಲೂ ಪಂತ್​ ನೋ ಕಾಂಪ್ರಮೈಸ್​ ಎಂದಿದ್ರು. ಮೊಬೈಲ್​, ಟಿವಿ, ಐಪ್ಯಾಡ್​​ ಎಲ್ಲವನ್ನೂ ಬದಿಗಿರಿಸಿ ರಾತ್ರಿ ಸರಿಯಾಗಿ 11 ಗಂಟೆಗೆ ಮಲಗಿ ಬಿಡ್ತಿದ್ರು. ದೇಹಕ್ಕೆ ನೀಡ್ತಾ ಇದ್ದ ಈ ವಿಶ್ರಾಂತಿ ಪಂತ್ ಬಹುಬೇಗ ಚೇತರಿಸಿಕೊಳ್ಳಲು ಸಹಾಯ ಮಾಡ್ತು ಅನ್ನೋದನ್ನ ಎನ್​ಸಿಎ ಡಾಕ್ಟರ್ಸೇ ಹೇಳಿದ್ರು.

ಫಿಟ್​​ನೆಸ್​ ಸಾಧಿಸುವ ಹಂತದಲ್ಲಿ ದಿನಕ್ಕೆ 2ವರೆ ಗಂಟೆ ಬ್ಯಾಟಿಂಗ್​ ಅಭ್ಯಾಸ ಮಾಡಿದ್ದ ಪಂತ್ ಬಳಿಕ 45 ನಿಮಿಷಗಳ ಕಾಲ ಕೀಪಿಂಗ್​ ಅಭ್ಯಾಸವನ್ನೂ ನಡೆಸಿದ್ರು. ಒಟ್ನಲ್ಲಿ ಸಾವನ್ನೇ ಗೆದ್ದು ಬಂದಿರೋ ಪಂತ್​ರ ಸೆಕೆಂಡ್​ ಇನ್ನಿಂಗ್ಸ್​ ತುಂಬಾನೇ ಅದ್ಭುತವಾಗಿದೆ. ಟಿ 20 ವಿಶ್ವಕಪ್​ನಲ್ಲೂ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಸಣ್ಣ ಗಾಯ ಆದ್ರೂ ಲೈಫೇ ಮುಗೀತು ಅನ್ನೋರ ನಡುವೆ ಪಂತ್ ಕಮ್​ಬ್ಯಾಕ್ ನಿಜಕ್ಕೂ ಸ್ಪೂರ್ತಿ. ಅವ್ರ ಕರಿಯರ್ ಹೀಗೇ ಮುಂದುವರಿಯಲಿ ಅಂತಾ ನಾವು ಕೂಡ ವಿಶ್ ಮಾಡೋಣ.

Shwetha M