ರಿಷಭ್ ಪಂತ್ ಮನದರಸಿ ಇವಳೇ! – ಕ್ಯೂಟ್ ಜೋಡಿಯ ಲವ್ ಸ್ಟೋರಿ

ಡಿಸಿ ಕ್ಯಾಪ್ಟನ್ ರಿಷಭ್ ಪಂತ್ ಗ್ರೇಟ್ ಕಮ್‌ಬ್ಯಾಕ್ ಮಾಡಿರೋದು ನಿಮಗೆ ಗೊತ್ತೇ ಇದೆ. ಅಪಘಾತದಿಂದ ಚೇತರಿಸಿಕೊಂಡ ಬಳಿಕ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ತೋರಿಸ್ತಿದ್ದಾರೆ ಪಂತ್. ವಿಕೆಟ್ ಕೀಪಿಂಗ್, ಬ್ಯಾಟಿಂಗ್ ನಲ್ಲೂ ಫ್ಯಾನ್ಸ್ ಗೆ ಖುಷಿ ಕೊಡ್ತಿರೋ ರಿಷಭ್ ಪಂತ್ ಹುಡುಗಿ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ನಡೀತಿದೆ. ಹಾಗಾದ್ರೆ, ರಿಷಭ್ ಪಂತ್ ಲವ್ ಸ್ಟೋರಿ ಸೀಕ್ರೆಟ್ ಏನು?, ಪಂತ್ ಹೃದಯ ಕದ್ದ ಹುಡುಗಿ ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಾರಾ ಮೇಲೆ ಗಿಲ್‌ಗೆ ಲವ್ ಇಲ್ವಾ? – ಶುಬ್ಮನ್ ಪ್ರೇಮ್ ಕಹಾನಿಗೆ ಟ್ವಿಸ್ಟ್!
ಈ ಬಾರಿಯ ಐಪಿಎಲ್‌ನಲ್ಲಿ ರಿಷಭ್ ಪಂತ್ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಡಿಸಿ ಕ್ಯಾಪ್ಟನ್ ಪಂತ್ ನೋಡೋದಕ್ಕೂ ಸಖತ್ ಹ್ಯಾಂಡ್ಸಮ್. ಹೀಗಾಗಿಯೇ ಏನೋ ಪಂತ್ ಗರ್ಲ್‌ಫ್ರೆಂಡ್ ಬಗ್ಗೆ ಹುಡುಕಾಟ ಜೋರಾಗಿಯೇ ನಡೀತಿದೆ. ಆದ್ರೆ, ರಿಷಭ್ ಪಂತ್‌ಗೆ ಈಗಾಗಲೇ ಮನಮೆಚ್ಚಿದ ಗೆಳತಿಯಿದ್ದಾಳೆ. ಆ ಬೆಡಗಿಯೇ ಇಶಾ ನೇಗಿ. ರಿಷಭ್ ಪಂತ್ ಗೆಳತಿ ಇಶಾ ನೇಗಿ ಉದ್ಯಮಿಯಾಗಿದ್ದಾರೆ. ಮತ್ತು ಇಂಟೀರಿಯರ್ ಡಿಸೈನರ್ ಕೂಡಾ ಹೌದು. 2019ರಲ್ಲಿ ರಿಷಭ್ ಪಂತ್ ಜತೆ ಇಶಾ ನೇಗಿ ಒಟ್ಟಿಗೆ ನಿಂತುಕೊಂಡ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಈ ಮೂಲಕ ತಾವು ರಿಲೇಷನ್‌ಶಿಪ್‌ನಲ್ಲಿರುವುದು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು. ಈ ಫೋಟೋ ಜತೆಗೆ ಇಶಾ ನೇಗಿ “ನನ್ನ ಹುಡುಗ, ನನ್ನ ಜತೆಗಾರ, ನನ್ನ ಬೆಸ್ಟ್ ಫ್ರೆಂಡ್, ನನ್ನ ಜೀವನದ ಪ್ರೀತಿಪಾತ್ರರಾದ ವ್ಯಕ್ತಿ ರಿಷಭ್ ಪಂತ್” ಎಂದು ಬರೆಯುವ ಮೂಲಕ ಪಂತ್ ಫ್ಯಾನ್ಸ್‌ಗೂ ಸರ್‌ಪ್ರೈಸ್ ನೀಡಿದ್ರು.
ರಿಷಭ್ ಪಂತ್ ಮತ್ತು ಇಶಾ 19ನೇ ವಯಸ್ಸಿನಲ್ಲಿಯೇ ಪ್ರೀತಿ ಮಾಡಲು ಶುರುಮಾಡಿದ್ದರು. 2019ರಲ್ಲಿ ಧೈರ್ಯವಾಗಿಯೇ ತಮ್ಮ ಪ್ರೀತಿ ವಿಚಾರವನ್ನು ರಿವೀಲ್ ಮಾಡಿದ್ದರು. 2020ರಲ್ಲಿ ರಿಷಭ್ ಪಂತ್ ಹಿಮಾವೃತವಾಗಿರುವ ಬೆಟ್ಟವೊಂದರಲ್ಲಿ ಇಶಾ ಜೊತೆಗಿರುವ ರೋಮ್ಯಾಂಟಿಕ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ರು. ಜೊತೆಗೆ ನಾನು ನಿನ್ನೊಂದಿಗೆ ಇದ್ದಾಗ ನನ್ನನ್ನು ನಾನು ಇಷ್ಟಪಡುತ್ತೇನೆ ಅಂತಾ ಬರೆದುಕೊಂಡಿದ್ರು. ಇದಕ್ಕೆ ಪ್ರತಿಯಾಗಿ ಇಶಾ ಫೋಟೋವೊಂದನ್ನು ಪೋಸ್ಟ್ ಮಾಡಿ ನಮ್ಮ ಪ್ರೀತಿಗೆ 5 ವರ್ಷವಾಯ್ತು ಅಂತಾ ಬರೆದುಕೊಂಡಿದ್ದರು. 20 ಫೆಬ್ರವರಿ 1997 ರಂದು ಜನಿಸಿದ ಇಶಾ ನೇಗಿ ಉತ್ತರಾಖಂಡ್ ಮೂಲದವರು. ಇಶಾ ಅವರ ಕುಟುಂಬ ಡೆಹ್ರಾಡೂನ್‌ನಲ್ಲಿ ನೆಲೆಸಿದೆ. ಇಶಾ ಅವರ ತಂದೆ ಉದ್ಯಮಿ. ರಿಷಬ್ ಪಂತ್ ಮತ್ತು ಇಶಾ ನೇಗಿ ಮಧ್ಯೆ ಮಧುರವಾದ ಬಾಂಧವ್ಯವಿದೆ. ಇಬ್ಬರೂ 2018 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಈಗಲೂ ಇಬ್ಬರೂ ತಮ್ಮ ಪ್ರೀತಿಯನ್ನು ಜೋಪಾನಾವಾಗಿ ಕಾಪಾಡಿಕೊಂಡಿದ್ದಾರೆ. ಇವರ ಪ್ರೀತಿ ಸದಾ ಹೀಗೆ ಇರಲಿ.