ಪಾಸ್ ಆಗ್ತಾರಾ ರಿಷಭ್ ಪಂತ್? – ದುಬಾರಿ ಸ್ಟಾರ್ ಗೆ ಟಿಪ್ಸ್ ಏನು?
ಕ್ಯಾಪ್ಟನ್ಸಿ ಬಗ್ಗೆ ಗೋಯೆಂಕಾ ನಕ್ಕಿದ್ದೇಕೆ?

ಅಂತೂ ಇಂತೂ ಐಪಿಎಲ್ ಹಬ್ಬ ಬಂದೇ ಬಿಡ್ತು. 19ನೇ ಸೀಸನ್ ಅದ್ಧೂರಿ ಆರಂಭಕ್ಕೆ ಇನ್ನೊಂದೇ ದಿನ ಬಾಕಿ. ಈ ಆವೃತ್ತಿ ಸಾಕಷ್ಟು ಕಾರಣಗಳಿಂದ ವಿಶೇಷವಾಗಿದೆ. ಹಾಗೇ ಒಂದಷ್ಟು ಆಟಗಾರರ ಮೇಲೂ ಕಣ್ಣಿದೆ. ಅದ್ರಲ್ಲೂ ರಿಷಭ್ ಪಂತ್ ಪರ್ಫಾಮೆನ್ಸ್ ಬಗ್ಗೆ ನಿರೀಕ್ಷೆ ಜಾಸ್ತಿ ಇದೆ. ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ಸಂಭಾವನೆ ಪಡೆದ ಆಟಗಾರ ಪಂತ್ಗೆ ಕಳೆದ ಸೀಸನ್ ಅಂದುಕೊಂಡಂತೆ ಆಗಿರಲಿಲ್ಲ. ಬಟ್ ಈ ಸೀಸನ್ನಲ್ಲಿ ಮಾಜಿ ಕ್ರಿಕೆಟರ್ಸ್ ಒಂದಷ್ಟು ಸಜೇಷನ್ಸ್ ಕೊಟ್ಟಿದ್ದಾರೆ. ಌಂಡ್ ನಾಯಕನ ಬದಲಾವಣೆ ಆಗುತ್ತಾ ಅನ್ನೋ ಪ್ರಶ್ನೆಗಳಿಗೆ ಲಕ್ನೋ ಸೂಪರ್ ಜೇಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ರಿಯಾಕ್ಟ್ ಮಾಡಿದ್ದಾರೆ.
ಇದನ್ನೂ ಓದಿ : IPL ಆರಂಭಕ್ಕೂ ಮುನ್ನ 10 ತಂಡಗಳ ನಾಯಕರೊಂದಿಗೆ ಸಭೆ – ರೂಲ್ಸ್ ಕೇಳಿ ಕ್ಯಾಪ್ಟನ್‌ಗಳು ಆಕ್ರೋಶಗೊಂಡಿದ್ದೇಕೆ ಗೊತ್ತಾ?
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ರಿಷಭ್ ಪಂತ್. ಸಂಜೀವ್ ಗೋಯೆಂಕಾ ಒಡೆತನದ ಫ್ರಾಂಚೈಸಿ 2025 ರ ಮೆಗಾ ಹರಾಜಿನಲ್ಲಿ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್‌ಗಾಗಿ 27 ಕೋಟಿ ರೂ.ಗೆ ಸಹಿ ಹಾಕಿತು, ಇದು ಐಪಿಎಲ್ ಇತಿಹಾಸದಲ್ಲಿ ದಾಖಲೆಯ ಒಪ್ಪಂದವಾಗಿದೆ. ಆದ್ರೆ ಕಳೆದ ಸೀಸನ್ನಲ್ಲಿ ಪಂತ್ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡದ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ ಇತ್ತು. 7 ನೇ ಸ್ಥಾನ ಗಳಿಸಿತು. ಹೀಗಾಗಿ ಪಂತ್ ಈ ಸೀಸನ್ನಲ್ಲಿ ನಾಯಕನಾಗಿ ಮುಂದುವರಿಯಲ್ಲ ಅನ್ನೋ ಚರ್ಚೆ ಶುರುವಾಗಿತ್ತು. ಆದ್ರೆ ಮಾಲೀಕರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
19ನೇ ಸೀಸನ್ ನಲ್ಲೂ ಲಕ್ನೋ ನಾಯಕ ಪಂತ್!
ಕಳೆದ ವರ್ಷ ರಿಸಭ್ ಪಂತ್ ಲಕ್ನೋ ಪರ 14 ಪಂದ್ಯಗಳಲ್ಲಿ 24.45 ಸರಾಸರಿಯಲ್ಲಿ ಕೇವಲ 269 ರನ್ ಗಳಿಸಿದರು. ಒಂದು ಶತಕ ಮತ್ತು 1 ಅರ್ಧಶತಕ ಗಳಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದಲ್ಲಿ ಈ ಶತಕ ಸಿಡಿಸಿದ್ದು, ಆ ಪಂದ್ಯದಲ್ಲೇ ಅವರು ಸ್ಪರ್ಧೆಯಿಂದ ಹೊರಬಿದ್ದರು. ಸೋಲಿನೊಂದಿಗೆ ಟೂರ್ನಿ ಮುಗಿಸಿದ್ರು. ಇದಾದ ಮೇಲೆ ಪಂತ್ ಪ್ರದರ್ಶನ ಹಾಗೇ ಕ್ಯಾಪ್ಟನ್ಸಿ ಬಗ್ಗೆ ಚರ್ಚೆ ಸ್ಟಾರ್ಟ್ ಆಗಿದೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಾಲ್ಕು ಋತುಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಪ್ಲೇಆಫ್ ತಲುಪಿತ್ತು, ಇದು ಅವರ ನಾಯಕತ್ವದ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕಿತು. ಎಲ್‌ಎಸ್‌ಜಿ ಪಂತ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಬಹುದು ಎನ್ನಲಾಗಿತ್ತು. ಆದ್ರೆ ಮಾಲೀಕ ಗೋಯೆಂಕಾ ವದಂತಿಗಳಿಗೆ ತೆರೆ ಎಳೆದಿದ್ದಾರೆ ಮತ್ತು 28 ವರ್ಷ ವಯಸ್ಸಿನ ಪಂತ್ 2026 ರಲ್ಲಿ ಉತ್ತಮ ಋತುವನ್ನು ಹೊಂದುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಸೀಸನ್ಗೆ ಕಾಲಿಡ್ತಿರುವಾಗ ರಿಷಭ್ ಪಂತ್ ನಾಯಕತ್ವದ ಬಗ್ಗೆ ಇರುವ ಊಹಾಪೋಹಗಳನ್ನು ಓದಿ ನಕ್ಕಿದ್ದೆ. ಅವರ ಪಾತ್ರ ಮತ್ತು ಬದ್ಧತೆಯನ್ನು ತಿಳಿದುಕೊಳ್ಳಲು ನಾವು ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದೇವೆ. ಉತ್ತಮ ಋತುವನ್ನು ಹೊಂದಿರಿ, ಕ್ಯಾಪ್! ಎಂದು ಗೋಯೆಂಕಾ X ನಲ್ಲಿ ಬರೆದಿದ್ದಾರೆ. ಲಾಸ್ಟ್ ಸೀಸನ್ನಲ್ಲಿ ಡಲ್ ಇದ್ದ ರಿಷಭ್ ಪಂತ್ ಈ ಸೀಸನ್ ಕಂ ಬ್ಯಾಕ್ ಮಾಡೋಕೆ ಕಾಯ್ತಿದ್ದಾರೆ.

ನೋಡಿರಿ

