FLOP ಪಂತ್ POWER ಶೋ – 3 ಪಂದ್ಯ.. 3 ಸೆಂಚುರಿ.. 2 ಪಲ್ಟಿ
ರಿಷಭ್ OK ಸೆಲೆಬ್ರೇಷನ್ ಸೀಕ್ರೆಟ್

 FLOP ಪಂತ್ POWER ಶೋ – 3 ಪಂದ್ಯ.. 3 ಸೆಂಚುರಿ.. 2 ಪಲ್ಟಿರಿಷಭ್ OK ಸೆಲೆಬ್ರೇಷನ್ ಸೀಕ್ರೆಟ್

ಆಂಗ್ಲರ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಒಂದೇ ಪಂದ್ಯದಲ್ಲಿ 5 ಸೆಂಚುರಿಗಳು ಬಂದಿವೆ. ಭಾರತದ ಇತಿಹಾಸದಲ್ಲೇ ಅತಿದೊಡ್ಡ ದಾಖಲೆ ಇದು. ಅದ್ರಲ್ಲೂ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ್ದು ರಿಷಭ್ ಪಂತ್. ವಿಕೆಟ್​ ಕೀಪರ್​ ಆಗಿ ಟೆಸ್ಟ್​ ಪಂದ್ಯ ಒಂದರಲ್ಲೇ ಎರಡೂ ಇನ್ನಿಂಗ್ಸ್​ಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಪ್ಲೇಯರ್ ಪಂತ್. ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ವೊಂದರ ಎರಡೂ ಇನ್ನಿಂಗ್ಸ್​ಗಳಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್​ ಕೂಡ ಆಗಿದ್ದಾರೆ. ಆದ್ರೆ ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಪಂತ್ ಪ್ರದರ್ಶನ ಹೀಗಿರಲಿಲ್ಲ.

ಇದನ್ನೂ ಓದಿ : ರಾಹುಲ್ ಮತ್ತು ರಿಷಭ್ ಜೊತೆಯಾಟಕ್ಕೆ ಪತರುಗುಟ್ಟಿದ ಇಂಗ್ಲೆಂಡ್!- ಟಾರ್ಗೆಟ್ ಚೇಸ್ ಮಾಡಿ ಇತಿಹಾಸ ನಿರ್ಮಿಸುತ್ತಾ ಇಂಗ್ಲೆಂಡ್?

ರಿಷಭ್ ಪಂತ್ ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದಾರೆ. ಬಟ್ ಐಪಿಎಲ್​ನಲ್ಲಿ ಪಂತ್ ಸ್ಥಿತಿ ಹೀಗಿರಲಿಲ್ಲ. ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೇಂಟ್ಸ್ ತಂಡ ಸೇರಿದ್ದ ಪಂತ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಿರಲಿಲ್ಲ. ಕಳಪೆ ಫಾರ್ಮ್​ನಲ್ಲಿದ್ರು. ಲೀಗ್ ಹಂತದ ಕೊನೇ ಪಂದ್ಯದಲ್ಲಿ ಮೇ 27ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಶತಕ ಸಿಡಿಸಿದ್ದರು. ಅಲ್ಲಿಂದ ಈಚೆಗೆ ಪಂತ್ ಬೇರೆಯದ್ದೇ ಲೆವೆಲ್​ಗೆ ಪರ್ಫಾಮ್ ಮಾಡ್ತಾರೆ. ಐಪಿಎಲ್​ನಲ್ಲಿ ಸೇವ್ ಮಾಡಿದ್ದ ಎನರ್ಜಿನೆಲ್ಲಾ ಈಗ ಟೀ ಇಂಡಿಯಾ ಪರ ರಿಲೀಸ್ ಮಾಡ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿದ್ದಾರೆ. ಅಂದ್ರೆ ಐಪಿಎಲ್ ಸೇರಿ ಸತತ ಮೂರು ಶತಕಗಳನ್ನ ಬಾರಿಸಿದ್ದಾರೆ.

ಎರಡನೇ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಶತಕ ಬಾರಿಸಿದಾಗ ಮೇನ್ ಹೈಲೆಟ್ ಆಗಿದ್ದು ಸುನಿಲ್ ಗವಾಸ್ಕರ್. ಯಾಕಂದ್ರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಂತ್ ಔಟಾದಾಗ ಕಮೆಂಟ್ರಿ ಮಾಡ್ತಿದ್ದ ಸುನಿಲ್ ಗವಾಸ್ಕರ್ ಸ್ಟುಪಿಡ್ ಸ್ಟುಪಿಡ್ ಸ್ಟುಪಿಡ್ ಅಂತಾ 3 ಸಲ ಬೈದಿದ್ರು. ಆದ್ರೆ ಅದೇ ಗವಾಸ್ಕರ್ ಈಗ ಪಂತ್​ರನ್ನ ಅಪ್ರಿಶಿಯೇಟ್ ಮಾಡ್ಬೇಕು ಅಂತಾನೇ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ರು. ಪಂತ್ ಶತಕ ಬಾರಿಸುತ್ತಿದ್ದಂತೆ ಕ್ಲಾಪ್ಸ್ ಹಾಲಿ ಅಪ್ರಿಶಿಯೇಟ್ ಮಾಡಿದ್ರು. ಹಾಗೇ ಪಲ್ಟಿ ಹೊಡೆಯುವಂತೆ ಕೈಸಹ್ನೆ ಮಾಡಿದ್ರು. ಆದ್ರೆ ನೆಕ್ಸ್​ಟ್ ಟೈಂ ಮಾಡ್ತೇನೆ ಅಂತಾ ಪಂತ್ ಕೂಡ ಸಹ್ನೆ ಮೂಲಕವೇ ನಿರಾಕರಿಸಿದ್ರು.

ಸತತ ಎರಡನೇ ಬಾರಿಗೆ ಸೆಂಚುರಿ ಬಾರಿಸಿದ ಪಂತ್ ಇಲ್ಲೂ ಕೂಡ ತಮ್ಮ ವಿಭಿನ್ನ ರೀತಿಯಲ್ಲೇ ಇಲ್ಲೂ ಆಚರಣೆ ಮಾಡ್ತಾರೆ. ಅಂದ್ರೆ ಫ್ರಂಟ್ ಫ್ಲಿಪ್ ಹೊಡೀತಾರೆ ಅಂತಾನೇ ಎಲ್ರೂ ಇಮ್ಯಾಜಿನ್ ಮಾಡಿದ್ರು. ಗ್ಲೌಸ್​ಗಳನ್ನ ತೆಗೆದು ಹೆಲ್ಮೆಟ್ ತೆಗೆದಿದ್ದನ್ನ ನೋಡ್ದಾಗ ಪಕ್ಕಾ ಅನ್ಕೊಂಡಿದ್ರು. ಆದ್ರೆ ಈ ಪಂದ್ಯದಲ್ಲಿ ಬೇರೆಯದ್ದೇ ಶೈಲಿಯಲ್ಲಿ ಸೆಲೆಬ್ರೇಟ್ ಮಾಡಿದ್ರು. ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ಒಟ್ಟಿಗೆ ಸೇರಿಸಿ ಕಣ್ಣಿನ ಮೇಲೆ ಇಟ್ಟು OK ಸೆಲೆಬ್ರೆಷನ್​ ಮಾಡಿದರು. ಇದು ನೋಡ್ದಾಗ ನಾರ್ಮಲ್ ಅನ್ನಿಸಬಹುದು. ಬಟ್ ಈ ಥರ ಸೆಲೆಬ್ರೇಷನ್ ಕ್ರೀಡೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅದ್ರಲ್ಲೂ ಈ ಸ್ಟೈಲ್​ನ ಡೇಲೇ ಅಲ್ಲಿ ಸೆಲೆಬ್ರೇಷನ್ ಅಂತಾನೇ ಕರೆಯಲಾಗುತ್ತೆ.

ಈ ಸ್ಟೈಲ್​ ಸೆಲೆಬ್ರೇಷನ್​ನ ಏಳು ವರ್ಷಗಳ ಹಿಂದೆ ಪ್ರಸಿದ್ಧ ಫುಟ್ಬಾಲ್​ ಆಟಗಾರ ಡೇಲೇ ಅಲ್ಲಿ ಗೋಲ್​ ಸಿಡಿಸಿದ್ದ ವೇಳೆ ಆಚರಣೆ ಮಾಡಿದ್ದರು. ಟೊಟೆನ್‌ಹ್ಯಾಮ್ ಹಾಟ್ಸ್‌ಪರ್ ಸಾಕರ್ ತಂಡದ ಸದಸ್ಯರಾದ ಡೆಲೆ ಆಲಿ, 2018ರಲ್ಲಿ ನ್ಯೂಕ್ಯಾಸಲ್ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ ನಂತರ ಈ ರೀತಿ ಆಚರಣೆಯನ್ನು ಮಾಡಿದ್ದರು. ಈ ಆಚರಣೆ ದೊಡ್ಡ ಸಂಚಲನ ಸೃಷ್ಟಿಸಿತ್ತು. ತುಂಬಾ ಜನ ತಮ್ಮ ಬೆರಳುಗಳನ್ನು ಮಡಚಿ ಕಣ್ಣ ಮುಂದೆ ಹಿಡಿದುಕೊಳ್ಳುವುದು ಒಂದು ಟ್ರೆಂಡ್ ಆಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳು ಮತ್ತು ವೀಡಿಯೋಗಳು ಹರಿದಾಡಿದ್ವು.  ಈಗ ಮತ್ತೊಮ್ಮೆ ರಿಷಭ್ ಪಂತ್ ಮತ್ತೆ ಆ ಸಂಭ್ರಮಾಚರಣೆಯನ್ನ ರೀ ಕ್ರಿಯೇಟ್ ಮಾಡಿದ್ದಾರೆ.

Shantha Kumari