ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಬೆಸ್ಟ್ ವಾರ್ – ಕ್ಯಾಪ್ಟನ್ಸಿ, ರನ್, ಕೀಪಿಂಗ್ ಹೇಗಿದೆ?
ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಸ್. ಪ್ರಸ್ತುತ ಭಾರತ ತಂಡದ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮ್ಯಾನೇಜ್ಮೆಂಟ್ನ ಫಸ್ಟ್ ಚಾಯ್ಸ್ ಆಗಿದ್ದಾರೆ. ಹೀಗೆ ಭಾರತ ತಂಡದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡ್ತಿರೋ ಇವ್ರಿಬ್ರು ಐಪಿಎಲ್ನಲ್ಲೂ ಕೂಡ ಪವರ್ಫುಲ್ ಪ್ಲೇಯರ್ಸ್. ವಿಷ್ಯ ಏನಪ್ಪ ಅಂದ್ರೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಇವ್ರಿಬ್ಬರ ಟೀಮ್ಗಳು ಚೇಂಜ್ ಆಗಿವೆ. ಪಂತ್ ಲೀಡ್ ಮಾಡ್ತಿದ್ದ ತಂಡಕ್ಕೆ ಈ ಸಲ ಕೆಎಲ್ ರಾಹುಲ್ ಸೇರಿದ್ದಾರೆ. ಕೆಎಲ್ ರಾಹುಲ್ ಲೀಡ್ ಮಾಡಿದ್ದ ತಂಡದ ಸಾರಥ್ಯ ಈ ವರ್ಷ ಪಂತ್ಗೆ ಸಿಕ್ಕಿದೆ. ಒಂಥರಾ ಅದಲು ಬದಲು ಆಟ ಅಂದ್ರೂ ತಪ್ಪಾಗಲ್ಲ. ಹೀಗೆ ಎಕ್ಸ್ಚೇಂಜ್ ಆದ್ಮೇಲೆ ಇವ್ರಿಬ್ಬರಲ್ಲಿ ಯಾರು ಬೆಸ್ಟ್ ಅಂತಾ ಅಭಿಮಾನಿಗಳ ನಡುವೆ ಚರ್ಚೆ ಶುರುವಾಗಿದೆ.
ಇದನ್ನೂ ಓದಿ : IND Vs ENG.. ಕೋಚ್ ಗಳ ಫೈಟ್ – 10 ವರ್ಷಗಳ ವಿಜಯಯಾತ್ರೆಗೆ ಸವಾಲು
ಐಪಿಎಲ್ನಲ್ಲಿ ರಿಷಭ್ ಪಂತ್ ಅವ್ರಿಗೆ ಹೋಲಿಸಿದರೆ ಕೆಎಲ್ ರಾಹುಲ್ ಅನುಭವಿ ಆಟಗಾರ. ರಿಷಭ್ ಪಂತ್ ಈಗಾಗಲೇ 3 ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇದಕ್ಕೂ ಹೆಚ್ಚಿನ ಅನುಭವ ರಾಹುಲ್ ಅವರಿಗೆ ಇದೆ. ಬಟ್ ಲಾಸ್ಟ್ ಸೀಸನ್ನಲ್ಲಿ ಲಕ್ನೋ ಮಾಲೀಕರೊಂದಿಗೆ ನಾಯಕ ರಾಹುಲ್ ಮಾಡಿಕೊಂಡಿದ್ದ ಜಟಾಪಟಿಯಿಂದ ರಾಹುಲ್ ತಂಡವನ್ನ ಬಿಟ್ಟು ಹರಾಜಿಗೆ ಬಂದಿದ್ರು. ಹರಾಜಿನಲ್ಲಿ ರಾಹುಲ್ರನ್ನ ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಇನ್ನು ಡೆಲ್ಲಿ ತಂಡದಿಂದ ರಿಲೀಸ್ ಆಗಿದ್ದ ರಿಷಭ್ ಪಂತ್ರನ್ನ ಲಕ್ನೋ ತಂಡ ಬರೋಬ್ಬರಿ 27 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಐಪಿಎಲ್ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆದ ಆಟಗಾರ ಎಂಬ ದಾಖಲೆಯೂ ನಿರ್ಮಾಣವಾಯ್ತು. ಹಾಗೇ ಲಕ್ನೋ ಫ್ರಾಂಚೈಸಿಗೆ ಪಂತ್ಗೆ ನಾಯಕತ್ವವನ್ನೂ ನೀಡಿದೆ. ಐಪಿಎಲ್ನಲ್ಲಿ ರಾಹುಲ್ಗಿಂತ ಪಂತ್ 13 ಕೋಟಿ ರೂಪಾಯಿ ಹೆಚ್ಚು ಸಂಭಾವನೆಯನ್ನ ಪಡೆಯಲಿದ್ದಾರೆ.
ಇನ್ನು ಐಪಿಎಲ್ ಅಂತಾ ಬಂದಾಗ ರಾಹುಲ್ ಮತ್ತು ರಿಷಭ್ ಇಬ್ಬರೂ ಕೂಡ ಕ್ಯಾಪ್ಟನ್ ಆಗಿ ತಂಡಗಳನ್ನ ಲೀಡ್ ಮಾಡಿದ್ದವ್ರೇ. ಸೋ ಕ್ಯಾಪ್ಟನ್ಸಿ ಸಾಧನೆ ಹೇಗಿದೆ ಅನ್ನೋದನ್ನ ನೋಡೋದಾದ್ರೆ ರಿಷಭ್ ಪಂತ್ ಅವ್ರು 2021ರಲ್ಲಿ ಶ್ರೇಯಸ್ ಅಯ್ಯರ್ ಅವ್ರ ಆಬ್ಸೆನ್ಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನ ವಹಿಸಿಕೊಂಡಿದ್ರು. ಈ ವೇಳೆ ಟೇಬಲ್ ಟಾಪರ್ ಆಗಿ ಪ್ಲೇಆಫ್ಗೂ ಕ್ವಾಲಿಫೈ ಆಗಿದ್ರು. ಬಟ್ ಕಪ್ ಗೆಲ್ಲೋಕೆ ಸಾಧ್ಯವಾಗಿರಲಿಲ್ಲ. ಆದ್ರೆ 2022 ಮತ್ತು 24 ರಲ್ಲಿ ಪಂತ್ ಅವರ ನಾಯಕತ್ವದಲ್ಲಿ ದೆಹಲಿ ತಂಡ ಪ್ಲೇಆಫ್ ಕೂಡ ಪ್ರವೇಶ ಪಡೆದಿರಲಿಲ್ಲ. ಇದ್ರ ನಡುವೆ 2023ರಲ್ಲಿ ಪಂತ್ ಐಪಿಎಲ್ನಲ್ಲಿ ಆಡೋದಿಲ್ಲ. ಅಪಘಾತದಿಂದಾಗಿ ಗಾಯಗೊಂಡಿದ್ದ ಪಂತ್ ರಿಕವರ್ ಆಗದ ಕಾರಣ 2023ರಲ್ಲಿ ಯಾವುದೇ ಪಂದ್ಯಗಳನ್ನ ಆಡಿರಲಿಲ್ಲ. ಹೀಗೆ 2021, 2022, 2024ರಲ್ಲಿ ಮೂರು ವರ್ಷ ಡೆಲ್ಲಿ ತಂಡವನ್ನ ಲೀಡ್ ಮಾಡಿದ್ದು 43 ಪಂದ್ಯಗಳನ್ನ ಆಡಿದ್ದಾರೆ. ಇದ್ರಲ್ಲಿ 23 ಪಂದ್ಯಗಳನ್ನ ಗೆದ್ದಿದ್ದಾರೆ. ಕ್ಯಾಪ್ಟನ್ ಆಗಿ ವಿನ್ನಿಂಗ್ ಪರ್ಸೆಂಟೇಜ್ 53.48 ಇದೆ.
ಇನ್ನು ಕೆಎಲ್ ರಾಹುಲ್ ಕಳೆದ 5 ವರ್ಷಗಳಿಂದ ಐಪಿಎಲ್ನಲ್ಲಿ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. 2020ರ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ನಾಯಕನಾಗಿ ಆಯ್ಕೆಯಾಗಿದ್ರು. 2020 ಮತ್ತು 21ರಲ್ಲಿ ಪಂಜಾಬ್ ಸಾರಥಿಯಾಗಿ 27 ಪಂದ್ಯಗಳನ್ನ ಆಡಿದ್ದಾರೆ. ಇದ್ರಲ್ಲಿ 10 ರಲ್ಲಿ ಗೆಲುವು ಸಾಧಿಸಿದ್ದು ವಿನ್ನಿಂಗ್ ಪರ್ಸೆಂಟೇಟ್ 37.07 ಇದೆ. ಅದಾದ ಬಳಿಕ 2022ರಲ್ಲಿ ಲಕ್ನೋ ತಂಡ ರಾಹುಲ್ರನ್ನ ಖರೀದಿ ಮಾಡಿ ಕ್ಯಾಪ್ಟನ್ಸಿ ನೀಡಿತ್ತು. ಕೆಎಲ್ ಸಾರಥ್ಯದಲ್ಲಿ ಎಲ್ಎಸ್ಜಿ ಟೀಂ ಕಳೆದ ಮೂರು ಸೀಸನ್ಗಳಲ್ಲಿ ಕಣಕ್ಕಿಳಿದಿತ್ತು. ಈ ವೇಳೆ 37 ಪಂದ್ಯಗಳನ್ನ ಆಡಿದ್ದು, 21ರಲ್ಲಿ ಗೆಲುವು ಕಂಡಿದೆ. 2022 ಮತ್ತು 2023ರಲ್ಲಿ ಪ್ಲೇಆಫ್ಗೂ ಪ್ರವೇಶ ಪಡೆದಿತ್ತು. ಬಟ್ 2024ರಲ್ಲಿ ಪ್ಲೇಆಫ್ಗೂ ಎಂಟ್ರಿ ಕೊಡೋಕೆ ಸಾಧ್ಯವಾಗಲಿಲ್ಲ. ಓವರ್ ಆಲ್ ಆಗಿ ಕಳೆದ 5 ವರ್ಷಗಳಲ್ಲಿ ಕೆಎಲ್ ರಾಹುಲ್ 64 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಇದ್ರಲ್ಲಿ 31 ಪಂದ್ಯಗಳನ್ನ ಗೆದ್ದಿದ್ದು ಅವ್ರ ವಿನ್ನಿಂಗ್ ಪರ್ಸೆಂಟೇಜ್ 48.43 ಇದೆ.
ಕ್ಯಾಪ್ಟನ್ ಆಗಿ ತಂಡಗಳನ್ನ ಮುನ್ನಡೆಸೋದ್ರ ಜೊತೆಗೆ ಉತ್ತಮ ಸ್ಕೋರ್ ಕೂಡ ಮಾಡಿದ್ದಾರೆ. ರಿಷಭ್ ಪಂತ್ ನಾಯಕನಾಗಿ ಆಡಿದ 43 ಪಂದ್ಯಗಳಿಂದ 1205 ರನ್ ಕಲೆ ಹಾಕಿದ್ದಾರೆ. ಲಾಸ್ಟ್ ಸೀಸನ್ನಲ್ಲಿ ಗುಜರಾತ್ ವಿರುದ್ಧ 43 ಎಸೆತಗಳಲ್ಲಿ 88 ರನ್ ಬಾರಿಸಿ ನಾಟೌಟ್ ಆಗಿದ್ದೇ ಹೈಯೆಸ್ಟ್ ಸ್ಕೋರ್. ಇನ್ನು ರಾಹುಲ್ ವಿಚಾರಕ್ಕೆ ಬಂದ್ರೆ 64 ಪಂದ್ಯಗಳಲ್ಲಿ ನಾಯಕನಾಗಿ 2,691 ರನ್ ಸ್ಕೋರ್ ಮಾಡಿದ್ದಾರೆ. 2020ರಲ್ಲಿ ಆರ್ ಸಿಬಿ ವಿರುದ್ಧ 69 ಎಸೆತಗಳಲ್ಲಿ 132 ರನ್ ಗಳಿಸಿ ನಾಟೌಟ್ ಆಗಿ ಉಳಿದಿರೋದೇ ಹೈಯೆಸ್ಟ್ ಸ್ಕೋರ್ ಆಗಿದೆ. ಇನ್ನು ಇಬ್ಬರೂ ವಿಕೆಟ್ ಕೀಪರ್ ಬ್ಯಾಟರ್ಸ್ ಆಗಿದ್ದು, ಐಪಿಎಲ್ನಲ್ಲಿ ಓವರ್ ಆಲ್ ಆಗಿ ಪಂತ್ 95 ವಿಕೆಟ್ಗಳನ್ನ ಪಡೆದಿದ್ದಾರೆ. ಕ್ಯಾಪ್ಟನ್ ಆಗಿ 41 ವಿಕೆಟ್ ಕಿತ್ತಿದ್ದಾರೆ. ಇನ್ನು ಕೆಎಕ್ ರಾಹುಲ್ ಅವ್ರು ಒಟ್ಟಾರೆಯಾಗಿ ಐಪಿಎಲ್ನಲ್ಲಿ 63 ಬಾರಿ ಕೀಪಿಂಗ್ನಲ್ಲಿ ವಿಕೆಟ್ ತೆಗೆದಿದ್ದಾರೆ. ನಾಯಕನಾಗಿ 35 ಸಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ರಾಹುಲ್ ಮತ್ತು ಪಂತ್ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಬ್ಯಾಟ್ಸ್ಮನ್ ಆಗಿ, ವಿಕೆಟ್ ಕೀಪರ್ ಆಗಿ, ಕ್ಯಾಪ್ಟನ್ ಆಗಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.