ಬೆರಳು ಮುರಿದ್ರೂ ಬ್ಯಾಟಿಂಗ್ ಇಳಿದ ಪಂತ್ – ಮ್ಯಾಚ್ ಗೆಲ್ಲೋಕೆ ರಿಸ್ಕ್ ತಗೊಂಡ್ರಾ?
BCCI ನಿರ್ಧಾರ ರಿಷಭ್ ಗೆ ಸಂಕಷ್ಟ?

ಐಪಿಎಲ್ನಲ್ಲಿ ಫ್ಲ್ಯಾಪ್ ಆದ್ರೂ ಇಂಗ್ಲೆಂಡ್ ಸರಣಿಯಲ್ಲಿ ಪವರ್ ಫುಲ್ ಪ್ರದರ್ಶನದ ಮೂಲಕ ರಿಷಭ್ ಪಂತ್ ಕಮ್ ಬ್ಯಾಕ್ ಮಾಡಿದ್ರು. ಅಷ್ಟೇ ಅಲ್ಲ ಮಿಡಲ್ ಆರ್ಡರ್ನ ಬಲ ಆಗಿದ್ದಾರೆ. ಸರಣಿಯುದ್ಧಕ್ಕೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡಿದ್ದಾರೆ. ಆದ್ರೆ ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರೋ ನಾಲ್ಕನೇ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲಿನಲ್ಲಿ ಸೋರುತ್ತಿದ್ದ ರಕ್ತ, ಊದಿದ ಬೆರಳು, ಪಂತ್ ನರಳಾಟ ಕಂಡು ಟೀಂ ಇಂಡಿಯಾ ಫ್ಯಾನ್ಸ್ ಕೂಡ ಟೆನ್ಷನ್ ಆಗಿದ್ರು.
ಇದನ್ನೂ ಓದಿ : ರಿಷಭ್ ಪಂತ್ ಕಾಲು ಬೆರಳಿನ ಮೂಳೆ ಮುರಿತ – ಟೀಮ್ ಇಂಡಿಯಾದಲ್ಲಿ ಹತ್ತೇ ಪ್ಲೇಯರ್ಸ್ ಆಡ್ಬೇಕಾ?
ಕಾಲ್ಬೆರಳು ಮುರಿತ.. 6 ವಾರ ರೆಸ್ಟ್ ಹೇಳಿದ ಡಾಕ್ಟರ್!
ಮೊದಲ ಇನ್ನಿಂಗ್ಸ್ನ ಮೊದಲ ದಿನದಾಟದಲ್ಲಿ 67.4ನೇ ಓವರ್ನಲ್ಲಿ ಕ್ರಿಸ್ ವೋಕ್ಸ್ ಎಸೆದ ಬಾಲು ಶರವೇಗದಲ್ಲಿ ನುಗ್ಗಿತ್ತು. ರಿವರ್ಸ್ ಸ್ವೀಪ್ ಯತ್ನದ ವೇಳೆ ಬಾಲ್ ಸೀದಾ ಪಂತ್ ಪಾದಕ್ಕೆ ಬಡಿಯಿತು. ಇಲ್ಲಿ ಎಲ್ಬಿಡಬ್ಲ್ಯೂ ಹೈಡ್ರಾಮಾ ನಡೀತಿದ್ರೆ ಪಂತ್ ನರಳಾಡ್ತಿದ್ರು. ಬಳಿಕ ಫಿಸಿಯೋ ಮೈದಾನಕ್ಕೆ ಬಂದು ಚೆಕ್ ಮಾಡಿದ್ರು. ಕಾಲಿನಲ್ಲಿ ರಕ್ತ ಸೋರುತ್ತಿತ್ತು. ಕೂಡ್ಲೇ ಌಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ರಿಪೋರ್ಟ್ ಹೊರಬಿದ್ದಿದೆ. ಬಾಲು ಬಿದ್ದ ರಭಸಕ್ಕೆ ಪಂತ್ ಕಾಲಿನ ಮುಳೆ ಮುರಿತವಾಗಿದೆ. ಒಬ್ಬರೇ ನಡೆಯೋದು ಕೂಡ ಕಷ್ಟ. ಮುಂದಿನ 6 ವಾರಗಳ ಕಾಲ ಕಂಪ್ಲೀಟ್ ರೆಸ್ಟ್ ಪಡೆಯಲೇಬೇಕು. ಹೀಗಿದ್ರೂ ಪಂತ್ ವಿಚಾರದಲ್ಲಿ ಬಿಸಿಸಿಐ ರಿಸ್ಕ್ ತಗೊಳ್ತಿದ್ಯಾ ಅನ್ನೋ ಅನುಮಾನಗಳು ಮೂಡಿವೆ.
ಪಂತ್ ಇಂಜುರಿ ಬಗ್ಗೆ ಬಿಸಿಸಿಐ ಬಿಗ್ ಅಪ್ ಡೇಟ್!
ಇನ್ನು ಪಂತ್ ಇಂಜುರಿ ಬಗ್ಗೆ ಬಿಸಿಸಿಐ ಅಪ್ಡೇಟ್ ನಿಡಿದೆ. ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ದಿನದಂದು ಬಲಗಾಲಿಗೆ ಗಾಯ ಮಾಡಿಕೊಂಡಿದ್ದ ರಿಷಭ್ ಪಂತ್, ಪಂದ್ಯದ ಉಳಿದ ಭಾಗಕ್ಕೆ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ನಿರ್ವಹಿಸುವುದಿಲ್ಲ. ಧ್ರುವ್ ಜುರೆಲ್ ವಿಕೆಟ್ ಕೀಪರ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಗಾಯದ ಹೊರತಾಗಿಯೂ, ರಿಷಭ್ ಪಂತ್ 2 ನೇ ದಿನದಂದು ತಂಡವನ್ನು ಸೇರಿಕೊಂಡಿದ್ದಾರೆ ಮತ್ತು ತಂಡದ ಅವಶ್ಯಕತೆಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಲು ಲಭ್ಯವಿರುತ್ತಾರೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಅಂದ್ರೆ ಗಾಯದ ಹೊರತಾಗಿಯೂ ಪಂತ್ ಬ್ಯಾಟಿಂಗ್ಗೆ ಬರ್ತಾರೆ. ರನ್ಸ್ ಓಡೋಕೆ ಆಗದೇ ಇದ್ರೂ ಸಿಕ್ಸ್, ಫೋರ್ಗಳ ಮೂಲಕ ಎಷ್ಟಾಗುತ್ತೋ ಅಷ್ಟು ರನ್ಸ್ ಬರ್ಲಿ ಅನ್ನೋದು ಮ್ಯಾನೇಜ್ಮೆಂಟ್ ಪ್ಲ್ಯಾನ್ ಇದ್ದಂತಿದೆ. ಅದೇ ಪ್ಲ್ಯಾನ್ನಂತೆಯೇ ಪಂತ್ರನ್ನ ಫೀಲ್ಡಿಗಿಳಿಸಿದೆ. ಎರಡನೇ ದಿನದಾಟದಲ್ಲಿ ಪಂದ್ಯ ಆರಂಭವಾದ ವೇಳೆ ಪಂತ್ ವೈಟ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರಿಂದ ಪಂತ್ ಬ್ಯಾಟಿಂಗ್ ಬರ್ತಾರಾ ಅನ್ನೋ ಡೌಟ್ ಶುರುವಾಗಿತ್ತು. ಅದ್ರಂತೆ ಶಾರ್ದೂಲ್ ಠಾಕೂರ್ ವಿಕೆಟ್ ಬಿದ್ದ ಮೇಲೆ ಪಂತ್ ಬ್ಯಾಟಿಂಗ್ಗೆ ಬಂದ್ರು. ಅಷ್ಟೊಂದು ನೋವಿನಲ್ಲೂ ಪಂತ್ ಬ್ಯಾಟಿಂಗ್ಗೆ ಬಂದಿದ್ದನ್ನ ನೋಡಿ ಪ್ರೇಕ್ಷಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿ ಅಪ್ರಿಶಿಯೇಟ್ ಮಾಡಿದ್ರು.
ಮೊದಲನೇ ಪಂದ್ಯದಿಂದಲೇ ಉತ್ತಮ ಫಾರ್ಮ್ ನಲ್ಲಿದ್ದ ಪಂತ್!
ರಿಷಭ್ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್. ಇಂಗ್ಲೆಂಡ್ ಸರಣಿಯಲ್ಲೂ ಕೂಡ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಮೊದಲ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲೂ ರಿಷಭ್ ಪಂತ್ ಶತಕ ಸಿಡಿಸಿದ್ದರು. ಇನ್ನು ದ್ವಿತೀಯ ಪಂದ್ಯದಲ್ಲಿ ಒಟ್ಟು 90 ರನ್ ಕಲೆಹಾಕಿದ್ದರು. ಮೂರನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 83 ರನ್ಗಳಿಸಿದ್ದರು. ಇದೀಗ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 37 ರನ್ ಬಾರಿಸಿದ್ರು.. ಈ ಮೂಲಕ ಒಟ್ಟು 462 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಪಂತ್ ಬ್ಯಾಟಿಂಗ್ ನಿಂದ ಹೊರಗುಳಿದ್ರೆ ಟೀಮ್ ಇಂಡಿಯಾ ಪಾಲಿಗೆ ಸೆಟ್ ಬ್ಯಾಕ್ ಆಗಲಿದೆ.
ಪಂತ್ ಇಂಜುರಿಯಿಂದಾಗಿ ಜ್ಯುರೇಲ್ ವಿಕೆಟ್ ಕೀಪರ್!
ಬಿಸಿಸಿಐ ಹೇಳಿಕೆ ಪ್ರಕಾರ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡ್ತಾರೆ. ಯಾಕಂದ್ರೆ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ರಿಷಭ್ ಪಂತ್ ಅವರ ಬೆರಳಿಗೆ ಗಾಯವಾಗಿತ್ತು. ಈ ವೇಳೆ ಬದಲಿ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಕಾಣಿಸಿಕೊಂಡಿದ್ದರು. ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ನಲ್ಲೂ ಜುರೇಲ್ ಕೀಪಿಂಗ್ ಜವಾಬ್ದಾರಿ ತಗೊಳ್ತಾರೆ. ಬಟ್ ಬ್ಯಾಟಿಂಗ್ ವಿಚಾರ ಬಂದಾಗ ಪಂತ್ ಮಾತ್ರವೇ ಬ್ಯಾಟಿಂಗ್ ಮಾಡ್ಬೇಕಾಗುತ್ತೆ. ಪಂತ್ ಕಾಲಿಗೆ ಗಾಯ ಮಾಡಿಕೊಂಡು ರಿಟೈರ್ಡ್ ಹರ್ಟ್ ಆಗಿರೋದ್ರಿಂದ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಇರೋದಿಲ್ಲ. ಹೀಗಾಗಿ ಜುರೇಲ್ ಅವರನ್ನು ಕೇವಲ ಕೀಪರ್ ಆಗಿ ಮಾತ್ರ ಬಳಸಿಕೊಳ್ಳಬಹುದು.
ತಲೆಗೆ ಚೆಂಡು ಬಡಿದರೆ ಮಾತ್ರವೇ ಬದಲಿ ಆಟಗಾರ!
ತುಂಬಾ ಜನ್ರಿಗೆ ಇರೋ ಪ್ರಶ್ನೆ ಇದೆ. ಈಗ ಪಂತ್ ರಿಟೈರ್ಡ್ ಹರ್ಟ್ ಅಂದ್ರೆ ಇಂಜುರಿಯಿಂದಾಗಿ ಹೊರಗೆ ಬಿದ್ದಿದ್ದಾರೆ. ಸೋ ಅವ್ರ ಬದಲಿಗೆ ಇನ್ನೊಬ್ಬರ ಬ್ಯಾಟಿಂಗ್ಗೆ ಇಳಿಸ್ಬೊದಲ್ಲ ಅನ್ನೋದು. ಬಟ್ಐಸಿಸಿಯ ನಿಯಮ ಪ್ರಕಾರ, ಕ್ರಿಕೆಟ್ ಆಡುವಾಗ ಬ್ಯಾಟರ್ ಅಥವಾ ಬೌಲರ್ ತಲೆಗೆ ಚೆಂಡು ಬಡಿದರೇ ಮಾತ್ರವೇ ಅದೇ ಸಾಮರ್ಥ್ಯದ ಆಟಗಾರರನ್ನು ಬದಲಿ ಪ್ಲೇಯರ್ ಆಗಿ ಕಣಕ್ಕಿಳಿಸಬಹುದು. ಉಳಿದಂತೆ ದೇಹದ ಯಾವುದೇ ಭಾಗದಲ್ಲಿ ಚೆಂಡು ಬಡಿದು ಗಾಯಗೊಂಡ್ರೂ ಈ ನಿಯಮ ಅನ್ವಯಿಸೋದಿಲ್ಲ. ಬಟ್ ವಿಕೆಟ್ ಕೀಪಿಂಗ್ಗೆ ಮಾತ್ರ ಬದಲಿ ಆಟಗಾರರನ್ನ ಆಡಿಸಬಹುದು. ಪಂತ್ ಸ್ಥಾನಕ್ಕೆ ವಿಕೆಟ್ ಕೀಪರ್ ಆಗಿ ದ್ರುವ್ ಜುರೇಲ್ ಫೀಲ್ಡಿಂಗ್ ಮಾತ್ರ ಮಾಡಲು ಸಾಧ್ಯ. ಹಾಗಂತ ಬ್ಯಾಟಿಂಗ್ಗೆ ಅನುಮತಿ ನೀಡಲಾಗಲ್ಲ.

ನೋಡಿರಿ

