ಸೋಲಿನ ನೋವಲ್ಲಿ ನಾಲಗೆ ಹರಿಬಿಟ್ಟ ರಿಷಭ್ ಪಂತ್ – ಲಕ್ನೋ ಫ….ಗ್.. ತಂಡ ಎಂದು ಲೈವ್‌ನಲ್ಲೇ ಅಶ್ಲೀಲ ಪದ ಬಳಕೆ

ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೋತು ಮತ್ತದೇ ಕೊನೇ ಸ್ಥಾನದಲ್ಲಿಯೇ ಇದೆ. ಈ ಸೋಲಿನಿಂದ ಲಕ್ನೋ ನಾಯಕ ರಿಷಭ್ ಪಂತ್ ತಮ್ಮ ಮಾತಿನಲ್ಲೂ ಕಂಟ್ರೋಲ್ ತಪ್ಪಿದ್ದಾರೆ. ಸೋಲಿನ ಹತಾಶೆಯಲ್ಲಿರುವ ರಿಷಭ್ ಪಂತ್ ಲೈವ್‌ನಲ್ಲೇ ಅಶ್ಲೀಲ ಪದ ಬಳಕೆ ಮಾಡಿದ್ದಾರೆ.
ಇದನ್ನೂ ಓದಿ:ಪಂತ್ ಪಡೆಗೆ ಸೂರ್ಯವಂಶಿ ಸಿಡಿಲು – 15ರ ಬಾಲಕನಿಗೆ ತಲೆ ಬಾಗಿದ ಲಕ್ನೋ
ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 220 ರನ್ ಕಲೆಹಾಕಿದರೆ, ಈ ಬೃಹತ್ ಮೊತ್ತವನ್ನು ರಾಜಸ್ಥಾನ್ ರಾಯಲ್ಸ್ 19.1 ಓವರ್ಗಳಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿದೆ. ಈ ಸೋಲಿನ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಸಿದ್ಧ ನಿರೂಪಕ ಇಯಾನ್ ಬಿಷಪ್ ಅವರು ತಂಡದ ಕಳಪೆ ಪ್ರದರ್ಶನದ ಕುರಿತು ರಿಷಭ್ ಪಂತ್ ಅವರ ಜೊತೆ ಪ್ರಶ್ನೆ ಕೇಳಿದರು. ಇದಕ್ಕೆ ತೀವ್ರ ಭಾವುಕರಾಗಿ ಪಂತ್ ಉತ್ತರ ನೀಡಿದರು. ನಂತರ ಮಾತನಾಡುತ್ತಾ ಹೋದ ರಿಷಭ್ ಪಂತ್ ತಮ್ಮ ತಂಡವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಿಯಂತ್ರಣ ತಪ್ಪಿದ್ದಾರೆ. ನಮ್ಮ ನಿರೀಕ್ಷೆಯಂತೆ ಪಂದ್ಯಗಳು ಸಾಗುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಕಾರಣಕ್ಕಾಗಿ ನಾವು ಕೆಟ್ಟ ತಂಡವಾಗುವುದಿಲ್ಲ. ನಾವು ನಿಜಕ್ಕೂ ನಮ್ದು ಉತ್ತಮ ಫ…ಗ್ ತಂಡ ಎಂದಿದ್ದಾರೆ. ನೇರ ಪ್ರಸಾರದಲ್ಲೇ ರಿಷಭ್ ಪಂತ್ ಅಸಭ್ಯ ಪದ ಬಳಸಿದ್ದನ್ನು ಕೇಳಿ ನಿರೂಪಕ ಇಯಾನ್ ಬಿಷಪ್ ಶಾಕ್ ಆದರು. ತಕ್ಷಣವೇ ಅವರು ಸಂದರ್ಶನವನ್ನು ಅಲ್ಲಿಗೆ ಕೊನೆಗೊಳಿಸಿದರು.
ರಿಷಭ್ ಪಂತ್ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ರಿಷಭ್ ಪಂತ್ ಕೂಡಾ ತನ್ನ ತಂಡವನ್ನು ಗೆಲ್ಲಿಸಲಾರದೇ ಒತ್ತಡದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಈ ಸೀಸನ್‌ನ ಸ್ಥಿತಿ ಮತ್ತು ರಿಷಭ್ ಪಂತ್ ಮೇಲಿರುವ ಒತ್ತಡವೇ ಈ ಮಾತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಮೆಗಾ ಹರಾಜಿನಲ್ಲಿ ಬರೋಬ್ಬರಿ ₹27 ಕೋಟಿ ನೀಡಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಪಂತ್ ಅವರನ್ನು ಖರೀದಿಸಿತ್ತು. ಆದರೆ ನಾಯಕನಾಗಿ ಮತ್ತು ಬ್ಯಾಟರ್ ಆಗಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸರಣಿ ಸೋಲುಗಳಿಂದ ಇಡೀ ತಂಡದ ಮೇಲೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದವು. ಒಟ್ಟಾರೆಯಾಗಿ ಹೇಳುವುದಾದರೆ ರಿಷಭ್ ಪಂತ್ ಲೈವ್ ಟಿವಿಯಲ್ಲಿ ಅಸಭ್ಯ ಪದ ಬಳಸಿದ್ದು ಕ್ರೀಡಾ ಜಗತ್ತಿನಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ.

ನೋಡಿರಿ

