ರಿಷಭ್ ಪಂತ್ ಕಾಲಲ್ಲಿ ಹರಿಯಿತು ರಕ್ತ – ಕಣ್ಣೀರಿಡುತ್ತಲೇ ಹೊರ ನಡೆದ ಪಂತ್ ಮತ್ತೆ ಆಡ್ತಾರಾ?

ರಿಷಭ್ ಪಂತ್ ಕಾಲಲ್ಲಿ ಹರಿಯಿತು ರಕ್ತ – ಕಣ್ಣೀರಿಡುತ್ತಲೇ ಹೊರ ನಡೆದ ಪಂತ್ ಮತ್ತೆ ಆಡ್ತಾರಾ?

ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಟೀಮ್ ಇಂಡಿಯಾ ಆರಂಭ ಚೆನ್ನಾಗಿಯೇ ಇತ್ತು. ಕೆ.ಎಲ್ ರಾಹುಲ್ ಅರ್ಧಶತಕ ಸಿಡಿಸಬೇಕಿತ್ತು ಅನ್ನೋ ಅಭಿಮಾನಿಗಳಿಗೆ ಬೇಜಾರು ಅನ್ನೋದು ಬಿಟ್ಟರೆ, ಪಂದ್ಯ ಚೆನ್ನಾಗಿಯೇ ಸಾಗಿತ್ತು. ರಿಷಭ್ ಪಂತ್ ಮತ್ತು ಸಾಯಿ ಸುದರ್ಶನ್ ಜೊತೆಯಾಟವಂತೂ ಸೂಪರ್ ಆಗಿತ್ತು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು ಅನ್ನುವಾಗಲೇ ರಿಷಭ್ ಪಂತ್ ಕಾಲಿಗೆ ಏಟಾಗಿತ್ತು. ಅದು ಕೂಡಾ ಕಾಲಲ್ಲಿ ರಕ್ತ ಸುರಿಯುವಷ್ಟು.

ಇದನ್ನೂ ಓದಿ: ಗಿಲ್ಲ ಪಡೆಗೆ ಬೆನ್ ಸ್ಟೋಕ್ಸ್ ವಾರ್ನಿಂಗ್ – ಟೆಸ್ಟ್‌ಗೆ ರೈತನ ಮಗ ಕಾಂಬೋಜ್ ಎಂಟ್ರಿ

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಭಾರತದ ಇನ್ನಿಂಗ್ಸ್‌ನ 68 ನೇ ಓವರ್‌ನಲ್ಲಿ, ಕ್ರಿಸ್ ವೋಕ್ಸ್ ಎಸೆದ ವೇಗದ ಯಾರ್ಕರ್ ಚೆಂಡು ಪಂತ್ ಅವರನ್ನು ಗಾಯಗೊಳ್ಳುವಂತೆ ಮಾಡಿದೆ. ಈ ಚೆಂಡಿನಲ್ಲಿ ಪಂತ್ ರಿವರ್ಸ್-ಸ್ವೀಪ್ ಆಡಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅವರ ಶೂಗೆ ಬಡಿಯಿತು. ಆ ಬಳಿಕ ಪಂತ್ ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಕೂಡಲೇ ತಂಡದ ಫಿಸಿಯೋ ಕ್ರಿಸ್​ಗೆ ಬಂದು ಪಂತ್ ಅವರನ್ನು ಪರೀಕ್ಷಿಸಿದಾಗ ಅವರ ಪಾದದಿಂದ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತು. ನೋವು ಮತ್ತು ಗಾಯದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಪಂತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನದ ಆಂಬ್ಯುಲೆನ್ಸ್‌ನಲ್ಲಿ ಹೊರಗೆ ಕರೆದುಕೊಂಡು ಹೋಗಲಾಯಿತು. ಇದೀಗ ಪಂತ್,  ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಹೇಳಿದೆ.

ಪಂತ್ ಗಾಯ ಟೀಂ ಇಂಡಿಯಾಗೆ ದೊಡ್ಡ ಆಘಾತ ನೀಡಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ ಒಟ್ಟು 4 ವಿಕೆಟ್ ಕಳೆದುಕೊಂಡಿದೆ. ಸದ್ಯ ಜಡೇಜಾ, ಶಾರ್ದುಲ್ ಠಾಕೂರ್ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಆದರೆ, ರಿಷಭ್ ಪಂತ್ ಪರಿಸ್ಥಿತಿ ನೋಡಿದರೆ, ಈ ಟೆಸ್ಟ್ ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ ಅಂತಾ ಹೇಳಲಾಗುತ್ತಿದೆ.

Sulekha