ಡೆಲ್ಲಿ ಕ್ಯಾಪಿಟಲ್ಸ್ಗೆ ಮರಳಿದ ಪಂತ್ – ಲಕ್ನೋ ಸೇರಿದ ಕುಲದೀಪ್ ಯಾದವ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ಗೆ ತಂಡದಿಂದ ಗೇಟ್ಪಾಸ್ ಸಿಕ್ಕಿದೆ. ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ಗೆ ಮರಳಿದ್ದಾರೆ. ಟ್ರೇಡಿಂಗ್ ಮೂಲಕ ಡೆಲ್ಲಿ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ಅವರನ್ನು ಲಕ್ನೋಗೆ ಕೊಟ್ಟು ಪಂತ್ ಅವರನ್ನು ಡೆಲ್ಲಿ ತನ್ನ ತಂಡಕ್ಕೆ ಕರೆದುಕೊಂಡಿದೆ.
ಇದನ್ನೂ ಓದಿ: DSP ಹುದ್ದೆಗೇರಿದ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ – ಬಿಹಾರ ಸರ್ಕಾರದಿಂದ ಗೌರವಾನ್ವಿತ ಹುದ್ದೆ
ದೆಹಲಿ ಕ್ಯಾಪಿಟಲ್ಸ್ಗೆ 15 ಕೋಟಿ ರೂಪಾಯಿಗಳ ಪರಿಷ್ಕೃತ ಶುಲ್ಕದಲ್ಲಿ ಪಂತ್ರನ್ನ ತಂಡಕ್ಕೆ ಸೇರಿಸಿಕೊಂಡ್ರೆ, ಸೂಪರ್ ಜೈಂಟ್ಸ್ ಕುಲದೀಪ್ ಯಾದವ್ ಅವರ ಪ್ರಸ್ತುತ ಶುಲ್ಕ 13.50 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ. ಪಂತ್ ತಮ್ಮ ಐಪಿಎಲ್ ಜರ್ನಿ ಶುರು ಮಾಡಿದ್ದು ಡೆಲ್ಲಿ ತಂಡದ ಪರ. 2016 ಮತ್ತು 2024 ರ ನಡುವೆ ಒಂಬತ್ತು ಋತುಗಳನ್ನು ಅವರು ಡೆಲ್ಲಿ ಪರ ಆಡಿದ್ದರು. 111 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಡೆಲ್ಲಿ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯೂ ಅವರ ಹೆಸರಿನಲ್ಲಿದೆ. 2021 ರಿಂದ 2024 ರವರೆಗಿನ 43 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
12 ಕೋಟಿ ಕಮ್ಮಿ ಬೆಲೆಗೆ ಡೆಲ್ಲಿ ಸೇರಿದ ಪಂತ್
ಐಪಿಎಲ್ 2025ರ ಮಿನಿ ಹರಾಜಿನಲ್ಲಿ, ಪಂತ್ ಅವರನ್ನು ಎಲ್ಎಸ್ಜಿ ದಾಖಲೆಯ 27 ಕೋಟಿ ರೂ.ಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಿಡ್ ಆಗಿತ್ತು. ಆದಾಗ್ಯೂ, ವಹಿವಾಟಿನ ನಂತರ, ಅವರು 15 ಕೋಟಿ ರೂ. ಮೌಲ್ಯದ ಪರಿಷ್ಕೃತ ಒಪ್ಪಂದದ ಮೇಲೆ ಡಿಸಿಗೆ ಮರಳಿದರು.
ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಐದು ವರ್ಷಗಳ ಯಶಸ್ವಿ ಅನುಭವದ ನಂತರ ಕುಲ್ದೀಪ್ ಲಕ್ನೋ ತಂಡಕ್ಕೆ ತೆರಳುತ್ತಿದ್ದಾರೆ. 2022 ರಲ್ಲಿ ತಂಡ ಸೇರಿದಾಗಿನಿಂದ, ಅವರು 65 ಪಂದ್ಯಗಳಲ್ಲಿ 72 ವಿಕೆಟ್ಗಳನ್ನು ಕಬಳಿಸಿದ್ದಾರೆ, ಐಪಿಎಲ್ನ ಅತ್ಯಂತ ಬಲಿಷ್ಠ ವಿಕೆಟ್ ಟೇಕಿಂಗ್ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ.

ನೋಡಿರಿ

