ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಶಿಫ್ಟ್ ಆಗ್ತಾರಾ ರಿಷಬ್ ಪಂತ್ ?

ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಶಿಫ್ಟ್ ಆಗ್ತಾರಾ ರಿಷಬ್ ಪಂತ್ ?

ಟೀಮ್ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಈಗ ಮುಂಬೈನ ಕೋಕಿಲಾಬೆನ್ ಧೀರುಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ರಿಷಬ್ ಅವರು ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ಈ ಕಾರಣದಿಂದಾಗಿ, ಸುಮಾರು 9 ತಿಂಗಳ ಕಾಲ ಕ್ರಿಕೆಟ್‌ನಿಂದಲೂ ಹೊರಗೆ ಇರಲೇಬೇಕಾದ ಅನಿವಾರ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಕಳುಹಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:  ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗ ರಿಷಬ್​ ಪಂತ್​ ಮುಂಬೈಗೆ ಶಿಫ್ಟ್ – ಏರ್​ ಆ್ಯಂಬುಲೆನ್ಸ್​​​ ಮೂಲಕ ಆಸ್ಪತ್ರೆಗೆ ರವಾನೆ

ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಪಂತ್ ಅವರನ್ನು ಜ.4ರಂದು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಪಂತ್ ಅವರನ್ನು ಮಂಡಿ ಆಪರೇಷನ್‌ಗಾಗಿ ಲಂಡನ್‌ಗೆ ಕಳುಹಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಈ ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಪಂತ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 9 ತಿಂಗಳು ಬೇಕಾಗಬಹುದು ಎಂದು ವರದಿಯಾಗಿದೆ. ರಸ್ತೆ ಅಪಘಾತದಲ್ಲಿ ಪಂತ್ ದೇಹದಲ್ಲಿ ಅನೇಕ ಗಾಯಗಳಾಗಿತ್ತು. ಆದರೆ ಯಾವ ಇಂಜುರಿಯೂ ಅವರ ಜೀವಕ್ಕೆ ಅಥವಾ ಅವರ ವೃತ್ತಿಜೀವನಕ್ಕೆ ಅಪಾಯವನ್ನುಂಟುಮಾಡುವಷ್ಟು ಗಂಭೀರವಾಗಿರಲಿಲ್ಲ. ಆದರೆ ಪಂತ್‌ಗೆ ಅತ್ಯಂತ ಅಪಾಯಕಾರಿ ಗಾಯವೆಂದರೆ ಅದು ಮೊಣಕಾಲು ಇಂಜುರಿ. ಹೀಗಾಗಿ ಆ ಗಾಯದ ಮಟ್ಟವನ್ನು ಪರೀಕ್ಷಿಸಲು, ಬಿಸಿಸಿಐ ಅವರನ್ನು ವಿಶೇಷ ಏರ್ ಆಂಬ್ಯುಲೆನ್ಸ್ ಮೂಲಕ ಜನವರಿ 4 ರ ಬುಧವಾರ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

suddiyaana