ರಿಷಭ್ ಪಂತ್ ಕಾಲು ಬೆರಳಿನ ಮೂಳೆ ಮುರಿತ – ಟೀಮ್ ಇಂಡಿಯಾದಲ್ಲಿ ಹತ್ತೇ ಪ್ಲೇಯರ್ಸ್ ಆಡ್ಬೇಕಾ?

ಟೀಮ್ ಇಂಡಿಯಾದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದ ಆರಂಭವೂ ಸೂಪರ್ ಆಗಿತ್ತು. ಕೆ.ಎಲ್ ರಾಹುಲ್ ಅರ್ಧಶತಕ ಸಿಡಿಸಬೇಕಿತ್ತು ಅನ್ನೋ ಅಭಿಮಾನಿಗಳಿಗೆ ಬೇಜಾರು ಅನ್ನೋದು ಬಿಟ್ಟರೆ, ರನ್ ಬರ್ತಿತ್ತು. ಜೈಸ್ವಾಲ್ ಅರ್ಧಶತಕ, ನಂತರ ಬಂದ ರಿಷಭ್ ಪಂತ್ ಮತ್ತು ಸಾಯಿ ಸುದರ್ಶನ್ ಜೊತೆಯಾಟ ಕೂಡಾ ಬಿಗ್ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿತ್ತು. ಇದೇ ಹೊತ್ತಲ್ಲಿ ಟೀಮ್ ಇಂಡಿಯಾಗೆ ಸಿಕ್ಕಿದ್ದು ಬಿಗ್ ಶಾಕ್. ಸಿಕ್ಸ್, ಫೋರ್ ಬಾರಿಸ್ತಿದ್ದ ರಿಷಭ್ ಪಂತ್ ಇಂಜುರಿಗೊಳಗಾದ್ರು. ಅದು ಕೂಡಾ ಗಂಭೀರವಾಗಿ ಗಾಯಕ್ಕೊಳಗಾದ್ರು. ಈಗ ರಿಷಭ್ ಪಂತ್ ಇಂಜುರಿ ಬಗ್ಗೆ ಅಪ್‌ಡೇಟ್ ಏನಿದೆ?, ನಾಲ್ಕನೇ ಟೆಸ್ಟ್ ಆಡ್ತಾರಾ ಇಲ್ವಾ?, ಹಾಗಾದ್ರೆ, ಟೀಮ್ ಇಂಡಿಯಾ 10 ಬ್ಯಾಟರ್ಸ್ ಜೊತೆ ಮಾತ್ರ ಬ್ಯಾಟಿಂಗ್ ಮಾಡ್ಬೇಕಾ?, ಈ ಎಲ್ಲಾ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಿಷಭ್ ಪಂತ್ ಕಾಲಲ್ಲಿ ಹರಿಯಿತು ರಕ್ತ – ಕಣ್ಣೀರಿಡುತ್ತಲೇ ಹೊರ ನಡೆದ ಪಂತ್ ಮತ್ತೆ ಆಡ್ತಾರಾ?
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭವೇ ಟೀಮ್ ಇಂಡಿಯಾ ಪಾಲಿಗೆ ಶುಭಾರಂಭ ಅಂದ್ರೂ ತಪ್ಪಾಗಲ್ಲ ಬಿಡಿ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಬಂದ ಟೀಮ್ ಇಂಡಿಯಾ ಓಪನರ್ಸ್ ಬೇರೆ ಲೆವೆಲ್‌ನಲ್ಲೇ ಬ್ಯಾಟಿಂಗ್ ಮಾಡಿದ್ರು. ಯಶಸ್ವಿ ಜೈಸ್ವಾಲ್ ಟೈಮ್ ನೋಡಿ ಫೋರ್ ಹೊಡೆದ್ರೆ, , ಕೆ.ಎಲ್.ರಾಹುಲ್ ತಾಳ್ಮೆಯ ಆಟವಾಡಿದ್ರು. ಎಚ್ಚರಿಕೆಯಿಂದಲೇ ಆಂಗ್ಲ ಬೌಲರ್ಗಳನ್ನ ಹ್ಯಾಂಡಲ್ ಮಾಡಿದ ಈ ಜೋಡಿ ಮೊದಲ ಜೊತೆಯಾಟಕ್ಕೆ 78 ರನ್ಗಳಿಸಿತು.
ಫಸ್ಟ್ ಸೆಷನ್‌ನಲ್ಲಿ ಇಂಡಿಯಾ ಓಪರ್ನಸ್ ಕೈ ಮೇಲಾದ್ರೆ, ಸೆಕೆಂಡ್ ಸೆಷನ್‌ನಲ್ಲಿ ಇಂಗ್ಲೆಂಡ್ ಬೌಲರ್ಸ್ ಸ್ಟ್ಟಾಟರ್ಜಿ ವರ್ಕೌಟ್ ಆಯ್ತು. 96 ಎಸೆತಕ್ಕೆ ಜೈಸ್ವಾಲ್ ಹಾಫ್ ಸೆಂಚುರಿ ಸಿಡಿಸಿದ್ರು. ಬಟ್. ಅರ್ದಶತಕದ ಹಾದಿಯಲ್ಲಿ ಕೆ.ಎಲ್ ರಾಹುಲ್ ಎಡವಿದ್ರು. ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ಜಾಕ್ ಕ್ರಾವ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಇದ್ರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್ ಕೂಡ ಪೆವಿಲಿಯನ್ ಸೇರಿದ್ರು. 3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಕಾನ್ಫಿಡೆಂಟಾಗಿಯೇ ಕಣಕ್ಕಿಳಿದ್ರು. ಇವರ ಲಕ್ ಚೆನ್ನಾಗಿತ್ತು. ಒಂದು ಜೀವದಾನ ಸಿಕ್ಕಿದ್ದಕ್ಕೆ ಹಾಫ್ ಸೆಂಚುರಿ ಸಿಡಿಸೋಕೆ ಆಯ್ತು. ಇಲ್ಲಿ ನಾಯಕ ಶುಭ್ಮನ್ ಗಿಲ್ ಮತ್ತೊಮ್ಮೆ ಡಲ್ ಆದ್ರು. ಗಿಲ್ 12 ರನ್ಗಳಿಸಿ ಔಟಾದ್ರು. 5ನೇ ವಿಕೆಟ್ಗೆ ಜೊತೆಯಾದ ರಿಷಭ್ ಪಂತ್, ಸಾಯಿ ಸುದರ್ಶನ್ ಸಾಲಿಡ್ ಜೊತೆಯಾಟವಾಡಿದ್ರು. ಸಾಯಿ ಸುದರ್ಶನ್ ಪರ್ಫೆಕ್ಟ್ ಟೆಸ್ಟ್ ಇನ್ನಿಂಗ್ಸ್ ಕಟ್ಟಿದ್ರೆ, ಪಂತ್ ಸಿಕ್ ಫೋರ್ ಬಾರಿಸಿ ಬಿಗ್ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದ್ರು. ಅಲ್ಲೇ.. ನೋಡಿ ನಮ್ಮ ಭಾರತಕ್ಕೆ ಮತ್ತೊಮ್ಮೆ ಲಕ್ ಕೈಕೊಟ್ಟಿತ್ತು. 67.4ನೇ ಓವರ್ನಲ್ಲಿ ಕ್ರಿಸ್ ವೋಕ್ಸ್ ಎಸೆದ ಬಾಲ್ ಪಂತ್ ಪಾದಕ್ಕೆ ಬಂದು ಬಡಿದಿದೆ. ಬಾಲ್ ಬಡಿದ ರಭಸಕ್ಕೆ ಪಂತ್ ಕಾಲಿಗೆ ಪೆಟ್ಟಾಯ್ತು.
ಕ್ರಿಸ್ ವೋಕ್ಸ್ ಎಸೆದ ವೇಗದ ಯಾರ್ಕರ್ ಚೆಂಡಿನಲ್ಲಿ ಪಂತ್ ರಿವರ್ಸ್-ಸ್ವೀಪ್ ಆಡಲು ಟ್ರೈ ಮಾಡಿದ್ರು. ಆದರೆ ಚೆಂಡು ನೇರವಾಗಿ ಕಾಲಿಗೆ ಬಡಿದ ಪರಿಣಾಮ ಪಂತ್ ನೋವಲ್ಲಿ ನರಳಾಡಿದ್ರು. ನಡೆಯಲು ಪ್ರಯತ್ನ ಪಟ್ರೂ ಆಗ್ಲಿಲ್ಲ. ನಂತರ ಶೂ ಕಳಚಿ ನೋಡಿದ್ರೆ ರಕ್ತ ಸುರಿಯುತ್ತಿತ್ತು. ಅದಾಗಲೇ ಕಾಲಲ್ಲಿ ಊತ ಕಂಡು ಬಂದಿತ್ತು. ಕೂಡಲೇ ಫಿಸಿಯೋ ತಂಡ ನೋವು ಕಡಿಮೆ ಮಾಡಲು ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ. ನಂತರ ಆಂಬ್ಯುಲೆನ್ಸ್‌ನಲ್ಲಿ ಪಂತ್ ಅವರನ್ನ ಹೊರಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಪಂತ್ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ನಂತರ ಪಂತ್ ಅವ್ರನ್ನ ಸ್ಕ್ಯಾನಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗಲಾಯ್ತು. ಇದೀಗ ಪಂತ್ ಪಾದದಲ್ಲಿ ಮೂಳೆ ಮುರಿತವಾಗಿದೆ ಎಂಬ ಅಪ್‌ಡೇಟ್ಸ್ ಬರ್ತಿದೆ. ಬಿಸಿಸಿಐನ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಪಂತ್‌ಗೆ ಚಿಕಿತ್ಸೆ ನೀಡಲಾಗಿದೆ.
ಪಂತ್ ರಿಟೈರ್ಡ್ ಹರ್ಟ್ ಆಗಿದ್ದು, ಟೀಮ್ ಇಂಡಿಯಾಕ್ಕೆ ಮೈನ್ ಬ್ಯಾಟಿಂಗ್ ಸ್ಟ್ರೆಂತ್ ಲಾಸ್ ಆಗಿದೆ. ಇಲ್ಲೂ ಒಂದು ಇಂಪಾರ್ಟೆಂಟ್ ವಿಷ್ಯ ನೋಡ್ಲೇಬೇಕು. ಪಂತ್ ಗಾಯದಿಂದ ಹೊರ ನಡೆದ ಮೇಲೆ ಟೀಮ್ ಇಂಡಿಯಾದಲ್ಲಿರೋದು 10 ಮಂದಿ ಪ್ಲೇಯರ್ಸ್ ಮಾತ್ರ. ಬ್ಯಾಟಿಂಗ್ ಮಾಡೋದು ಕೂಡಾ 10 ಆಟಗಾರರು ಮಾತ್ರ. ಫೀಲ್ಡಿಂಗ್ ಅಂತಾ ಬಂದಾಗ ಪಂತ್ ಬದಲು ಕೀಪಿಂಗ್ ಗೆ ಧ್ರುವ್ ಜ್ಯುರೆಲ್ ಅವ್ರನ್ನ ಆಡಿಸಬಹುದು. ಆದ್ರೀಗ ಪಂತ್ ಬದಲು ಬ್ಯಾಟಿಂಗ್ ಆಫ್ಷನ್ ಇಲ್ಲ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್‌ಗೆ ಇರೋದು 10 ಪ್ಲೇಯರ್ಸ್ ಮಾತ್ರ.
ಇನ್ನು ರಿಷಭ್ ಪಂತ್ ಮತ್ತೆ ಬಂದು ಬ್ಯಾಟ್ ಬೀಸ್ತಾರಾ ಅನ್ನೋ ವಿಚಾರಕ್ಕೆ ಬರೋದಾದ್ರೆ, ರಿಷಭ್ ಪಂತ್ ಮೈದಾನ ತೊರೆದಿರುವುದು ರಿಟೈರ್ಡ್ ಹರ್ಟ್ ಆಗಿ. ಐಸಿಸಿ ಆಟದ ಷರತ್ತುಗಳ ಪ್ರಕಾರ, ಪಂತ್ ಮತ್ತೆ ಬ್ಯಾಟಿಂಗ್ ಮಾಡಲು ಅರ್ಹರಾಗಿರುತ್ತಾರೆ. ಏಕೆಂದರೆ ಐಸಿಸಿ ಸೆಕ್ಷನ್ 25.4 ಪ್ರಕಾರ, “ಒಬ್ಬ ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನಲ್ಲಿ ಚೆಂಡು ಡೆಡ್ ಆಗಿರುವ ಯಾವುದೇ ಸಮಯದಲ್ಲಿ ನಿವೃತ್ತಿ ಹೊಂದಬಹುದು. ಅಲ್ಲದೆ ಆಟವನ್ನು ಮುಂದುವರಿಸಲು ಅನುಮತಿಸುವ ಮೊದಲು, ಅಂಪೈರ್‌ಗಳಿಗೆ ಬ್ಯಾಟ್ಸ್‌ಮನ್ ನಿವೃತ್ತಿ ಹೊಂದಲು ಕಾರಣವನ್ನು ತಿಳಿಸಬೇಕು. ಹೀಗೆ ಅನಾರೋಗ್ಯ, ಗಾಯ ಅಥವಾ ಇನ್ನಾವುದೇ ಅನಿವಾರ್ಯ ಕಾರಣದಿಂದಾಗಿ ಬ್ಯಾಟ್ಸ್‌ಮನ್ ನಿವೃತ್ತರಾದರೆ, ಆ ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್ ಅನ್ನು ಪುನರಾರಂಭಿಸಲು ಅರ್ಹನಾಗಿರುತ್ತಾನೆ.” ಈ ಮೇಲೆ ತಿಳಿಸಿದಂತೆ ರಿಷಭ್ ಪಂತ್ ಮೈದಾನ ತೊರೆದಿರುವುದು ರಿಟೈರ್ಡ್ ಹರ್ಟ್ ಆಗಿ. ಅಂಪೈರ್ನಿಂದ ಅನುಮತಿ ಪಡೆದ ಬಳಿಕವಷ್ಟೇ ರಿಟೈರ್ಡ್ ಆಗಿ ಪೆವಿಲಿಯನ್ಗೆ ತೆರಳಬಹುದು. ಹೀಗಾಗಿ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದಿರುವ ರಿಷಭ್ ಪಂತ್ ಮತ್ತೆ ಬ್ಯಾಟಿಂಗ್ ಮಾಡಬಹುದು. ಇನ್ನು ರಿಟೈರ್ಡ್ ಔಟ್ ಆಗಿ ಹೊರ ನಡೆದರೆ ಮತ್ತೆ ಬ್ಯಾಟ್ ಮಾಡಲು ಅವಕಾಶ ನೀಡಲಾಗುವುದಿಲ್ಲ. ಅದನ್ನು ಔಟ್ ಎಂದೇ ಪರಿಗಣಿಸಲಾಗುತ್ತದೆ. ಆದರೆ ರಿಷಭ್ ಪಂತ್ ರಿಟೈರ್ಡ್ ಹರ್ಟ್ ಆಯ್ಕೆಯ ಮೂಲಕ ಹೊರ ನಡೆದಿರುವ ಕಾರಣ ಅವರಿಗೆ ಮೊದಲ ಇನಿಂಗ್ಸ್ನಲ್ಲೇ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಲಾಗುತ್ತದೆ. ಆದರೆ, ಇಲ್ಲಿ ಪಂತ್ ಇಂಜುರಿ ಲೈಟಾಗಿ ಆಗಿಲ್ಲ. ಗಾಯದ ತೀವ್ರತೆ ಜಾಸ್ತಿಯಿದೆ. ಮೂರನೇ ಟೆಸ್ಟ್‌ನಲ್ಲೂ ಕೂಡಾ ರಿಷಭ್ ಪಂತ್ ಇಂಜುರಿಗೊಳಗಾಗಿದ್ರು. ಇವ್ರ ಬದಲು ಧ್ರುವ್ ಜ್ಯುರೇಲ್ ಗೆ ಚಾನ್ಸ್ ಸಿಕ್ಕಿತ್ತು. ಪಂತ್ ಪದೇ ಪದೇ ಇಂಜುರಿಗೊಳಗಾಗುವುದು ಟೀಮ್ ಇಂಡಿಯಾಕ್ಕೆ ಬ್ಯಾಟಿಂಗ್ ಲೈನ್‌ಅಪ್ ಕೂಡಾ ಕಷ್ಟವಾಗ್ತಿದೆ.

ನೋಡಿರಿ

