LSGಯಿಂದ ರಿಷಭ್ ಕಿಕ್ಔಟ್? 27 ಕೋಟಿ ವೀರನಿಗೆ ಏನಾಯ್ತು?
ಪಂತ್ ಮೇಲೆ ಗೋಯೆಂಕಾ ಸಿಟ್ಟು!

LSGಯಿಂದ ರಿಷಭ್ ಕಿಕ್ಔಟ್? 27 ಕೋಟಿ ವೀರನಿಗೆ ಏನಾಯ್ತು?ಪಂತ್ ಮೇಲೆ ಗೋಯೆಂಕಾ ಸಿಟ್ಟು!

ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಭ್ ಪಂತ್‌ರನ್ನ  ಬರೋಬ್ಬರಿ 27 ಕೋಟಿ ರೂಪಾಯಿ ಕೊಟ್ಟು ಖರೀದಿಸಿ, ನಾಯಕನಾಗಿ ಮಾಡಲಾಯಿತು. ಆದರೆ, ರಷಭ್ ಪಂತ್ ಬ್ಯಾಟಿಂಗ್ ನೋಡಿ ಇಡೀ ಕ್ರಿಕೆಟ್ ಲೋಕವೇ ಶಾಕ್ ಆಗಿದೆ. ಈ ಸೀಸನ್‌ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದ ರಿಷಭ್‌ ಅದ್ಫುತವಾಗಿ ಕಳಪೆ ಪ್ರದರ್ಶನ ತೋರಿಸುತ್ತಿದ್ದಾರೆ. ಎಲ್‌ಎಸ್‌ಜಿಯ 27 ಕೋಟಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿದೆ.  ಎಲ್‌ಎಸ್‌ಜಿ 11 ಪಂದ್ಯಗಳನ್ನ ಆಡಿದ್ದು 5 ಪಂದ್ಯ ಗೆದ್ದಿದೆ, ಇನ್ನೂ ಕೂಡ ಪ್ಲೇ ಆಫ್‌ ರೇಸ್‌ನಲ್ಲಿದೆ. ಆದ್ರೆ ಒಂದೇ ಒಂದು ಪಂದ್ಯ ಸೋತ್ರೆ ಲಕ್ನೋ ಪ್ಲೇ ಆಫ್ ರೇಸ್‌ನಿಂದ ಹೊರ ಬೀಳಲಿದೆ. ಇಲ್ಲಿ ರಿಷಭ್ ಪಂತ್ ಈ ಸೀಸನ್‌ನಲ್ಲಿ ಹೇಳಿಕೊಳ್ಳುವ ಸ್ಕೋರ್ ಮಾಡಿಲ್ಲ.. ಒಂದೇ ಒಂದು ಆಫ್ ಸೆಂಚುರಿ ಹೊಡೆದಿದ್ದು ಬಿಟ್ರೆ, ಉಳಿದಿದ್ದು ಒಂದಕ್ಕಿ ರನ್‌ ಅಷ್ಟೇ.

ರನ್ ಇಲ್ಲದೇ ಸೈಲೆಂಟ್ ಆದ ಪಂತ್ ಬ್ಯಾಟ್

ಮೊದಲ ಪಂದ್ಯದಲ್ಲಿ 0, ಎರಡನೇ ಪಂದ್ಯದಲ್ಲಿ 15 ಮತ್ತು ಮೂರನೇ ಪಂದ್ಯದಲ್ಲಿ 5 ರನ್ ಗಳಿಸಿದರು. ಇನ್ನೂ ಉಳಿದ 8 ಪಂದ್ಯದ ರನ್‌ ಕ್ರಮಂಕವಾಗಿ ನೋಡೋದಾದ್ರೆ. 2, 21, 63, 3, 0 4, 18 ಇಲ್ಲಿ 63 ಬಿಟ್ರೆ ಮತ್ಯಾವುದು ಕೂಡ 20 ದಾಟಿಲ್ಲ.. ಈ ಸೀಸನ್‌ನಲ್ಲಿ ಆಡಿರುವ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 128 ರನ್ ಗಳಿಸಿದ್ದಾರೆ. ಹೀಗಾಗಿ 27 ಕೋಟಿ ಆಟಗಾರನ ಬ್ಯಾಟ್‌ಗೆ ಏನ್ ಆಗಿದೆ ಅನ್ನೋ ಮಾತು ಫ್ಯಾನ್ಸ್ ಕೇಳುತ್ತಿದ್ದಾರೆ.

27 ಕೋಟಿ.. ಇಷ್ಟು ಬಿಗ್​ ಅಮೌಂಟ್​​ಗೆ ಸೇಲ್​ ಆದ ಪಂತ್ ಇದೀಗ ಆ ಹಣಕ್ಕೆ ಪರ್ಫಾಮೆನ್ಸ್​ ಮೂಲಕ ನ್ಯಾಯ ಒದಗಿಸಬೇಕಿತ್ತು. ಮೌಲ್ಯಕ್ಕೆ ತಕ್ಕಂತೆ ಪರ್ಫಾಮ್​​ ಮಾಡಬೇಕಿತ್ತು.  ಫ್ಯಾನ್ಸ್​ ನಿರೀಕ್ಷೆ ಬಿಡಿ.. ಈ ಲಕ್ನೋ ಸೂಪರ್​ ಜೈಂಟ್ಸ್​​ ಓನರ್​ ನಿರೀಕ್ಷೆ ಇದ್ಯಲ್ಲ ಅದು ನೆಕ್ಸ್ಟ್​ ಲೆವೆಲ್. ತನ್ನ ಎಕ್ಸ್​ಪೆಕ್ಟೇಷನ್​​ ರೀಚ್​ ಆಗಲಿಲ್ಲ ಅನ್ನೋ ಕಾರಣಕ್ಕೆ   ಧೋನಿಯನ್ನೇ ರಾತ್ರೋ ರಾತ್ರಿ ಗದ್ದುಗೆಯಿಂದ ಕೆಳಗಿಳಿಸಿದವರು ಈ ಸಂಜೀವ್​ ಗೋಯೆಂಕಾ. ಕಳೆದ ಸೀಸನ್​ನಲ್ಲಿ ನಮ್ಮ ಕನ್ನಡಿಗ ರಾಹುಲ್​ಗೂ ಗ್ರೌಂಡ್​ನಲ್ಲೇ ಅಪಮಾನ ಮಾಡಿದ್ರು. ಈಗ 27 ಕೋಟಿ ಸುರಿದು ಪಂತ್​ನ ನಾಯಕನನ್ನ ಮಾಡಿದ್ದಾರೆ ಅಂದು ಮೇಲೆ ಆ ನಿರೀಕ್ಷೆ ಎಷ್ಟಿರಬೇಕು ಅಂತಾ ನೀವೇ ಅಂದಾಜು ಮಾಡಿ. ಆ ನಿರೀಕ್ಷೆಯನ್ನ ತಲುಪುವಲ್ಲಿ ಪಂತ್ ಸೋತಿದ್ದಾರೆ.

ರಿಷಬ್‌ ಪಂತ್‌ ವೀರೇಂದ್ರ ಸೆಹ್ವಾಗ್ ಮಹತ್ವದ ಸಲಹೆ

ರಿಷಬ್‌ ಪಂತ್‌ಗೆ, ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ. ರಿಷಬ್‌ ಪಂತ್‌ ಪರವಾಗಿ ಮಾತನಾಡಿರುವ ಸೆಹ್ವಾಗ್‌, ‘ತಮ್ಮ ಹಳೆಯ ಆಟವನ್ನು ನೆನಪಿಟ್ಟುಕೊಳ್ಳಿ. ಅನುಮಾನಗಳನ್ನು ದೂರ ಮಾಡಲು MS ಧೋನಿಗೆ ಫೋನ್ ಮಾಡಿ ಅವರೊಂದಿಗೆ ಮಾತನಾಡಿʼ ಎಂದು ಹೇಳಿದ್ದಾರೆ.

ಬ್ಯಾಟ್ಯೂ ಹೋಯ್ತು.. ವಿಕೆಟ್ಟೂ ಹೋಯ್ತು’

ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ನೇತೃತ್ವದ LSG ತಂಡ 37 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಪಂಜಾಬ್ 236 ರನ್‌ಗಳ ಗುರಿ ನೀಡ್ತು. ಬೃಹತ್ ಟಾರ್ಗೆಟ್ ಚೇಸಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರಿಷಬ್ ಪಂತ್ 17 ಎಸೆತಗಳಲ್ಲಿ 18 ರನ್ ಗಳಿಸಿದ್ದರು. ಈ ಹಂತದಲ್ಲಿ ಅಜ್ಮತುಲ್ಲಾ ಬೌಲಿಂಗ್ ನಲ್ಲಿ ಭಾರಿ ಹೊಡತಕ್ಕೆ ಮುಂದಾದ ರಿಷಬ್ ಪಂತ್, ಸ್ಕ್ವೇರ್ ಲೆಗ್ ನತ್ತ ಚೆಂಡನ್ನು ಭಾರಿಸಿದರು. ಈ ವೇಳೆ ಅವರ ಕೈಯಲ್ಲಿದ್ದ ಬ್ಯಾಟ್ ಸ್ಲಿಪ್ ಆಗಿ ಹಾರಿ ಹೋಯಿತು. ಅತ್ತ ಚೆಂಡು ಕೂಡ ನೇರವಾಗಿ ಶಶಾಂಕ್ ಸಿಂಗ್ ಕೈ ಸೇರಿತು. ಆ ಮೂಲಕ ಮತ್ತೆ ರಿಷಬ್ ಪಂತ್ ಕಡಿಮೆ ಮೊತ್ತಕ್ಕೆ ಔಟಾದರು.

ಆ್ಯಕ್ಸಿಡೆಂಟ್ ನಂತ್ರ ಹಳೇ ಖದರ್ ಮಾಯವಾಯ್ತಾ?

ಟೀಮ್​​ ಇಂಡಿಯಾದ 3 ಫಾರ್ಮೆಟ್​ ಪ್ಲೇಯರ್​ ಆಗಿದ್ದ ಪಂತ್​, ವೈಟ್​ಬಾಲ್​ ಕರಿಯರ್​ ಸದ್ಯ ಸಂಕಷ್ಟದಲ್ಲಿದೆ. ಆ್ಯಕ್ಸಿಡೆಂಟ್​​ನಿಂದ ಚೇತರಿಸಿಕೊಂಡು ಫಿಟ್​ ಆಗಿ ಕಮ್​ಬ್ಯಾಕ್​ ಮಾಡಿದ ಬಳಿಕ ಪಂತ್​ ಹಳೆ ಖದರ್ ಮಾಯವಾಗಿದೆ. ಏಕದಿನ ಫಾರ್ಮೆಟ್​ನಲ್ಲಿ ಪಂತ್​ ಬೆಂಚ್​​ಗೆ ಸೀಮಿತವಾಗಿದ್ದಾರೆ. ಟಿ20 ಫಾರ್ಮೆಟ್​ನಲ್ಲೂ ಸ್ಥಾನಕ್ಕೆ ಕುತ್ತು ಬಂದಿದೆ. ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​ ಅಬ್ಬರ ಮುಂದುವರೆಸಿದ್ರೆ, ಪಂತ್​ಗೆ ಗೇಟ್​ಪಾಸ್​ ಪಕ್ಕಾ. ವೈಟ್​ಬಾಲ್​ ಕರಿಯರ್​ ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಪರ್ಫಾಮ್​ ಮಾಡಲೇಬೇಕಾದ ಒತ್ತಡವಿದೆ. ಆ ಒತ್ತಡ ಆಟಕ್ಕೆ ಅಡ್ಡಿಯಾಗ್ತಿದೆ. ಒತ್ತಡಕ್ಕೆ ಸಿಲುಕಿರೋ ಪಂತ್​ ತನ್ನ ರಿಯಲ್​ ಖದರ್​ ಅನ್ನೇ ಮರೆತು ಬಿಟ್ಟಿದ್ದಾರೆ.

ಮುಂದಿನ ವರ್ಷ 3 ಕೋಟಿಗೂ ಹೋಗಲ್ವಾ ರಿಷಭ್?

ಇನ್ನೂ ಈ ವರ್ಷ 27 ಕೋಟಿಗೆ ಲಕ್ನೋ ಪಾಲಾಗಿರೋ ರಿಷಭ್, 2025 ರ ಸೀಸನ್‌ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಆದ ಆಟಗಾರ ಎನಿಸಿಕೊಂಡಿದ್ದಾರೆ. ಕೋಟಿ ಕೋಟಿ ಕೊಟ್ರು, ಇವರ ಬ್ಯಾಟ್ ಸದ್ದು ಮಾಡ್ತಿಲ್ಲ ಹೀಗಾಗಿ ಮುಂದಿನ ವರ್ಷ ಇವರನ್ನ ಎಲ್‌ಎಸ್‌ಜಿ ಕೈ ಬಿಡೋದು ಪಕ್ಕಾ.. ಹೀಗಾಗಿ ಇವರನ್ನ ಮುಂದಿನ ವರ್ಷ ಬೇರೆ ಟೀಂಗಳು3 ಕೋಟಿಗೂ ಖರೀದಿ ಮಾಡೋದು ಕಷ್ಟ ಅನ್ನೋ ಮಾತುಕೇಳಿ ಬರ್ತಿದೆ. ಒಟ್ನಲ್ಲಿ ಹಾಲಿ ಐಪಿಎಲ್ ಟೂರ್ನಿಯಲ್ಲಿ ಯಾಕೋ ರಿಷಬ್ ಪಂತ್ ಅದೃಷ್ಟವೇ ಸರಿ ಇಲ್ಲ. ಇತ್ತ ನಾಯಕನಾಗಿ ತಂಡಕ್ಕೆ ಗೆಲುವುಗಳೂ ಬರುತ್ತಿಲ್ಲ. ಇತ್ತ ಅವರ ಬ್ಯಾಟ್ ನಿಂದ ಸೂಕ್ತ ರನ್ ಗಳೂ ಹರಿಯುತ್ತಿಲ್ಲ.

Kishor KV

Leave a Reply

Your email address will not be published. Required fields are marked *