ಸರ್ಫರಾಜ್ 150.. ಪಂತ್ 99 ರನ್! – NZ ಮಣಿಸುತ್ತಾ ಟೀಂ ಇಂಡಿಯಾ?
ತವರಲ್ಲೂ KLಗೆ ಬ್ಯಾಡ್ ಲಕ್

ಸರ್ಫರಾಜ್ 150.. ಪಂತ್ 99 ರನ್! – NZ ಮಣಿಸುತ್ತಾ ಟೀಂ ಇಂಡಿಯಾ?ತವರಲ್ಲೂ KLಗೆ ಬ್ಯಾಡ್ ಲಕ್

ಕಮ್​ಬ್ಯಾಕ್.. ಗ್ರೇಟ್ ಕಮ್​ಬ್ಯಾಕ್.. ನ್ಯೂಜಿಲೆಂಡ್ ವಿರುದ್ಧದ ಫಸ್ಟ್ ಇನ್ನಿಂಗ್ಸ್​ನಲ್ಲಿ 46ಕ್ಕೆ ಆಲೌಟ್ ಆಗಿದ್ದ ಟೀಂ ಇಂಡಿಯಾ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಪವರ್​ಫುಲ್ ಪ್ರದರ್ಶನ ನೀಡ್ತಿದೆ. ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್ ಕಿವೀಸ್ ಬೌಲರ್​ಗಳನ್ನ ಬೆಂಡೆತ್ತಿದ್ದಾರೆ. ಫಸ್ಟ್ ಮ್ಯಾಚ್ ಗೆದ್ದು ಭಾರತಕ್ಕೆ ಶಾಕ್ ಕೊಡೋಕೆ ರೆಡಿಯಾಗಿದ್ದ ಕಿವೀಸ್ ಬಳಗ ಪತರುಗುಟ್ಟಿ ಹೋಗಿದೆ. ಮಳೆ ಕಣ್ಣಾಮುಚ್ಚಾಲೆ ನಡುವೆ ಬೆಂಗಳೂರಿನಲ್ಲಿ ಭಾರತೀಯ ಆಟಗಾರರು ಫಾರ್ಮ್ ಕಂಡುಕೊಂಡಿದ್ದೇಗೆ? ಈ ಮ್ಯಾಚ್​ನಲ್ಲಿ ಭಾರತ ಗೆಲುವು ಸಾಧಿಸುತ್ತಾ? ಎಷ್ಟು ರನ್ ಗಳಿಸಿದ್ರೆ ವಿನ್ನಿಂಗ್ ಚಾನ್ಸಸ್ ಇದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಕಬಡ್ಡಿಯಲ್ಲೂ ಪಸ್ಟ್ ಮ್ಯಾಚ್ ದೇವ್ರಿಗೆ! – ಪವನ್ FIRE.. ಪರ್ದೀಪ್ FAIL 

ಫಸ್ಟ್ ಇನ್ನಿಂಗ್ಸ್​ನಲ್ಲಿ ಫೇಲ್ಯೂರ್ ಆದ್ರೂ ಟೀಮ್ ಇಂಡಿಯಾ 2ನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದೆ. ಓಪನರ್ ಆಗಿ ಬಂದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಇನ್ನಿಂಗ್ಸ್ ಆರಂಭಿಸಿದ್ರು. ಜೈಸ್ವಾಲ್ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಕ್ಯಾಪ್ಟನ್ ರೋಹಿತ್ ಶರ್ಮಾ 52 ರನ್ ಕಲೆ ಹಾಕಿದ್ರು. ಅದ್ರಲ್ಲೂ ಕಿಂಗ್ ವಿರಾಟ್ ಕೊಹ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದು ಈ ವರ್ಷ ಟೆಸ್ಟ್ ಕ್ರಿಕೆಟ್​ನಲ್ಲಿ ತಮ್ಮ ಮೊದಲ ಆಫ್ ಸೆಂಚುರಿ ಸಿಡಿಸಿ ಮಿಂಚಿದ್ರು. 70 ರನ್ ಗಳಿಸಿ ಉತ್ತಮ ಕಮ್​ಬ್ಯಾಕ್ ಮಾಡಿದ್ರು. ವಿರಾಟ್ ಔಟ್ ಆದ ಬಳಿಕ ಜೊತೆಯಾಟ ಆರಂಭಿಸಿದ ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್ ಜೊತೆ ಕಿವೀಸ್ ಬೌಲರ್​ಗಳನ್ನ ಬೆಂಡೆತ್ತಿದ್ದಾರೆ.

ಸರ್ಫರಾಜ್ 150 ರನ್.. ರಿಷಭ್ ಪಂತ್ 99 ರನ್!

ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬೆನ್ನೆಲುಬಾಗಿದ್ದೇ ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್. ಇಬ್ಬರೂ ಕೂಡ ಜವಾಬ್ದಾರಿಯುತ ಆಟವಾಡಿ ರನ್​ ಸ್ಕೋರ್ ಮಾಡಿದ್ರು. ಸರ್ಫರಾಜ್ ಖಾನ್ 195 ಎಸೆತಗಳಲ್ಲಿ 18 ಫೋರ್ ಹಾಗೂ 3 ಸಿಕ್ಸರ್ ಸಹಿತ 150 ರನ್ ಕಲೆ ಹಾಕಿದ್ರು. ಮತ್ತೊಂದೆಡೆ ರಿಷಭ್ ಪಂತ್ ಕೂಡ ಆರ್ಭಟಿಸಿದ್ರು. ಆದ್ರೆ ಬ್ಯಾಡ್ ಲಕ್ ಅಂದ್ರೆ 105 ಎಸೆತಗಳಲ್ಲಿ 9 ಫೋರ್ ಮತ್ತು 5 ಸಿಕ್ಸರ್ ಸಿಡಿಸಿದ್ದ ರಿಷಭ್ ಪಂತ್ 99 ರನ್ ಗಳಿಸಿದ್ರು. ಇನ್ನೇನು ಪಂತ್ ಸೆಂಚುರಿ ಬಾರಿಸ್ತಾರೆ ಅಂತಾ ಇಡೀ ಭಾರತೀಯರೇ ಕಾಯ್ತಿರುವಾಗ ಶಾಕ್ ಕಾದಿತ್ತು. ವಿಲ್ ಒರೂರ್ಕೆ ಬೌಲಿಂಗ್​ನಲ್ಲಿ ಪಂತ್ ಬೌಲ್ಡ್ ಆಗುವ ಮೂಲಕ ಜಸ್ಟ್ ಒಂದೇ ಒಂದು ರನ್​ನಿಂದ ಶತಕ ವಂಚಿತರಾದ್ರು.

ಒತ್ತಡದ ಪಂದ್ಯದಲ್ಲೂ ಮತ್ತೆ ಕೈ ಕೊಟ್ಟ ಕೆಎಲ್ ರಾಹುಲ್!

ಆದ್ಯಾಕೋ ಏನೋ ಕನ್ನಡಿಗ ಕೆಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಏಕದಿನದಲ್ಲೂ ಅಷ್ಟೇನು ಸೌಂಡ್ ಮಾಡದ ರಾಹುಲ್ ಈಗ ಟೆಸ್ಟ್ ಕ್ರಿಕೆಟ್​ನಲ್ಲೂ ಮಂಕಾಗಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ಆರ್.ಅಶ್ವಿನ್, ರವೀಂದ್ರ ಜಡೇಜಾ ಸೊನ್ನೆಗೆ ಔಟ್ ಆಗಿದ್ರು. ಬಟ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಅವ್ರೆಲ್ಲಾ ಕಮ್​ಬ್ಯಾಕ್ ಮಾಡಿದ್ದಾರೆ. ವಿರಾಟ್ ಕೊಹ್ಲಿ 70 ರನ್ ಸಿಡಿಸಿ ಮಿಂಚಿದ್ರು. ಇನ್ನು ಸರ್ಫರಾಜ್ ಖಾನ್ ಅಂತೂ ಭರ್ಜರಿ 150 ರನ್ ಬಾರಿಸಿದ್ರು. ಆದ್ರೆ ರಾಹುಲ್ ಮಾತ್ರ ಮತ್ತದೇ ಫೇಲ್ಯೂರ್ ಅನುಭವಿಸಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ 16 ಬಾಲ್ ಫೇಸ್ ಮಾಡಿ 12 ರನ್ ಗಳಿಸಿ ಕ್ಯಾಚ್ ಕೊಟ್ಟು ಔಟಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲೇ ಕರ್ನಾಟಕದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

300+ ಲೀಡ್ ಸಾಧಿಸಿದ್ರೆ ಭಾರತಕ್ಕೆ ಗೆಲುವಿನ ಅವಕಾಶ!

ನಿನ್ನೆಯವರೆಗೂ ಪಂದ್ಯವನ್ನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಟೀಮ್ ಇಂಡಿಯಾ ಇದೀಗ ಪಂದ್ಯದಲ್ಲಿ ಕಿವೀಸ್​ಗೆ ಸವಾಲೊಡ್ಡಿದೆ. 4ನೇ ದಿನ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡದ ಪರ ರಿಷಭ್ ಪಂತ್ ಮತ್ತು ಸರ್ಫರಾಜ್ ಖಾನ್ ಉತ್ತಮ ಆಟವಾಡಿದ್ರು. ಆದ್ರೆ ಮಳೆಯ ಕಾರಣದಿಂದಾಗಿ ಕೆಲ ಕಾಲ ಪಂದ್ಯವನ್ನ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಮಳೆ ನಿಂತಿದ್ದು ಮತ್ತೆ ಆಟ ಶುರು ಮಾಡಿದ ಭಾರತ ತಂಡ ರನ್ ಮಳೆ ಆರಂಭಿಸಿತ್ತು. ಇನ್ನು ಟೀಂ ಇಂಡಿಯಾ ನಾಲ್ಕನೇ ದಿನದಾಟದಲ್ಲಿ ಪೂರ್ತಿ ಬ್ಯಾಟಿಂಗ್ ಮಾಡಿ 600+ ರನ್ ಕಲೆ ಹಾಕಿ ಇದ್ರಲ್ಲಿ ಕಿವೀಸ್​ ಪಡೆಗೆ 300 ಪ್ಲಸ್ ರನ್ ಲೀಡ್ ನೀಡಿದ್ರೆ ಗೆಲುವಿನ ಅವಕಾಶ ಇತ್ತು.

ಒಟ್ನಲ್ಲಿ ಕೊನೆ ಇನ್ನಿಂಗ್ಸ್​ನಲ್ಲಿ ಒತ್ತಡ ಹಾಗೂ ಸ್ಪಿನ್​ ಬೌಲಿಂಗ್​ಗೆ ನೆರವು ನೀಡುವುದರಿಂದ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಸೋ ಬೌಲಿಂಗ್​ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿದಂತೆಯೇ ಕಿವೀಸ್ ಬ್ಯಾಟರ್ಸ್​ನ ಕಟ್ಟಿ ಹಾಕುವ ಜವಾಬ್ದಾರಿ ಬೌಲರ್ಸ್ ಮೇಲೂ ಇದೆ.

Shwetha M

Leave a Reply

Your email address will not be published. Required fields are marked *