ಕಾಂತಾರ ಚಾಪ್ಟರ್‌ 1 ಚಿತ್ರದಲ್ಲಿ ರಿಷಬ್‌ ಶೆಟ್ಟಿ ಸಂಭಾವನೆ 100 ಕೋಟಿ?

ಕಾಂತಾರ ಚಾಪ್ಟರ್‌ 1 ಚಿತ್ರದಲ್ಲಿ ರಿಷಬ್‌ ಶೆಟ್ಟಿ ಸಂಭಾವನೆ 100 ಕೋಟಿ?

ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾ ಅಕ್ಟೋಬರ್‌ 2 ರಂದು ರಿಲೀಸ್‌ ಆಗಲಿದೆ.  ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹೊಂಬಾಳೆ ಫಿಲ್ಮ್ಸ್‌ ನ ಈ ಕನಸಿನ ಕೂಸು ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿದೆ.  ಕಾಂತಾರ ಸಿನಿಮಾ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿತ್ತು, ಈ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ದಾಖಲೆಯ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕಾಂತಾರ ಚಾಪ್ಟರ್‌ 1 ಸಿನಿಮಾಗೂ ಕೋಟಿ ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಭಾರತ Vsಇಂಗ್ಲೆಂಡ್ 3ನೇ ಟೆಸ್ಟ್‌ಗೆ ಲಾರ್ಡ್ಸ್ ರೆಡಿ- ಕನ್ನಡಿಗ ಕರುಣ್ ನಾಯರ್‌ಗೆ ಸಿಗುತ್ತಾ ಲಾಸ್ಟ್ ಚಾನ್ಸ್

ರಿಷಬ್‌ ಶೆಟ್ಟಿ ʼಕಾಂತಾರʼ ಚಿತ್ರವನ್ನು ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಈ ಸಿನಿಮಾಕ್ಕಾಗಿ ಅವರಿಗೆ 4 ಕೋಟಿ ರೂ. ಸಂಭಾವನೆ ನೀಡಲಾಗಿತ್ತು ಎನ್ನಲಾಗಿದೆ. ಈ ಚಿತ್ರದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಇದು ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು. ಹೀಗಾಗಿ ಇದರ ಪ್ರೀಕ್ವೆಲ್‌ ಆದ ʼಕಾಂತಾರ: ಚಾಪ್ಟರ್‌ 1ʼ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದ್ದು, ಇದೇ ಕಾರಣಕ್ಕೆ ರಿಷಬ್‌ ಶೆಟ್ಟಿ ಅವರಿಗೆ ದಾಖಲೆಯ ಸಂಭಾವನೆ ನೀಡಲಾಗಿದೆ ಎಂದು ವರದಿ ತಿಳಿಸಿದೆ. ರಿಷಭ್‌ ಗೆ ಬರೋಬ್ಬರಿ 100 ಕೋಟಿ ರೂ. ಸಂಭಾವನೆಯನ್ನು ಹೊಂಬಾಳೆ ಫಿಲ್ಮ್ಸ್‌ ನೀಡಿದೆ ಎನ್ನಲಾಗುತ್ತದೆ. ಅಲ್ಲದೆ ರಿಷಬ್‌ ಲಾಂಭಾಂಶದಲ್ಲಿ ಷೇರು ಹೊಂದುವ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಕಲೆಕ್ಷನ್‌ ಆಧಾರದಲ್ಲಿ ಅವರು 50 ಕೋಟಿ ರೂ. ಹೆಚ್ಚುವರಿ ಆದಾಯ ಪಡೆದುಕೊಳ್ಳಲಿದ್ದಾರೆ ಎಂದೂ ಹೇಳಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಈ ಸುದ್ದಿ ಅಂತೆ-ಕಂತೆಯ ರೂಪದಲ್ಲಿ ಹರಿದಾಡುತ್ತಿದೆ. ಒಂದುವೇಳೆ ಇದು ನಿಜವಾದರೆ ರಿಷಬ್‌ ಶೆಟ್ಟಿ ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರೆನಿಸಿಕೊಳ್ಳಲಿದ್ದಾರೆ.

ʼಕಾಂತಾರʼದ ಮೂಲಕ ರಿಷಬ್‌ ಶೆಟ್ಟಿ ತುಳುನಾಡಿನ ವಿಶಿಷ್ಟ ಭೂತಾರಾಧನೆಯನ್ನು ಜಗತ್ತಿಗೇ ಪರಿಚಯಿಸಿದ್ದರು. ಈ ಭಾಗದಲ್ಲಿಯೂ ಹಲವು ವಿಶಿಷ್ಟ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಪ್ರಮುಖ ಭಾಗವಾಗಿರುವ ಯುದ್ಧದ ದೃಶ್ಯವನ್ನು ಬಹಳಷ್ಟು ಅದ್ಧೂರಿಯಾಗಿ ತೆರೆಮೇಲೆ ತರಲು ಅವರು ಮುಂದಾಗಿದ್ದು, ಇದರ ಚಿತ್ರೀಕರಣಕ್ಕಾಗಿ ಸುಮಾರು 500ರಷ್ಟು ನುರಿತ ಸಾಹಸ ಕಲಾವಿದರನ್ನು ಬಳಸಿಕೊಂಡಿದ್ದಾರೆ.

Shwetha M