IFFM 2026ರಲ್ಲಿ ಎರಡು ಮಹತ್ವದ ಪ್ರಶಸ್ತಿ ಗೆದ್ದ ರಿಷಬ್ ಶೆಟ್ಟಿ

ಆಸ್ಟ್ರೇಲಿಯಾದಲ್ಲಿ ಜರುಗಿದ ಪ್ರತಿಷ್ಠಿತ ‘NAB IFFM Awards Night 2026’ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಅವರಿಗೆ ಎರಡು ಮಹತ್ವದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಲೀಡರ್‌ಶಿಪ್ ಇನ್ ಸಿನಿಮಾ’ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಅಪಾರ ಯಶಸ್ಸು ಗಳಿಸಿದ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ.
ಇದನ್ನೂ ಓದಿ: GBA ಹೊಸ ಪಾರ್ಕಿಂಗ್ ನೀತಿ ಜಾರಿ – ಯಾವ ರಸ್ತೆಗೆ ಎಷ್ಟು ಪಾರ್ಕಿಂಗ್ ಶುಲ್ಕ ಗೊತ್ತಾ?
‘ಕಾಂತಾರ’ ಮೊದಲ ಭಾಗದ ಯಶಸ್ಸಿನ ಬಳಿಕ ಮತ್ತಷ್ಟು ಅದ್ದೂರಿಯಾಗಿ ಮೂಡಿಬಂದ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಯು ರಿಷಬ್ ಪಾಲಾಗಿದೆ. ಸ್ಥಳೀಯ ಕಥೆಯನ್ನು ಜಾಗತಿಕ ಸಿನಿಮಾ ಪ್ರೇಕ್ಷಕರು ಮೆಚ್ಚುವಂತೆ ರೂಪಿಸಿದ ಅವರ ನಿರ್ದೇಶನ ಕೌಶಲ್ಯಕ್ಕೆ ಈ ಪ್ರಶಸ್ತಿ ಮತ್ತೊಂದು ಗರಿಯಾಗಿದೆ.
ತಮ್ಮ ವಿಶಿಷ್ಟ ಮೇಕಿಂಗ್ ಹಾಗೂ ನೈಜ ಕಥೆ ಹೇಳುವ ಶೈಲಿಯ ಮೂಲಕ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿರುವ ರಿಷಬ್ ಶೆಟ್ಟಿ, ನಮ್ಮ ನೆಲದ ಸಂಸ್ಕೃತಿ, ಆಚಾರ-ವಿಚಾರ ಮತ್ತು ದೈವಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಅಪೂರ್ವ ಸಾಧನೆ ಹಾಗೂ ಚಿತ್ರರಂಗದಲ್ಲಿ ಅವರ ಮುಂಚೂಣಿ ನಾಯಕತ್ವವನ್ನು ಗುರುತಿಸಿ IFFM ವೇದಿಕೆಯಲ್ಲಿ ಅವರಿಗೆ ‘ಲೀಡರ್‌ಶಿಪ್ ಇನ್ ಸಿನಿಮಾ’ ಗೌರವ ಸಮರ್ಪಿಸಲಾಗಿದೆ.

ನೋಡಿರಿ

