ಕಾಶಿ ವಿಶ್ವನಾಥನ ದರ್ಶನ ಪಡೆದ ಕಾಂತಾರ ಶಿವ – ಕಾಶಿ ಯಾತ್ರೆ ಕೈಗೊಂಡ ರಿಷಬ್‌ ಶೆಟ್ಟಿ!

ಕಾಶಿ ವಿಶ್ವನಾಥನ ದರ್ಶನ ಪಡೆದ ಕಾಂತಾರ ಶಿವ – ಕಾಶಿ ಯಾತ್ರೆ ಕೈಗೊಂಡ ರಿಷಬ್‌ ಶೆಟ್ಟಿ!

ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿದ್ದು, ಭಾಕ್ಸ್‌ ಆಫೀಸ್‌ ನಲ್ಲಿ ಧೂಳೆಬ್ಬಿಸುತ್ತಿದೆ. ಕಲೆಕ್ಷನ್‌ ಮೂಲಕವೇ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾಗೆ ಸಕ್ಸಸ್‌ ಸಿಕ್ತಿದ್ದಂತೆ ನಟ ರಿಷಬ್‌ ಶೆಟ್ಟಿ ಟೆಂಪಲ್‌ ರನ್‌ ಶುರುಮಾಡಿದ್ದಾರೆ. ಇದೀಗ ಕಾಂತಾರ ಶಿವ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಶ್ರೇಷ್ಠಾ ಕುತಂತ್ರ.. ಆದಿ, ಭಾಗ್ಯ‌ ಬ್ರೇಕ್‌ಅಪ್.. ಸೊಸೆ ಜೀವನ ಸರಿ ಮಾಡಲ್ವಾ ಕುಸುಮಾ?    

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ತೆರೆಕಂಡ ದಿನದಿಂದ ಈವರೆಗೂ ಅದ್ಭುತವಾಗಿ ಕಲೆಕ್ಷನ್ ಮಾಡುತ್ತಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಮೂಡಿಬಂದ ಕಾಂತಾರ ಸಿನಿಮಾ ಯಶಸ್ವಿ ಮೂರನೇ ವಾರದಲ್ಲೂ ಪ್ರೇಕ್ಷಕರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ಹಿನ್ನೆಲೆ ರಿಷಬ್ ಶೆಟ್ಟಿ ಕಾಂತಾರ ಚಿತ್ರತಂಡದೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡ್ತಿದ್ದಾರೆ. ಇತ್ತೀಚೆಗೆ ರಿಷಬ್‌ ಕೊಲ್ಲೂರು ಮೂಕಾಂಬಿಕೆ, ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದಿದ್ರು, ಇದೀಗ ಕಾಶಿ ಯಾತ್ರೆ ಕೈಗೊಂಡಿದ್ದಾರೆ. ವಾರಾಣಾಸಿಯಲ್ಲಿ ನಡೆದ ಗಂಗಾರತಿಯಲ್ಲಿ ಪಾಲ್ಗೊಂಡು ಅವರು ಗಂಗಾರತಿ ನೆರವೇರಿಸಿದ್ದಾರೆ.

ಉತ್ತರದಲ್ಲಿ ತೀರ್ಥಯಾತ್ರೆ ಕೈಗೊಂಡಿರುವ ರಿಷಬ್ ಶೆಟ್ಟಿ ಕಾಂತಾರದ ಗೆಲುವಿನ ನಗೆ ಬೀರುತ್ತಿದ್ದಾರೆ. ಹೋದ ಕಡೆಗೆಲ್ಲ ರಿಷಬ್ ಶೆಟ್ಟಿಗೆ ಅದ್ಧೂರಿಯಾದ ಸ್ವಾಗತ, ಅಭಿಮಾನದ ಹೊಳೆ ಹರಿಯುತ್ತಿದೆ. ಕಾಂತಾರ ಇನ್ನೇನೂ ಕೆಲವೇ ದಿನಗಳಲ್ಲಿ 1000 ಕೋಟಿ ಕಲೆಹಾಕುವ ನಿರೀಕ್ಷೆ ಇದೆ.

Shwetha M