ಕನ್ನಡ ದ್ರೋಹಿ ಆದ್ರಾ ರಿಷಭ್? – ‘ಶಿವಾಜಿ’ ಸಿನಿಮಾ ಒಪ್ಪಿದ್ದೇ ತಪ್ಪಾ?
ಕಾಂತಾರ ಡೈರೆಕ್ಟರ್‌ಗೆ ನೆಟ್ಟಿಗರ ಕ್ಲಾಸ್‌

ಕನ್ನಡ ದ್ರೋಹಿ ಆದ್ರಾ ರಿಷಭ್? – ‘ಶಿವಾಜಿ’ ಸಿನಿಮಾ ಒಪ್ಪಿದ್ದೇ ತಪ್ಪಾ?ಕಾಂತಾರ ಡೈರೆಕ್ಟರ್‌ಗೆ ನೆಟ್ಟಿಗರ ಕ್ಲಾಸ್‌

ಕಾಂತಾರ ಸಿನೆಮಾ ಮೂಲಕ ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು ರಿಷಬ್ ಶೆಟ್ಟಿ.. ರಿಷಬ್ ಶೆಟ್ಟಿಗೆ ತನ್ನದೇ ಆದ ಅಭಿಮಾನಿಗಳ ಬಳಗವಿದೆ. ಆದ್ರೆ ರಿಷಬ್ ಅವರ ಬಾಲಿವುಡ್ ನ ಮೊದಲ ಸಿನೆಮಾಕ್ಕೆ ಇದೀಗ ಆಕ್ರೋಶ ಎದುರಾಗಿದೆ.  ಕನ್ನಡ ವಿರೋಧಿ ಅನ್ನೋ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ. ಮಹಾರಾಜಾ ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವುದು ಈಗ ದೊಡ್ಡ ವಿವಾದವಾಗಿದೆ. ಶಿವಾಜಿ ಪಾತ್ರ ಮಾಡಿದ್ದಕ್ಕೆ ಕನ್ನಡ ನಾಡಿನ ವಿರೋಧಿ ರಿಷಬ್ ಶೆಟ್ಟಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಬ್ಬರ ಶುರುವಾಗಿದೆ. ಬಾಯ್ಕಾಟ್ ರಿಷಬ್ ಶೆಟ್ಟಿ ಅಂತಲೂ ಅಭಿಯಾನ ಶುರುವಾಗಿದೆ.

ಇದನ್ನೂ ಓದಿ:‌ ಭಾರತದ ಭದ್ರತೆ ಕೆಣಕಿದ PAK.. ಕಂಪೇರ್ ಮಾಡದಂತೆ BCCI ವಾರ್ನಿಂಗ್ – ಚಾಂಪಿಯನ್ಸ್ ಟ್ರೋಫಿ ಕಗ್ಗಂಟಾಯ್ತಾ?

ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್‌ ನಲ್ಲಿ ನಟಿಸುವುದಾಗಿ ಘೋಷಣೆ ಮಾಡಿ ಅದರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆ್ಯಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ರಿಷಬ್ ಸಿನಿಮಾ ಪೋಸ್ಟರ್ ಹಂಚಿಕೊಂಡ ಬೆನ್ನಲ್ಲೇ ಕೆಲ ಕನ್ನಡಿಗರಿಂದ ಅಸಮಾಧಾನ ವ್ಯಕ್ತವಾಗಿದೆ.  ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಕರುನಾಡಿನಲ್ಲಿಯೂ ವೀರ, ಶೂರ ರಾಜರು ಇದ್ದಾರೆ. ಅವರ ಸಿನಿಮಾ ಮಾಡಿ, ಇಮ್ಮಡಿ ಪುಲಿಕೇಶಿಯಂತಹ ರಾಜರ ಸಿನಿಮಾ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.

ಕರ್ನಾಟಕ ಲೂಟಿ ಹೊಡೆದವನ ಕಥೆ ಮಾಡದಂತೆ ಆಕ್ರೋಶ

ಶಿವಾಜಿ ಪಾತ್ರ ಮಾಡುತ್ತಿರುವುದಕ್ಕೆ ಹಲವು ಕನ್ನಡಿಗರು ವಿರೋಧ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರರನ್ನು ಕುಮಟಾ ವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು, ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ. ನಮ್ಮೂರಿನ ಭೂತ, ಕೋಲವನ್ನು ಜಗತ್ಪ್ರಸಿದ್ದಿ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ ಎಂದು ಅಭಿಮಾನಿಯೊಬ್ಬ ಎಕ್ಸ್ನಲ್ಲಿ ರಿಷಭ್‌ ಗೆ ಪ್ರಶ್ನಿಸಿದ್ದಾರೆ.

ಕ್ಷಮೆ ಕೇಳಿದ ದೃಶ್ಯವೂ ಕೂಡ ಇರಬೇಕು

ಶಿವಾಜಿ ತನ್ನ ಕಾಲದಲ್ಲಿ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದ, ಬೆಳವಡಿ ಮಲ್ಲಮ್ಮನ ಜೊತೆ ಯುದ್ಧ ಮಾಡಿ ಶಿವಾಜಿ ಸೋತಿದ್ದ. ಶಿವಾಜಿ ಮಲ್ಲಮ್ಮನ ವಿರುದ್ಧ ಸೋತು ಕ್ಷಮೆ ಕೇಳಿದ್ದ. ಸಿನಿಮಾದಲ್ಲಿ ಕ್ಷಮೆ ಕೇಳಿದ ದೃಶ್ಯವೂ ಕೂಡ ಇರಬೇಕು ಎಂದು ಆಗ್ರಹಿಸುವುದರ ಜೊತೆಗೆ ಒಂದು ವೇಳೆ ಆ ದೃಶ್ಯವಿಲ್ಲವಾದರೆ ಸಿನಿಮಾ ಕೈಬಿಡಬೇಕು ಎಂದು ಪಟ್ಟು ಹಿಡಿದ್ದಾರೆ.

ಶಿವಾಜಿ ಸಿನಿಮಾ ಮಾಡಿದ್ರೆ ತಪ್ಪೇನು?

ಇನ್ನು ವಿರೋಧದ ಜೊತೆಗೆ ರಿಷಬ್ ಶೆಟ್ಟಿ ಪರ ಬ್ಯಾಟಿಂಗ್ ಕೂಡ ನಡೆದಿದೆ. ರಿಷಬ್ ಶೆಟ್ಟಿ ಒಬ್ಬ ಕಲಾವಿದ. ಪಾತ್ರಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಅವರಿಗಿರುವುದರ ಜೊತೆಗೆ ರಿಷಬ್ ಶಿವಾಜಿ ಪಾತ್ರ ಮಾಡಿದರೆ ತಪ್ಪೇನು. ಉತ್ತರ ಭಾರತೀಯರಲ್ಲಿ ಶಿವಾಜಿ ಬಗ್ಗೆ ದೈವಿಕ ಭಾವನೆ ಇದೆ. ಹಿಂದೂಗಳ ರಕ್ಷಣೆಗಾಗಿ ಹೋರಾಡಿದ ಧೀರ ಅಂತ ವಾದವಿವೆ. ಶಿವಾಜಿ ಪಾತ್ರಕ್ಕೆ ರಿಷಬ್ ಸೂಕ್ತ ಎನಿಸಿದ್ದಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ರಿಷಬ್ ಶೆಟ್ಟಿಯ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ರಿಷಭ್ ಶಿವಾಜಿ ಲುಕ್ನಲ್ಲಿ ಖಡ್ಗ ಹಿಡಿದು ರಿಷಬ್ ಕಾಣಿಸಿಕೊಂಡ ಮೇಲೆ ಈ ಚರ್ಚೆ ಜೋರಾಗಿದೆ. ಪರ ವಿರೋಧದ ಬಗ್ಗೆ ರಿಷಭ್ ಶಟ್ಟೆ ಯಾವುದೇ ಪ್ರತಿಕ್ರಿಯೆ ನಡೆಸಿಲ್ಲ.. ರಿಷಭ್ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಮೆರಗು ಕೊಟ್ಟವರು.. ಅವರಿಗೆ ಏನು ಮಾಡಬೇಕು? ಏನು ಮಾಡಬಾರದು ಅನ್ನೋದು ಚೆನ್ನಾಗಿ ಗೊತ್ತಿದೆ.

Shwetha M