ಸ್ಯಾಂಡಲ್‌ವುಡ್‌ಗೆ RRR ಶಕ್ತಿ – ಶೆಟ್ರು ಟೀಂಗೆ ಬೆಂಕಿ ಹಚ್ಚುತ್ತಿದ್ದಾರಾ?
ಟಾರ್ಗೆಟ್ ಆದ್ರಾ ರಕ್ಷಿತ್, ರಿಷಭ್?

ಒಂದಷ್ಟು ಜನ ಇರ್ತಾರೆ.. ಅವರಿಗೆ ಏನ್ ಕೆಲಸ ಅಂದ್ರೆ ಬೆಂಕಿ ಹಚ್ಚೋದು.. ಅಲ್ಲಿಂದ ತಂದ್ ಇಲ್ ಇಡೋದ್ . ಇಲ್ಲಿಂದ ತಂದ್ ಅಲ್ಲಿ ಇಡೋದ್.. ಯಾರಾದ್ರೂ ಚೆನ್ನಾಗಿ ಬೆಳೆದ್ರೆ ಸಾಕ್, ಯಾರಾದ್ರೂ ಒಟ್ಟಾಗಿ ಸೇರಿ ಸಾಧನೆ ಮಾಡಿದ್ರೆ ಸಾಕಷ್ಟು ಒಂದಷ್ಟು ಜನಕ್ಕೆ ಮೈಯೊಳಗೆ ಇರುವೆ ಬಿಟ್ಟ ಹಾಗ್ ಆಗುತ್ತೆ.. ಹ್ಯಾಂಗ್ ಆದ್ರೂ ಮಾಡಿ ಅವರನ್ನ ಬೇರೆ ಬೇರೆ ಮಾಡ್ಬೇಕು. ಆ ಗ್ಯಾಂಗ್‌ಗೆ ಕೊಳ್ಳಿ ಇಡಬೇಕು ಅಂತ ಕಾಯ್ತಾ ಇರ್ತಾರೆ.. ಅದ್ರಲ್ಲೂ ಸೋಷಿಯಲ್ ಮೀಡಿಯಾ ಬಂದ ಮೇಲೆ ಬತ್ತಿ ಇಡೋ ಕೆಲಸ ಜಾಸ್ತಿನೇ ಆಗಿದೆ ಬಿಡಿ.. ಚೆನ್ನಾಗಿ ಇರೋರು ಮಧ್ಯೆ ಸುಮ್ ಸುಮ್ನೇ ಕಮೆಂಟ್ ಮಾಡಿ ಪೋಸ್ಟ್ ಮಾಡಿ ಬೆಂಕಿ ಹಂಚೋರಿಗೆ ಕಮ್ಮಿನೇ ಇಲ್ಲ.. ಕರ್ನಾಟಕದಲ್ಲಿ ಶೆಟ್ರು ಟೀಂ ಸಖತ್ ಟ್ರೆಂಡ್ ಕ್ರಿಯೇಟ್ ಮಾಡ್ತಾ ಇದ್ದಾರೆ. ಸ್ಯಾಂಡಲ್‌ವುಡ್ ಹಿಟ್ ಸಿನಿಮಾ ಕೊಟ್ಟು ಕನ್ನಡ ಇಂಡಸ್ಟ್ರೀಯನ್ನ ಬೆಳೆಸುತ್ತಿದ್ದಾರೆ. ಆದ್ರೆ ಒಂದಷ್ಟು ಜನಕ್ಕೆ ಅದೇನ್ ಆಗಿದ್ಯೋ ಏನೋ, ಶೆಟ್ರು ಗ್ಯಾಂಗ್ ಟಾರ್ಗಟ್ ಮಾಡ್ಕೊಂಡು ಒಂದಷ್ಟು ಕಮೆಂಟ್ ಪೋಸ್ಟ್ ಹಾಕ್ತಾರೆ..
ಯಾರಾದ್ರೂ ನಾಲ್ಕು ದಿನ ಒಟ್ಟಿಗೆ ಇದ್ದು ಎರಡು ದಿನ ಅವರ ಒಟ್ಟಿಗೆ ಕಂಡಿಲ್ಲ ಅಂದ್ರೆ ಕೆಲವರದ್ದು ಶುರುವಾಗುತ್ತೆ. ಏನಾಯ್ತು ಅಂತೆ ಅವರ ಮಧ್ಯೆ, ಅವಾಗ ಒಟ್ಟೊಟ್ಟಿಗೆ ಇರ್ತಾ ಇದ್ರೂ ಈಗ ಎಲ್ಲಾ ಹಾಳಾಗಿ ಹೋಯ್ತಾ.. ಒಳ್ಳೆಯದ್ದೇ ಆಯ್ತು ಬಿಡು ಅಂತ.. ರಿಷಭ್ ಶೆಟ್ರು ಕಾಂತಾರ ಚಾಪ್ಪರ್1ನಲ್ಲಿ ಹವಾಳಿ ಮಾಡ್ತಿದ್ದಾರೆ. ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ್ ಕಾಣುತ್ತಿದ್ದು, ಸಿನಿಮಾ ನೋಡಿದವರು ಫಿದಾ ಆಗಿ ಹೋಗಿದ್ದಾರೆ. ಕಾಂತಾರ ಸಿನಿಮಾ ಕರ್ನಾಟಕದ ಗಡಿ ದಾಟಿ ಅನ್ಯ ರಾಜ್ಯ, ದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಒಂದ್ಕಡೆಯಾದ್ರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಪೋಸ್ಟರ್ ವೈರಲ್ ಆಗ್ತಿದೆ. ರಿಷಭ್ ಶೆಟ್ಟಿಯ ಆಪ್ತ ಗೆಳೆಯ ರಕ್ಷಿತ್ ಶೆಟ್ಟಿ ಎಲ್ಲಿಗೆ ಹೋದ್ರೂ, ಕಣ್ಣಿಗೆ ಕಣ್ತಾ ಇಲ್ಲ. 2022ರಲ್ಲಿ ಕಾಂತಾರ ರಿಲೀಸ್ ಆಗಿದ್ದಾಗ ಪ್ರೀಮಿಯರ್ ಶೋನಲ್ಲೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿನಿಮಾ ನೋಡಿದ್ದರು. ಸಿನಿಮಾ ಮುಗಿಯುತ್ತಿದ್ದಂತೆ, ಥಿಯೇಟರ್‌ನ ಕೊನೆಯ ಸಾಲಿನಿಂದ ಓಡಿ ಬಂದು ರಿಷಭ್ ಶೆಟ್ಟಿಯನ್ನು ತಬ್ಬಿಕೊಂಡಿದ್ರು..ಈಗ ಎಲ್ಲಿಗೆ ಹೋದ್ರು ಅಂತ.
ಆದ್ರೆ ಕಾಂತಾರ ಪ್ರೀಕ್ವೆಲ್ ಸಿನಿಮಾ ಕಾಂತಾರ-1 ಬಿಡುಗಡೆಯಾಗಿದೆ. ದೇಶ ವಿದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಆದ್ರೆ ಯಾಕೆ ಕಾಂತಾರ1 ಸಿನಿಮಾ ಪ್ರೀಮೀಯರ್ ಶೋಗೂ ರಕ್ಷಿತ್ ಶೆಟ್ಟಿ ಬಂದಿಲ್ಲ. ರಿಲೀಸ್ ಆದ ಮೇಲೆ ಯಾವ ಶೋಗೂ ರಕ್ಷಿತ್ ಶೆಟ್ಟಿ ಬಂದಿಲ್ಲ. ರಕ್ಷಿತ್ ಶೆಟ್ಟಿ ಎಲ್ಲಿ ಹೋದರು? ರಿಷಭ್ ಮತ್ತು ರಕ್ಷಿತ್ ಫ್ರೆಂಡ್ ಶಿಪ್ ಕಟ್ ಆಯ್ತಾ ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. ಸ್ನೇಹಿತ ರಿಷಭ್ ಶೆಟ್ಟಿಯನ್ನು ಈ ರಕ್ಷಿತ್ ಶೆಟ್ಟಿ ಅಭಿನಂದಿಸಿಲ್ಲ ಯಾಕೆ? ಸ್ನೇಹಿತರು ಎಂದಿಗೂ ಸ್ನೇಹಿತರೇ. ಯಶಸ್ಸು, ಸೋಲು ಎರಡರಲ್ಲೂ ಜೊತೆಗೆ ಇರುವವರು ಸ್ನೇಹಿತರು. ಈ ಹಿಂದೆ ರಿಷಭ್ ಜೊತೆಗೆ ಹೆಜ್ಜೆ ಹಾಕಿದ್ದ ರಕ್ಷಿತ್ ಶೆಟ್ಟಿ ಯಶಸ್ಸಿನ ಖುಷಿಯ ಸಂದರ್ಭದಲ್ಲಿ ಎಲ್ಲಿದ್ದಾರೆ? ಹೇಗಿದ್ದಾರೆ? ಏಕೆ ಇನ್ನೂ ಸ್ನೇಹಿತ ರಿಷಭ್ ಶೆಟ್ಟಿಯನ್ನು ಸಾರ್ವಜನಿಕವಾಗಿ ಅಭಿನಂದಿಸಲು ಬಂದಿಲ್ಲ ಅಂತ ಒಂದಷ್ಟು ಜನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕಮೆಂಟ್ ಮಾಡ್ತಿದ್ದಾರೆ. ರಾಜ್ ಬಿ ಶೆಟ್ಟಿ ಕೂಡ ಕಾಂತಾರ-1 ಸಿನಿಮಾ ನೋಡಲು ಬಂದಿಲ್ಲ. ರಾಜ್ ಶೆಟ್ಟಿ ಎಲ್ಲಿ ಹೋದರು. ಕಾಂತಾರದಲ್ಲಿ ರಾಜ್ ಬಿ ಶೆಟ್ಟಿ ರಿಷಭ್ ಜೊತೆಯಲ್ಲೇ ಕೆಲಸ ಮಾಡಿದ್ರೂ ಕಾಂತಾರ 1ನಲ್ಲಿ ದೂರ ದೂರ ಆದ್ರಾ ಅನ್ನೋ ಪ್ರಶ್ನೆಯನ್ನ ಕೆಲವರು ಮಾಡುತ್ತಿದ್ದಾರೆ. ಆದ್ರೆ ಹೇಳುವರಿಗೆ ಏನ್ ಹೇಳಬೇಕೋ ಗೊತ್ತಿಲ್ಲ ಇದೇ ರಿಷಭ್ , ರಕ್ಷಿತ್ , ರಾಜ್ ಬಿ ಶೆಟ್ರು ಕೊಟ್ಟಿಗೆ ಕಾಣಿಸಿಕೊಂಡ್ರೆ ಶೆಟ್ಟಿ ಗ್ಯಾಂಗ್ , ಶೆಟ್ಟಿ ಮಾಫಿಯಾ ಅಂತಾರೇ. ಆದ್ರೆ ಒಟ್ಟಿಗೆ ಕಾಣಿಸಿಕೊಂಡಿಲ್ಲ ಅಂದ್ರೆ ಶೆಟ್ಟಿ ಗ್ಯಾಂಗ್ ಒಡ್ದು ಹೋಯ್ತಾ, ಫ್ರೆಂಡ್ ಶಿಫ್ ಹಳಸಿ ಹೋಯ್ತಾ ಕೇಳ್ತಾರೆ. ನೋಡಿ ಎಲ್ಲಾ ಟೈಂನಲ್ಲೂ ಜೊತೆಗೆ ಇರಬೇಕು ಅಂತ ಇಲ್ಲ.. ರಿಷಭ್ ಮತ್ತು ರಕ್ಷಿತ್ ಶೆಟ್ಟಿ ಒಳ್ಳೆಯ ಗಳೆಯರು,. ಸೋಲು ಗೆಲುವಿನಲ್ಲಿ ಜೊತೆಗೆ ನಿಂತವರು.. ಒಂದು ಮಟ್ಟಿನ ಸಕ್ಸಸ್ ತನಕ ಒಟ್ಟಿಗೆ ಇದ್ದು, ಸಕ್ಸಸ್ ಸಿಗುತ್ತಿದ್ದಂತೆ ಅವರವರ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇಷ್ಟು ದಿನ ರಷಭ್ ಬ್ಯುಸಿ ಇದ್ರು ಕಾಂತಾರ ಚಾಪ್ಪರ್ 1 ಸಿನಿಮಾ ಶೂಟಿಂಗ್‌ನಲ್ಲಿ. ದೇಶದಲ್ಲಿ ರಾಜ್ಯದಲ್ಲಿ ಏನ್ ಆಗ್ತಾ ಇದೆ ಅನ್ನೋದೂ ಕೂಡ ಅವರಿಗೆ ಗೊತ್ತಿರಲಿಲ್ಲ.. ಅವರೇ ಇದ್ದನ್ನ ಹೇಳಿದ್ದಾರೆ. ರಾಜ್ ಬಿ ಶೆಟ್ಟಿಯ ಸು ಫ್ರಮ್ ಸೋ ಬಗ್ಗೆ ಕೂಡ ಅವರು ಮಾತನಾಡಿರಲಿಲ್ಲ. ಬ್ಯುಸಿ ಇದ್ರೂ. ಹಾಗೇ ಕೂಡ ಇಲ್ಲೂ ಆಗಿದೆ. ರಕ್ಷಿತ್ ಶೆಟ್ಟಿ ತಮ್ಮ ಕೆಲಸದಲ್ಲಿ ಬ್ಯುಸಿ ಇದ್ದಾರೆ. ರಿಚರ್ಡ್ ಆಂಟೊನಿ ಶೂಟಿಂಗ್‌ನಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿ ಇರಬಹುದೇನೋ. ಅಥವಾ ಬೇರೆ ಯಾವುದ್ದೋ ಪ್ರಜೆಕ್ಟ್‌ನಲ್ಲಿಬ್ಯುಸಿ ಇರಬಹುದು.. ಹಾಗಾಗಿ ಕಾಂತಾರ ಚಾಪ್ಪರ್ 1 ನೋಡೋಕೆ ಇವರಿಗೆ ಟೈಂ ಸಿಗದೇ ಇರಬಹುದು. ಆದ್ರೆ ರಕ್ಷಿತ್ ರಿಷಭ್ ಸಿನಿಮಾಕ್ಕೆ ವಿಶ್ ಮಾಡಿದ್ದಾರೆ.

ಹಾಗೇ ರಾಜ್ ಬಿ ಶೆಟ್ಟಿ ಕೂಡ ಶನೀಲ್ ಗೌತಮ್‌ಗೆ ಸಿನಿಮಾ ಮಾಡ್ತಿದ್ದಾರೆ. ಬೇರೆ ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. ಹೋದ್ ಸರಿ ಕಾಂತಾರದಲ್ಲಿ ರಾಬ್ ಬಿ ಶೆಟ್ಟಿ ರಿಷಭ್ ನಟನೆ ಮಾಡೋ ಸಂದರ್ಭದಲ್ಲಿ ಕೈಮ್ಯಾಕ್ಸ್ ಸೀನ್‌ನಲ್ಲಿ ಡೈರೆಕ್ಷನ್ ಮಾಡಿದ್ರು. ಬಟ್ ಕಾಂತಾರ ಚಾಪ್ಪರ್ 1ನಲ್ಲಿ ರಾಜ್ ಬಿ ಶೆಟ್ಟಿ ಅವರ ಅವಶ್ಯಕತೆ ಇರಲಿಲ್ಲ ಅನ್ಸುತ್ತೆ. ಈ ಸಲ ಟೆಕ್ನಿಕಲ್ ಟೀಂ ಸ್ಟ್ರಾಂಗ್ ಮಾಡ್ಕೊಂಡಿದ್ರು ಅದ್ದಕ್ಕೆ ರಾಜ್ ಬಿ ಶೆಟ್ಟಿಯನ್ನ ಬಳಸಿಕೊಂಡಿಲ್ಲ. ಅಷ್ಟು ಮಾತ್ರ ಇವರನ್ನ ಸಿನಮಾಕ್ಕೆ ಸೇರಿಸಿಕೊಂಡಿಲ್ಲ, ಅದ್ದಕ್ಕೆ ರಾಜ್ ಬಿ ಶೆಟ್ಟಿ ಸಿನಿಮಾ ನೋಡಿಲ್ಲ ಅಂದ್ರೆ ಹೇಗ್ ಹೇಳಿ.. ಈ 3 ಜನ ಕೂಡ ಸ್ಯಾಂಡಲ್‌ವುಡ್‌ಗೆ ತಮ್ಮದೇ ಆದ ಕೂಡುಗೆ ಕೊಡ್ತಿದ್ದಾರೆ. ತಮ್ಮ ತಮ್ಮ ಸಿನಿಮಾಗಳಲ್ಲಿ ಈ 3 ಜನ ಬ್ಯುಸಿ ಆಗಿದ್ದಾರೆ. ಇವರು ಒಬ್ಬರ ಸಕ್ಸಸ್ ನೋಡಿ ಹೊಟ್ಟೆ ಉರಿದುಕೊಳ್ಳುವರಲ್ಲ.. ಹಾಗಿದಿದ್ರೆ ಇವತ್ತು ಈ 3 ಜನ ಇಷ್ಟು ದೊಡ್ಡ ಸಕ್ಸಸ್ ಕಾಣ್ತಾ ಇರಲಿಲ್ಲ.. ಆದ್ರೆ ಒಂದಷ್ಟು ಬುದ್ದಿ ಇಲ್ಲದ ಜನ. ಕಾಂತಾರವನ್ನ ರಕ್ಷಿತ್ , ರಾಜ್ ಬಿ ಶೆಟ್ಟಿ ನೋಡಿಲ್ಲ .. ಶೆಟ್ಟಿ ಗ್ಯಾಂಗ್ ಮಧ್ಯೆ ಯಾವುದು ಸರಿ ಇಲ್ಲ ಅನ್ನೋ ಬೆಂಕಿ ಹಚ್ಚುತ್ತಿದ್ದಾರೆ. ರಕ್ಷಿತ್ ವಿಷ್ ಮಾಡಿಲ್ಲ ಅಂತ ರಿಷಭ್ ಸುಮ್ಮನೆ ಇಲ್ಲ. ಕಾಂತಾರ ಸಕ್ಸಸ್ ನಡುವೆ ರಕ್ಷಿತ್ ಶಟ್ಟಿ ರಿಷಭ್‌ಗೆ ವಿಷ್ ಮಾಡಿದ್ದಾರೆ. 2021ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. 777 ಚಾರ್ಲಿ ಸಿನಿಮಾದ ಅಭಿನಯಕ್ಕಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವ್ರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಸಲಾಗಿದೆ. ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿ ಅವರಿಗೆ ರಿಷಬ್ ಅವರು ವಿಶ್ ಮಾಡಿದ್ದಾರೆ. ಅತ್ಯುತ್ತಮ ನಟನಿಗೆ ರಾಜ್ಯ ಸರ್ಕಾರದಿಂದ ಗೌರವ, ಕಂಗ್ರಾಜುಲೇಷನ್ಸ್ ಮಗ ಎಂದು ರಿಷಬ್ ಶೆಟ್ಟಿ ಬರೆದಿದ್ದು ರಕ್ಷಿತ್ನನ್ನು ಟ್ಯಾಗ್ ಮಾಡಿದ್ದಾರೆ. ಇಲ್ಲಿ ಯಾರು ಯಾರನ್ನೂ ಮರೆತಿಲ್ಲ. ಇವರ ನಡುವೆ ಏನೂ ಆಗಿಲ್ಲ.. ಸುಮ್ಮನೆ ಜನ ಕಥೆ ಕಟ್ಟುತ್ತಿದ್ದಾರೆ ಅಷ್ಟೇ,,

ನೋಡಿರಿ

